ಪರಿಸರ ಮತ್ತು ಅರಣ್ಯ ಸಚಿವಾಲಯ
ಕರ್ನಾಟಕದ ಪಡುಬಿದ್ರಿ, ಕಾಸರಕೋಡ್ ಸೇರಿದಂತೆ ಸರ್ಕಾರ ಶಿಫಾರಸು ಮಾಡಿದ ಎಲ್ಲಾ 8 ಕಡಲತೀರಗಳಿಗೆ ಅಂತರರಾಷ್ಟ್ರೀಯ ಬ್ಲೂ ಫ್ಲಾಗ್ ಪ್ರಮಾಣೀಕರಣ; ಭಾರತಕ್ಕೆ ಇದೊಂದು ಹೆಮ್ಮೆಯ ಕ್ಷಣ: ಕೇಂದ್ರ ಪರಿಸರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್
Posted On:
11 OCT 2020 5:34PM by PIB Bengaluru
ಕರ್ನಾಟಕದ ಪಡುಬಿದ್ರಿ, ಕಾಸರಕೋಡ್ ಸೇರಿದಂತೆ ಐದು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 8 ಕಡಲತೀರಗಳಿಗೆ ಯುಎನ್ಇಪಿ, ಯುಎನ್ಡಬ್ಲ್ಯೂಟಿಒ, ಎಫ್ಇಇ, ಐಯುಸಿಎನ್ ಅಂತರರಾಷ್ಟ್ರೀಯ ತೀರ್ಪುಗಾರರ ತಂಡವು “ಬ್ಲೂ ಫ್ಲಾಗ್”ಪ್ರಮಾಣೀಕರಣ ನೀಡಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ.
“ಬ್ಲೂ ಫ್ಲಾಗ್“ ಪಡೆದ ಕಡಲತೀರಗಳೆಂದರೆ; ಕಾಸರಕೋಡ್ ಮತ್ತು ಪಡುಬಿದ್ರಿ (ಕರ್ನಾಟಕ), ಶಿವರಾಜ್ಪುರ (ದ್ವಾರಕಾ-ಗುಜರಾತ್), ಘೋಘ್ಲಾ (ದಿಯು), ಕಪ್ಪಡ್ (ಕೇರಳ), ಋಷಿಕೊಂಡ (ಆಂಧ್ರಪ್ರದೇಶ), ಗೋಲ್ಡನ್ ಬೀಚ್ (ಪುರಿ-ಒಡಿಶಾ) ಮತ್ತು ರಾಧಾನಗರ (ಅಂಡಮಾನ್ & ನಿಕೋಬಾರ್ ದ್ವೀಪಗಳು).
ಕರಾವಳಿ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ಭಾರತಕ್ಕೆ "ಅಂತರರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳು" ಅಡಿಯಲ್ಲಿ ಅಂತರರಾಷ್ಟ್ರೀಯ ತೀರ್ಪುಗಾರ ತಂಡವು 3 ನೇ ಬಹುಮಾನವನ್ನು ನೀಡಿದೆ.
"ಒಂದೇ ಪ್ರಯತ್ನದಲ್ಲಿ 8 ಕಡಲತೀರಗಳಿಗೆ ಯಾವುದೇ ರಾಷ್ಟ್ರವೂ 'ಬ್ಲೂ ಫ್ಲಾಗ್' ಪಡೆದಿಲ್ಲ. ಇದು ಒಂದು ಭಾರತದ ಮಹೋನ್ನತ ಸಾಧನೆಯಾಗಿದೆ" ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ. "ಇದು ಕೂಡ ಭಾರತದ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಪ್ರಯತ್ನಗಳಿಗೆ ದೊರೆತಿರುವ ಜಾಗತಿಕ ಮಾನ್ಯತೆ ಯಾಗಿದೆ” ಎಂದು ಅವರು ಹೇಳಿದ್ದಾರೆ.
"ಕೇವಲ 2 ವರ್ಷಗಳ ಅವಧಿಯಲ್ಲಿ ಈ ಸಾಧನೆ ಮಾಡಿರುವ ‘ಏಷ್ಯಾ-ಪೆಸಿಫಿಕ್’ ಪ್ರದೇಶದ ಮೊದಲ ದೇಶ ಭಾರತವಾಗಿದೆ"ಎಂದು ಶ್ರೀ ಜಾವಡೇಕರ್ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಏಷ್ಯಾದ ಇತರ ರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ ಮತ್ತು ಯುಎಇಯ ಕಡಲತೀರಗಳಿಗೆ ಒಂದೆರಡು ಬ್ಲೂ ಫ್ಲಾಗ್ ನೀಡಲಾಗಿದೆ, ಆದರೆ ಸುಮಾರು 5 ರಿಂದ 6 ವರ್ಷಗಳ ಅಂತರದಲ್ಲಿ ಇವು ದೊರೆತಿವೆ.
ಭಾರತವು ಈಗ 50 "ಬ್ಲೂ ಫ್ಲಾಗ್" ದೇಶಗಳ ತಂಡದಲ್ಲಿದೆ ಮತ್ತು ನಮ್ಮ ರಾಷ್ಟ್ರಕ್ಕೆ ಸಂದಿರುವ ಈ ಗೌರವಕ್ಕಾಗಿ ನಾವು ಹೆಮ್ಮೆಪಡುತ್ತೇವೆ, ಮುಂದಿನ ಐದು ವರ್ಷಗಳಲ್ಲಿ 100 ಕಡಲತೀರಗಳಿಗೆ ಈ ಪ್ರಯಾಣವನ್ನು ಮುಂದುವೆರಸಲು ಯೋಜಿಸಿದ್ದೇವೆ ಎಮದು ಸಚಿವರು ಹೇಳಿದ್ದಾರೆ.
ಕಡಲತೀರಗಳ ಪ್ರಾಯೋಗಿಕ ಅಭಿವೃದ್ಧಿಗಾಗಿ ಭಾರತವು 2018 ರಲ್ಲಿ ಕರಾವಳಿ ರಾಜ್ಯಗಳು/ ಯುಟಿಗಳಲ್ಲಿ ತಲಾ ಒಂದು ಕಡಲತೀರದಲ್ಲಿ ತನ್ನ ಪಯಣವನ್ನು ಪ್ರಾರಂಭಿಸಿತು ಮತ್ತು 2020 ರ ಪ್ರವಾಸೋದ್ಯಮ ಋತುವಿನ ಪ್ರಮಾಣೀಕರಣಕ್ಕಾಗಿ 08 ಕಡಲತೀರಗಳ ಮೊದಲ ಕಂತನ್ನು ಪ್ರಸ್ತುತಪಡಿಸಿತು.
SICOM, MoEFCC, ಭಾರತದ ಕರಾವಳಿ ಪ್ರದೇಶಗಳ “ಸುಸ್ಥಿರ ಅಭಿವೃದ್ಧಿ”ಗಾಗಿ ತನ್ನ ಸಮಗ್ರ ಕರಾವಳಿ ವಲಯ ನಿರ್ವಹಣೆ ಯೋಜನೆಯಡಿ ಹೆಚ್ಚು ಮೆಚ್ಚುಗೆ ಪಡೆದ ಕಾರ್ಯಕ್ರಮ “ಬೀಮ್ಸ್” (ಬೀಚ್ ಎನ್ವಿರಾನ್ಮೆಂಟ್ ಮತ್ತು ಎಸ್ಥೆಟಿಕ್ಸ್ ಮ್ಯಾನೇಜ್ಮೆಂಟ್ ಸರ್ವೀಸಸ್) ಅನ್ನು ಪ್ರಾರಂಭಿಸಿತು. ಎಫ್ಇಇ ಡೆನ್ಮಾರ್ಕ್ನ ದಿ ಫೌಂಡೇಶನ್ ಆಫ್ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆ ನೀಡುವ ಅಂತರರಾಷ್ಟ್ರೀಯ ಪರಿಸರ-ಲೇಬಲ್ "ಬ್ಲೂ ಫ್ಲ್ಯಾಗ್" ಗಾಗಿ ಶ್ರಮಿಸುವ ಗುರಿಯನ್ನು ಇದು ಹೊಂದಿತ್ತು.
ಕರಾವಳಿ ನೀರು ಮತ್ತು ಕಡಲತೀರಗಳಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡುವುದು, ಕಡಲತೀರದ ಸೌಕರ್ಯಗಳು / ಸೌಲಭ್ಯಗಳ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದು, ಕರಾವಳಿ ಪರಿಸರ ವ್ಯವಸ್ಥೆಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು ಮತ್ತು ಸ್ಥಳೀಯ ಆಡಳಿತಗಳು ಮತ್ತು ಪಾಲುದಾರರನ್ನು ಸ್ವಚ್ಛತೆ, ನೈರ್ಮಲ್ಯ, ಕರಾವಳಿ ಪರಿಸರ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಕಡಲತೀರದ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಸುರಕ್ಷತೆ ಒದಗಿಸಲು ಪ್ರೋತ್ಸಾಹಿಸುವುದು ಬೀಮ್ಸ್ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮವು ಕಡಲತೀರದ ಪ್ರವಾಸೋದ್ಯಮ ಮತ್ತು ಮನರಂಜನೆಯನ್ನು ಪ್ರಕೃತಿಯ ಸಂಪೂರ್ಣ ಸಾಮರಸ್ಯದೊಂದಿಗೆ ಉತ್ತೇಜಿಸುತ್ತದೆ. ಆ ಅರ್ಥದಲ್ಲಿ ಇದೊಂದು ಅನನ್ಯ ಕಾರ್ಯಕ್ರಮವಾಗಿದೆ.
***
(Release ID: 1663586)
Visitor Counter : 310
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali
,
Gujarati
,
Odia
,
Tamil
,
Telugu
,
Malayalam