ಗೃಹ ವ್ಯವಹಾರಗಳ ಸಚಿವಾಲಯ
ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೃತಜ್ಞತೆ
“ಗ್ರಾಮೀಣ ಭಾರತದ ಅಭಿವೃದ್ಧಿಗೆ ಮತ್ತು ಪ್ರಗತಿಗೆ ಪ್ರಧಾನಮಂತ್ರಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಗ್ರಾಮ ಸ್ವರಾಜ್ಯದ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಇಂದು ಆರಂಭಿಸಿರುವ ಸ್ವಾಮಿತ್ವ ಯೋಜನೆ ಈ ನಿಟ್ಟಿನಲ್ಲಿ ಒಂದು ಮೈಲಿಗಲ್ಲು ಎಂಬುದನ್ನು ನಿರೂಪಿಸಲಿದೆ. ನಾನಾಜಿ ದೇಶ್ ಮುಖ್ ಅವರ ಜಯಂತಿಯಂದು ಈ ಯೋಜನೆ ನಿಜ ಶ್ರದ್ಧಾಂಜಲಿಯಾಗಿದೆ’
“ಮೋದಿ ಅವರ ‘ಆತ್ಮ ನಿರ್ಭರ ಭಾರತ’ ಗ್ರಾಮಗಳು ಮತ್ತು ಬಡವರ ಸಬಲೀಕರಣದ ಗುರಿ ಹೊಂದಿದೆ. ಈ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಅವರ ಹಕ್ಕು ಮತ್ತು ಗೌರವ ಒದಗಿಸುವುದಾಗಿದೆ. ಈಗ ಅವರು ಬ್ಯಾಂಕ್ ಗಳಿಂದ ಸುಲಭವಾಗಿ ಸಾಲ ಪಡೆಯಬಹುದು ಮತ್ತು ಅವರು ತಮ್ಮ ಕನಸು ನನಸಾಗಿಸಿಕೊಳ್ಳಬಹುದು”
Posted On:
11 OCT 2020 5:37PM by PIB Bengaluru
ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೃತಜ್ಞತೆ ಸಲ್ಲಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, “ಗ್ರಾಮೀಣ ಭಾರತದ ಅಭಿವೃದ್ಧಿಗೆ ಮತ್ತು ಪ್ರಗತಿಗೆ ಪ್ರಧಾನಮಂತ್ರಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಗ್ರಾಮ ಸ್ವರಾಜ್ಯದ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಇಂದು ಆರಂಭಿಸಿರುವ ಸ್ವಾಮಿತ್ವ ಯೋಜನೆ ಈ ನಿಟ್ಟಿನಲ್ಲಿ ಒಂದು ಮೈಲಿಗಲ್ಲು ಎಂಬುದನ್ನು ಸಾಬೀತು ಪಡಿಸಲಿದೆ’ ಎಂದು ಹೇಳಿದ್ದಾರೆ. ನಾನಾಜಿ ದೇಶ್ ಮುಖ್ ಅವರ ಜಯಂತಿಯಂದು ಈ ಯೋಜನೆ ನಿಜ ಶ್ರದ್ಧಾಂಜಲಿಯಾಗಿದೆ” ಎಂದು ತಿಳಿಸಿದ್ದಾರೆ.
“ಭಾರತದ ಗ್ರಾಮಸ್ಥರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಈ ದೂರದೃಷ್ಟಿಯ ಮತ್ತು ಐತಿಹಾಸಿಕ 'ಸ್ವ-ಮಾಲೀಕತ್ವ ಯೋಜನೆಯ' ಉದ್ಘಾಟನೆಗೆ ನಾನು ಪ್ರಧಾನಮಂತ್ರಿ ಮತ್ತು ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ಥೋಮರ್ ಅವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಈ ಯೋಜನೆ ಗ್ರಾಮೀಣ ಭಾರತದ ಭೂ ಆಸ್ತಿ ಮಾಲೀಕರಿಗೆ 'ಹಕ್ಕುಗಳ ದಾಖಲೆ' ನೀಡುತ್ತದೆ” ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.
“ಮೋದಿಜಿಯವರ ‘ಆತ್ಮನಿರ್ಭರ ಭಾರತ’ದ ನಿಜವಾದ ಗುರಿ ಬಡವರು ಮತ್ತು ಗ್ರಾಮಸ್ಥರನ್ನು ಸಬಲೀಕರಣಗೊಳಿಸುವುದಾಗಿದೆ. ಈ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಹಕ್ಕು ಮತ್ತು ಗೌರವವನ್ನು ನೀಡುವ ಒಂದು ನಾವೀನ್ಯಪೂರ್ಣ ಪ್ರಯತ್ನವಾಗಿದೆ. ಈಗ ಅವರು ಬ್ಯಾಂಕುಗಳಿಂದ ಸುಲಭವಾಗಿ ಸಾಲ ಪಡೆಯಬಹುದು ಮತ್ತು ಅವರೂ ಸಹ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ.” ಎಂದು ಶ್ರೀ ಅಮಿತ್ ಶಾ ತಿಳಿಸಿದ್ದಾರೆ.
ಸ್ವಾಮಿತ್ವ ಕೇಂದ್ರ ಪಂಚಾಯ್ತಿ ರಾಜ್ ಸಚಿವಾಲಯದ ಪ್ರಾಯೋಜಿತ ಯೋಜನೆಯಾಗಿದ್ದು, ಇದಕ್ಕೆ ರಾಷ್ಟ್ರೀಯ ಪಂಚಾಯತ್ ರಾಜ್ ದಿನವಾದ 2020ರ ಏಪ್ರಿಲ್ 24ರಂದು ಪ್ರಧಾನಮಂತ್ರಿಯವರು ಚಾಲನೆ ನೀಡಿದ್ದರು. ಈ ಯೋಜನೆ ಗ್ರಾಮೀಣ ಪ್ರದೇಶದಲ್ಲಿರುವ ಗ್ರಾಮೀಣ ವಸತಿ ಮಾಲೀಕರಿಗೆ ಆಸ್ತಿಯ ಹಕ್ಕು ಒದಗಿಸಲು ಸ್ವತ್ತಿನ ಕಾರ್ಡ್ ಒದಗಿಸುವ ಗುರಿ ಹೊಂದಿದೆ.
ಈ ಯೋಜನೆಯನ್ನು ಮುಂದಿನ ನಾಲ್ಕು ವರ್ಷಗಳಲ್ಲಿ (2020-2024) ದೇಶದಾದ್ಯಂತ ಹಂತ ಹಂತವಾಗಿ ಜಾರಿ ಮಾಡಲಾಗುವುದು ಮತ್ತು ಇದು ದೇಶದ ಎಲ್ಲ 6 ಲಕ್ಷ 62 ಸಾವಿರ ಗ್ರಾಮಗಳಿಗೂ ವಿಸ್ತರಿಸಲಾಗುವುದು. ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಕರ್ನಾಟಕ ರಾಜ್ಯಗಳು ಹಾಗೂ ಪಂಜಾಬ್ ಮತ್ತು ರಾಜಾಸ್ಥಾನದ ಗಡಿಯ ಕೆಲವು ಗ್ರಾಮಗಳು ಸೇರಿ ಸುಮಾರು 1 ಲಕ್ಷ ಗ್ರಾಮಗಳನ್ನು ಪಂಜಾಬ್ ಮತ್ತು ರಾಜಸ್ಥಾನದಾದ್ಯಂತ ನಿರಂತರ ಕಾರ್ಯಾಚರಣಾ ವ್ಯವಸ್ಥೆ (ಸಿಒಆರ್.ಎಸ್) ಕೇಂದ್ರಗಳ ಜಾಲವನ್ನು ಸ್ಥಾಪಿಸುವುದರ ಜೊತೆಗೆ, 2020-21ನೇ ಸಾಲಿನ ಪ್ರಾಯೋಗಿಕ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ.
***
(Release ID: 1663583)
Visitor Counter : 192