ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ನಿಧನಕ್ಕೆ ಸಂಪುಟ ಸಂತಾಪ


ಅಗಲಿದ ಗಣ್ಯರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ

Posted On: 09 OCT 2020 12:20PM by PIB Bengaluru

ಕೇಂದ್ರ ಸಚಿವ ಸಂಪುಟ ಕೇಂದ್ರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.

ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ಗೌರವಾರ್ಥ ಸಂಪುಟ ಎರಡು ನಿಮಿಷಗಳ ಮೌನ ಆಚರಿಸಿತು.

ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲು ಸಂಪುಟ ಅನುಮೋದಿಸಿತು.

ಸಂಪುಟವು ಕೆಳಂಕಂಡ ನಿರ್ಣಯಗಳನ್ನು ಅಂಗೀಕರಿಸಿತು:

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನಕ್ಕೆ ಸಚಿವ ಸಂಪುಟ ತೀವ್ರ ಶೋಕ ವ್ಯಕ್ತಪಡಿಸಿದೆ.

ನಿಧನದಿಂದ ದೇಶ ಒಬ್ಬ ಸಮರ್ಥ ನಾಯಕ, ಗೌರವಾನ್ವಿತ ಸಂಸದೀಯ ಪಟು ಮತ್ತು ಒಬ್ಬ ದಕ್ಷ ಆಡಳಿತಗಾರನನ್ನು ಕಳೆದುಕೊಂಡಿದೆ.

1946 ಜುಲೈ 5ರಂದು ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಜನಿಸಿದ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರು ಕೋಸಿ ಕಾಲೇಜ್, ಖಗಾರಿಯಾ, ಪಾಟ್ನಾದ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಅವರು ಕಲೆಯಲ್ಲಿ ಸ್ನಾತಕೋತ್ತರ ಪದವಿ (ಎಂ..), ಕಾನೂನು ಪದವಿ (ಎಲ್.ಎಲ್.ಬಿ.) ಪದವಿ ಪಡೆದರು. ಅವರಿಗೆ ಜಾನ್ಸಿ (ಉತ್ತರ ಪ್ರದೇಶ) ಬುಂದೇಲ್ ಖಂಡ ವಿಶ್ವವಿದ್ಯಾಲಯ ಡಿಲಿಟ್ (Honoris Causa) ಪದವಿ ನೀಡಲಾಗಿತ್ತು.

ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರು ಬಿಹಾರದ ಜನಪ್ರಿಯ ನಾಯಕರಾಗಿದ್ದರು ಮತ್ತು ಸಮುದಾಯದ ಬಲವಾದ ಬೆಂಬಲ ಪಡೆದಿದ್ದರು. ಅವರು ಬಿಹಾರ ರಾಜ್ಯ ವಿಧಾನಸಭೆಗೆ 1969ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿದ್ದರು. ನಂತರ ಅವರು ಹಾಜಿ ಪುರ ಲೋಕಸಭಾ ಕ್ಷೇತ್ರದಿಂದ 197ಲ್ಲಿ ದಾಖಲೆಯ ಅಂತರದೊಂದಿಗೆ 6ನೇ ಲೋಕಸಭೆಗೆ ಆಯ್ಕೆಯಾದರು. ಶ್ರೀ ಪಾಸ್ವಾನ್ ಅವರು 1980ರಲ್ಲಿ 7ನೇ ಲೋಕಸಭೆಗೆ, ಮತ್ತು 1984ರಲ್ಲಿ 8ನೇ ಲೋಕಸಭೆಗೆ ಪುನರಾಯ್ಕೆಯಾದರು. 1989ರಲ್ಲಿ 9ನೇ ಲೋಕಸಭೆಗೆ ಮತ್ತು ಆಯ್ಕೆಯಾದರು ಮತ್ತು ಕೇಂದ್ರ ಕಾರ್ಮಿಕ ಕಲ್ಯಾಣ ಸಚಿವರಾಗಿ ನೇಮಕಗೊಂಡರು. 1996ರಲ್ಲಿ ರೈಲ್ವೆ ಸಚಿವರಾಗಿ 1998ರವರೆಗೆ ಹುದ್ದೆ ನಿರ್ವಹಿಸಿದರು. ನಂತರ ಅಕ್ಟೋಬರ್ 1999ರಿಂದ ಸೆಪ್ಟೆಂಬರ್ 2001ರವರೆಗೆ ಸಂಪರ್ಕ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು, ಅವರು ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿ 2002 ಏಪ್ರಿಲ್ ವರೆಗೆ ನಿರ್ವಹಿಸಿದರು. 2004 ಲೋಕಸಭಾ ಚುನಾವಣೆಯ ಬಳಿಕ ಶ್ರೀ ಪಾಸ್ವಾನ್ ಸಂಯುಕ್ತ ಪ್ರಗತಿಪರ ಒಕ್ಕೂಟ ಸರ್ಕಾರ ಸೇರಿದ ಅವರು ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ಉಕ್ಕು ಖಾತೆ ಸಚಿವರಾಗಿದ್ದರು.

ಪಾಸ್ವಾನ್ ಅವರು 16ನೇ ಲೋಕಸಭೆಗೆ 2014ರಲ್ಲಿ ಆಯ್ಕೆಯಾಗಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು. 2019ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಅವರು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಮುಂದುವರಿದರು.

ಶ್ರೀ ಪಾಸ್ವಾನ್ ಹಿಂದುಳಿದ/ ದಲಿತ/ ಅಲ್ಪಸಂಖ್ಯಾತ ವರ್ಗದ ಧ್ವನಿಯಾಗಿದ್ದರು ಮತ್ತು ಸದಾ ಸಮಾಜದ ಅಂಚಿನಲ್ಲಿರುವ ವರ್ಗಗಳ ಹಿತ ಕಾಯಲು ಕಾರಣವಾಗಿದ್ದರು.

ಸಂಪುಟವು ಸರ್ಕಾರ ಮತ್ತು ಇಡೀ ರಾಷ್ಟ್ರದ ಪರವಾಗಿ ದುಃಖತಪ್ತ ಕುಟುಂಬಕ್ಕೆ ಹೃದಯಾಂತರಾಳದ ಸಂತಾಪವನ್ನು ಸಲ್ಲಿಸುತ್ತದೆ.

***


(Release ID: 1663138) Visitor Counter : 152