ಪರಿಸರ ಮತ್ತು ಅರಣ್ಯ ಸಚಿವಾಲಯ

ಸ್ಟಾಕ್ಹೋಮ್ ಸಮಾವೇಶದ ಅಡಿಯಲ್ಲಿ ಪಟ್ಟಿ ಮಾಡಲಾದ ಆರೋಗ್ಯ ಮತ್ತು ಪರಿಸರಕ್ಕೆ ಮಾರಕವಾದ ಏಳು ರಾಸಾಯನಿಕಗಳ ಮೇಲಿನ ನಿಷೇಧಕ್ಕೆ ಸಂಪುಟ ಅನುಮೋದನೆ


ಭಾರತವು ಜಗತ್ತಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ, ನಾವು ಆರೋಗ್ಯ ಮತ್ತು ಪರಿಸರದ ಮೇಲಿನ ಹಾನಿಯನ್ನು ಸಹಿಸುವುದಿಲ್ಲ: ಶ್ರೀ ಪ್ರಕಾಶ್ ಜಾವಡೇಕರ್

Posted On: 07 OCT 2020 5:26PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸ್ಟಾಕ್ಹೋಮ್ ಸಮಾವೇಶದ ಅಡಿಯಲ್ಲಿ ಪಟ್ಟಿ ಮಾಡಲಾದ ಏಳು ನಿರಂತರ ಸಾವಯವ ಮಾಲಿನ್ಯಕಾರಕಗಳ (ಪಿಒಪಿ) ನಿಷೇಧಕ್ಕೆ ಅನುಮೋದನೆ ನೀಡಿದೆ.

"ಇಂದಿನ ನಿರ್ಧಾರದಿಂದ ನಾವು ವಿಷಯದಲ್ಲಿ ಸಕ್ರಿಯರಾಗಿದ್ದೇವೆ ಮತ್ತು ಆರೋಗ್ಯ ಮತ್ತು ಪರಿಸರದ ಮೇಲಿನ ಹಾನಿಯನ್ನು ನಾವು ಸಹಿಸುವುದಿಲ್ಲ" ಎಂದು ಭಾರತವು ಜಗತ್ತಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸುತ್ತಿದೆ ಎಂದು ಕೇಂದ್ರ ಪರಿಸರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸ್ಟಾಕ್ಹೋಮ್ ಸಮಾವೆಶವು ಪರಿಸರದಲ್ಲಿ ಮತ್ತು ಜೀವಿಗಳಲ್ಲಿ ಜೈವಿಕವಾಗಿ ಸಂಗ್ರಹವಾಗುವ ಪಿಒಪಿಗಳಿಂದ ಮನುಷ್ಯನ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸುವ ಜಾಗತಿಕ ಒಪ್ಪಂದವಾಗಿದೆ. ಇವು ಮಾನವನ ಆರೋಗ್ಯ / ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.

ಪಿಒಪಿಗಳಿಗಳಿಂದ ಕ್ಯಾನ್ಸರ್, ಕೇಂದ್ರ ಮತ್ತು ಬಾಹ್ಯ ನರಮಂಡಲಗಳಿಗೆ ಹಾನಿ, ರೋಗನಿರೋಧಕ ವ್ಯವಸ್ಥೆಯ ಕಾಯಿಲೆಗಳು, ಸಂತಾನೋತ್ಪತ್ತಿಯ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಶಿಶು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ದುಷ್ಪರಿಣಾಮ ಬೀರುತ್ತವೆ. ಸದಸ್ಯ ರಾಷ್ಟ್ರಗಳ ನಡುವೆ ಸಂಪೂರ್ಣ ವೈಜ್ಞಾನಿಕ ಸಂಶೋಧನೆ, ಚರ್ಚೆಗಳು ಮತ್ತು ಮಾತುಕತೆಗಳ ನಂತರ ಸ್ಟಾಕ್ಹೋಮ್ ಸಮಾವೇಶದ ವಿವಿಧ ಅನುಬಂಧಗಳಲ್ಲಿ ಪಿಒಪಿಗಳನ್ನು ಪಟ್ಟಿ ಮಾಡಲಾಗಿದೆ.

ಪರಿಸರ ಸಂರಕ್ಷಣೆ ಮಾಡುವ ಮತ್ತು ಮನುಷ್ಯರ ಆರೋಗ್ಯದ ಅಪಾಯಗಳನ್ನು ಪರಿಹರಿಸುವಲ್ಲಿ ತನಗಿರುವ ಬದ್ಧತೆಗನುಗುಣವಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 1986 ಪರಿಸರ (ಸಂರಕ್ಷಣೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮಾರ್ಚ್ 5, 2018 ರಂದು ನಿರಂತರ ಸಾವಯವ ಮಾಲಿನ್ಯಕಾರಕ ನಿಯಮಗಳ ನಿಯಂತ್ರಣವನ್ನು ಪ್ರಕಟಿಸಿತು ಮತ್ತು ಪೆಂಟಾಬ್ರೊಮೊಡಿಫೆನೈಲ್ ಈಥರ್ (ವಾಣಿಜ್ಯ ಪೆಂಟಾ-ಬಿಡಿಇ), (ವಿ) ಪೆಂಟಾಕ್ಲೋರೋಬೆನ್ಜೆನ್, (vi) ಹೆಕ್ಸಾಬ್ರೊಮೊಸೈಕ್ಲೋಡೋಡೆಕೇನ್, ಮತ್ತು (vii) ಹೆಕ್ಸಾಕ್ಲೋರೋಬುಟಾಡಿಯೀನ್, ಇವುಗಳನ್ನು ಈಗಾಗಲೇ ಸ್ಟಾಕ್ಹೋಮ್ ಸಮಾವೇಶದ ಅಡಿಯಲ್ಲಿ ಪಿಒಪಿಗಳೆಂದು ಪಟ್ಟಿ ಮಾಡಲಾಗಿದೆ.

ಪಿಒಪಿಗಳನ್ನು ದೃಢೀಕರಿಸಲು ಸಂಪುಟವು ಅನುಮೋದನೆ ನೀಡಿರುವುದು ಪರಿಸರ ಮತ್ತು ಮಾನವ ಆರೋಗ್ಯದ ರಕ್ಷಣೆಗೆ ಸಂಬಂಧಿಸಿದಂತೆ ತನ್ನ ಅಂತರರಾಷ್ಟ್ರೀಯ ಬಾಧ್ಯತೆಗಳನ್ನು ಈಡೇರಿಸುವ ಭಾರತದ ಬದ್ಧತೆಯನ್ನು ತೋರಿಸುತ್ತದೆ. ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವ ಮೂಲಕ, ಉದ್ದೇಶಪೂರ್ವಕವಾಗಿ ಉತ್ಪತ್ತಿಯಾಗುವ ರಾಸಾಯನಿಕಗಳ ಕ್ರಿಯಾ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಕಾರ್ಯಗತಗೊಳಿಸುವ ಮೂಲಕ, ರಾಸಾಯನಿಕ ದಾಸ್ತಾನುಗಳನ್ನು ಅಭಿವೃದ್ಧಿಪಡಿಸುವ ಮತ್ತು ಪರಿಶೀಲಿಸುವ ಜೊತೆಗೆ ಅದರ ರಾಷ್ಟ್ರೀಯ ಅನುಷ್ಠಾನ ಯೋಜನೆಯನ್ನು (ಎನ್ಐಪಿ) ಅಪ್ ಡೇಟ್ ಮಾಡುವ  ಮೂಲಕ ಪಿಒಪಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಸರ್ಕಾರದ ಸಂಕಲ್ಪವನ್ನೂ ಇದು ಸೂಚಿಸುತ್ತದೆ. ದರಢೀಕರಣ ಪ್ರಕ್ರಿಯೆಯು ಜಾಗತಿಕ ಪರಿಸರ ಸೌಲಭ್ಯ (ಜಿಇಎಫ್) ಹಣಕಾಸು ಸಂಪನ್ಮೂಲಗಳನ್ನು ಪಡೆಯಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ.

ದೇಶೀಯ ನಿಯಮಾವಳಿಗಳ ಅಡಿಯಲ್ಲಿ ಈಗಾಗಲೇ ನಿಯಂತ್ರಣಕ್ಕೊಳಗಾಗಿರುವ ಪಿಒಪಿಗಳಿಗೆ ಸಂಬಂಧಿಸಿದಂತೆ ಸ್ಟಾಕ್ಹೋಮ್ ಒಪ್ಪಂದದ ಅಡಿಯಲ್ಲಿ ಕೇಂದ್ರ ವಿದೇಶಾಂಗ (ಎಂಇಎ) ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಎಂಇಎಫ್ಸಿಸಿ) ಸಚಿವರಿಗೆ ರಾಸಾಯನಿಕಗಳನ್ನು ದೃಢೀಕರಿಸುವ ಅಧಿಕಾರವನ್ನು ಸಂಪುಟ ವಹಿಸಿದೆ.

ಆರ್ಟಿಕಲ್ 25 (4) ಪ್ರಕಾರ ಭಾರತವು ಜನವರಿ 13, 2006 ರಂದು ಸ್ಟಾಕ್ಹೋಮ್ ಸಮಾವೇಶದ ಒಪ್ಪಂದವನ್ನು ಅಂಗೀಕರಿಸಿತು. ಇದು ಭಾರತವು "ಹೊರಗುಳಿಯುವ" ಸ್ಥಾನದಲ್ಲಿರಲು ಅನುವು ಮಾಡಿಕೊಟ್ಟಿತು, ಅಂದರೆ ಸಮಾವೇಶದ ವಿವಿಧ ಅನುಬಂಧಗಳಲ್ಲಿನ ತಿದ್ದುಪಡಿಗಳನ್ನು ಅದರ ಮೇಲೆ ಜಾರಿಗೊಳಿಸಲಾಗುವುದಿಲ್ಲ.

***


(Release ID: 1662697) Visitor Counter : 548