ಕೃಷಿ ಸಚಿವಾಲಯ
ಮುಂಗಾರು ಮಾರುಕಟ್ಟೆ ಹಂಗಾಮು 2020-21ರ ಎಂ.ಎಸ್.ಪಿ. ಕಾರ್ಯಾಚರಣೆ ಗರಿಗೆದರಿದೆ; ಸರ್ಕಾರ ಈ ಹಿಂದಿನ ಹಂಗಾಮಿನಂತೆಯೇ ರೈತರಿಂದ ಹಾಲಿ ಎಂ.ಎಸ್.ಪಿ. ಯೋಜನೆಯ ಪ್ರಕಾರ ಎಂ.ಎಸ್.ಪಿ. ದರದಲ್ಲಿ ಬೆಳೆ ಖರೀದಿ ಮುಂದುವರಿಸಿದೆ
ಪಂಜಾಬ್ ಮತ್ತು ಹರಿಯಾಣದಲ್ಲಿ 3 ದಿನಗಳಲ್ಲಿ 44,809 ಎಂ.ಟಿ. ಭತ್ತವನ್ನು 84.60 ಕೋಟಿ ರೂ. ಎಂ.ಎಸ್.ಪಿ. ಮೌಲ್ಯದಲ್ಲಿ ಸರ್ಕಾರ ದಾಸ್ತಾನು ಮಾಡಿದೆ
Posted On:
30 SEP 2020 4:53PM by PIB Bengaluru
2020-21ನೇ ಸಾಲಿನ ಮುಂಗಾರು ಮಾರುಕಟ್ಟೆ ಋತು ಈಗಷ್ಟೇ ಆರಂಭವಾಗಿದ್ದು, ಸರ್ಕಾರ 2020-21ನೇ ಮುಂಗಾರು ಬೆಳೆಗಳನ್ನು ಎಂ.ಎಸ್.ಪಿ. ದರದಲ್ಲಿ ರೈತರಿಂದ ಹಾಲಿ ಇರುವ ಎಂ.ಎಸ್.ಪಿ. ಯೋಜನೆ ಅಡಿಯಲ್ಲಿ ಹಿಂದಿನ ಹಂಗಾಮಿನ ರೀತಿಯಲ್ಲೇ ಖರೀದಿ ಆರಂಭಿಸಿದೆ.
ರಾಜ್ಯಗಳ ಪ್ರಸ್ತಾಪದ ಆಧಾರದಲ್ಲಿ, 2020ರ ಮುಂಗಾರು ಮಾರುಕಟ್ಟೆ ಋತುವಿನಲ್ಲಿ 14.09 ಎಲ್.ಎಂ.ಟಿ. ದ್ವಿದಳ ಧಾನ್ಯ ಮತ್ತು ಎಣ್ಣೆ ಕಾಳುಗಳನ್ನು ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಹರಿಯಾಣದಿಂದ ದಾಸ್ತಾನು ಮಾಡಲು ಅನುಮೋದನೆ ನೀಡಲಾಗಿದೆ. ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ದಾಸ್ತಾನಿಗೆ ಪ್ರಸ್ತಾಪವನ್ನು ಸ್ವೀಕರಿಸಿದ ನಂತರ ಅನುಮೋದನೆ ನೀಡಲಾಗುವುದು ಮತ್ತು ಎಫ್.ಎ.ಕ್ಯು. ದರ್ಜೆಯ ದಾಸ್ತಾನನ್ನು ಒಂದೊಮ್ಮೆ ಕೊಯ್ಲಿನ ಅವಧಿಯಲ್ಲಿ ಅಧಿಸೂಚನೆ ವೇಳೆ ಮಾರುಕಟ್ಟೆ ದರವು ಎಂ.ಎಸ್.ಪಿ.ಗಿಂತ ಕೆಳಗಿಳಿದಲ್ಲಿ, ಬೆಲೆ ಬೆಂಬಲ ಯೋಜನೆ (ಪಿ.ಎಸ್.ಎಸ್.), ರೀತ್ಯ ಖರೀದಿ ಮಾಡಲಾಗುವುದು.
29.09.2020ರವರೆಗೆ ಸರ್ಕಾರ ತನ್ನ ನೋಡಲ್ ಸಂಸ್ಥೆಗಳ ಮೂಲಕ 46.35 ಎಂ.ಟಿಯಷ್ಟು ಹೆಸರು ಕಾಳನ್ನು 33 ಲಕ್ಷ ಎಂ.ಎಸ್.ಪಿ. ದರದಲ್ಲಿ ಖರೀದಿಸಲಾಗಿದ್ದು, ತಮಿಳುನಾಡಿನ 48 ರೈತರಿಗೆ ಅನುಕೂಲವಾಗಿದೆ. ಅದೇ ರೀತಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳಕ್ಕೆ ಮಂಜೂರಾಗಿದ್ದ 1.23 ಎಲ್.ಎಂ.ಟಿ.ಗ ಪ್ರತಿಯಾಗಿ 5089 ಎಂ.ಟಿ ಕೊಬ್ಬರಿ (ದೀರ್ಘಕಾಲೀನ ಬೆಳೆ)ಯನ್ನು 52.40 ಕೋಟಿ ಎಂ.ಎಸ್.ಪಿ. ಮೌಲ್ಯದಲ್ಲಿ ಖರೀದಿಸಲಾಗಿದ್ದು, ಕರ್ನಾಟಕ ಮತ್ತು ತಮಿಳುನಾಡಿನ 3961 ರೈತರಿಗೆ ಪ್ರಯೋಜನವಾಗಿದೆ.
ಮುಂಗಾರು ಮಾರುಕಟ್ಟೆ ಋತು 2020-21ರ ಅವಧಿಯಲ್ಲಿ ಭತ್ತ ಖರೀದಿಯನ್ನು 2020ರ ಸೆಪ್ಟೆಂಬರ್ 26ರಿಂದ ಹರಿಯಾಣ ಮತ್ತು ಪಂಜಾಬ್ ನಲ್ಲಿ ಆರಂಭಿಸಲಾಗಿದೆ. 29.09.2020ರವರೆಗೆ 3,506 ಎಂ.ಟಿ. ಭತ್ತವನ್ನು ಹರಿಯಾಣದಲ್ಲಿ ಮತ್ತು 41,3030 ಎಂ.ಟಿ ಪಂಜಾಬ್ ನಲ್ಲಿ ಖರೀದಿಸಲಾಗಿದ್ದು, ಒಟ್ಟು 44,809 ಎಂ.ಟಿ ಭತ್ತವನ್ನು ಪ್ರತಿ ಕ್ವಿಂಟಾಲ್ ಗೆ 1888 ರೂ.ನಂತೆ ಹರಿಯಾಣ ಮತ್ತು ಪಂಜಾಬ್ ನ 2950 ರೈತರಿಂದ 84.60 ಕೋಟಿ ರೂ. ಎಂ.ಎಸ್.ಪಿ. ಮೌಲ್ಯದಲ್ಲಿ ದಾಸ್ತಾನು ಮಾಡಲಾಗಿದೆ.
2020-21ರ ಸಾಲಿನಲ್ಲಿ ಹತ್ತಿಯ ದಾಸ್ತಾನು 2020ರ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, ಭಾರತೀಯ ಹತ್ತಿ ನಿಗಮ (ಸಿಸಿಐ) ಎಫ್.ಎ.ಕ್ಯು. ದರ್ಜೆಯ ಹತ್ತಿಯನ್ನು 2020ರ ಅಕ್ಟೋಬರ್ 1ರ ತರುವಾಯ ಖರೀದಿಸಲು ಆರಂಭಿಸಲಿದೆ.
***
(Release ID: 1661692)
Visitor Counter : 196