ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಚರಕ ಅನಾವರಣದೊಂದಿಗೆ ಮುಂಬೈನ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ
Posted On:
02 OCT 2020 4:38PM by PIB Bengaluru
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಮುಂಬೈನ ಕಚೇರಿ ಆವರಣದಲ್ಲಿ 3.5 ಅಡಿ ಎತ್ತರದ ಉಕ್ಕಿನ ಚರಕವನ್ನು ಪ್ರತಿಷ್ಠಾಪಿಸುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಿತು. ಕೆವಿಐಸಿ ಅಧ್ಯಕ್ಷ ಶ್ರೀ ವಿನಯ್ ಕುಮಾರ್ ಸಕ್ಸೇನಾ ಅವರು ವೆಬ್ ಕಾನ್ಫರೆನ್ಸ್ ಮೂಲಕ ಚರಕವನ್ನು ಅನಾವರಣಗೊಳಿಸಿದರು ಮತ್ತು ಆನಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು “ಭಾರತದ ಸ್ವದೇಶಿ ಚಳವಳಿಯ ಸಂಕೇತ ಚರಕವಾಗಿದೆ. ಇದು ಸ್ವಾವಲಂಬನೆ ನಿಟ್ಟಿನಲ್ಲಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಪಯಣವಾಗಿದೆ ಮತ್ತು ಈ ಚಳವಳಿಯನ್ನು ಮತ್ತಷ್ಟು ಮುಂದುವರಿಸಿಕೊಂಡು ಹೋಗಲು ಕೆವಿಐಸಿಗೆ ಒಂದು ಹೆಮ್ಮೆಯ ಕ್ಷಣವಾಗಿದೆ’’ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ ಈ ಸಾಧನವನ್ನು ಬಳಸಿ, ನಮ್ಮ ಸಾಮಾಜಿಕ ಜವಳಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕನಸು ನನಸು ಮಾಡಬೇಕಿದೆ ಎಂದರು. ಪ್ರಧಾನಮಂತ್ರಿಗಳ ದೂರದೃಷ್ಟಿಯಂತೆ ಕೆವಿಐಸಿ, ಸಮಾಜದಲ್ಲಿನ ಶೋಷಿತ ವರ್ಗಗಳ ಜೀವನವನ್ನು ಉನ್ನತೀಕರಿಸಲು ನಿರಂತರ ಪ್ರಯತ್ನಗಳನ್ನು ಕೈಗೊಂಡಿದೆ. ವಿಶೇಷವಾಗಿ ಕೋವಿಡ್-19 ಸಂದರ್ಭದಲ್ಲಿ ತನ್ನ ಹಲವು ಕಾರ್ಯಕ್ರಮ ಮತ್ತು ಯೋಜನೆಗಳ ಮೂಲಕ ಬಡವರಲ್ಲಿ ಕಡುಬಡವರ ಮನೆಗಳಲ್ಲಿ ಜ್ಯೋತಿ ಬೆಳಗಿಸಿ ಕ್ರಮ ಕೈಗೊಂಡಿದೆ. ರಾಷ್ಟ್ರ ನಿರ್ಮಾಣದಲ್ಲಿ ಕೆವಿಐಸಿ ಬಲಿಷ್ಠ ಪಾತ್ರವನ್ನು ವಹಿಸಿದೆ ಮತ್ತು ಇದು ಕಳೆದ ಎಂಟು ವರ್ಷಗಳಲ್ಲಿ ಶೇ.6.8ರಿಂದ ಶೇ.28ರ ವರೆಗಿನ ಸಾಧಿಸಿರುವ ಪ್ರಗತಿಯಲ್ಲಿ ಪ್ರತಿಫಲನಗೊಂಡಿದೆ. ಇದು ಖಾದಿ ಮತ್ತು ಗ್ರಾಮೋದ್ಯೋಗ ಕರಕುಶಲಕರ್ಮಿಗಳ ಸಬಲೀಕರಣದಲ್ಲಿ ಅದ್ಬುತ ಸಮಯ ಎಂದು ಹೇಳಬಹುದಾಗಿದೆ.
ಕೆವಿಐಸಿ ಮುಂಬೈನಲ್ಲಿ ಮತ್ತೊಮ್ಮೆ ಚರಕವನ್ನು ಪ್ರತಿಷ್ಠಾಪಿಸುವ ಮೂಲಕ ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ನಮ್ಮ ಕರಕುಶಲಕರ್ಮಿಗಳಿಗೆ ಸಲ್ಲಿಸುವ ಗೌರವವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೆವಿಐಸಿ, ದೇಶಾದ್ಯಂತ ಚರಕಗಳನ್ನು ಪ್ರತಿಷ್ಠಾಪಿಸಿದೆ. ಅದರಲ್ಲಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶ್ವದ ಅತ್ಯಂತ ದೊಡ್ಡ ಚರಕ, ಕನೌಟ್ ಪ್ರದೇಶದ ರಾಜೀವ ಚೌಕದಲ್ಲಿ ವೈಭವದ ಉಕ್ಕಿನ ಚರಕ, ಮೊತಿಹಾರಿಯ ಗಾಂಧಿ ಮ್ಯೂಸಿಯಂ ಮುಂಭಾಗದ ಚರಕ ಪಾರ್ಕ್ ನಲ್ಲಿ ಉಕ್ಕಿನ ಚರಕ ಮತ್ತು ಸಬರಮತಿ ನದಿ ದಂಡೆಯ ಮೇಲೆ ಉಕ್ಕಿನ ಚರಕವನ್ನು ಪ್ರತಿಷ್ಠಾಪಿಸುವ ಮೂಲಕ ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚರಕದ ಪ್ರಾಮುಖ್ಯತೆಯನ್ನು ಜನಸಾಮಾನ್ಯರಿಗೆ ನೆನಪು ಮಾಡಿಕೊಡುವ ಕಾರ್ಯ ಮಾಡಲಾಗಿದೆ.
2020ರ ಅಕ್ಟೋಬರ್ 1 ರಂದು ಮಹಾತ್ಮ ಗಾಂಧೀಜಿ ಜನ್ಮದಿನಾಚರಣೆ ಅಂಗವಾಗಿ ಕೆವಿಐಸಿ ಅಧ್ಯಕ್ಷರು, ಕೆವಿಐಸಿ ಸಿಇಒ ಸಹಯೋಗದಲ್ಲಿ ದೇಶಾದ್ಯಂತ ಖಾದಿ ಮತ್ತು ಗ್ರಾಮೋದ್ಯೋಗ ಉದ್ದಿಮೆಗಳಲ್ಲಿ 150 ಬಗೆಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಇದರಲ್ಲಿ ಮಾರಾಟ ಮಳಿಗೆಗಳು/ಕಾರ್ಯನಿರ್ವಹಿಸುವ ಸ್ಥಳಗಳ ಉದ್ಘಾಟನೆ, ಮಡಿಕೆ ತಯಾರಿಕೆ ತರಬೇತಿ, ಕರಕುಶಲಕರ್ಮಿಗಳಿಗೆ ಜೇನು ಸಾಕಾಣಿಕೆ ಪೆಟ್ಟಿಗೆ/ಚರಕಗಳ ವಿತರಣೆ, ಎಸ್ಎಫ್ ಯುಆರ್ ಟಿ ಐ ಉದ್ಘಾಟನೆ ಮತ್ತು ಪಿಎಂಇಜಿಪಿ ಘಟಕಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮಗಳ ಉದ್ದೇಶ ಸ್ಥಳೀಯವಾಗಿ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಕರಕುಶಲಕರ್ಮಿಗಳನ್ನು ಸ್ವಾವಲಂಬಿ ಆತ್ಮನಿರ್ಭರಗೊಳಿಸುವ ಗುರಿ ಹೊಂದಲಾಗಿದೆ.
ಕೆವಿಐಸಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರ ಪ್ರೀತಾ ವರ್ಮಾ, ಕೆವಿಐಸಿ ಆವರಣದಲ್ಲಿ ಗಾಂಧೀಜಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ಅವರು ಕೆವಿಐಸಿಯಲ್ಲಿ ಗಾಂಧೀಜಿ ಚರಕ ಪ್ರತಿಷ್ಠಾಪನೆ, ಗಾಂಧೀಜಿಯ ತತ್ವಾದರ್ಶಗಳನ್ನು ಆಧರಿಸಿದ್ದು, ತಳಮಟ್ಟದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಜನರನ್ನು ಸ್ವಾವಲಂಬಿಯಾಗಿಸುವುದು ಮತ್ತು ಬಲಿಷ್ಠ ಗ್ರಾಮೀಣ ಸಮುದಾಯವನ್ನು ನಿರ್ಮಾಣ ಮಾಡಲು ಹಾಗೂ ಆತ್ಮನಿರ್ಭರ ಭಾರತ ನಿಟ್ಟಿನಲ್ಲಿ ಗುರಿ ಹೊಂದಿದ ಕಾರ್ಯಕ್ರಮಗಳಾಗಿವೆ ಎಂದರು. ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಕೆವಿಐಸಿ ಹೊಸ ಅವಕಾಶಗಳನ್ನು ಬಳಸಿಕೊಂಡು ಯಶಸ್ಸಿಗೆ ಹೊಸ ಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೆವಿಐಸಿ, ದೇಶಾದ್ಯಂತ ಇರುವ ತನ್ನೆಲ್ಲಾ ಮಾರಾಟ ಮಳಿಗೆಗಳಲ್ಲಿ ಎಲ್ಲ ಬಗೆಯ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮೇಲೆ ಶೇ.20ರಷ್ಟು ವಿನಾಯಿತಿಯನ್ನು ಘೋಷಿಸಿದೆ.
ಕೆವಿಐಸಿ, ಈ ದಿನ ಸ್ವಚ್ಛತಾ ಅಭಿಯಾನವನ್ನು ಸಹ ಆಯೋಜಿಸಿತ್ತು. ಆ ಮೂಲಕ ಶ್ರಮದಾನ ಚಟುವಟಿಕೆಗಳ ಮೂಲಕ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಉತ್ತೇಜನ ನೀಡುವ ಪ್ರಯತ್ನ ನಡೆಸಲಾಯಿತು.
***
(Release ID: 1661088)
Visitor Counter : 365