ಚುನಾವಣಾ ಆಯೋಗ
ಕರ್ನಾಟಕ ವಿಧಾನ ಪರಿಷತ್ತಿನಿಂದ 02 ಪದವೀಧರ ಕ್ಷೇತ್ರಗಳು ಮತ್ತು 2 ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ
ಪ್ರಕಟಣಾ ದಿನಾಂಕ:
29 SEP 2020 1:38PM by PIB Bengaluru
ನಾಲ್ಕು ಹಾಲಿ ಸದಸ್ಯರ ಅವಧಿ ಪೂರ್ಣಗೊಂಡು ಅವರು ನಿವೃತ್ತಿಯಾಗಿರುವ ಕಾರಣ ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಸ್ಥಾನಗಳು 2020ರ ಜೂನ್ 30ರಿಂದ ತೆರವಾಗಿವೆ. ಈ ಕ್ಷೇತ್ರಗಳ ವಿವರವನ್ನು ಈ ಕೆಳಗಿನ ಹೇಳಿಕೆಯಲ್ಲಿ ವಿವರಿಸಲಾಗಿದೆ:-
|
ಕರ್ನಾಟಕ
|
|
ಕ್ರಮಸಂಖ್ಯೆ
|
ಕ್ಷೇತ್ರದ ಹೆಸರು
|
ಸದಸ್ಯರ ಹೆಸರು
|
ನಿವೃತ್ತಿಯ ದಿನಾಂಕ
|
|
1.
|
ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ
|
ಆರ್. ಚೌಡರೆಡ್ಡಿ, ಥೂಪಲ್ಲಿ
|
30.06.2020
|
|
2.
|
ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ
|
ಎಸ್.ವಿ. ಸಂಕನೂರ್
|
|
3.
|
ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ
|
ಶರಣಪ್ಪ ಮಟ್ಟೂರು
|
|
4.
|
ಬೆಂಗಳೂರು ಶಿಕ್ಷಕರ ಕ್ಷೇತ್ರ
|
ಪುಟ್ಟಣ್ಣ
|
2. ಕೋವಿಡ್-19 ಕಾರಣದಿಂದಾಗಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ಅನಿರೀಕ್ಷಿತ ಪರಿಸ್ಥಿತಿ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಸಂಬಂಧಿತ ಪ್ರಾಧಿಕಾರ, ಚುನಾವಣಾ ಆಯೋಗವು ಅಂಗೀಕರಿಸಿದ ಮಾರ್ಗಸೂಚಿಗಳು ಮತ್ತು ಆದೇಶಗಳನ್ನು ಪರಿಗಣಿಸಿ ಚುನಾವಣಾ ಆಯೋಗವು 08.06.2020 ರಂದು ಭಾರತದ ಸಂವಿಧಾನದ 324 ನೇ ವಿಧಿ ಅನ್ವಯ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ, 1951 ರ ಸೆಕ್ಷನ್ 16ರ ರೀತ್ಯ, ಆದೇಶವನ್ನು ಜಾರಿಗೊಳಿಸಿ, ಮೇಲೆ ತಿಳಿಸಲಾದ ಸ್ಥಾನಗಳಿಗೆ ಚುನಾವಣೆಯ ಪ್ರಕ್ರಿಯೆಯನ್ನು ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಪರಿಶೀಲಿಸಿದ ತರುವಾಯ ಮುಂದಿನ ದಿನಗಳಲ್ಲಿ ಆರಂಭಿಸಬಹುದು ಎಂದು ನಿರ್ದೇಶಿಸಿತ್ತು.
3. ಆಯೋಗವು ಕರ್ನಾಟಕ ಸಿಇಓ ಅವರಿಂದ ಬಂದ ವರದಿಗಳನ್ನು ಪರಿಗಣಿಸಿ, ಈ ಕೆಳಕಂಡಂತೆ ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆಯನ್ನು ನಡೆಸಲು ನಿರ್ಧರಿಸಿದೆ.:-
-
|
ಅಧಿಸೂಚನೆಯ ಪ್ರಕಟಣೆ
|
01ನೇ ಅಕ್ಟೋಬರ್, 2020 (ಗುರುವಾರ)
|
-
|
ನಾಮಪತ್ರ ಸಲ್ಲಿಸಲು ಕೊನೆಯ ದಿನ
|
08ನೇ ಅಕ್ಟೋಬರ್, 2020 (ಗುರುವಾರ)
|
-
|
ನಾಮಪತ್ರಗಳ ಪರಿಶೀಲನೆ
|
09ನೇ ಅಕ್ಟೋಬರ್, 2020 (ಶುಕ್ರವಾರ)
|
-
|
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ
|
12ನೇ ಅಕ್ಟೋಬರ್, 2020 (ಸೋಮವಾರ)
|
-
|
ಮತದಾನದ ದಿನಾಂಕ
|
28ನೇ ಅಕ್ಟೋಬರ್, 2020 (ಬುಧವಾರ)
|
-
|
ಮತದಾನದ ಸಮಯ
|
ಬೆಳಗ್ಗೆ 08:00 ರಿಂದ ಸಂಜೆ 05:00
|
-
|
ಮತ ಎಣಿಕೆ
|
02ನೇ ನವೆಂಬರ್, 2020 (ಸೋಮವಾರ)
|
-
|
ಯಾವ ದಿನಾಂಕದೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು
|
05ನೇ ನವೆಂಬರ್, 2020 (ಗುರುವಾರ)
|
- ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತತ್ ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಆಯೋಗದ ಅಂತರ್ಜಾಲ ತಾಣದ ಈ ಕೆಳಗಿನ ಸಂಪರ್ಕ ಕ್ಲಿಕ್ ಮಾಡಿ ದಯಮಾಡಿ ವಿವರ ನೋಡಿ.: https://eci.gov.in/files/file/4070-biennial-bye-elections-to-the-legislative-councils-from-council-constituencies-by-graduates%E2%80%99-and-teachers%E2%80%99-and-local-authorities%E2%80%99-constituencies-%E2%80%93-mcc-instructions-%E2%80%93-regarding/
5. ಎಲ್ಲ ವ್ಯಕ್ತಿಗಳೂ ಇಡೀ ಚುನಾವಣೆ ಪ್ರಕ್ರಿಯೆಯ ವೇಳೆ ವಿಸ್ತೃತ ಮಾರ್ಗಸೂಚಿಯನ್ನು ಅನುಸರಿಸಬೇಕು:-
- ಚುನಾವಣೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಯ ವೇಳೆ ಪ್ರತಿಯೊಬ್ಬ ವ್ಯಕ್ತಿಯೂ ಮುಖ ಕವಚ ಧರಿಸಿರಬೇಕು.
II. ಚುನಾವಣೆ ಉದ್ದೇಶಕ್ಕಾಗಿ ಬಳಕೆಯಾಗುವ ಹಜಾರ/ಕೊಠಡಿ/ಆವರಣದ ಪ್ರವೇಶದಲ್ಲಿ:
(a) ಎಲ್ಲ ವ್ಯಕ್ತಿಗಳ ಥರ್ಮಲ್ ಸ್ಕ್ಯಾನಿಂಗ್ ಮಾಡಲೇಬೇಕು:
(b) ಎಲ್ಲ ತಾಣಗಳಲ್ಲಿ ಸ್ಯಾನಿಟೈಸರ್ ಲಭ್ಯವಿರಬೇಕು
III. ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯದ ಕೋವಿಡ್ -19 ಮಾರ್ಗಸೂಚಿಯ ಅನ್ವಯ ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಬೇಕು.
IV. ಎಷ್ಟು ಸಾಧ್ಯವೋ ಅಷ್ಟು ದೊಡ್ಡ ಹಜಾರಗಳನ್ನು ಗುರುತಿಸಿ, ಬಳಸಿ ವ್ಯಕ್ತಿಗತ ಅಂತರ ಖಾತ್ರಿ ಪಡಿಸಬೇಕು.
V. ಕೋವಿಡ್ -19 ಮಾರ್ಗಸೂಚಿಗಳ ಅನುಸರಣೆಗಾಗಿ ಮತಗಟ್ಟೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಓಡಾಟಕ್ಕೆ ಅಗತ್ಯವಾದ ಸಂಖ್ಯೆಯ ವಾಹನಗಳ ವ್ಯವಸ್ಥೆ ಮಾಡಬೇಕು.
6. ಕೋವಿಡ್ -19 ರ ಕಾಲದಲ್ಲಿ ಚುನಾವಣೆಯ ಸಮಯದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ವಿಸ್ತೃತ ಮಾರ್ಗಸೂಚಿಗಳಿಗಾಗಿ, ದಯವಿಟ್ಟು ಆಯೋಗದ ಅಂತರ್ಜಾಲ ತಾಣದ ಈ ಕೆಳಗಿನ ಸಂಪರ್ಕ ಕ್ಲಿಕ್ ಮಾಡಿ ಮಾರ್ಗಸೂಚಿಯನ್ನು ನೋಡಿ :- https://eci.gov.in/files/file/12167-broad-guidelines-for-conduct-of-general-electionbye-election-during-covid-19/
***
(ಪ್ರಕಟಣೆ ಐ.ಡಿ.: 1660022)
ವಿಸಿಟರ್ ಕೌಂಟರ್ : 1215