ಹಣಕಾಸು ಸಚಿವಾಲಯ
ಸುಧಾರಿತ ಗುರಿಗಳನ್ನು ಸಾಧಿಸಲು ಐದು ರಾಜ್ಯಗಳಿಗೆ 9,913 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಅನುಮತಿ
Posted On:
24 SEP 2020 4:32PM by PIB Bengaluru
ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, ಮುಕ್ತ ಮಾರುಕಟ್ಟೆ ಸಾಲ(ಒಎಂಬಿ) ಮೂಲಕ ಐದು ರಾಜ್ಯಗಳಿಗೆ 9,913 ಕೋಟಿ ರೂ. ಹೆಚ್ಚುವರಿ ಆರ್ಥಿಕ ಸಂಪನ್ಮೂಲ ಕ್ರೂಢೀಕರಣಕ್ಕೆ ಅನುಮತಿ ನೀಡಿದೆ. ಆ ರಾಜ್ಯಗಳೆಂದರೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಮತ್ತು ತ್ರಿಪುರಾ. ಈ ರಾಜ್ಯಗಳು ಅತ್ಯಂತ ಯಶಸ್ವಿಯಾಗಿ ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಅನುಷ್ಠಾನಕ್ಕೆ ಒಡ್ಡಿದ್ದ ಸುಧಾರಣಾ ಷರತ್ತು ಪಾಲನೆಯಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ಅನುಮತಿ ನೀಡಲಾಗಿದೆ. ಭಾರತ ಸರ್ಕಾರ ಹೆಚ್ಚುವರಿ ಸಾಲಕ್ಕೆ ಅನುಮೋದನೆ ನೀಡಿರುವ ರಾಜ್ಯವಾರು ವಿವರ ಈ ಕೆಳಗಿನಂತಿದೆ.
- ಆಂಧ್ರಪ್ರದೇಶ - 2,525 ಕೋಟಿ ರೂ.
- ತೆಲಂಗಾಣ - 2,508 ಕೋಟಿ ರೂ.
- ಕರ್ನಾಟಕ - 4,509 ಕೋಟಿ ರೂ.
- ಗೋವಾ - 223 ಕೋಟಿ ರೂ.
- ತ್ರಿಪುರಾ - 148 ಕೋಟಿ ರೂ.
ಅನಿರೀಕ್ಷಿತ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2020ರ ಮೇ ತಿಂಗಳಿನಲ್ಲಿ ರಾಜ್ಯಗಳ ಒಟ್ಟು ದೇಶೀಯ ಉತ್ಪನ್ನ(ಜಿಎಸ್ ಡಿಪಿ)ಯ ಶೇ. 2ರಷ್ಟು ಮಿತಿಯೊಂದಿಗೆ 2020-21ನೇ ಸಾಲಿಗೆ ಹೆಚ್ಚುವರಿ ಸಾಲಗಳನ್ನು ಪಡೆದುಕೊಳ್ಳಲು ರಾಜ್ಯಗಳಿಗೆ ಅನುಮತಿ ನೀಡಿತ್ತು. ಇದರಿಂದಾಗಿ ರಾಜ್ಯಗಳಿಗೆ 4,27,302 ಕೋಟಿ ರೂ. ಲಭ್ಯವಾಗಿತ್ತು. ಇದರಲ್ಲಿ ಶೇಕಡ ಒಂದರಷ್ಟು ಮೊತ್ತವನ್ನು ಈ ಕೆಳಗಿನ ನಾಲ್ಕು ವಿಶೇಷ ರಾಜ್ಯಮಟ್ಟದ ಸುಧಾರಣೆಗಳನ್ನು ಕೈಗೊಳ್ಳಲು ಅನುಷ್ಠಾನಕ್ಕೆ ವಿನಿಯೋಗಿಸಬೇಕಾಗಿತ್ತು. ಅದರಲ್ಲಿ ಜಿ ಎಸ್ ಡಿಪಿಯ ಶೇ.0.25ರಷ್ಟು ಪ್ರತಿಯೊಂದಕ್ಕೂ ನಿಗದಿಪಡಿಸಲಾಗಿತ್ತು.
ಎ. ಒಂದು ರಾಷ್ಟ್ರ ಒಂದು ಪಡಿತರ ವ್ಯವಸ್ಥೆ ಜಾರಿ
ಬಿ. ವ್ಯಾಪಾರಕ್ಕೆ ಅನುಕೂಲಕರ ವಾತಾವರಣ ನಿರ್ಮಾಣ
ಸಿ. ನಗರ ಸ್ಥಳೀಯ ಸಂಸ್ಥೆ/ಬಳಕೆ ಸುಧಾರಣೆ ಮತ್ತು
ಡಿ. ವಿದ್ಯುತ್ ವಲಯದ ಸುಧಾರಣೆಗಳು.
ಉಳಿದ ಶೇಕಡ ಒಂದರಷ್ಟು ಹೆಚ್ಚುವರಿ ಸಾಲವನ್ನು ಶೇಕಡ 0.50 ಅಂತೆ ಎರಡು ಕಂತುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಮೊದಲ ಕಂತಿನಲ್ಲಿ ಎಲ್ಲ ರಾಜ್ಯಗಳಿಗೆ ತಕ್ಷಣವೇ ಬಿಡುಗಡೆ ಮಾಡಲಾಗಿತ್ತು ಮತ್ತು ಎರಡನೇ ಕಂತನ್ನು ಈ ಮೇಲೆ ಉಲ್ಲೇಖಿಸಿದ ಸುಧಾರಣೆಗಳ ಪೈಕಿ ಕನಿಷ್ಠ ಮೂರು ಅಂಶಗಳನ್ನು ಪಾಲಿಸಿರುವ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುವುದು. ಭಾರತ ಸರ್ಕಾರ ಈಗಾಗಲೇ 2020ರ ಜೂನ್ ನಲ್ಲಿ ಒಎಂಬಿ ಮೂಲಕ ಮೊದಲ ಕಂತಿನ ಶೇಕಡ 0.50ರಷ್ಟು ಹಣವನ್ನು ಪಡೆದುಕೊಳ್ಳಲು ರಾಜ್ಯಗಳಿಗೆ ಅನುಮತಿ ನೀಡಿತ್ತು. ಇದರಿಂದಾಗಿ ರಾಜ್ಯಗಳಿಗೆ ಹೆಚ್ಚುವರಿಯಾಗಿ 1,06,830 ಕೋಟಿ ರೂ.ಗಳು ಲಭ್ಯವಾಗಿತ್ತು.
***
(Release ID: 1658907)
Visitor Counter : 281