ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನ ಮಂತ್ರಿ ಮೋದಿ ಅವರ ಭಾಷಣ
Posted On:
22 SEP 2020 9:46AM by PIB Bengaluru
ಸಾಮಾನ್ಯ ಸಭೆಯ ಅಧ್ಯಕ್ಷರೂ, ಗೌರವಾನ್ವಿತರಾದ ಶ್ರೀ ವೋಲ್ಕನ್ ಬೊಜ್ಕೀರ್ ಅವರೇ, ಸಾಮಾನ್ಯ ಸಭೆಯ ಅಧ್ಯಕ್ಷರೇ, ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ, ನಮಸ್ತೇ !
ಎಪ್ಪತೈದು ವರ್ಷಗಳ ಹಿಂದೆ ಯುದ್ದದ ಭಯಾನಕತೆಯಿಂದ ಹೊಸ ಭರವಸೆಯೊಂದು ಉದಿಸಿತು. ಮಾನವ ಕುಲದ ಇತಿಹಾಸದಲ್ಲಿ ಇದೇ ಮೋದಲ ಬಾರಿಗೆ ಇಡೀ ವಿಶ್ವಕ್ಕಾಗಿ ಸಂಸ್ಥೆಯೊಂದು ರಚನೆಯಾಯಿತು. ವಿಶ್ವ ಸಂಸ್ಥೆ ಸನ್ನದಿಗೆ ಸ್ಥಾಪಕ ಅಂಕಿತದಾರನಾಗಿ ಭಾರತವು ಆ ಶ್ರೇಷ್ಟ ಚಿಂತನೆಗೆ ಭಾಗೀದಾರನಾಯಿತು. ಇದು ಭಾರತದ ಸ್ವಂತ ತತ್ವಜ್ಞಾನವಾದ “ವಸುದೈವ ಕುಟುಂಬಕಂ” –ಅಂದರೆ ಎಲ್ಲರೂ ಒಂದು ಕುಟುಂಬದಂತೆ ಎಂಬುದರ ಪ್ರತಿಬಿಂಬದಂತಿತ್ತು.
ವಿಶ್ವ ಸಂಸ್ಥೆಯಿಂದಾಗಿ ನಮ್ಮ ವಿಶ್ವ ಇಂದು ಉತ್ತಮ ಸ್ಥಳವಾಗಿ ರೂಪುಗೊಂಡಿದೆ. ವಿಶ್ವ ಸಂಸ್ಥೆಯ ಧ್ವಜದಡಿಯಲ್ಲಿ ಶಾಂತಿಗಾಗಿ ಮತ್ತು ಅಭಿವೃದ್ಧಿಗಾಗಿ ದುಡಿದವರೆಲ್ಲರಿಗೂ ನಾವು ಗೌರವವನ್ನು ಸಲ್ಲಿಸುತ್ತೇವೆ. ಇದರಲ್ಲಿ ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಮಿಶನ್ ಗಳೂ ಸೇರಿದ್ದು, ಅದರಲ್ಲಿ ಭಾರತ ಪ್ರಮುಖ ಕೊಡುಗೆದಾರನಾಗಿದೆ.
ಆದಾಗ್ಯೂ, ಬಹಳಷ್ಟನ್ನು ಸಾಧಿಸಲಾಗಿದ್ದರೂ, ಮೂಲ ಉದ್ದೇಶ ಇನ್ನೂ ಈಡೇರಿಲ್ಲ. ಮತ್ತು ನಾವಿಂದು ಕೈಗೊಳ್ಳುವ ದೂರಗಾಮಿ ಪರಿಣಾಮದ ಘೋಷಣೆಗಳು ಇನ್ನೂ ಕೆಲಸ ಮಾಡುವುದಕ್ಕಿದೆ ಎಂಬುದನ್ನು ಹೇಳುತ್ತವೆ. ಬಿಕ್ಕಟ್ಟು ತಡೆಯಲ್ಲಿ, ಅಭಿವೃದ್ಧಿ ಖಾತ್ರಿಪಡಿಸುವಲ್ಲಿ, ವಾತಾವರಣ ಬದಲಾವಣೆ ನಿಭಾಯಿಸುವಲ್ಲಿ , ಅಸಮಾನತೆ ಕಡಿಮೆ ಮಾಡುವಲ್ಲಿ, ಮತ್ತು ಡಿಜಿಟಲ್ ತಂತ್ರಜ್ಞಾನಗಳ ಅನುಸರಣೆಯಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿವೆ. ಘೋಷಣೆ ವಿಶ್ವ ಸಂಸ್ಥೆಯಲ್ಲೂ ಸುಧಾರಣೆಗಳ ಅವಶ್ಯಕತೆಯನ್ನು ಪ್ರತಿಪಾದಿಸುತ್ತದೆ.
ನಾವಿಂದು ಹಳೆಯ ರಚನೆಗಳೊಂದಿಗೆ ಈ ಕಾಲದ ಸವಾಲುಗಳ ವಿರುದ್ದ ಹೋರಾಡುವುದು ಸಾಧ್ಯವಿಲ್ಲ. ಸಮಗ್ರ ಸುಧಾರಣೆಗಳು ಇಲ್ಲದೆ ವಿಶ್ವ ಸಂಸ್ಥೆಯು ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂದಿನ ಅಂತರ್ ಸಂಪರ್ಕಿತ ವಿಶ್ವದಲ್ಲಿ , ನಮಗೆ ಸುಧಾರಿತ ಬಹುಪಕ್ಷೀಯತೆ ಅವಶ್ಯವಾಗಿದೆ. ಅದು ಇಂದಿನ ವಾಸ್ತವಗಳನ್ನು ಪ್ರತಿನಿಧಿಸಬೇಕಿದೆ, ಎಲ್ಲಾ ಭಾಗೀದಾರರಿಗೆ ಧ್ವನಿಯನ್ನು ಒದಗಿಸಬೇಕಿದೆ ಮತ್ತು ಸಮಕಾಲೀನ ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸಿ , ಮಾನವ ಕಲ್ಯಾಣದ ಬಗ್ಗೆ ಆದ್ಯತೆ ನೀಡಬೇಕಿದೆ.
ಈ ದಿಕ್ಕಿನಲ್ಲಿ ಇತರ ಎಲ್ಲಾ ರಾಷ್ಟ್ರಗಳ ಜೊತೆ ಕೆಲಸ ಮಾಡುವುದನ್ನು ಭಾರತವು ಎದುರು ನೋಡುತ್ತಿದೆ.
ಧನ್ಯವಾದಗಳು
ನಮಸ್ತೇ!
***
(Release ID: 1657741)
Visitor Counter : 231
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam