ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
ಕೌಶಲ್ಯಾಭಿವೃದ್ಧಿಗೆ ಆನ್ ಲೈನ್ ಕೋರ್ಸ್ ಗಳು
Posted On:
18 SEP 2020 12:40PM by PIB Bengaluru
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲ ಸಚಿವಾಲಯದ ಮನವಿ ಮೇರೆಗೆ 2020ರ ಸೆಪ್ಟೆಂಬರ್ 8ರಂದು ನಿರ್ದಿಷ್ಟ ಕಾರ್ಯ ವಿಧಾನ (ಎಸ್ಒಪಿ) ಮಾರ್ಗಸೂಚಿಗಳನ್ನು ಕೋವಿಡ್-19 ಲಾಕ್ ಡೌನ್ ನಂತರ ತರಬೇತಿ ಚಟುವಟಿಕೆಗಳನ್ನು ಕೈಗೊಳ್ಳಲು ಬಿಡುಗಡೆ ಮಾಡಿದೆ. ಕೈಗಾರಿಕಾ ತಾಂತ್ರಿಕ ಕೇಂದ್ರಗಳು(ಐಟಿಐ) ಸೇರಿದಂತೆ ಕೌಶಲ್ಯ ಮತ್ತು ಉದ್ಯಮಶೀಲ ತರಬೇತಿ ಕೇಂದ್ರಗಳಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ(ಎನ್ ಎಸ್ ಡಿ ಸಿ) ಅಡಿ ಅಲ್ಪಾವಧಿ ಕೋರ್ಸ್ ಗಳು ಅಥವಾ ರಾಜ್ಯ ಕೌಶಲ್ಯಾಭಿವೃದ್ಧಿ ಮಿಷನ್ ಅಥವಾ ಇತರ ಕೇಂದ್ರ ಅಥವಾ ರಾಜ್ಯ ಸಚಿವಾಲಯಗಳು, ಇಲಾಖೆಗಳು, ಉದ್ಯಮಶೀಲತೆ ಮತ್ತು ಸಣ್ಣ ವ್ಯಾಪಾರ ಅಭಿವೃದ್ಧಿ ರಾಷ್ಟ್ರೀಯ ಕೇಂದ್ರ(ಎನ್ ಐ ಇ ಎಸ್ ಬಿ ಯು ಡಿ), ಭಾರತೀಯ ಉದ್ಯಮಶೀಲತಾ ಕೇಂದ್ರ(ಐಐಇ) ಮತ್ತು ಇತರ ತರಬೇತಿ ಪಾಲುದಾರರಿಗಾಗಿ ಈ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ ಈ ಮಾರ್ಗಸೂಚಿಯಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಲು ಈ ಕೇಂದ್ರಗಳಲ್ಲಿ ಪಾಲಿಸಬೇಕಿರುವ ಸಾಮಾನ್ಯ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಹೆಚ್ಚುವರಿ ಹಾಗೂ ನಿರ್ದಿಷ್ಟ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ.
ಕೋವಿಡ್-19 ಸಾಂಕ್ರಾಮಿಕ ದುಡಿಯುವ ಸ್ಥಳಗಳ ಕುರಿತಂತೆ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದ್ದು, ಆಟೊಮೇಷನ್ ಮತ್ತು ಕೃತಕ ಬುದ್ಧಿಮತ್ತೆ ಕಾರಣದಿಂದ ದುಡಿಯುವ ಸ್ಥಳಗಳ ಪಾತ್ರಗಳು ಸಾಕಷ್ಟು ಬದಲಾಗಿವೆ. ಇದೀಗ ಆರೋಗ್ಯ ವಲಯ ಸೇರಿದಂತೆ ಎಲ್ಲ ವಲಯಗಳಲ್ಲಿ ಕೌಶಲ್ಯ, ಮರುಕೌಶಲ್ಯ, ಕೌಶಲ್ಯ ಉನ್ನತೀಕರಣಕ್ಕೆ ಬೇಡಿಕೆ ಹೆಚ್ಚಾಗಿದ್ದು, ಟೆಲಿಮೆಡಿಸನ್, ಸ್ಯಾನಿಟೈಸೇಷನ್ ಮತ್ತಿತರ ಹೊಸ ಕೋರ್ಸ್ ಗಳು ಅಭಿವೃದ್ಧಿಯಾಗಿವೆ.
ಸಚಿವಾಲಯದ ಆನ್ ಲೈನ್ ಪೋರ್ಟಲ್ ಭಾರತ್ ಸ್ಕಿಲ್ಸ್ ಮೂಲಕ 29 ಜನಪ್ರಿಯ ಕೋರ್ಸ್ ಗಳ ಪಠ್ಯಕ್ರಮವನ್ನು ಮತ್ತು 71 ಕೋರ್ಸ್ ಗಳ ಇ-ಕಲಿಕೆ ವಿಡಿಯೋ ಪಠ್ಯವನ್ನು ಹಾಗೂ 137 ವ್ಯಾಪಾರಗಳ ಕುಶಲಕರ್ಮಿಗಳ ತರಬೇತಿ ಯೋಜನೆ(ಸಿಟಿಎಸ್) ಅನ್ನು ಐಟಿಐಗಳಿಗಾಗಿ ಬಿಡುಗಡೆ ಮಾಡಿದ್ದು, ಅಲ್ಲದೆ ರಾಷ್ಟ್ರೀಯ ಕೌಶಲ್ಯ ಅರ್ಹತಾ ನೀತಿ(ಎನ್ಎಸ್ ಕ್ಯೂಎಫ್) ಸಂಬಂಧಿ ಕೋರ್ಸ್ ಗಳು, ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ತರಬೇತಿ ಕೋರ್ಸ್ ಗಳನ್ನು ನಡೆಸಿದ್ದರಿಂದ 9,38,851 ಅಭ್ಯರ್ಥಿಗಳಿಗೆ ತರಬೇತಿ ಪ್ರಯೋಜನವಾಗಿದೆ. ಅಲ್ಲದೆ ಹೆಚ್ಚುವರಿಯಾಗಿ 1, 31,241 ತರಬೇತುದಾರರು ಭಾರತ್ ಸ್ಕಿಲ್ ಮೊಬೈಲ್ ಮೂಲಕ ಆನ್ ಲೈನ್ ತರಬೇತಿ ಪಡೆದಿದ್ದಾರೆ. ಅದೇ ರೀತಿ ರಾಷ್ಟ್ರೀಯ ಮಾಧ್ಯಮ ಬೋಧನಾ ಸಂಸ್ಥೆ (ಎನ್ಐಎಂಐ) ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಅದು 3080 ಆನ್ ಲೈನ್ ಕೋರ್ಸ್ ಗಳನ್ನು ನಡೆಸಿದೆ. ಅದರಿಂದ 16,55,953 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.
ಅಲ್ಲದೆ ಸಚಿವಾಲಯದಡಿ ಬರುವ ತರಬೇತಿ ಮಹಾನಿರ್ದೇಶನಾಲಯ(ಡಿಜಿಟಿ) ಅಡಿಯಲ್ಲಿ ಕೈಗಾರಿಕಾ ಪಾಲುದಾರಿಕೆಗಳನ್ನು ಮಾಡಿಕೊಂಡು ಕ್ವೆಸ್ಟ್ ಅಲಯನ್ಸ್, ಐಬಿಎಂ, ನ್ಯಾಸ್ಕಾಂ-ಮೈಕ್ರೋಸಾಫ್ಟ್ ಮತ್ತು ಸಿಸ್ಕೊ ಆನ್ ಲೈನ್ ತರಬೇತಿ ನಡೆಸಿದ್ದು, ಅವುಗಳಲ್ಲಿ 1,84,296 ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ. ಈ ಮೇಲಿನವುಗಳಲ್ಲದೆ, 35 ಸಿಟಿಎಸ್ ವ್ಯಾಪಾರಗಳಿಗೆ ಸಂಬಂಧಿಸಿದಂತೆ 16,767 ಆನ್ ಲೈನ್ ತರಗತಿಗಳನ್ನು ಹಾಗೂ 34 ಕರಕುಶಲ ತರಬೇತುದಾರರ ತರಬೇತಿ ಯೋಜನೆ (ಸಿಐಟಿಎಸ್) ಅನ್ನು 33 ರಾಷ್ಟ್ರೀಯ ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ನಡೆಸಲಾಗಿದೆ. ಅಲ್ಪಾವಧಿ ತರಬೇತಿಯಲ್ಲಿ ಎಸ್ ಎಸ್ ಡಿ ಸಿ ಕೌಶಲ್ಯ ಪೂರಕ ವ್ಯವಸ್ಥೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ತರಬೇತಿಗಳನ್ನು ನೀಡಲಾಗಿದ್ದು, ಅದಕ್ಕಾಗಿ ಇ-ಸ್ಕಿಲ್ ಇಂಡಿಯಾ ಕಲಿಕಾ ಪೋರ್ಟಲ್ ಅನ್ನು ಬಳಸಿಕೊಳ್ಳಲಾಗಿದೆ. ಇದರ ಮೂಲಕ ತಂತ್ರಜ್ಞಾನವನ್ನು ಬಳಸಿ ಕೌಶಲ್ಯ ತರಬೇತಿ ನೀಡಲಾಗುತ್ತಿರುವುದಲ್ಲದೆ, ಕೌಶಲ್ಯ ಬಯಸುವಂತಹವರು ವರ್ಚುಯಲ್ ಕಲಿಕೆ ಮತ್ತು ರಿಮೋಟ್ ಕ್ಲಾಸ್ ರೂಮ್ ಮತ್ತಿತರ ವಿಧಾನಗಳ ಮೂಲಕ ತಮ್ಮ ಕಲಿಕೆಯನ್ನು ವೃದ್ಧಿಸಿಕೊಳ್ಳಬಹುದಾಗಿದೆ.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಶ್ರೀ ಆರ್.ಕೆ. ಸಿಂಗ್ ಅವರು ರಾಜ್ಯಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
***
(Release ID: 1656193)
Visitor Counter : 310