ಉಕ್ಕು ಸಚಿವಾಲಯ

ಸಾಮರ್ಥ್ಯ ವೃದ್ಧಿಗಾಗಿ ಕೇಂದ್ರ ಉಕ್ಕು ಸಚಿವಾಲಯ ಕೈಗೊಂಡ ಉಪಕ್ರಮಗಳು

Posted On: 16 SEP 2020 1:06PM by PIB Bengaluru

2030-31 ವೇಳೆಗೆ 300 ಎಂ.ಟಿ.ಪಿ.. ಕಚ್ಚಾ ಉಕ್ಕು  ಸಾಮರ್ಥ್ಯವನ್ನು ಸಾಧಿಸುವ ಉದ್ದೇಶವನ್ನು ಸಲು ರಾಷ್ಟ್ರೀಯ ಉಕ್ಕು ನೀತಿ ಹೊಂದಿದೆ ಗುರಿಯ ಸಾಧನೆಯ ನಿಟ್ಟಿನಲ್ಲಿ ಕೇಂದ್ರ ಉಕ್ಕು ಸಚಿವಾಲಯವು ಹಲವಾರು ನೂತನ ಉಪಕ್ರಮಗಳನ್ನು ತೆಗೆದುಕೊಂಡಿದೆ: -

 (i) ದೇಶೀಯವಾಗಿ ತಯಾರಿಸಿದ ಕಬ್ಬಿಣ ಮತ್ತು ಉಕ್ಕು  ಉತ್ಪನ್ನಗಳ ನೀತಿ ಮೂಲಕ ಸರ್ಕಾರಿ ಸಂಸ್ಥೆಗಳಿಂದ ಮೇಡ್ ಇನ್ ಇಂಡಿಯಾ ಸ್ಟೀಲ್ ಖರೀದಿಯನ್ನು ಉತ್ತೇಜಿಸುವುದು.

 (ii) ದೇಶೀಯವಾಗಿ ಉತ್ಪಾದನೆಯಾಗುವ ಸ್ಕ್ರ್ಯಾಪ್ ಲಭ್ಯತೆಯನ್ನು ಹೆಚ್ಚಿಸಲು ಸ್ಟೀಲ್ ಸ್ಕ್ರ್ಯಾಪ್ ನೀತಿ.

 (iii) ಪ್ರಮಾಣಿತವಲ್ಲದ ಉಕ್ಕು  ಆಮದು ಮತ್ತು ಉತ್ಪಾದನೆಯನ್ನು ನಿಲ್ಲಿಸಲು ಈವರೆಗೆ 113 ಎಸ್.ಕ್ಯೂ..ಗಳ ಮಾನದಂಡದ ಉಕ್ಕು  ಗುಣಮಟ್ಟ ನಿಯಂತ್ರಣ ಆದೇಶಗಳನ್ನು ನೀಡಲಾಗಿದೆ.

 (iv) ಸುಧಾರಿತ ಉಕ್ಕು ಆಮದುಗಳ ನೋಂದಣಿಗಾಗಿ ಸ್ಟೀಲ್ ಆಮದು ಮಾನಿಟರಿಂಗ್ ಸಿಸ್ಟಮ್ (ಸಿಮ್ಸ್).

 (v) ನೂತನ ಕರಡು ಚೌಕಟ್ಟು ನೀತಿ ಮೂಲಕ ಮೌಲ್ಯವರ್ಧಿತ ಉಕ್ಕು, ಪೂರಕಗಳು, ಬಂಡವಾಳ ಸರಕುಗಳು ಇತ್ಯಾದಿಗಳಿಗೆ ಉತ್ಪಾದನಾ ಘಟಕಗಳನ್ನು ಹೊಂದಿರುವ ಉಕ್ಕು ಸಮೂಹಗಳನ್ನು ಸ್ಥಾಪಿಸುವುದನ್ನು ಉತ್ತೇಜಿಸಲಾಗುವುದು

 (vi) ಉಕ್ಕು  ವಲಯಕ್ಕೆ ಕಚ್ಚಾ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಸಿ..ಎಲ್. / ಬಿ.ಸಿ.ಸಿ.ಎಲ್. ನಿಂದ ಕಲ್ಲಿದ್ದಲು ತೊಳೆಯುವ ವಸ್ತುಗಳು, ಕೋಕಿಂಗ್ ಕಲ್ಲಿದ್ದಲು ಗಣಿಗಳ ಹರಾಜು / ಹಂಚಿಕೆ ಮತ್ತು ಕೋಕಿಂಗ್ ಕಲ್ಲಿದ್ದಲು ಆಮದಿನ ವೈವಿಧ್ಯೀಕರಣ ಇತ್ಯಾದಿ ಘಲಿಗಾಗಿ ಕೇಂದ್ರ  ಉಕ್ಕು ಸಚಿವಾಲಯವು ಕೇಂದ್ರ ಗಣಿ ಸಚಿವಾಲಯ ಮತ್ತು ಕೇಂದ್ರ ಕಲ್ಲಿದ್ದಲು ಸಚಿವಾಲಯದೊಂದಿಗೆ ನಿಕಟವಾಗಿ ಸಂಪರ್ಕವಿಟ್ಟು ಕೆಲಸ ಮಾಡಿದೆ.

 ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಏಪ್ರಿಲ್-ಜುಲೈ 2020 ಅವಧಿಗೆ  ಬಳಕೆಯಾದ 'ಉಕ್ಕು' ಕುರಿತ ಮಾಹಿತಿ: -

 

ತಿಂಗಳು

ಒಟ್ಟು ಸಂಸ್ಕರಣೆ ಪೂರ್ಣಗೊಂಡು (ಮಿಶ್ರಲೋಹವಲ್ಲದ + ಮಿಶ್ರಲೋಹ / ಸ್ಟೇನ್ಲೆಸ್) ಬಳಕೆಯದ ಉಕ್ಕು (ಸಾವಿರ ಟನ್ಗಳ ಅಳತೆಯಲ್ಲಿ)

ವರ್ಷ 2019

ವರ್ಷ 2020

ಎಪ್ರಿಲ್

7333

1092

ಮೇ

8850

4720

ಜೂನ್

8589

6234

ಜುಲೈ

8573

7405

 

ರಾಜ್ಯಸಭೆಯಲ್ಲಿ ಲಿಖಿತ ಉತ್ತರದ ಮೂಲಕ ಕೇಂದ್ರ ಉಕ್ಕು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಮಾಹಿತಿಯನ್ನು ಇಂದು ನೀಡಿದರು.

 

***



(Release ID: 1655091) Visitor Counter : 128