ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಆಸ್ಪತ್ರೆಗಳ ವ್ಯವಸ್ಥೆ ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳು
Posted On:
16 SEP 2020 1:11PM by PIB Bengaluru
ಆಸ್ಪತ್ರೆಗಳು ಮತ್ತು ಔಷಧಾಲಯಗಳು ರಾಜ್ಯ ವಿಷಯವಾಗಿರುವುದರಿಂದ, ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಆರೋಗ್ಯ ಮತ್ತು ಸುರಕ್ಷತೆ ಅಪಾಯಗಳಿಗೆ ಸಂಬಂಧಿಸಿದ ಶುಚಿಗೊಳಿಸುವ ಕಾರ್ಯಗಳಲ್ಲಿ ಆಸ್ಪತ್ರೆಗಳ ಮತ್ತು ವೈದ್ಯಕೀಯ ತ್ಯಾಜ್ಯಗಳಿಂದ ಸಾವನ್ನಪ್ಪಿದ ಸಫಾಯಿ ಕರ್ಮಚಾರಿಗಳ ಬಗ್ಗೆ ಕೇಂದ್ರ ಸರ್ಕಾರದಲ್ಲಿ ಯಾವುದೇ ಮಾಹಿತಿ ನಿರ್ವಹಣೆ ಸಾದ್ಯವಾಗಲಿಲ್ಲ.
ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಸಮಿತಿಗಳನ್ನು ರಚಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಆರೋಗ್ಯ ಕಾರ್ಯಕರ್ತರನ್ನು ಮೇಲ್ವಿಚಾರಣೆ ಮಾಡುವ ಮತ್ತು ಸೋಕಿನಿಂದ ಅವರ ಸುರಕ್ಷತೆಯ ಮಾನದಂಡ/ಸ್ಥಿತಿಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಹೊರಲು ಒಬ್ಬ ನೋಡಲ್ ಅಧಿಕಾರಿಯನ್ನು ಎಲ್ಲಾ ಆಸ್ಪತ್ರೆಗಳು ಗುರುತಿಸಿ ನೇಮಿಸಿಕೊಳ್ಳಬೇಕು. ಹೆಚ್ಚಿನ ಅಪಾಯ ಹೊಂದಿರುವ ಸೋಕಿತರನ್ನು 7 ದಿನಗಳವರೆಗೆ ಸಂಪರ್ಕ ತಡೆಯಲ್ಲಿ ಇರಿಸಲಾಗುತ್ತದೆ. ಅವರ ರೋಗಲಕ್ಷಣ / ಚಿಕಿತ್ಸಾ ಹಿನ್ನಲೆ( ಕ್ಲಿನಿಕಲ್ ಪ್ರೊಫೈಲ್ನ) ಆಧಾರದ ಮೇಲೆ ಅಂತಹ ವೈದ್ಯರು, ಶುಶ್ರೂಷಾ ಅಧಿಕಾರಿಗಳು ಮತ್ತು ಇತರ ಆರೋಗ್ಯ ಕಾರ್ಯಕರ್ತರು, ನೋಡಲ್ ಅಧಿಕಾರಿ / ಇಲಾಖೆಯ ಮುಖ್ಯಸ್ಥರು (ಅಥವಾ ಅವರ ನೇಮಕಗೊಂಡ ಉಪಸಮಿತಿ) ಒಂದು ವಾರದಲ್ಲಿ ಹೆಚ್ಚಿನ ಅವಧಿಗೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆಸ್ಪತ್ರೆಯ ಕೋವಿಡ್-19 ಮತ್ತು ಕೋವಿಡ್ ಅಲ್ಲದ ಇತರೆ ವಿಭಾಗ/ಪ್ರದೇಶಗಳಲ್ಲಿ ಆರೋಗ್ಯ ಕಾರ್ಯವನ್ನು ನಿರ್ವಹಿಸಲು ಸೂಕ್ತ ಸಲಹೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 18, 2020 ರಂದು ನೀಡಿತ್ತು
ಇತರ ಕ್ಷೇತ್ರ ಮಟ್ಟದ ಕೆಲಸಗಾರರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಪಿ.ಪಿ.ಇ.ಗಳ ಬಳಕೆಯ ಕುರಿತು ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದೆ. ನೂತನ ಮಾರ್ಗಸೂಚಿಗಳು ಕೆಲಸದ ಸ್ಥಳದಲ್ಲಿರುವ ವ್ಯವಸ್ಥೆಯಲ್ಲಿ (ಸೆಟ್ಟಿಂಗ್ಗಳಲ್ಲಿ) ರೋಗ ಸೋಕುವಿಕೆಯ ಸಾದ್ಯತೆ ಮತ್ತು ಅಪಾಯಕ್ಕೆ ಅನುಗುಣವಾಗಿ ವಿವಿಧ ಪಿ.ಪಿ.ಇ.ಗಳ ಪ್ರಕಾರಗಳನ್ನು ಸೂಚಿಸಲಾಗಿದೆ. ರಾಜ್ಯ ಸರ್ಕಾರಗಳಿಗೆ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಪದ್ಧತಿಗಳ ಬಗ್ಗೆ ಮಾರ್ಗಸೂಚಿಯನ್ನು ಸಹ ಇದು ಹೊಂದಿದೆ. ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ನಿಟ್ಟಿನಲ್ಲಿ ಪಾಲಿಸಬೇಕಾದ ಕ್ರಮಪದ್ಧತಿಗಳ, ಅಭ್ಯಾಸಗಳ ಕುರಿತು ಆಸ್ಪತ್ರೆಯ ಕಾರ್ಯಕರ್ತರಿಗೆ ತರಬೇತಿ ನೀಡುವಂತೆ ರಾಜ್ಯಗಳನ್ನು ಕೋರಲಾಗಿದೆ. ಎಲ್ಲಾ ವರ್ಗದ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ತರಬೇತಿ ನೀಡಲು ಐ.ಜಿ.ಒ.ಟಿ. ವೇದಿಕೆಯ ಲಭ್ಯವಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಶ್ರೀ ರಾಮದಾಸ್ ಅತವಾಳೆ ಅವರು ಇಂದು ಲಿಖಿತ ಉತ್ತರ ಮೂಲಕ ಈ ಮಾಹಿತಿಯನ್ನು ರಾಜ್ಯಸಭೆಯಲ್ಲಿ ನೀಡಿದ್ದಾರೆ.
***
(Release ID: 1655089)
Visitor Counter : 294