ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯಸಭೆಯ ಉಪ ಸಭಾಪತಿಯಾಗಿ  ಚುನಾಯಿತರಾದ ಶ್ರೀ ಹರಿವಂಶ್ ನಾರಾಯಣ್ ಸಿಂಗ್ ಅವರಿಗೆ ಪ್ರಧಾನಿ ಶುಭಾಶಯ

Posted On: 15 SEP 2020 9:09AM by PIB Bengaluru

ರಾಜ್ಯಸಭೆಯ ಉಪ ಸಭಾಪತಿಯಾಗಿ ಎರಡನೇ ಬಾರಿಗೆ ಆಯ್ಕೆಯಾದ ಶ್ರೀ ಹರಿವಂಶ್ ನಾರಾಯಣ್ ಸಿಂಗ್ ಅವರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸದನ ಮತ್ತು ದೇಶವಾಸಿಗಳ ಪರವಾಗಿ ಶುಭ ಹಾರೈಸಿದರು.

ಸಾಮಾಜಿಕ ಕಾರ್ಯ ಮತ್ತು ಪತ್ರಿಕೋದ್ಯಮ ಜಗತ್ತಿನಲ್ಲಿ ತಮ್ಮ ಪ್ರಾಮಾಣಿಕ ಛಾಪನ್ನು ಮೂಡಿಸಿರುವ ಶ್ರೀ ಹರಿವಂಶ್ ಅವರ ಬಗ್ಗೆ ತಮಗೆ ತುಂಬಾ ಗೌರವವಿದೆ ಎಂದು ಪ್ರಧಾನಿ ಹೇಳಿದರು. ಸದನದ ಪ್ರತಿಯೊಬ್ಬ ಸದಸ್ಯರ ಮನಸ್ಸಿನಲ್ಲೂ ಅದೇ ಭಾವನೆ ಮತ್ತು ಗೌರವವಿದೆ ಎಂದು ಅವರು ಹೇಳಿದರು. ಶ್ರೀ ಹರಿವಂಶ್ ಅವರ ಕಾರ್ಯ ಶೈಲಿ ಮತ್ತು ಸದನದ ಕಲಾಪಗಳನ್ನು ನಡೆಸುವ ರೀತಿಯನ್ನು ಶ್ಲಾಘಿಸಿದ ಪ್ರಧಾನಿಯವರು, ಸದನದಲ್ಲಿ ಅವರು ವಹಿಸುವ ಪಾತ್ರವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಸಭಾಪತಿಯವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸದನದ ಕಲಾಪಗಳನ್ನು ಸುಗಮವಾಗಿ ನಡೆಸಲು ರಾಜ್ಯಸಭೆಯ ಸದಸ್ಯರು ಉಪ ಸಭಾಪತಿಯವರಿಗೆ ಸಹಕರಿಸುತ್ತಾರೆ. ಹರಿವಂಶ್ ಅವರು ಪ್ರತಿಪಕ್ಷಗಳು ಸೇರಿದಂತೆ ಎಲ್ಲರಿಗೂ ಸೇರಿದ್ದು, ಯಾವುದೇ ಪಕ್ಷಕ್ಕೆ ಯಾವುದೇ ತಾರತಮ್ಯ ಮಾಡಿಲ್ಲ  ಎಂದರು. ಸಂಸತ್ತಿನ ಸದಸ್ಯರನ್ನು ನಿಯಮಗಳ ಪ್ರಕಾರ ನಿರ್ವಹಿಸುವುದು ಬಹಳ ಸವಾಲಿನ ಕೆಲಸ ಮತ್ತು ಹರಿವಂಶ್ ಅವರು ವಿಷಯದಲ್ಲಿ ಎಲ್ಲರ ವಿಶ್ವಾಸವನ್ನು ಗೆದ್ದಿದ್ದಾರೆ ಎಂದು ಅವರು ಹೇಳಿದರು.

ಮಸೂದೆಗಳನ್ನು ಅಂಗೀಕರಿಸುವ ಸಲುವಾಗಿ ಹರಿವಂಶ್ ಅವರು ಹಲವು ಗಂಟೆಗಳ ಕಾಲ ನಿರಂತರವಾಗಿ ಪೀಠದಲ್ಲಿ ಕುಳಿತುಕೊಂಡಿದ್ದಾರೆ ಮತ್ತು ಎರಡು ವರ್ಷಗಳು ಅವರ ಯಶಸ್ಸಿಗೆ ಸಾಕ್ಷಿಯಾಗಿವೆ ಎಂದು ಪ್ರಧಾನಿ ಹೇಳಿದರು. ದೇಶದ ಭವಿಷ್ಯ ಮತ್ತು ಹಾದಿಯನ್ನು ಬದಲಿಸಿದ ಹಲವಾರು ಐತಿಹಾಸಿಕ ಮಸೂದೆಗಳನ್ನು ಸದನದಲ್ಲಿ ಅಂಗೀಕರಿಸಲಾಯಿತು. ಲೋಕಸಭಾ ಚುನಾವಣೆ ನಡೆದು ಒಂದು ವರ್ಷದೊಳಗೆ ಹತ್ತು ವರ್ಷಗಳಲ್ಲಿಯೇ ಅತಿ ಹೆಚ್ಚು ಉತ್ಪಾದಕತೆಯ ದಾಖಲೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು ಸದನವನ್ನು ಶ್ಲಾಘಿಸಿದರು. ಸದನಸಲ್ಲಿ ಉತ್ಪಾದಕತೆಯ ಜೊತೆಗೆ, ಸಕಾರಾತ್ಮಕತೆಯೂ ಹೆಚ್ಚಾಗಿದೆ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು ಎಂದು ಅವರು ಹೇಳಿದರು.

ಹರಿವಂಶ್ ಅವರು ಕಷ್ಟದಿಂದ ಬಂದವರಾದ್ದರಿಂದ ವಿನಮ್ರರಾಗಿದ್ದಾರೆ ಎಂದು ಪ್ರಧಾನಿ ಹೇಳಿದರು. ಹರಿವಂಶ್ ಅವರಿಗೆ ಮೊದಲ ಸರ್ಕಾರಿ ವಿದ್ಯಾರ್ಥಿವೇತನ ದೊರೆತಾಗ, ವಿದ್ಯಾರ್ಥಿವೇತನದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುವ ಬದಲು ಪುಸ್ತಕಗಳನ್ನು ಖರೀದಿಸಿದರು. ಹರಿವಂಶ್ ಅವರು ಪುಸ್ತಕಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಅವರು ಹೇಳಿದರು. ಶ್ರೀ ಹರಿವಂಶ್ ಅವರು ಶ್ರೀ ಜಯಪ್ರಕಾಶ್ ನಾರಾಯಣ್ ಅವರಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ. ಎಂದು ಸುಮಾರು ನಾಲ್ಕು ದಶಕಗಳ ಕಾಲ ಸಾಮಾಜಿಕ ಉದ್ದೇಶಗಳಿಗಾಗಿ ಕೆಲಸ ಮಾಡಿದ ನಂತರ, ಅವರು 2014 ರಲ್ಲಿ ಸಂಸತ್ತನ್ನು ಪ್ರವೇಶಿಸಿದರು ಅವರು ಹೇಳಿದರು.

ಹರಿವಂಶ್ ಅವರು ವಿನಮ್ರ ವರ್ತನೆ ಮತ್ತು ವಿನಯಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಅವರು ಹೇಳಿದರು.

ಅಂತರ್-ಸಂಸತ್ತಿನ ಒಕ್ಕೂಟದಂತಹ ಎಲ್ಲಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮತ್ತು ಇತರ ದೇಶಗಳಲ್ಲಿನ ಭಾರತದ ಸಾಂಸ್ಕೃತಿಕ ನಿಯೋಗದ ಸದಸ್ಯರಾಗಿ ಭಾರತದ ಶ್ರೇಷ್ಠತೆಯನ್ನು ಸುಧಾರಿಸಲು ಹರಿವಂಶ್ ಅವರು ಕೆಲಸ ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು.

ಹರಿವಂಶ್ ಅವರು ರಾಜ್ಯಸಭೆಯಲ್ಲಿ ಹಲವಾರು ಸಮಿತಿಗಳ ಅಧ್ಯಕ್ಷರಾಗಿದ್ದು, ಅವುಗಳ ಕಾರ್ಯವೈಖರಿಯನ್ನು ಸುಧಾರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಹರಿವಂಶ್ ಅವರು ಸಂಸತ್ ಸದಸ್ಯರಾದ ನಂತರ, ಎಲ್ಲಾ ಸಂಸದರು ತಮ್ಮ ನಡವಳಿಕೆಯಿಂದ ಹೆಚ್ಚು ನೈತಿಕವಾಗುವಂತೆ ನೋಡಿಕೊಳ್ಳಲು ಅವರು ಅತ್ಯುತ್ತಮ ಪ್ರಯತ್ನ ಮಾಡಿದರು. ಸಂಸತ್ತಿನ ಕೆಲಸ ಮತ್ತು ಜವಾಬ್ದಾರಿಗಳ ನಡುವೆಯೂ ಬೌದ್ಧಿಕವಾಗಿ ಅಷ್ಟೇ ಸಕ್ರಿಯರಾಗಿದ್ದಾರೆ ಎಂದು ಅವರು ಹೇಳಿದರು. ಹರಿವಾಂಶ್ ಅವರು ಇನ್ನೂ ದೇಶಾದ್ಯಂತ ಸಂಚರಿಸುತ್ತಾ, ಭಾರತದ ಆರ್ಥಿಕ, ಸಾಮಾಜಿಕ, ಕಾರ್ಯತಂತ್ರ ಮತ್ತು ರಾಜಕೀಯ ಸವಾಲುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ ಎಂದರು. “ಅವರ ಪುಸ್ತಕವು ನಮ್ಮ ಮಾಜಿ ಪ್ರಧಾನಿ ಶ್ರೀ ಚಂದ್ರಶೇಖರ್ ಅವರ ಜೀವನವನ್ನು ಹಾಗೂ ಹರಿವಾಂಶ್ ಅವರ ಬರವಣಿಗೆಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ನಾನು ಮತ್ತು ಸದನದ ಎಲ್ಲ ಸದಸ್ಯರು ಉಪಸಭಾಪತಿಯಾಗಿ ಹರಿವಂಶ್ ಅವರ ಮಾರ್ಗದರ್ಶನ ಪಡೆಯುವ ಅದೃಷ್ಟ ಮಾಡಿದ್ದೇವೆ. ” ಎಂದು ಪ್ರಧಾನಿ ಹೇಳಿದರು.

ಹರಿವಂಶ್ ಅವರಿಗೆ ಶುಭ ಹಾರೈಸಿದ ಪ್ರಧಾನಮಂತ್ರಿಯವರು, ಸದನವು 250 ಕ್ಕೂ ಹೆಚ್ಚು ಅಧಿವೇಶನಗಳನ್ನು ಕಂಡಿದೆ ಎಂಬುದು ಭಾರತದ ಪ್ರಜಾಪ್ರಭುತ್ವದ ಪ್ರಬುದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.


***


(Release ID: 1654382) Visitor Counter : 174