ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿಗಳಿಂದ ಇನ್ವಿಟ್ ಹೂಡಿಕೆದಾರರ ಸಮಾವೇಶ ಉದ್ದೇಶಿಸಿ ಭಾಷಣ
ಆಕರ್ಷಕ ಆದಾಯ ಗಳಿಕೆಯ ಆಸ್ತಿಮೂಲ ಆಯ್ಕೆಯ ಬಗ್ಗೆ ಎಚ್ಚರ ವಹಿಸಲು ಕರೆ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ 4 ಮತ್ತು 6 ಪಥದ ಮಾರ್ಗ ಸೇರಿ ಸುಮಾರು 50,000 ಕಿಲೋಮೀಟರ್ ಹೆದ್ದಾರಿ ನಿರ್ಮಾಣದ ಗುರಿ
Posted On:
11 SEP 2020 2:09PM by PIB Bengaluru
ಭಾರತೀಯ ಆರ್ಥಿಕತೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಪರಿವರ್ತನೆಯ ಕಾರ್ಯಕ್ರಮ, ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಅನ್ನು ಅನುಷ್ಠಾನಗೊಳಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ರಸ್ತೆ ಅಭಿವೃದ್ಧಿ ಒಂದು ಅತ್ಯಂತ ಪ್ರಮುಖ ಅಂಶವಾಗಿದೆ. ಅದರಲ್ಲಿ ಒಟ್ಟು ವೆಚ್ಚದ ಕಾಲು ಭಾಗದಷ್ಟು ರಸ್ತೆ ಅಭಿವೃದ್ಧಿಗೆ ವಿನಿಯೋಗಿಸಲು ಉದ್ದೇಶಿಸಲಾಗಿದೆ. ರಸ್ತೆಗಳ ಅಭಿವೃದ್ಧಿ ಮತ್ತು ವಿಸ್ತರಣೆ ಮಾತ್ರವಲ್ಲದೆ, ಅದರಿಂದ ಸಾಗಾಣೆ ವೆಚ್ಚ ತಗ್ಗಿ, ಉತ್ತಮ ಸಂಪರ್ಕ ಲಭ್ಯವಾಗಲಿದೆ, ವಾಹನ ಮಾಲಿಕತ್ವದಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಲು ನೆರವಾಗಲಿದೆ. ಆ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲಿದೆ.
ಕೇಂದ್ರ ಸಂಪುಟ ಈಗಾಗಲೇ ಮೂಲಸೌಕರ್ಯ ಹೂಡಿಕೆ ಟ್ರಸ್ಟ್(ಇನ್ವಿಟ್) ಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಇದರಿಂದಾಗಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯದ ಅಡಿ ಬರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎಚ್ಎಚ್ಎಐ) ಪೂರ್ಣಗೊಂಡಿರುವ ಹೆದ್ದಾರಿಗಳಲ್ಲಿ ಕನಿಷ್ಠ ಒಂದು ವರ್ಷಗಳ ಕಾಲ ಟೋಲ್ ಸಂಗ್ರಹದ ಹಣವನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಒದಗಿಸಲಿದೆ ಮತ್ತು ಎಚ್ಎಚ್ಎಐ, ನಿಗದಿತ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ವಿಧಿಸುವ ಹಕ್ಕು ಹೊಂದಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಈ ಮಹತ್ವಾಕಾಂಕ್ಷೆಯ ಪ್ರಯತ್ನಗಳಿಗೆ ಸಂಭಾವ್ಯ ಹೂಡಿಕೆದಾರರನ್ನು ಆಕರ್ಷಿಸಲು ಗಂಭೀರ ಪ್ರಯತ್ನಗಳನ್ನು ನಡೆಸಿದೆ.
ನವದೆಹಲಿಯಲ್ಲಿ ನಿನ್ನೆ ಸಂಜೆ ಮುಂಚೂಣಿಯಲ್ಲಿರುವ ಹಾಗೂ ಬೃಹತ್ ಹೂಡಿಕೆದಾರರ ಗುಂಪನ್ನು ಉದ್ದೇಶಿಸಿ ಮಾತನಾಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗಿರಿಧರ್ ಅರ್ಮಾನೆ ಅವರು, “ಸಚಿವಾಲಯ 50 ಸಾವಿರ ಕಿಲೋಮೀಟರ್ ಹೆದ್ದಾರಿ ನಿರ್ಮಾಣದ ಗುರಿಯನ್ನು ಹೊಂದಿದೆ. ಅದರಲ್ಲಿ ಬಹುತೇಕ ನಾಲ್ಕು ಮತ್ತು ಆರು ಪಥಗಳ ಮಾರ್ಗವಾಗಿದೆ ಎಂದರು. ಇನ್ವಿಟ್ ಅನ್ನು ಒಂದು ಅವಕಾಶವನ್ನಾಗಿ ಬಳಸಿಕೊಂಡು, ತಮ್ಮ ಹೂಡಿಕೆಯ ಮಿತಿಯನ್ನು ಹೆಚ್ಚಿಸಿಕೊಳ್ಳುವಂತೆ ಅವರು ಕರೆ ನೀಡಿದರು. ಇದು ರಸ್ತೆ ಅಭಿವೃದ್ಧಿಗೆ ನಿಧಿಗಳನ್ನು ಸಂಗ್ರಹಿಸಲು ಅತ್ಯಾಕರ್ಷಕ ಯೋಜನೆಯಾಗಿದೆ ಎಂದು ಅವರು ಕರೆ ನೀಡಿದರು. ಹೂಡಿಕೆದಾರರು ಅತ್ಯಾಕರ್ಷಕ ಆದಾಯ ಮತ್ತು ಅಪಾಯ ಕಡಿಮೆ ಇರುವಂತಹ ಆಸ್ತಿ ಮೂಲಗಳನ್ನು ಗಮನಿಸಿ ಹೂಡಿಕೆ ಮಾಡಬೇಕು ಎಂದು ಭರವಸೆ ನೀಡಿದರು. ಉದ್ದೇಶಿತ ರಸ್ತೆಗಳು ಟೋಲ್ ನ ಸುದೀರ್ಘ ಇತಿಹಾಸವನ್ನು ಹೊಂದಿವೆ ಮತ್ತು ಬೆಲೆ ಆವಿಷ್ಕಾರ ಕೈತುಂಬಾ ಸಿಗುವ ಸಾಧ್ಯತೆ ಇದೆ. ಹೂಡಿಕೆಗೆ ತಕ್ಕಂತೆ ಮೌಲ್ಯ ಪುನಃ ಕೈ ಸೇರುವಂತೆ ಮಾಡುವ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಯದರ್ಶಿಗಳು ಭರವಸೆ ನೀಡಿದರು.
ಕಂಪನಿಯನ್ನು ವೃತ್ತಿಪರ ರೀತಿಯಲ್ಲಿ ನಿರ್ವಹಿಸಲು ವ್ಯವಸ್ಥಾಪಕ ಮಂಡಳಿ ನಿರ್ದೇಶಕರಿಗೆ ಹೂಡಿಕೆ ಪಾಲುದಾರರನ್ನು ಸೆಳೆಯಲಾಗುವುದು ಮತ್ತು ಹೂಡಿಕೆ ವ್ಯವಸ್ಥಾಪಕರುಗಳಿಗೆ ಕಾರ್ಯಗಳನ್ನು ನಿಗದಿಪಡಿಸಲಾಗುವುದು ಎಂದು ಶ್ರೀ ಅರ್ಮಾನೆ ಹೇಳಿದರು. ಯೋಜನಾ ವ್ಯವಸ್ಥಾಪಕರುಗಳನ್ನು ವೃತ್ತಿಪರ ಮತ್ತು ದಕ್ಷತೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.
***
(Release ID: 1653357)
Visitor Counter : 148