ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ಸೌದಿ ಅರೆಬಿಯಾದ ಗೌರವಾನ್ವಿತ ದೊರೆ ನಡುವೆ ದೂರವಾಣಿ ಸಮಾಲೋಚನೆ

Posted On: 09 SEP 2020 8:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೌದಿ ಅರೆಬಿಯಾದ ದೊರೆ ಗೌರವಾನ್ವಿತ ಸಲ್ಮಾನ್ ಬಿನ್ ಅಬ್ದುಲ್ಲಾಜೀಜ್ ಅಲ್ ಸೌದ್ ಅವರೊಂದಿಗೆ  ದೂರವಾಣಿ ಮೂಲಕ ಸಮಾಲೋಚಿಸಿದರು.
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎದುರಾಗಿರುವ ಜಾಗತಿಕ ಸ್ಥಿತಿಗತಿ ಕುರಿತಂತೆ ಉಭಯ ನಾಯಕರು ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಜಿ-20 ಬಳಗದ ಅಧ್ಯಕ್ಷತೆ ವಹಿಸಿಕೊಳ್ಳಲು ಪ್ರಸ್ತುತ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ಸೌದಿ ಅರೆಬಿಯಾ ತೋರುತ್ತಿರುವ ನಾಯಕತ್ವದ ಬಗ್ಗೆ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜಿ-20ರ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳು ಸಾಂಕ್ರಾಮಿಕ ನಿಯಂತ್ರಿಸುವಲ್ಲಿ ಸಮನ್ವಯದ ಕಾರ್ಯಗಳನ್ನು ಕೈಗೊಳ್ಳಲು ಸಹಾಯಕವಾಗಿವೆ ಎಂದು ಉಭಯ ನಾಯಕರು ಹೇಳಿದರು. ಉಭಯ ನಾಯಕರು ಜಿ20ರ ಮುಂದಿರುವ ವಿಚಾರಗಳಲ್ಲಿ ಸದ್ಯದ ಪ್ರಮುಖ ಆದ್ಯತೆಗಳ ಬಗ್ಗೆ ಸಮಾಲೋಚಿಸಿದರು.
ಉಭಯ ನಾಯಕರು ಭಾರತ ಮತ್ತು ಸೌದಿ ಅರೆಬಿಯಾದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಗತಿ ಕುರಿತು ತೃಪ್ತಿ ವ್ಯಕ್ತಪಡಿಸಿದರು ಮತ್ತು ಎಲ್ಲ ವಲಯಗಳಲ್ಲಿ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆ ಮಾಡುವ ಬದ್ಧತೆ ಪುನರುಚ್ಛರಿಸಿದರು. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತೀಯ ವಲಸಿಗರನ್ನು ರಕ್ಷಿಸಲು ಸೌದಿ ಅರೆಬಿಯಾದ ಅಧಿಕಾರಿಗಳು ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ದೊರೆ ಸಲ್ಮಾನ್ ಅವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದರು.
ದೊರೆ ಸಲ್ಮಾನ್ ಬಿನ್ ಅಬ್ದುಲ್ಲಾಜೀಜ್ ಅಲ್ ಸೌದ್, ಸೌದಿ ಅರೆಬಿಯಾದ ರಾಜಮನೆತನದ  ಎಲ್ಲಾ ಸದಸ್ಯರು ಹಾಗೂ ಪ್ರಜೆಗಳಿಗೆ ಉತ್ತಮ ಆರೋಗ್ಯ ಲಭಿಸಲಿ ಹಾಗೂ ಒಳ್ಳೆಯದಾಗಲಿ ಎಂದು ಪ್ರಧಾನಮಂತ್ರಿ ಶುಭಾಶಯಗಳನ್ನು ಕೋರಿದರು.

***


(Release ID: 1652800) Visitor Counter : 222