ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶಿಕ್ಷಣ ಸಚಿವಾಲಯದಿಂದ 54ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನ - 2020 ಆಚರಣೆ


2030ರೊಳಗೆ ಸಂಪೂರ್ಣ ಸಾಕ್ಷರತೆ ಸಾಧನೆಗೆ ಹೊಸ ಸಾಕ್ಷರತಾ ಯೋಜನೆ ‘ಪಡ್ನಾ ಲಿಖ್ನಾ ಅಭಿಯಾನ’ ಸಹಕಾರಿ:  ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಖ್

Posted On: 08 SEP 2020 3:59PM by PIB Bengaluru

 

ಶಿಕ್ಷಣ ಸಚಿವಾಲಯದಿಂದ ಇಂದು ಆನ್ ಲೈನ್ ಮೂಲಕ ರಾಷ್ಟ್ರಮಟ್ಟದ 54ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಯಿತು. ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಖ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಿಕ್ಷಣ ಖಾತೆಯ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಯುನೆಸ್ಕೋದ ಮಹಾ ಪ್ರಧಾನ ನಿರ್ದೇಶಕರ ಸಂದೇಶವನ್ನು ಇದೇ ಸಂದರ್ಭದಲ್ಲಿ ಯುನೆಸ್ಕೋ ಪ್ರತಿನಿಧಿಗಳು ಓದಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಶ್ರೀಮತಿ ಅನಿತಾ ಕರ್ವಾಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಸಾಕ್ಷರತಾ ದಿನ – 2020 ಆಚರಣೆಯಲ್ಲಿ ದೆಹಲಿ ವಿಶ್ವವಿದ್ಯಾಲಯದ ವಯಸ್ಕ, ನಿರಂತರ ಮತ್ತು ಮುಂದುವರಿದ ಶಿಕ್ಷಣ ಇಲಾಖೆಯ ಪ್ರೊ|| ಜೆ.ಪಿ. ದುಬೆ ಅವರು, ‘ಅಕ್ಷರ ಬೋಧನೆ ಮತ್ತು ಕೋವಿಡ್-19 ಬಿಕ್ಕಟ್ಟು ಹಾಗೂ ನಂತರದ ಕಲಿಕೆಕುರಿತಂತೆ ಉಪನ್ಯಾಸ ಒಳಗೊಂಡಿತ್ತು. ಅವರು ದೇಶದಲ್ಲಿ ಸಾಕ್ಷರತೆ ನಿರ್ಮೂಲನೆಗೆ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ರಮೇಶ್ ಪೋಖ್ರಿಯಾಲ್, ಅಂತಾರಾಷ್ಟ್ರೀಯ ಸಾಕ್ಷರತಾ ದಿನ ವಿಶ್ವದ ಎಲ್ಲ ರಾಷ್ಟ್ರಗಳು ಅನಕ್ಷರತೆ ನಿರ್ಮೂಲನೆಗೆ ತಮ್ಮ ಬದ್ಧತೆಯನ್ನು ಪುನರುಚ್ಛಾರಗೊಳಿಸುವ ದಿನವಾಗಿದೆ ಎಂದರು. ಸಾಕ್ಷರತೆ ವಲಯದಲ್ಲಿ ಗಳಿಸಿರುವ ಲಾಭವನ್ನು ಒಗ್ಗೂಡಿಸುವ ಕ್ಷಣ ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅನುಭವಗಳನ್ನು ವಿನಿಮಯ ಮಾಡಿಕೊಂಡು ಅವುಗಳನ್ನು ಕಲಿಯುವುದು, ಸಂಬಂಧಿಸಿದವರ ನಡುವೆ ಸಹಕಾರ ಸಂಬಂಧ ಏರ್ಪಡಿಸುವುದು. ಸಾಕ್ಷರತೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುವ ಎಲ್ಲ ಪ್ರಯತ್ನಗಳನ್ನು ಒಗ್ಗೂಡಿಸುವ ದಿನವಾಗಿದೆ.

ವರ್ಷದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ 2020ಯಲ್ಲಿಅಕ್ಷರ ಬೋಧನೆ ಮತ್ತು ಕೋವಿಡ್-19 ಬಿಕ್ಕಟ್ಟು ಹಾಗೂ ಆನಂತರದ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ವಿಶೇಷವಾಗಿ ಬದಲಾಗುತ್ತಿರುವ ಶಿಕ್ಷಣ ಪದ್ಧತಿಯಲ್ಲಿ ಬೋಧಕರ ಪಾತ್ರದ ಬಗ್ಗೆ ಆದ್ಯತೆ ನೀಡಲಾಗುವುದು. ಘೋಷವಾಕ್ಯದಲ್ಲಿ ಪ್ರಮುಖವಾಗಿ ಅಕ್ಷರ ಕಲಿಕೆ, ಜೀವನಪರ್ಯಂತ ಕಲಿಕೆ ಮತ್ತು ಅದು ಮುಖ್ಯವಾಗಿ ಯುವಜನರು ಮತ್ತು ವಯಸ್ಕರನ್ನು ಕೇಂದ್ರೀಕರಿಸಿರುತ್ತದೆ. ಅಂತಾರಾಷ್ಟ್ರೀಯ ಸಾಕ್ಷರತಾ ದಿನ 2020,  ಸಾಂಕ್ರಾಮಿಕ ಮತ್ತು ಆನಂತರದ ಸಂದರ್ಭಗಳಲ್ಲಿ ಯುವಕರು ಮತ್ತು ವಯಸ್ಕರ ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಹೇಗೆ ವಿನೂತನ ಮತ್ತು ಪರಿಣಾಮಕಾರಿ ಪದ್ಧತಿಗಳನ್ನು ಹಾಗೂ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಸಲು ಹಾಗೂ ಅವುಗಳನ್ನು ಪ್ರತಿಬಿಂಬಿಸಲು ಅವಕಾಶ ಒದಗಿಸುತ್ತದೆ.

ಶಿಕ್ಷಣ ಸಚಿವಾಲಯ, ಹಲವು ವರ್ಷಗಳಿಂದ ದೇಶದಲ್ಲಿ ಅನಕ್ಷರತೆ ನಿರ್ಮೂಲನೆಗೆ ಪ್ರಯತ್ನಗಳನ್ನು ನಡೆಸುತ್ತಿದ್ದು, ಅದರ ಪರಿಣಾಮ ಸಾಕಷ್ಟು ಪ್ರಗತಿ ಸಾಧಿಸಲಾಗಿದ್ದು, ವಯಸ್ಕರ ಶಿಕ್ಷಣ ಮತ್ತು ಕಲಿಕೆ ಲಭ್ಯತೆಯಲ್ಲಿ ಸುಧಾರಣೆಯಾಗಿದೆ. ಆದರೂ ಭಾರತದಲ್ಲಿ ದೊಡ್ಡ ಸಂಖ್ಯೆಯ ಅನಕ್ಷರಸ್ಥರೂ ಇದ್ದಾರೆ. ಅವರನ್ನು ಸಾಕ್ಷರರನ್ನಾಗಿ ಮಾಡುವ ಮೂಲಕ 2030ರೊಳಗೆ ಶೇ.100ರಷ್ಟು ಸಾಕ್ಷರತೆ ಸಾಧನೆಯ ಗುರಿ ಹೊಂದಲಾಗಿದೆ ಎಂದರು.

ಹೊಸ ಸಾಕ್ಷರತಾ ಯೋಜನೆಪಡ್ನಾ ಲಿಖ್ನಾ ಅಭಿಯಾನ’ 2030ರೊಳಗೆ ಸಂಪೂರ್ಣ ಸಾಕ್ಷರತೆ ಗುರಿ ಸಾಧನೆಗೆ ನೆರವಾಗಲಿದೆ ಎಂದು ಸಚಿವರು ಹೇಳಿದರು. ಅಭಿಯಾನದ ಪ್ರಧಾನ ಗುರಿ ಎಂದರೆ 57 ಲಕ್ಷ ಅನಕ್ಷರಸ್ಥರಿಗೆ ಸಂಖ್ಯೆ ಹಾಗೂ ಅಕ್ಷರಗಳನ್ನು ಕಲಿಸುವುದು, ದೇಶಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇರುವ 15 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಅನಕ್ಷರಸ್ಥರಿಗೆ ಕಲಿಸುವ ಉದ್ದೇಶವಿದೆ. ನಿಗದಿತ ಗುಂಪಿನಲ್ಲಿ ಬಹುತೇಕ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮತ್ತು ಇತರೆ ದುರ್ಬಲ ವರ್ಗದವರಿದ್ದಾರೆ. ಯೋಜನೆ ಅಡಿ ಇತ್ತೀಚಿನ ಜನಗಣತಿ ಪ್ರಕಾರ ಇತರೆಯವರ ಪೈಕಿ ಮಹಿಳಾ ಸಾಕ್ಷರತೆ ಶೇ.60ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಹೊಸ ಯೋಜನೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ (ಮನ್ರೇಗಾ), ಕೌಶಲ್ಯಾಭಿವೃದ್ಧಿ, ಸಂಸ್ಕೃತಿ, ಮಾಹಿತಿ ತಂತ್ರಜ್ಞಾನ, ಹಣಕಾಸು, ಕ್ರೀಡೆ ಮತ್ತು ಯುವಜನ ಕಲ್ಯಾಣ(ಎನ್ ವೈ ಕೆ), ಎನ್ ಸಿಸಿ ಮತ್ತು ಎನ್ಎಸ್ಎಸ್ ಯೋಜನೆಗಳನ್ನು ಸಂಯೋಜನೆಗೊಳಿಸಲಾಗುವುದು ಹಾಗೂ ಕಾರ್ಯಕ್ಕೆ ಸರ್ಕಾರೇತರ ಸಂಸ್ಥೆಗಳು/ನಾಗರಿಕ ಸಮಾಜ ಮತ್ತು ಸಿಎಸ್ಆರ್ ವಲಯವನ್ನು ಬಳಸಿಕೊಳ್ಳಲಾಗುವುದು. ಅಲ್ಲದೆ ಸ್ವಸಹಾಯ ಗುಂಪುಗಳ ರಚನೆ ಮತ್ತು ಒಳಗೊಳ್ಳುವಿಕೆ, ಸ್ವಯಂಪ್ರೇರಿತ ಮತ್ತು ಬಳಕೆದಾರರ ಗುಂಪುಗಳು ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳನ್ನು ಉತ್ತೇಜಿಸಲಾಗುವುದು.

ರಾಜ್ಯ ಸರ್ಕಾರಗಳು, ನಾಗರಿಕ ಸಮಾಜ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಬುದ್ಧಿಜೀವಿಗಳು, ನನ್ನ ನಾಗರಿಕ ಬಂಧುಗಳು ಸೇರಿ, ಎಲ್ಲಾ ಭಾಗಿದಾರರು ನಮ್ಮ ದೇಶವನ್ನು ಸಂಪೂರ್ಣ ಸಾಕ್ಷರತಾ ಸಮಾಜವನ್ನಾಗಿ ಪರಿವರ್ತನೆ ಮಾಡುವ ಮೂಲಕ ಸಾಕ್ಷರ ಭಾರತಆತ್ಮನಿರ್ಭರ ಭಾರತವನ್ನಾಗಿ ಮಾಡಬೇಕು ಎಂದು ಶ್ರೀ ಪೋಖ್ರಿಯಾಲ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಶ್ರೀ ಸಂಜಯ್ ಧೋತ್ರೆ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಒಮ್ಮೆಅನಕ್ಷರತೆ ಒಂದು ಪಾಪ ಮತ್ತು ಅದು ನಾಚಿಕೆಗೇಡು ಮತ್ತು ಅದನ್ನು ನಿರ್ಮೂಲನೆ ಮಾಡಬೇಕುಎಂದು ಹೇಳಿದ್ದರೆಂದರು. ಸಮಾಜದ ವಿಶೇಷವಾಗಿ ಮಹಿಳೆಯರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ  ಸಾರ್ವಜನಿಕರ ಜೀವನ ಮಟ್ಟ ಸುಧಾರಣೆ ಹಾಗೂ ಪರಿವರ್ತನೆ ಮತ್ತು ಸಬಲೀಕರಣದಲ್ಲಿ ಸಾಕ್ಷರತೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು. ಪ್ರತಿಯೊಬ್ಬರನ್ನು ಸಾಕ್ಷರತೆ ವ್ಯಾಪ್ತಿಗೆ ಒಳಪಡಿಸಲು ಹೆಚ್ಚಿನ ಗಮನ ನೀಡುವ ತುರ್ತು ಅಗತ್ಯವಿದೆ ಎಂದು ಹೇಳಿದ ಅವರು, ಸಾಮಾನ್ಯ ಶಿಕ್ಷಣದ ಮೂಲಕ ಎಲ್ಲರಿಗೂ ಸಾಕ್ಷರತೆ ಲಭ್ಯವಾಗುವಂತೆ ಮಾಡುವ ಮೂಲಕ ತ್ವರಿತವಾಗಿ ರಾಷ್ಟ್ರೀಯ ಗುರಿ ಸಾಧನೆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು.

ಅನಕ್ಷರತೆ ತನಗೆ ತಾನೇ ಕೊನೆಯಾಗುತ್ತದೆ ಎಂಬಂತೆ ನೋಡಬೇಕಿಲ್ಲ. ದೇಶದ ಬಹುತೇಕ ಜನಸಂಖ್ಯೆ 35 ವಯಸ್ಸಿನೊಳಗೆ ಇರುವುದರಿಂದ ನಾವು ಇದನ್ನು ವಿಶೇಷವಾಗಿ ಪರಿಗಣಿಸಬೇಕಾಗುತ್ತದೆ. ಯುವ ಜನಸಂಖ್ಯೆ ಯಾವುದೇ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯವಿಲ್ಲದೆ, ದುಡಿಯುವ ಜಗತ್ತಿಗೆ ಇಳಿಯುತ್ತಾರೆ. ಇದರಿಂದ ಜನಸಂಖ್ಯೆಯ ಸಂಪೂರ್ಣ ಲಾಭವನ್ನು ಪಡೆಯಲು ನಮಗೆ ತಡೆಯೊಡ್ಡಿದಂತಾಗುತ್ತದೆ. ಹಾಗಾಗಿ ನಾವು ಯುವಕರನ್ನು ಶಿಕ್ಷಣ ಮತ್ತು ಜೀವನ ಪರ್ಯಂತ ಕಲಿಕೆ ವ್ಯಾಪ್ತಿಗೆ ತರಲು ಗಂಭೀರ ಚಿಂತನೆ ಮಾಡಬೇಕು ಎಂದರು.

ಭಾರತವನ್ನು ಸಂಪೂರ್ಣ ಸಾಕ್ಷರಗೊಳಿಸಲು ಮತ್ತು ಸುಸ್ಥಿರ ಸಮಾಜದ ಗುರಿ ಸಾಧನೆಗೆ ಎಲ್ಲ ಭಾಗಿದಾರರು ಕೈಜೋಡಿಸಬೇಕು ಎಂದು ಶ್ರೀ ಧೋತ್ರೆ ಕರೆ ನೀಡಿದರು. ಸಂಪೂರ್ಣ ಸಾಕ್ಷರತೆ ಸಾಧಿಸುವ ನಿಟ್ಟಿನಲ್ಲಿ ಭಾಗವಹಿಸಿರುವ ಎಲ್ಲ ಸಂಸ್ಥೆಗಳು ಯಶಸ್ಸುಗಳಿಸಲಿ ಎಂದು ಅವರು ಶುಭ ಕೋರಿದರು.

ಹಿನ್ನೆಲೆ:

ಅಂತಾರಾಷ್ಟ್ರೀಯ ಸಾಕ್ಷರತಾ ದಿನ ( ಎಲ್ ಡಿ)ವನ್ನು ಪ್ರತಿ ವರ್ಷ ಸೆಪ್ಟೆಂಬರ್ 8ರಂದು ಜಗತ್ತಿನಾದ್ಯಂತ ಆಚರಿಸಲಾಗುವುದು. ಎಲ್ ಡಿ ಆಚರಣೆ 1965 ಸೆಪ್ಟೆಂಬರ್ ನಲ್ಲಿ ಟೆಹ್ರಾನ್ ನಲ್ಲಿ ನಡೆದ ಅನಕ್ಷರತೆ ನಿರ್ಮೂಲನೆ ಕುರಿತ ಜಾಗತಿಕ ಶಿಕ್ಷಣ ಸಚಿವರ ಸಮಾವೇಶದಲ್ಲಿ ಶಿಫಾರಸ್ಸು ಮಾಡಲ್ಪಟ್ಟ ನಂತರ ಆರಂಭವಾಯಿತು. ಸಮಾವೇಶದಲ್ಲಿ ಸೆಪ್ಟೆಂಬರ್ 8 ಅನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಘೋಷಿಸಬೇಕು ಮತ್ತು ಜಗತ್ತಿನಾದ್ಯಂತ ಆಚರಿಸುವಂತೆ ನಿರ್ಣಯ ಕೈಗೊಳ್ಳಬೇಕು ಎಂದು ಶಿಫಾರಸ್ಸು ಮಾಡಲಾಗಿತ್ತು. 1966 ನವೆಂಬರ್ ನಲ್ಲಿ ಪ್ಯಾರಿಸ್ ನಲ್ಲಿ ನಡೆದ ಯುನೆಸ್ಕೋದ 14ನೇ ಮಹಾಧಿವೇಶನದಲ್ಲಿ ಸೆಪ್ಟೆಂಬರ್ 8 ಅನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಅಂದಿನಿಂದ ಯುನೆಸ್ಕೋ ಪ್ರತಿ ವರ್ಷ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುತ್ತಿದ್ದು, ಮೂಲಕ ಸಾಕ್ಷರತೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಅಂತಾರಾಷ್ಟ್ರೀಯ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡುತ್ತಿರುವುದಲ್ಲದೆ, ಸಾಕ್ಷರತಾ ಚಟುವಟಿಕೆಗಳಿಗೆ ಸಕ್ರಿಯ ಬೆಂಬಲ ಹಾಗೂ ಆಸಕ್ತಿಯನ್ನು ಮೂಡಿಸಲಾಗುತ್ತಿದೆ. ಇದು ಯುನೆಸ್ಕೋದ ಒಂದು ಪ್ರಮುಖ ಚಟುವಟಿಕೆಯೂ ಆಗಿದೆ.

ಭಾರತದಲ್ಲಿ ಅನಕ್ಷರತೆ ವಿಶೇಷವಾಗಿ ವಯಸ್ಕರ ಸಾಕ್ಷರತೆ, ಸ್ವಾತಂತ್ರ್ಯಾನಂತರ ರಾಷ್ಟ್ರೀಯ ಆದ್ಯತೆಯಾಗಿದೆ. ಅನಕ್ಷರತೆ ನಿರ್ಮೂಲನೆ ಉದ್ದೇಶದಿಂದ ಮತ್ತು ವಯಸ್ಕರಿಗೆ ಜೀವನ ಪರ್ಯಂತ ಶಿಕ್ಷಣ ಮತ್ತು ಸಾಕ್ಷರತೆ ನೀಡುವ ಉದ್ದೇಶಕ್ಕಾಗಿ ಭಾರತ ಸರ್ಕಾರ 1988ರಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಅನ್ನು ಆರಂಭಿಸಿತು. ಅಂದಿನಿಂದ ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತಿದೆ ಮತ್ತು ಗುರಿ ಸಾಧನೆಗೆ ರಾಷ್ಟ್ರದ ಬದ್ಧತೆಯನ್ನು ಪುನರುಚ್ಛರಿಸಲಾಗುತ್ತಿದೆ. ಅಲ್ಲದೆ, ಅನಕ್ಷರತೆ ನಿರ್ಮೂಲನೆ ಮಾಡುವ ಅಂತಾರಾಷ್ಟ್ರೀಯ ಸಮುದಾಯದ ಪ್ರಯತ್ನಗಳಿಗೆ ದೃಢ ಬೆಂಬಲ ನೀಡುವ ಜೊತೆಗೆ ಸಂಪೂರ್ಣ ಸಾಕ್ಷರತೆ ಗುರಿ ಸಾಧನೆ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

***


(Release ID: 1652373) Visitor Counter : 732