ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ದಿನದ 24 ಗಂಟೆಗಳ ಮಾನಸಿಕ ಆರೋಗ್ಯ ಪುನರ್ ವಸತಿ ಉಚಿತ ಸಹಾಯವಾಣಿ ಕಿರಣ್ (1800-599-0019) 13 ಭಾಷೆಗಳಲ್ಲಿ ಚಾಲನೆ

Posted On: 08 SEP 2020 1:36PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಡಿಇಪಿಡಬ್ಲ್ಯೂಡಿ ವತಿಯಿಂದ ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುವ ಮಾನಸಿಕ ಆರೋಗ್ಯ ಪುನರ್ ವಸತಿ ಉಚಿತ ಸಹಾಯವಾಣಿ ಕಿರಣ್ (1800-599-0019) 13 ಭಾಷೆಗಳಲ್ಲಿ ಆರಂಭಿಸಲಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಪರಿಹಾರ ಮತ್ತು ಬೆಂಬಲಗಳನ್ನು ನೀಡಲಾಗುವುದು, ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ನಂತರ ಹೆಚ್ಚಾಗುತ್ತಿರುವ ಮಾನಸಿಕ ಕಾಯಿಲೆಗಳ ಹಿನ್ನೆಲೆಯಲ್ಲಿ ಇದನ್ನು ಆರಂಭಿಸಲಾಗಿದೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಶ್ರೀ ಥಾವರ್ ಚಂದ್ ಗೆಹ್ಲೋಟ್ ನಿನ್ನೆ ವೆಬ್ ಕಾಸ್ಟ್ ಮೂಲಕ ಸಹಾಯವಾಣಿಗೆ ಚಾಲನೆ ನೀಡಿದರು ಮತ್ತು ಸಹಾಯವಾಣಿ ಕುರಿತ ಪೋಸ್ಟರ್, ಕೈಪಿಡಿ ಮತ್ತು ಸಂಪನ್ಮೂಲ ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.

ಸಹಾಯವಾಣಿ ರೀತಿಯಲ್ಲಿ ಕೆಲಸ ಮಾಡುತ್ತದೆ, ಅದೆಂದರೆ ಭಾರತದ ಯಾವುದೇ ಭಾಗದಿಂದ ಯಾವುದೇ ಬಗೆಯ ಸ್ಥಿರ ಅಥವಾ ಮೊಬೈಲ್ ದೂರವಾಣಿಗಳಿಂದ ಉಚಿತ ಸಹಾಯವಾಣಿ ಸಂಖ್ಯೆ1800-599-0019ಗೆ ಕರೆ ಮಾಡಬಹುದು. ಸ್ವಾಗತ ಸಂದೇಶದ ನಂತರ ಸರಿಯಾದ ಗುಂಡಿ(ಬಟನ್ )ಯನ್ನು ಒತ್ತಿ, ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು; ಭಾಷೆಯ ಆಯ್ಕೆಯ ನಂತರ ರಾಜ್ಯ/ಕೇಂದ್ರಾಡಳಿತ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು. ಆನಂತರ ನೀವು ಸ್ಥಳೀಯ ಸಹಾಯವಾಣಿ ಕೇಂದ್ರ ಅಥವಾ ಉದ್ದೇಶಿತ ರಾಜ್ಯದ ಜೊತೆ ಸಂಪರ್ಕ ಸಾಧಿಸುತ್ತೀರಿ, ಆನಂತರ ಮಾನಸಿಕ ಆರೋಗ್ಯ ತಜ್ಞರು ನಿಮ್ಮ ಸಮಸ್ಯೆಯನ್ನು ಬಗೆಹರಿಸುವರು ಅಥವಾ ಬಾಹ್ಯ ಸಹಾಯಕ್ಕಾಗಿ ಬೇರೆಯವರಿಗೆ (ಕ್ಲಿನಿಕಲ್, ಕ್ಲಿನಿಕಲ್ ಮನಃಶಾಸ್ತ್ರಜ್ಞ/ ಪುನರ್ವಸತಿ ಮನಃಶಾಸ್ತ್ರಜ್ಞ/ ಮನಃಶಾಸ್ತ್ರಜ್ಞ) ಸೂಚಿಸುವರು/ಸಂಪರ್ಕಿಸುವಂತೆ ಹೇಳುವರು.

ಉಚಿತ ಸಹಾಯವಾಣಿ ಸಂಖ್ಯೆ ಬಿಎಸ್ಎನ್ಎಲ್ ತಾಂತ್ರಿಕ ಸಮನ್ವಯದೊಂದಿಗೆ ವಾರದ ಏಳು ದಿನವೂ ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ. ಸಹಾಯವಾಣಿಯಲ್ಲಿ 8 ರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ 25 ಸಂಸ್ಥೆಗಳು ಒಳಗೊಂಡಿವೆ. ಇದಕ್ಕೆ 660 ಕ್ಲಿನಿಕಲ್ ಮತ್ತು ಪುನರ್ವಸತಿ ಮನಃಶಾಸ್ತ್ರಜ್ಞರು ಹಾಗೂ 668 ಮನಃಶಾಸ್ತ್ರಜ್ಞರ ಬೆಂಬಲವಿದೆ. 13 ಭಾಷೆಗಳ ಸಹಾಯವಾಣಿಗಳಲ್ಲಿ ಹಿಂದಿ, ಅಸ್ಸಾಮಿ, ತಮಿಳು, ಮರಾಠಿ, ಒರಿಯಾ, ತೆಲುಗು, ಮಲಯಾಳಂ, ಗುಜರಾತ್, ಪಂಜಾಬಿ, ಕನ್ನಡ, ಬೆಂಗಾಲಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳು ಸೇರಿವೆ.

ಮಾನಸಿಕ ಕಾಯಿಲೆ ಯಾವುದೇ ವ್ಯಕ್ತಿಯ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಸಹಾಯವನ್ನು ಪಡೆಯುವುದರಿಂದ ಸಕಾರಾತ್ಮಕ ಹೆಜ್ಜೆ ಇಟ್ಟಂತಾಗುತ್ತದೆ. ಅದರಿಂದ ಆರೋಗ್ಯ, ಸೌಖ್ಯ ಮತ್ತು ಸಂತೋಷ ವೃದ್ಧಿಸುತ್ತದೆ. ಸಹಾಯವಾಣಿಯಿಂದ ಮಾನಸಿಕ ಆರೋಗ್ಯ ಪುನರ್ವಸತಿ ಸೇವೆಗಳು ಲಭ್ಯವಾಗಲಿವೆ. ತ್ವರಿತ ತಪಾಸಣೆ, ಪ್ರಥಮ ಚಿಕಿತ್ಸೆ, ಮಾನಸಿಕ ಬೆಂಬಲ, ಒತ್ತಡ ನಿರ್ವಹಣೆ, ಮಾನಸಿಕ ಸೌಖ್ಯ, ಸಕಾರಾತ್ಮಕ ನಡವಳಿಕೆ ಉತ್ತೇಜನ ಮತ್ತು ಮಾನಸಿಕ ಬಿಕ್ಕಟ್ಟು ನಿರ್ವಹಣೆ ಇತ್ಯಾದಿಗಳ ಉದ್ದೇಶದಿಂದ ಸೇವೆಗಳನ್ನು ಒದಗಿಸಲಾಗುವುದು. ಅದರಡಿ ಒತ್ತಡ, ಆತಂಕ, ಖಿನ್ನತೆ, ಭಯದ ದಾಳಿ, ಹೊಂದಾಣಿಕೆ ವ್ಯತ್ಯಾಸಗಳು, ನಂತರದ ಆಘಾತಕಾರಿ ಒತ್ತಡದ ಕಾಯಿಲೆಗಳು, ಮಾದಕ ವಸ್ತುಗಳ ವ್ಯಸನ, ಆತ್ಮಹತ್ಯೆಗೆ ಒಳಗಾಗುವವರು, ಸಾಂಕ್ರಾಮಿಕದಿಂದ ಉಂಟಾಗುವ ಮಾನಸಿಕ ವಿಷಯಗಳು ಮತ್ತು ಮಾನಸಿಕ ಆರೋಗ್ಯ ತುರ್ತು ವಿಚಾರಗಳಿಗೆ ಸೇವೆಗಳನ್ನು ಸಲ್ಲಿಸುವ ಗುರಿ ಹೊಂದಲಾಗಿದೆ. ಇದು ಮೊದಲ ಹಂತದಲ್ಲಿ ಸಲಹೆ ನೀಡುವ ಜೀವನಾಡಿಯಾಗಿರಲಿದೆ. ನಂತರ ಮಾರ್ಗದರ್ಶನ ಮತ್ತು ಶಿಫಾರಸ್ಸುಗಳನ್ನು(ರೆಫರೆನ್ಸ್) 13 ಭಾಷೆಗಳಲ್ಲಿ ಸಾರ್ವಜನಿಕರಿಗೆ, ಕುಟುಂಬಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ, ಪೋಷಕರ ಒಕ್ಕೂಟಗಳಿಗೆ, ವೃತ್ತಿಪರ ಒಕ್ಕೂಟಗಳಿಗೆ, ಪುನರ್ ವಸತಿ ಕೇಂದ್ರಗಳಿಗೆ, ಆಸ್ಪತ್ರೆಗಳಿಗೆ ಅಥವಾ ದೇಶದ ಯಾವುದೇ ಅಗತ್ಯ ವ್ಯಕ್ತಿಗಳಿಗೆ ಸೇವೆಯನ್ನು ಒದಗಿಸಲಿವೆ.

ಸಹಾಯವಾಣಿಯ ಉದ್ದೇಶ, ಶೀಘ್ರ ತಪಾಸಣೆಗೆ ನೆರವಾಗುವುದು, ಪ್ರಾಥಮಿಕ ಚಿಕಿತ್ಸೆ, ಮಾನಸಿಕ ಬೆಂಬಲ, ಒತ್ತಡ ನಿರ್ವಹಣೆ, ಮಾನಸಿಕ ಸೌಖ್ಯ, ವಿಚಿತ್ರ ನಡವಳಿಕೆಯನ್ನು ನಿಯಂತ್ರಿಸುವುದು, ಮಾನಸಿಕ ಬಿಕ್ಕಟ್ಟು ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ತಜ್ಞರ ಜೊತೆ ಭೇಟಿಗೆ ನೆರವಾಗುವುದಾಗಿದೆ. ಒತ್ತಡ, ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್(ಒಸಿಡಿ), ಆತ್ಮಹತ್ಯೆ, ಖಿನ್ನತೆ, ಭಯದ ದಾಳಿಗಳು, ಹೊಂದಾಣಿಕೆ ದೋಷಗಳು, ಒತ್ತಡದಿಂದ ಉಂಟಾಗುವ ದೋಷಗಳು ಮತ್ತು ಮಾದಕ ವ್ಯಸನ ಗಳನ್ನು, ದೌರ್ಜನ್ಯಗಳನ್ನು ತಡೆಯಲು ಸಹಾಯವಾಣಿ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದಲ್ಲದೆ, ಸಾಂಕ್ರಾಮಿಕದಿಂದ ಉಂಟಾಗುವ ಮಾನಸಿಕ ಆರೋಗ್ಯ ತುರ್ತು ಸೇವೆಗಳನ್ನು ಒದಗಿಸಲಿದೆ.

ಸಹಾಯವಾಣಿಯನ್ನು ಚೆನ್ನೈನ ರಾಷ್ಟ್ರೀಯ ಬಹುಬಗೆಯ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಸಂಸ್ಥೆ(ಎನ್ಐಇಪಿಎಂಡಿ) ಮತ್ತು ಸೆಹೋರ್ ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ ವಸತಿ ಕೇಂದ್ರ(ಎನ್ಐಎಂಎಚ್ಆರ್)ಗಳ ಸಮನ್ವಯದಿಂದ ನಡೆಸಲಾಗುವುದು. ಸಹಾಯವಾಣಿಗೆ ಭಾರತೀಯ ಕ್ಲಿನಿಕಲ್ ಮನಃಶಾಸ್ತ್ರಜ್ಞರ ಒಕ್ಕೂಟ(ಐಎಸಿಪಿ), ಭಾರತೀಯ ಮನಃಶಾಸ್ತ್ರಜ್ಞರ ಒಕ್ಕೂಟ(ಐಪಿಎ) ಮತ್ತು ಭಾರತೀಯ ಮನಃಶಾಸ್ತ್ರ ಸಾಮಾಜಿಕ ಕಾರ್ಯಕರ್ತರ ಒಕ್ಕೂಟ(ಐಪಿಎಸ್ ಡಬ್ಲ್ಯೂಎ) ವೃತ್ತಿಪರ ಬೆಂಬಲವನ್ನು ನೀಡಲಿವೆ.

***



(Release ID: 1652313) Visitor Counter : 1861