ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಸಕ್ಕರೆ ಕಾರ್ಖಾನೆಗಳು ರೈತರಿಗೆ 2020-21ನೇ ಸಾಲಿನಲ್ಲಿ ಪಾವತಿಸಬೇಕಾದ ಕಬ್ಬಿನ ನ್ಯಾಯೋಚಿತ ಮತ್ತು ಕನಿಷ್ಠ ಬೆಲೆಗೆ ಕೇಂದ್ರ ಸಂಪುಟದ ಅನುಮೋದನೆ

Posted On: 19 AUG 2020 4:31PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ದ ಶಿಫಾರಸುಗಳ ಅನ್ವಯ 2020-21ರ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕಬ್ಬಿನ ನ್ಯಾಯೋಚಿತ ಮತ್ತು ಕನಿಷ್ಠ ಬೆಲೆ (ಎಫ್‌ಆರ್‌ಪಿ) ಗೆ ಅನುಮೋದನೆ ನೀಡಿದೆ. 
i) 2020-21ರ ಸಕ್ಕರೆ ಋತುವಿನಲ್ಲಿ ಕಬ್ಬಿನ ಎಫ್‌ಆರ್‌ಪಿಯು ಶೇ.10 ರಷ್ಟು ಮೂಲ ರಿಕವರಿ ದರಕ್ಕೆ ಪ್ರತಿ ಕ್ವಿಂಟಲ್‌ಗೆ 285 / - ರೂ.
ii) ರಿಕವರಿಯಲ್ಲಿ ಶೇ. 10 ಕ್ಕಿಂತ ಹೆಚ್ಚಿನ ಪ್ರತಿ 0.1% ಹೆಚ್ಚಳಕ್ಕೆ ಪ್ರತಿ ಕ್ವಿಂಟಲ್‌ಗೆ 2.85 ರೂ.
iii) ರಿಕವರಿಯು ಶೇ.10 ಕ್ಕಿಂತ ಕಡಿಮೆ ಆದರೆ 9.5 ಪ್ರತಿಶತಕ್ಕಿಂತ ಹೆಚ್ಚಾಗಿರುವ ಕಾರ್ಖಾನೆಗಳಲ್ಲಿ ರಿಕವರಿಯ ಪ್ರತಿ 0.1 ಶೇಕಡಾ ಪಾಯಿಂಟ್ ಇಳಿಕೆಗೆ ಪ್ರತಿ ಕ್ವಿಂಟಲ್‌ಗೆ 2.85 ರೂ. ಎಫ್‌ಆರ್‌ಪಿ. ರಿಕವರಿ ಶೇ.9.5 ಅಥವಾ ಅದಕ್ಕಿಂತ ಕಡಿಮೆ ಇರುವ ಕಾರ್ಖಾನೆಗಳಿಗೆ ಎಫ್‌ಆರ್‌ಪಿ ಪ್ರತಿ ಕ್ವಿಂಟಲ್‌ಗೆ 270.75 ರೂ.
ಕಬ್ಬು ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ನ್ಯಾಯೋಚಿತ ಮತ್ತು ಕನಿಷ್ಠ  ಬೆಲೆಯನ್ನು ಪಡೆಯುವಂತೆ ಎಫ್‌ಆರ್‌ಪಿಯನ್ನು ನಿರ್ಣಯಿಸಲಾಗಿದೆ.
ಕಬ್ಬಿನ ‘ನ್ಯಾಯೋಚಿತ ಮತ್ತು ಕನಿಷ್ಠ  ಬೆಲೆ’ಯನ್ನು ಕಬ್ಬಿನ (ನಿಯಂತ್ರಣ) ಆದೇಶ, 1966 ರ ಅಡಿಯಲ್ಲಿ ನಿರ್ಧರಿಸಲಾಗುತ್ತದೆ. ಇದು ದೇಶಾದ್ಯಂತ ಏಕರೂಪವಾಗಿ ಅನ್ವಯವಾಗುತ್ತದೆ.


***



(Release ID: 1647131) Visitor Counter : 147