ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಜನೌಷಧಿ ಕೇಂದ್ರಗಳ ಮೂಲಕ ಸೌಲಭ್ಯ ವಂಚಿತ ಮಹಿಳೆಯರಿಗೆ ಪ್ರತಿ ಪ್ಯಾಡ್ ಗೆ ಕನಿಷ್ಠ ಬೆಲೆ 1 ರೂ.ನಂತೆ 5 ಕೋಟಿಗೂ ಅಧಿಕ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ

Posted On: 15 AUG 2020 6:43PM by PIB Bengaluru

ದೇಶದ ಮಹಿಳೆಯರ ಅದರಲ್ಲೂ ಸೌಲಭ್ಯ ವಂಚಿತ ಮಹಿಳೆಯರ ನೈರ್ಮಲ್ಯ ಮತ್ತು ಆರೋಗ್ಯಕ್ಕೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

74ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೆಂಪುಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಬಡ ಹೆಣ್ಣುಮಕ್ಕಳ ಮತ್ತು ಸೋದರಿಯರ ಆರೋಗ್ಯ ಮತ್ತು ನೈರ್ಮಲ್ಯದ ಕಾಳಜಿಯನ್ನು ಸರ್ಕಾರ ವಹಿಸಿದ್ದು, ಕೈಗೆಟಕುವ ದರದಲ್ಲಿ ಆರೋಗ್ಯ ಸಂಬಂಧಿ ಉತ್ಪನ್ನಗಳು ದೊರಕುವಂತೆ ಮಾಡಿದೆ ಎಂದು ಹೇಳಿದರು. ನಿಟ್ಟಿನಲ್ಲಿ 6ಸಾವಿರ ಜನೌಷಧಿ ಕೇಂದ್ರಗಳ ಮೂಲಕ ಸೌಲಭ್ಯ ವಂಚಿತ ಮಹಿಳೆಯರಿಗೆ 5 ಕೋಟಿಗೂ ಅಧಿಕ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ತಲಾ 1 ರೂ.ನಂತೆ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿಯವರು ಘೋಷಣೆ ಮಾಡಿರುವ ಕುರಿತಂತೆ ಮಾತನಾಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರಂತರ ಮಾರ್ಗದರ್ಶನ ಮತ್ತು ಬೆಂಬಲದಿಂದ ಸಾಧನೆ ಸಾಧ್ಯವಾಯಿತು ಎಂದು ಹೇಳಿದರು. 6 ಸಾವಿರ ಜನೌಷಧಿ ಕೇಂದ್ರಗಳ ಜಾಲವು ಜನರಿಗೆ ಅದರಲ್ಲೂ ಸೌಲಭ್ಯ ವಂಚಿತರಿಗೆ ಸೇವೆ ಮಾಡಲು ಸಜ್ಜಾಗಿದ್ದು, ಇದು ಪ್ರತಿ ಪ್ಯಾಡ್ ಗೆ 1 ರೂ.ನಂತೆ 5 ಕೋಟಿ ಸ್ಯಾನಿಟರಿ ಪ್ಯಾಡ್ ಗಳ ವಿತರಣೆಯ ಮೂಲಕ ಬಿಂಬಿತವಾಗಿದೆ ಎಂದರು.

ಪ್ರಧಾನಮಂತ್ರಿಯವರ ದೃಷ್ಟಿಕೋನದ ಈಡೇರಿಕೆಗಾಗಿ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳ ಮೂಲಕ ಅತ್ಯಾವಶ್ಯಕ ಮತ್ತು ಗುಣಮಟ್ಟದ ಔಷಧಗಳನ್ನು ಕೈಗೆಟಕುವ ದರದಲ್ಲಿ ಸರ್ಕಾರ ನಿರಂತರವಾಗಿ ಪೂರೈಸುತ್ತಿದೆ ಎಂದು ಸದಾನಂದ ಗೌಡ ತಿಳಿಸಿದರು.

ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಮಾತನಾಡಿ, ಪ್ರಧಾನ ಮಂತ್ರಿಗಳ ದೃಢ ಬದ್ಧತೆಯಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾಗಿ ಮಹಿಳಾ ಸಬಲೀಕರಣ ಮತ್ತು ಬಡ ವರ್ಗದವರ ಕಲ್ಯಾಣಕ್ಕೆ ತ್ವರಿತ ಪ್ರಗತಿ ಸಾಧ್ಯವಾಗಿದೆ ಎಂದು ಹೇಳಿದರು. ನಮ್ಮ ಔಷಧ ಇಲಾಖೆ ಸ್ಯಾನಿಟರಿ ಪ್ಯಾಡ್ ಗಳು ಮತ್ತು ಇತರ ಔಷಧಗಳು ಕೈಗೆಟಕುವ ದರದಲ್ಲಿ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಖಚಿತಪಡಿಸುತ್ತಿದೆ ಎಂದರು.

ಸಾಮಾಜಿಕ ಅಭಿಯಾನದ ಅಂಗವಾಗಿ ಜನೌಷಧ ಸುವಿದಾ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ದೇಶಾದ್ಯಂತದ 6 ಸಾವಿರ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಪಿಎಂಬಿಜೆಪಿ ಕೇಂದ್ರಗಳಲ್ಲಿ ಪ್ರತಿ ಪ್ಯಾಡ್ ಗೆ 1 ರೂ.ನಂತೆ ಲಭ್ಯವಾಗುವಂತೆ ಮಾಡಲಾಗಿದೆ. ಇದೇ ಸ್ವರೂಪದ ಸ್ಯಾನಿಟರಿ ನ್ಯಾಪ್ಕಿನ್ ಗಳಿಗೆ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾಡ್ ಗೆ 3ರಿಂದ 8ರೂ.ವರೆಗಿದೆ.

ಕ್ರಮವು ಭಾರತದಲ್ಲಿ ಸೌಲಭ್ಯ ವಂಚಿತ ಮಹಿಳೆಯರಿಗೆ ಸ್ವಚ್ಛತಾ, ಸ್ವಾಸ್ಥ್ಯ ಮತ್ತು ಸುವಿದಾ ಖಾತ್ರಿಪಡಿಸುತ್ತಿದೆ. ಎಲ್ಲರಿಗೂ ಗುಣಮಟ್ಟದ ಮತ್ತು ಕೈಗೆಟಕುವ ದರದ ಆರೋಗ್ಯ ಆರೈಕೆಯ ಖಾತ್ರಿ ನೀಡುವ ಪ್ರಧಾನಮಂತ್ರಿಯರ ಮುನ್ನೋಟದ ಗುರಿ ಈಡೇರಿಕೆಗಾಗಿ ಕ್ರಮವನ್ನು ಕೇಂದ್ರ ಔಷಧ ಇಲಾಖೆ ಕೈಗೆತ್ತಿಕೊಂಡಿದೆ. ಸ್ಯಾನಿಟರಿ ನ್ಯಾಪ್ಕಿನ್ ಗಳು ಪರಿಸರ ಸ್ನೇಹಿಯಾಗಿದ್ದು, ಇವುಗಳನ್ನು ಎಎಸ್.ಟಿ.ಎಂ. ಡಿ -6954 (ಜೈವಿಕವಾಗಿ ನಾಶವಾಗುವ ಪರೀಕ್ಷೆ) ಅನುಸರಣೆಯ ಆಕ್ಸೋ ಬಯೋಡೀಗ್ರೇಡಬಲ್ ವಸ್ತುವಿನಿಂದ ತಯಾರಿಸಲಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಿಯರು ಮತ್ತು ಮಹಿಳೆಯರಿಗೆ ಸ್ಯಾನಿಟರಿ ಉತ್ಪನ್ನಗಳ ಪ್ರವೇಶ ಇರಲಿಲ್ಲ, ಮಾರುಕಟ್ಟೆಯಲ್ಲಿ ಲಭ್ಯವಿದ್ದ ಉತ್ಪನ್ನಗಳ ದರ ಅವರಿಗೆ ದುಬಾರಿಯಾಗಿದ್ದವು. ಜನೌಷಧಿ ಕೇಂದ್ರಗಳಲ್ಲಿ ಪ್ಯಾಡ್ ಗಳ ಲಭ್ಯತೆ ಅವರಿಗೆ ದೊಡ್ಡ ನೆಮ್ಮದಿ ತಂದಿದೆ.

ಜನ್ ಔಷಧಿ ಕೇಂದ್ರಗಳು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ವಲಯಕ್ಕೆ 1.5 ಕೋಟಿ ಪ್ಯಾಡ್ ಗಳನ್ನು ಪೂರೈಕೆ ಮಾಡಿವೆ. ಎನ್.ಎಚ್.ಎಂ. ಪ್ಯಾಡ್ ಗಳನ್ನು ಉಚಿತವಾಗಿ ಬಾಲಕಿಯರಿಗೆ ಮತ್ತು ಮಹಿಳೆಯರಿಗೆರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮದ ಭಾಗವಾಗಿ ವಿತರಿಸಲಾಗುತ್ತಿದೆ.

***



(Release ID: 1646187) Visitor Counter : 166