ಪ್ರಧಾನ ಮಂತ್ರಿಯವರ ಕಛೇರಿ

2020ರ ಜುಲೈ4ರಂದು ಧರ್ಮಚಕ್ರ ದಿನ/ ಆಷಾಢ ಪೂರ್ಣಿಮೆಯ ದಿನ ಆಚರಣೆ ಉದ್ದೇಶಿಸಿ ಪ್ರಧಾನಿ ಭಾಷಣ

Posted On: 03 JUL 2020 5:09PM by PIB Bengaluru

2020 ಜುಲೈ4ರಂದು ಧರ್ಮಚಕ್ರ ದಿನ/ ಆಷಾಢ ಪೂರ್ಣಿಮೆಯ ದಿನ ಆಚರಣೆ ಉದ್ದೇಶಿಸಿ ಪ್ರಧಾನಿ ಭಾಷಣ

 

ಅಂತಾರಾಷ್ಟ್ರೀಯ ಬೌದ್ಧರ ಮಹಾಸಂಘ (ಐಬಿಸಿ), ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ 2020 ಜುಲೈ 4 ಆಷಾಢ ಪೂರ್ಣಿಮೆಯನ್ನು ಧರ್ಮ ಚಕ್ರ ದಿನವನ್ನಾಗಿ ಆಚರಿಸುತ್ತಿದೆ. ಇದನ್ನು ಬುದ್ಧ ತನ್ನ ಜ್ಞಾನೋದಯದ ನಂತರ ಮೊದಲ ಉಪದೇಶವನ್ನು ಇದೇ ದಿನ ತನ್ನ ಐವರು ಶಿಷ್ಯರಿಗೆ ಸದ್ಯ ಉತ್ತರ ಪ್ರದೇಶದ ವಾರಾಣಸಿ ಬಳಿ ಇರುವ ರಸಿಪಟ್ಟಣದ ಜಿಂಕೆ ಪಾರ್ಕ್ ನಲ್ಲಿ ನೀಡಿದ್ದರೆನ್ನಲಾಗಿದೆ. ದಿನವನ್ನು ವಿಶ್ವದಾದ್ಯಂತ ಇರುವ ಎಲ್ಲ ಬೌದ್ಧರು, ಧರ್ಮ ಚಕ್ರ ಪರಿವರ್ತನ ಅಥವಾ ಧರ್ಮದ ಚಕ್ರ ಬದಲಾವಣೆ ದಿನವನ್ನಾಗಿ ಆಚರಿಸುತ್ತಾರೆ. ದಿನವನ್ನು ಗುರುವಿನ ಸ್ಮರಣೆಯ ದಿನವನ್ನಾಗಿ ಹಿಂದೂಗಳು ಮತ್ತು ಬೌದ್ಧ ಧರ್ಮದವರಿಬ್ಬರೂ ಗುರು ಪೂರ್ಣಿಮೆಯನ್ನಾಗಿ ಆಚರಣೆ ಮಾಡುತ್ತಾರೆ.

ಬುದ್ಧನ ಜ್ಞಾನೋದಯದ ತಪೂ ಭೂಮಿ, ಆತ ಧರ್ಮದ ಚಕ್ರವನ್ನು ತಿರುಗಿಸಿದ ನೆಲ ಮತ್ತು ಮಹಾಪರಿನಿರ್ವಾಣದ ಹೊಂದಿದ ಭಾರತದ ಐತಿಹಾಸಿಕ ವೈಭವವನ್ನು ಗಮನದಲ್ಲಿರಿಸಿಕೊಂಡು ಆಚರಿಸಲಾಗುತ್ತಿರುವ ಧರ್ಮ ಚಕ್ರ ದಿನ ಕಾರ್ಯಕ್ರಮವನ್ನು ಭಾರತದ ಗೌರವಾನಿತ್ವ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಮೂಲಕ ಭಾಷಣ ಮಾಡಲಿದ್ದು, ಅವರು ಬದ್ಧನ ಶಾಂತಿ ಮತ್ತು ನ್ಯಾಯದ ಸಂದೇಶಗಳ ಬಗ್ಗೆ ಹಾಗೂ ಆವರು ತೋರಿದ ಎಂಟು ಪಥಗಳ ಮೂಲಕ ಸಮಸ್ಯೆಗಳಿಂದ ಹೊರಬರುವ ಸಂವೇದಕಗಳ ಬಗ್ಗೆ ಒತ್ತು ನೀಡಲಿದ್ದಾರೆ. ಸಂಸ್ಕೃತಿ ಸಚಿವ ಶ್ರೀ ಪ್ರಹ್ಲಾದ್ ಪಟೇಲ್ ಮತ್ತು ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಶ್ರೀ ಕಿರೆನ್ ರಿಜಿಜು ಅವರು ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವರು. ಮಂಗೋಲಿಯಾ ಅಧ್ಯಕ್ಷರು ವಿಶೇಷ ಭಾಷಣವನ್ನು ಮಾಡಲಿದ್ದಾರೆ ಮತ್ತು ಮಂಗೋಲಿಯಾದಲ್ಲಿ ಶತಮಾನಗಳಿಂದಲೂ ಸಂರಕ್ಷಿಸಿರುವ ಭಾರತೀಯ ಮೂಲದ ಬೌದ್ಧರ ಅತ್ಯಮೂಲ್ಯವಾದ ಹಸ್ತಪ್ರತಿಗಳನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಿದ್ದಾರೆ.

ಉಳಿದಂತೆ ಸಾರಾನಾಥ್ ಮತ್ತು ಬುದ್ಧ ಗಯಾದಿಂದ ಜಗತ್ತಿನ ನಾನಾ ಭಾಗಗಳ ಬೌದ್ಧ ಧಾರ್ಮಿಕ ನಾಯಕರು, ಗುರುಗಳು ಮತ್ತು ವಿದ್ವಾಂಸದರ ಸಂದೇಶಗಳನ್ನು ಪ್ರಸಾರ ಮಾಡಲಾಗುವುದು.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವರ್ಷದ ಮೇ 7ರಂದು ವೈಸಾಖ (ಬುದ್ಧ ಪೂರ್ಣಿಮೆ)ಯನ್ನು ಆಚರಿಸಿದಂತೆ, ಇದನ್ನೂ ಸಹ ಬಾರಿ ವರ್ಚ್ಯುಯಲ್ ಮಾದರಿಯಲ್ಲಿ ಆಚರಿಸಲಾಗುವುದು. ಜುಲೈ4 ಕಾರ್ಯಕ್ರಮದಲ್ಲಿ ಜಗತ್ತಿನಾದ್ಯಂತ ವೆಬ್ ಕಾಸ್ಟ್ ಮೂಲಕ ಸುಮಾರು 30 ಲಕ್ಷ ಭಕ್ತಾಧಿಗಳು ಸಾಕ್ಷಿಯಾಗಲಿದ್ದಾರೆಂದು ನಿರೀಕ್ಷಿಸಲಾಗುತ್ತಿದೆ.

***


(Release ID: 1636224) Visitor Counter : 283