ಪ್ರಧಾನ ಮಂತ್ರಿಯವರ ಕಛೇರಿ
ರಷ್ಯಾ ಒಕ್ಕೂಟದ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳ ನಡುವೆ ದೂರವಾಣಿ ಸಂಭಾಷಣೆ
Posted On:
02 JUL 2020 3:11PM by PIB Bengaluru
ರಷ್ಯಾ ಒಕ್ಕೂಟದ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳ ನಡುವೆ ದೂರವಾಣಿ ಸಂಭಾಷಣೆ
ಜುಲೈ 2, 2020 ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.
2 ನೇ ಮಹಾಯುದ್ಧದ 75 ನೇ ವರ್ಷದ ವಿಜಯೋತ್ಸವದ ಸಂಭ್ರಮಾಚರಣೆ ಮತ್ತು ರಷ್ಯಾದಲ್ಲಿ ಮತದಾನದ ಮೂಲಕ ಸಂವಿಧಾನ ತಿದ್ದುಪಡಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ಅಧ್ಯಕ್ಷ ಪುಟಿನ್ ಅವರಿಗೆ ಪ್ರಧಾನ ಮಂತ್ರಿಯವರು ಅಭಿನಂದಿಸಿದರು.
ಭಾರತ ಮತ್ತು ರಷ್ಯಾದ ಜನರ ನಡುವಿನ ಸ್ನೇಹದ ಸಂಕೇತವಾಗಿ ಮಾಸ್ಕೋದಲ್ಲಿ 2020 ರ ಜೂನ್ 24 ರಂದು ನಡೆದ ಮಿಲಿಟರಿ ಪರೇಡ್ ನಲ್ಲಿ ಭಾರತೀಯ ವಸಾಹತುಗಳು ಪಾಲ್ಗೊಂಡಿದ್ದನ್ನು ಪ್ರಧಾನ ಮಂತ್ರಿಯವರು ನೆನಪಿಸಿಕೊಂಡರು.
ಕೋವಿಡ್-19 ಜಾಗತಿಕ ಮಹಾಮಾರಿಯಿಂದ ಉದ್ಭವಿಸುತ್ತಿರುವ ನಕಾರಾತ್ಮಕ ಪರಿಸ್ಥಿತಿಗಳನ್ನು ಎದುರಿಸಲು ಉಭಯ ರಾಷ್ಟ್ರಗಳು ಕೈಗೊಂಡಂತಹ ಪರಿಣಾಮಕಾರಿ ಕ್ರಮಗಳ ಕುರಿತು ಉಭಯ ನಾಯಕರು ಚರ್ಚಿಸಿದರು ಮತ್ತು ಕೋವಿಡ್ ನಂತರದ ವಿಶ್ವದಲ್ಲಿ ಜಂಟಿಯಾಗಿ ಸವಾಲುಗಳನ್ನು ಎದುರಿಸಲು ಭಾರತ ಮತ್ತು ರಷ್ಯಾದ ನಿಕಟ ಸಂಬಂಧದ ಪ್ರಾಮುಖ್ಯತೆಯನ್ನು ಒಪ್ಪಿಕೊಂಡರು.
ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ಆಯೋಜಿಸಲಿರುವ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗಾಗಿ ದ್ವಿಪಕ್ಷೀಯ ಸಂಪರ್ಕ ಮತ್ತು ಸಮಾಲೋಚನೆಗಳ ವೇಗವನ್ನು ಕಾಪಾಡಿಕೊಳ್ಳಲು ಅವರು ಒಪ್ಪಿಕೊಂಡಿದ್ದಾರೆ. ದ್ವಿಪಕ್ಷೀಯ ಶೃಂಗಸಭೆಗೆ ಅಧ್ಯಕ್ಷ ಪುಟಿನ್ ಅವರನ್ನು ಭಾರತದಲ್ಲಿ ಸ್ವಾಗತಿಸಲು ತಾವು ಉತ್ಸುಕರಾಗಿರುವುದಾಗಿ ಪ್ರಧಾನಿ ತಿಳಿಸಿದರು.
ದೂರವಾಣಿ ಕರೆಗಾಗಿ ಅಧ್ಯಕ್ಷ ಪುಟಿನ್ ಪ್ರಧಾನ ಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದರು ಮತ್ತು ಎಲ್ಲ ಕ್ಷೇತ್ರಗಳಲ್ಲೂ ಉಭಯ ರಾಷ್ಟ್ರಗಳ ನಡುವಿನ ವಿಶೇಷ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಛರಿಸಿದರು.
***
(Release ID: 1635959)
Visitor Counter : 288
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam