ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 15 JUN 2020 8:44PM by PIB Bengaluru

ಕೋವಿಡ್-19 ಹೊಸ ಮಾಹಿತಿ

ಆರೋಗ್ಯಸೇವೆಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಮತ್ತು ಸಮಂಜಸ ದರದಲ್ಲಿ ಆರೈಕೆ ಒದಗಿಸಲು

ಖಾಸಗಿ ವಲಯದೊಂದಿಗೆ ತೊಡಗಿಸಿಕೊಳ್ಳಲು ರಾಜ್ಯಗಳಿಗೆ ಕೇಂದ್ರ ಸೂಚನೆ

 

ಕೋವಿಡ್-19 ರೋಗಿಗಳ ನಿರ್ವಹಣೆಗಾಗಿ ಐಸಿಯು ಹಾಸಿಗೆಗಳು, ವೆಂಟಿಲೇಟರ್ಗಳು, ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳಿರುವ ಆಸ್ಪತ್ರೆಗಳು ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳ ಕೊರತೆಯನ್ನು ಮನ್ಸೂಚಿಸುವ ಹಲವಾರು ವರದಿಗಳು ಬಂದಿವೆ. ಕೋವಿಡ್-19ರಚಿಕಿತ್ಸೆಗಾಗಿ ಆರೋಗ್ಯಕೆಂದ್ರಗಳು ಹೆಚ್ಚಿನ ಶುಲ್ಕ ವಿಧಿಸುತ್ತಿರುವ ವರದಿಗಳಿವೆ.

ಮುಂದೆ ಎದುರಾಗಲಿರುವ ಸನ್ನಿವೇಶವನ್ನು ಅರಿತ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು  ಖಾಸಗಿ ಆರೋಗ್ಯ ಸೇವೆ ಒದಗಿಸುವವರೊಂದಿಗೆ ತೊಡಗಿಸಿಕೊಳ್ಳಲು ಉದ್ದೇಶಿಸಿದೆ ನಿಟ್ಟಿನಲ್ಲಿ, ಕೆಲವು ರಾಜ್ಯಗಳು ಈಗಾಗಲೇ ಇದರ ಬಗ್ಗೆ ಉಪಕ್ರಮವನ್ನು ತೆಗೆದುಕೊಂಡಿವೆ.   ಅವರು ಖಾಸಗಿ ವಲಯದೊಂದಿಗೆ ಸಮಂಜಸವಾದ ದರಗಳು ಮತ್ತು ರೋಗಿಗಳನ್ನು ಸೇರಿಸಿಕೊಳ್ಳುವುದಕ್ಕೆ  ನಿರ್ಣಾಯಕ ಆರೈಕೆಯನ್ನು ಒದಗಿಸುವ ವ್ಯವಸ್ಥೆಗಳ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ.   ಪಿಎಮ್ ಜೆ ವೈ  ಪ್ಯಾಕೇಜ್ (ವೆಬ್ಸೈಟ್ https://pmjay.gov.in ನಲ್ಲಿ ಲಭ್ಯವಿದೆ) ಮತ್ತು ಸಿಜಿಹೆಚ್ಎಸ್ ಪ್ಯಾಕೇಜ್ ದರಗಳು ಈಗಾಗಲೇ ರಾಜ್ಯಗಳೊಂದಿಗೆ ಲಭ್ಯವಿದೆ (https://cghs.gov.in/indexl.php?lang=1&level=1&sublinkid=6760&lid=3704).   ಸಿಜಿಹೆಚ್ಎಸ್ ಪ್ಯಾಕೇಜ್ ದರಗಳನ್ನು ಪ್ರದೇಶಗಳಿಗನುಗುಣವಾಗುವಂತೆ  ನಿಗಧಿಪಡಿಸಲಾಗಿದೆ.

ರೋಗಿಗಳು ತ್ವರಿತ, ಉತ್ತಮ ಗುಣಮಟ್ಟ ಮತ್ತು ಕಾಳಜಿಯನ್ನು ಸಮಂಜಸವಾದ ದರದಲ್ಲಿ ಪಡೆಯುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ಸ್ಥಳೀಯ ಖಾಸಗಿ ಆರೋಗ್ಯ ಸೇವೆ ಒದಗಿಸುವವರೊಂದಿಗೆ ಸಮಾಲೋಚನೆ ನಡೆಸಲು ಮತ್ತು ಸಮಂಜಸವಾದ ದರಗಳನ್ನು ನಿಗಧಿಪಡಿಸಲು ರಾಜ್ಯಗಳಿಗೆ ಸೂಚಿಸಲಾಗಿದೆಆದರೆ ಆರೋಗ್ಯ ಸೇವೆ ಒದಗಿಸುವವರಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳಿಗೆ ವೆಚ್ಚದ ಅಂಶಗಳನ್ನು ಅಪವರ್ತನಗೊಳಿಸುತ್ತದೆದರಗಳನ್ನು ಒಮ್ಮೆ ನಿಗದಿಪಡಿಸಿದ ನಂತರ ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ಸೂಚಿಸಲಾಗಿದೆ ಇದರಿಂದ ರೋಗಿಗಳು ಮತ್ತು ಸೇವಾ ಪೂರೈಕೆದಾರರು ಇಬ್ಬರೂ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾರೆ ಮತ್ತು ಸಾಮರ್ಥ್ಯಗಳನ್ನು ಅತ್ಯುತ್ತಮವಾಗಿ ಬಳಸಲಾಗುತ್ತದೆಖಾಸಗಿ ವಲಯದ ಆರೋಗ್ಯ ಪೂರೈಕೆದಾರರೊಂದಿಗೆ ಪೂರ್ವಭಾವಿಯಾಗಿ ತೊಡಗಿಸಿಕೊಳ್ಳಲು ಮತ್ತು ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳನ್ನು ಒಟ್ಟುಗೂಡಿಸುವುದನ್ನು ಪರಿಗಣಿಸಲು ರಾಜ್ಯಗಳನ್ನು ಕೇಳಲಾಗಿದೆ, ಏಕೆಂದರೆ ಇದು ಕೋವಿಡ್-19 ರೋಗಿಗಳಿಗೆ ತ್ವರಿತ, ಉತ್ತಮ ಗುಣಮಟ್ಟದ ಮತ್ತು ಸಮಂಜಸವಾದ ಆರೋಗ್ಯ ಸೇವೆಯನ್ನು ಒದಗಿಸಲು ಸಹಾಯ ಮಾಡುತ್ತದೆ.

***


(Release ID: 1631860) Visitor Counter : 264