ನೌಕಾ ಸಚಿವಾಲಯ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಡಗು ದುರಸ್ತಿ ಸೌಲಭ್ಯಗಳನ್ನು ಹೆಚ್ಚಿಸಲು ಪರಿಷ್ಕೃತ ವೆಚ್ಚದ ಅಂದಾಜುಗಳ ಮೊತ್ತವನ್ನು ಕೇಂದ್ರ ನೌಕಾಯಾನ ಸಚಿವಾಲಯ ಅನುಮೋದಿಸಿದೆ
Posted On:
12 JUN 2020 11:17AM by PIB Bengaluru
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಡಗು ದುರಸ್ತಿ ಸೌಲಭ್ಯಗಳನ್ನು ಹೆಚ್ಚಿಸಲು
ಪರಿಷ್ಕೃತ ವೆಚ್ಚದ ಅಂದಾಜುಗಳ ಮೊತ್ತವನ್ನು ಕೇಂದ್ರ ನೌಕಾಯಾನ ಸಚಿವಾಲಯ ಅನುಮೋದಿಸಿದೆ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಡಗು ದುರಸ್ತಿ ಸೌಲಭ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಕೇಂದ್ರ ನೌಕಾಯಾನ ಸಚಿವಾಲಯವು ವೆಚ್ಚದ ಅಂದಾಜು ಮೊತ್ತವನ್ನು ರೂ. 123.95 ಕೋಟಿ ಗೆ ಪರಿಷ್ಕೃತಗೊಳಿಸಿದೆ.
ಹಡಗು (ನೌಕಾಯಾನ) ಚಟುವಟಿಕೆಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಜೀವಸೆಲೆ(ನಾಡಿ)ಯಾಗಿವೆ, ಏಕೆಂದರೆ ಪ್ರದೇಶದ ಹೆಚ್ಚಿನ ಅಭಿವೃದ್ಧಿ ಚಟುವಟಿಕೆಗಳು ಈ ಉದ್ಯಮಕ್ಕೆ ಸಂಬಂಧಿಸಿವೆ. ಹಡಗು ಚಟುವಟಿಕೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಜೀವಂತವಾಗಿಡಲು, ಹಡಗು ದುರಸ್ತಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇತ್ತೀಚೆಗೆ ಗಮನಾರ್ಹವಾಗಿ ಹೆಚ್ಚಿದ ಹಡಗು ಚಲನೆಯಿಂದಾಗಿ, ಪೋರ್ಟ್ ಬ್ಲೇರ್ನಲ್ಲಿ ಅಸ್ತಿತ್ವದಲ್ಲಿರುವ ದುರಸ್ತಿ ಸೌಲಭ್ಯಗಳನ್ನು ಕೇಂದ್ರ ಹಡಗು ಸಚಿವಾಲಯವು ಹೆಚ್ಚಿಸಿ ಅಭಿವೃದ್ಧಿಪಡಿಸುತ್ತಿದೆ. ಅಸ್ತಿತ್ವದಲ್ಲಿರುವ ಬಂದರು ಉದ್ದವನ್ನು 90 ಮೀಟರ್ ವಿಸ್ತರಿಸಲಾಗುವುದು, ಈ ವರ್ಧನೆಯು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಉದ್ಯಮವನ್ನು ಹೆಚ್ಚಿಸಲು ಸಹಕರಿಸುತ್ತದೆ ಮತ್ತು ಈ ಮೂಲಕ ಭಾರತ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಅನುಕೂಲವಾಗಲಿದೆ.
ಪೋರ್ಟ್ ಬ್ಲೇರ್, ದಕ್ಷಿಣ ಅಂಡಮಾನ್ನಲ್ಲಿರುವ ಡ್ರೈ ಡಾಕ್ ಪಂಪ್ಗಳು ಮತ್ತು ಪರಿಕರಗಳ ಪೂರೈಕೆ, ಸ್ಥಾಪನೆ ಮತ್ತು ನಿಯೋಜನೆ ಸೇರಿದಂತೆ ಫೆಬ್ರವರಿ 2016 ಕ್ಕೆ 42 ತಿಂಗಳು ಪೂರ್ಣಗೊಳ್ಳುವ ದಿನಾಂಕದೊಂದಿಗೆ ಇದ್ದ ಸಾಗರಕಿನಾರೆಯ ಬಂದರು ಪ್ರದೇಶ(ಡಾಕ್ಯಾರ್ಡ್)ಗಳಲ್ಲಿರುವ “ ಡ್ರೈ ಡಾಕ್ -2” ವಿಸ್ತರಣೆ ಯೋಜನೆಯನ್ನು ಕೇಂದ್ರ ವಲಯ ಯೋಜನೆಯಡಿ ರೂ. 96.24 ಕೋಟಿ ಮೊತ್ತದಲ್ಲಿ, ಕೇಂದ್ರ ನೌಕಾಯಾನ ಸಚಿವಾಲಯವು ಅವಧಿ ವಿಸ್ತಾರಗೊಳಿಸಿದೆ. ಹೆಚ್ಚು ದೊಡ್ಡದಾದ ಹಡಗುಗಳಿಗೆ ಸ್ಥಳಾವಕಾಶ ಕಲ್ಪಿಸಲು ಅಸ್ತಿತ್ವದಲ್ಲಿರುವ ಬಂದರನ್ನು 90 ಮೀಟರ್ ಉದ್ದಕ್ಕೆ ವಿಸ್ತರಿಸುವುದು ಕೆಲಸದ ವ್ಯಾಪ್ತಿಯಾಗಿತ್ತು. ಪೋರ್ಟ್ ಬ್ಲೇರ್ನಲ್ಲಿ ಅಸ್ತಿತ್ವದಲ್ಲಿರುವ ಹಡಗು ದುರಸ್ತಿ ಸೌಲಭ್ಯಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಈ ದ್ವೀಪವಾಸಿಗಳ ಆದಾಯವನ್ನು ಹೆಚ್ಚಿಸುವುದು ಈ ಕಾರ್ಯಯೋಜನೆಯ ಸೌಲಭ್ಯವಾಗಿತ್ತು. ಯೋಜನೆಗೆ ಅನುಮತಿ ನೀಡಲಾಯಿತು ಮತ್ತು ಪ್ರಾಥಮಿಕ ಕಾರ್ಯಗಳನ್ನು 07.03.2017 ರಂದು ಪ್ರಾರಂಭಿಸಲಾಯಿತು.
ಯೋಜನೆಯ ಅನುಷ್ಠಾನದಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳಿಂದಾಗಿ, ಯೋಜನೆಯ ವೆಚ್ಚ ಮತ್ತು ಕಾಲಾವಕಾಶ ಮೀರಿಹೋಗಿದೆ. ನೌಕಾಯಾನ ಸಚಿವಾಲಯವು ಈಗ ಪರಿಷ್ಕೃತ ವೆಚ್ಚ ಅಂದಾಜುಗೆ ರೂ. 123.95 ಕೋಟಿ ರೂ. ಡ್ರೈ ಡಾಕ್ ವಿಸ್ತರಣಾ ಸೌಲಭ್ಯವನ್ನು ಮಾಡಿರುವುದರಿಂದ, ವಿಸ್ತೃತ ಆಗಸ್ಟ್, 2021 ರ ತನಕದ ಅವಧಿಯು ಹಡಗು ಉದ್ಯಮಕ್ಕೆ ಲಭ್ಯವಾಗಲಿದೆ.
***
(Release ID: 1631118)
Visitor Counter : 211