ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ನೀತಿ (ಎಸ್ಟಿಐಪಿ) 2020 ರೂಪಿಸಲು ಸಾರ್ವಜನಿಕರು ಮತ್ತು ತಜ್ಞರ ಸಮಾಲೋಚನೆ ‘ಟೌನ್ ಹಾಲ್ ಮೀಟ್’ಗೆ ಚಾಲನೆ ದೊರೆಯಲಿದೆ
प्रविष्टि तिथि:
10 JUN 2020 11:02AM by PIB Bengaluru
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ನೀತಿ (ಎಸ್ಟಿಐಪಿ) 2020 ರೂಪಿಸಲು
ಸಾರ್ವಜನಿಕರು ಮತ್ತು ತಜ್ಞರ ಸಮಾಲೋಚನೆ ‘ಟೌನ್ ಹಾಲ್ ಮೀಟ್’ಗೆ ಚಾಲನೆ ದೊರೆಯಲಿದೆ
ಈ ಪ್ರಕ್ರಿಯೆಯನ್ನು 4 ಉನ್ನತ ಅಂತರ್ಸಂಪರ್ಕಿತ ಟ್ರ್ಯಾಕ್ಗಳಾಗಿ ಆಯೋಜಿಸಲಾಗಿದೆ, ಇದು ನೀತಿ ನಿರೂಪಣೆಯ ಸಮಾಲೋಚನೆಯಲ್ಲಿ ಸುಮಾರು 15000 ಪಾಲುದಾರರನ್ನು ತಲುಪುತ್ತದೆ
ವಿಭಿನ್ನ ಟ್ರ್ಯಾಕ್ಗಳಲ್ಲಿನ ಸಮಾಲೋಚನೆ ಪ್ರಕ್ರಿಯೆಗಳು ಈಗಾಗಲೇ ಪ್ರಾರಂಭವಾಗಿವೆ ಮತ್ತು ಸಮಾನಾಂತರವಾಗಿ ಕಾರ್ಯನಿರ್ವಹಿಸುತ್ತಿವೆ
ಸಂಪೂರ್ಣ ಪ್ರಕ್ರಿಯೆಯನ್ನು ಸಂಘಟಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ತಂತ್ರಜ್ಞಾನ ಭವನ) ಯಲ್ಲಿ ಆಂತರಿಕ ನೀತಿ ಜ್ಞಾನ ಮತ್ತು ಡೇಟಾ ಬೆಂಬಲ ಘಟಕವನ್ನು ಸ್ಥಾಪಿಸಲಾಗಿದೆ
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ನೀತಿ (ಎಸ್ಟಿಐಪಿ) 2020 ನ್ನು ರೂಪಿಸಲು ಟ್ರ್ಯಾಕ್ I ಸಾರ್ವಜನಿಕ ಮತ್ತು ತಜ್ಞರ ಸಮಾಲೋಚನೆ ಪ್ರಕ್ರಿಯೆಯ ಎಸ್ಟಿಐಪಿ 2020 ಟೌನ್ ಹಾಲ್ ಮೀಟ್ ಗೆ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊಫೆಸರ್ ಕೆ ವಿಜಯರಾಘವನ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ ಅವರು ಜೂನ್ 12, 2020 ರಂದು ಚಾಲನೆ ನೀಡಲಿದ್ದಾರೆ.
ಟ್ರ್ಯಾಕ್-I ಸಮಾಲೋಚನೆ ಪ್ರಕ್ರಿಯೆಯು ವಿಜ್ಞಾನ ನೀತಿ ವೇದಿಕೆಯ ಮೂಲಕ ವ್ಯಾಪಕವಾದ ಸಾರ್ವಜನಿಕರ ಮತ್ತು ತಜ್ಞರ ಸಮಾಲೋಚನೆಗಳನ್ನು ಒಳಗೊಂಡಿರುತ್ತದೆ, ಇದು ಎಸ್ಟಿಐಪಿ 2020 ವಿಕೇಂದ್ರೀಕೃತ, ಬಾಟಮ್-ಅಪ್ ಮತ್ತು ಅಂತರ್ಗತವಾಗುವಂತೆ ಮಾಡಲು ದೊಡ್ಡ ಸಾರ್ವಜನಿಕ ಮತ್ತು ತಜ್ಞರ ಪೂಲ್ನಿಂದ ಒಳಹರಿವುಗಳನ್ನು ಪಡೆಯಲು ಮೀಸಲಾದ ವೇದಿಕೆಯಾಗಿದೆ. ಸಮಾಲೋಚನೆಯ ಪ್ರಾರಂಭದಲ್ಲಿ ಎಸ್ಟಿಐಪಿ 2020 ಸಚಿವಾಲಯ ಮುಖ್ಯಸ್ಥ ಮತ್ತು ಡಿಎಸ್ಟಿ ಸಲಹೆಗಾರ ಡಾ.ಅಖಿಲೇಶ್ ಗುಪ್ತಾ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ (ಪಿಎಸ್ಎ ಕಚೇರಿ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ)ಯು ಹೊಸ ರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನ ಮತ್ತು ನಾವೀನ್ಯತೆ ನೀತಿ (ಎಸ್ಟಿಐಪಿ 2020) ರೂಪಿಸಲು ವ್ಯಾಪಕ ಶ್ರೇಣಿಯ ಪಾಲುದಾರರೊಂದಿಗೆ ಸಮಾಲೋಚನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಟ್ರ್ಯಾಕ್ I ರಲ್ಲಿ ಚಿಂತಕರು ಮತ್ತು ನೀತಿ ನಿರೂಪಕರೊಂದಿಗೆ ಸಾರ್ವಜನಿಕ ಸಂವಾದ ಸರಣಿ, ಸಾರ್ವಜನಿಕರೊಂದಿಗೆ ವಿಷಯಾಧಾರಿತ ಚರ್ಚೆ, ಉದ್ದೇಶಿತ ಸಮೀಕ್ಷಾ ಸಾಧನಗಳು, ಮುದ್ರಣ ಮಾಧ್ಯಮಗಳ ಲೇಖನಗಳು ಮತ್ತು ಲಿಖಿತ ಕೊನೆಯ ವ್ಯಕ್ತಿಯ ಸಂಪರ್ಕಕ್ಕಾಗಿ ಸಮುದಾಯ ಪಾಡ್ಕಾಸ್ಟ್ಗಳನ್ನು ಒಳಗೊಂಡಿರುತ್ತದೆ.
ಎಸ್ಟಿಐಪಿ 2020 ರೂಪಿಸುವ ಪ್ರಕ್ರಿಯೆಯನ್ನು 4 ಉನ್ನತ ಅಂತರ್ಸಂಪರ್ಕಿತ ಟ್ರ್ಯಾಕ್ಗಳಾಗಿ ಆಯೋಜಿಸಲಾಗಿದೆ, ಇದು ನೀತಿ ರೂಪಿಸುವ ಸಮಾಲೋಚನೆಯಲ್ಲಿ ಸುಮಾರು 15000 ಪಾಲುದಾರರನ್ನು ತಲುಪುತ್ತದೆ. ಟ್ರ್ಯಾಕ್-I ಸೈನ್ಸ್ ಪಾಲಿಸಿ ಫೋರಂ -ನೀತಿಯ ಕರಡು ಪ್ರಕ್ರಿಯೆಯ ಸಮಯದಲ್ಲಿ ಮತ್ತು ನಂತರ ದೊಡ್ಡ ಸಾರ್ವಜನಿಕ ಮತ್ತು ತಜ್ಞರ ಪೂಲ್ನಿಂದ ಒಳಹರಿವುಗಳನ್ನು ಪಡೆಯಲು ಇರುವ ಮೀಸಲಾದ ವೇದಿಕೆ- ಮೂಲಕ ವ್ಯಾಪಕವಾದ ಸಾರ್ವಜನಿಕರು ಮತ್ತು ತಜ್ಞರ ಸಮಾಲೋಚನೆ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ನೀತಿಯ ಕರಡು ಪ್ರಕ್ರಿಯೆಯಲ್ಲಿ ಸಾಕ್ಷ್ಯ-ತಿಳುವಳಿಕೆಯ ಶಿಫಾರಸುಗಳನ್ನು ನೀಡಲು ಟ್ರ್ಯಾಕ್-II ತಜ್ಞರೊಂದಿಗಿನ ವಿಷಯಾಧಾರಿತ ಸಮಾಲೋಚನೆಗಳನ್ನು ಒಳಗೊಂಡಿದೆ. ಈ ಉದ್ದೇಶಕ್ಕಾಗಿ ಇಪ್ಪತ್ತೊಂದು ಕೇಂದ್ರೀಕೃತ ವಿಷಯಾಧಾರಿತ ಗುಂಪುಗಳನ್ನು ರಚಿಸಲಾಗಿದೆ. ಟ್ರ್ಯಾಕ್-III ಸಚಿವಾಲಯಗಳು ಮತ್ತು ರಾಜ್ಯಗಳೊಂದಿಗೆ ಸಮಾಲೋಚನೆಗಳನ್ನು ಒಳಗೊಂಡಿರುತ್ತದೆ, ಟ್ರ್ಯಾಕ್- IV ಅತ್ಯುನ್ನತ ಮಟ್ಟದ ಬಹು-ಪಾಲುದಾರರ ಸಮಾಲೋಚನೆಯಾಗಿರುತ್ತದೆ.
ವಿಭಿನ್ನ ಟ್ರ್ಯಾಕ್ಗಳಲ್ಲಿನ ಸಮಾಲೋಚನೆ ಪ್ರಕ್ರಿಯೆಗಳು ಈಗಾಗಲೇ ಪ್ರಾರಂಭವಾಗಿವೆ ಮತ್ತು ಸಮಾನಾಂತರವಾಗಿ ನಡೆಯುತ್ತಿವೆ. ಟ್ರ್ಯಾಕ್-II ವಿಷಯಾಧಾರಿತ ಗುಂಪು (ಟಿಜಿ) ಸಮಾಲೋಚನೆಯು ಸರಣಿ ಮಾಹಿತಿ ಸಭೆಯಗಳೊಂದಿಗೆ ಪ್ರಾರಂಭವಾಗಿದೆ ಮತ್ತು ತಜ್ಞರಿಂದ ಮತ್ತು ಸಾರ್ವಜನಿಕರಿಂದ ಒಳಹರಿವುಗಳನ್ನು ಸಂಗ್ರಹಿಸಲು ಟ್ರ್ಯಾಕ್- I ಅನ್ನು ಪ್ರಾರಂಭಿಸಲಾಗುವುದು.
ಸಂಪೂರ್ಣ ಪ್ರಕ್ರಿಯೆಯನ್ನು ಸಂಘಟಿಸಲು ಡಿಎಸ್ಟಿ-ಎಸ್ಟಿಐ ಪಾಲಿಸಿ ಫೆಲೋಗಳ ಕೇಡರ್ನೊಂದಿಗೆ ನಿರ್ಮಿಸಲಾದ ಆಂತರಿಕ ನೀತಿ ಜ್ಞಾನ ಮತ್ತು ಡೇಟಾ ಬೆಂಬಲ ಘಟಕವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ತಂತ್ರಜ್ಞಾನ ಭವನ) ಯಲ್ಲಿ ಸ್ಥಾಪಿಸಲಾಗಿದೆ.
***
(रिलीज़ आईडी: 1630662)
आगंतुक पटल : 288