ಆಯುಷ್

ಡಿಡಿ ನ್ಯೂಸ್ ನಲ್ಲಿ ಜೂನ್ 10ರಂದು ಪ್ರಸಾರವಾಗಲಿರುವ ಐಡಿವೈ 2020ಯ ಪೂರ್ವಭಾವಿ ಕಾರ್ಯಕ್ರಮ

Posted On: 09 JUN 2020 12:52PM by PIB Bengaluru

ಡಿಡಿ ನ್ಯೂಸ್ ನಲ್ಲಿ ಜೂನ್ 10ರಂದು ಪ್ರಸಾರವಾಗಲಿರುವ ಐಡಿವೈ 2020 ಪೂರ್ವಭಾವಿ ಕಾರ್ಯಕ್ರಮ

 

ಆಯುಷ್ ಸಚಿವಾಲಯವು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗದಿನ 2020 ಅಂಗವಾಗಿ ದೂರದರ್ಶನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದು, ಇದು ಡಿಡಿ ನ್ಯೂಸ್ ನಲ್ಲಿ 2020 ಜೂನ್ 10 ರಂದು ಸಂಜೆ 07:00 ರಿಂದ ರಾತ್ರಿ 08:00 ರವರೆಗೆ ಪ್ರಸಾರವಾಗಲಿದೆ. ಇದನ್ನು ಆಯುಷ್ ಸಚಿವಾಲಯದ ಫೇಸ್ಬುಕ್ ಪುಟದಲ್ಲಿ ಸಹ ನೇರ ಪ್ರಸಾರ ಮಾಡಲಾಗುತ್ತದೆ.

ಪೂರ್ವಭಾವಿ ಕಾರ್ಯಕ್ರಮ ಐಡಿವೈ 2020 10 ದಿನಗಳ ದಿನಗಣನೆಯ ಅಂಗವಾಗಿರುತ್ತದೆ. ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಶ್ರೀ ಶ್ರೀಪಾದ್ ನಾಯಕ್, ಪ್ರಧಾನಮಂತ್ರಿಗಳ ಕಾರ್ಯಾಲಯದ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಸಾಂಸ್ಕೃತಿಕ ಬಾಂಧವ್ಯದ ಭಾರತೀಯ ಮಂಡಳಿಯ ಅಧ್ಯಕ್ಷ ಡಾ. ವಿನಯ್ ಸಹಸ್ರಬುದ್ಧೆ, ಅವರು ವಿದ್ಯುನ್ಮಾನ ಮಾಧ್ಯಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆಯುಷ್ ಕಾರ್ಯದರ್ಶಿ, ವಿದ್ಯಾ ರಾಜೇಶ್ ಕೊಟೇಚಾ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಕೋವಿಡ್ -19ರಿಂದ ದೇಶದಲ್ಲಿ ಪ್ರಸಕ್ತ ಉಂಟಾಗಿರುವ ಆರೋಗ್ಯ ತುರ್ತುಸ್ಥಿತಿಯ ಹಿನ್ನೆಲೆಯಲ್ಲಿ, ವರ್ಷ ಐಡಿವೈ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಜಿಟಲ್ ಮೂಲಕ ಆಚರಿಸಲಾಗುತ್ತಿದೆ. ಕೊರೊನಾ ವೈರಾಣಿವಿನ ಸಾಂಕ್ರಾಮಿಕ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯವು ಜನರನ್ನು ತಮ್ಮ ಮನೆಗಳಲ್ಲಿ ಯೋಗಾಭ್ಯಾಸ ಮಾಡಲು ಪ್ರೋತ್ಸಾಹಿಸುತ್ತಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸಾರ್ವಜನಿಕರಿಗಾಗಿನನ್ನ ಜೀವನ, ನನ್ನ ಯೋಗಎಂಬ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯನ್ನು ಘೋಷಿಸಿದ್ದಾರೆ.

ಪೂರ್ವಭಾವಿ ಕಾರ್ಯಕ್ರಮದಿಂದ 10 ದಿನಗಳ ಕಾಲ (ಅಂದರೆ 2020 ಜೂನ್ 11ರಿಂದ 2020 ಜೂನ್ 20ವರೆಗೆ) ಸಾಮಾನ್ಯ ಯೋಗ ಶಿಷ್ಟಾಚಾರ ಕುರಿತ ತರಬೇತಿ ಕಾರ್ಯಕ್ರಮ ಡಿಡಿ ಭಾರತಿ/ಡಿಡಿ ಸ್ಪೋರ್ಟ್ ನಲ್ಲಿ ಬೆಳಗ್ಗೆ 8.00 ರಿಂದ 8.30ರವರೆಗೆ ಪ್ರಸಾರವಾಗಲಿದೆ. ಇದನ್ನು ದೇಶದ ಪ್ರಮುಖ ಯೋಗ ತರಬೇತಿ ಸಂಸ್ಥೆ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ನವದೆಹಲಿಯಿಂದ ಆಯೋಜಿಸಲಾಗುತ್ತಿದೆ.

ಯೋಗ ಗುರುಗಳಾದ ಸ್ವಾಮಿ ರಾಮ್ ದೇವ್ ಜೀ, ಶ್ರೀ ಶ್ರೀ ರವಿಶಂಖರ್ ಜೀ, ಸದ್ಗುರು ಜಗ್ಗಿ ವಾಸುದೇವ್ ಜೀ, ಡಾ. ಎಚ್.ಆರ್. ನಾಕೇಂದ್ರಜೀ, ಶ್ರೀ ಕಮಲೇಶ್ ಪಟೇಲ್ (ದಾಜಿ), ಸೋದರಿ ಶಿವಾನಿ ಮತ್ತು ಸ್ವಾಮಿ ಭರತ್ ಭೂಷಣ್ ಜೀ ಅವರು ಯೋಗದ ಮಹತ್ವವನ್ನು ಮತ್ತು ನಾವು ಹೇಗೆ ಯೋಗವನ್ನು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ನಮ್ಮ ಮಾನಸಿಕ ಆರೋಗ್ಯ ಹಾಗೂ ಕ್ಷೇಮವನ್ನು ಸುಧಾರಿಸಿಕೊಳ್ಳಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನಮ್ಮ ನೇರ ಕಾರ್ಯಕ್ರಮದಲ್ಲಿ ವಿವರಿಸಲಿದ್ದಾರೆ.

ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಸ್ತುತ ಸಂಕಷ್ಟದ ಸಮಯದಲ್ಲಿ ಜನರು ಮನೆಯಲ್ಲಿ ಯೋಗ ಮಾಡಲು ಅನುವು ಮಾಡಿಕೊಡಲು ಸಚಿವಾಲಯವು ಕೈಗೊಂಡ ಪ್ರಮುಖ ಕ್ರಮಗಳನ್ನು ಪ್ರಮುಖವಾಗಿ ತೋರಿಸಲು ಸಚಿವಾಲಯದ ಗಣ್ಯರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಏಮ್ಸ್ ನಿರ್ದೇಶಕರು, .... ನಿರ್ದೇಶಕರು, ಮತ್ತು ಎಂಡಿಎನ್‌.ಐವೈ ನಿರ್ದೇಶಕರು ತಜ್ಞರ ಪ್ಯಾನಲ್ ನಲ್ಲಿ ಸೇರಲಿದ್ದಾರೆ.

ವರ್ಷ ಐಡಿವೈ ಇಡೀ ವಿಶ್ವ ಕೋವಿಡ್ -19 ಸೋಂಕಿನ ಕಂಬಂಧ ಬಾಹುವಿನಲ್ಲಿ ಸಿಲುಕಿರುವ ಸಂದರ್ಭದಲ್ಲಿ ಬಂದಿದೆ. ಯೋಗಾಭ್ಯಾಸ ಆರೋಗ್ಯ ವರ್ಧನೆ ಮತ್ತು ಹೆಚ್ಚಿನ ಒತ್ತಡ ಪರಿಣಾಮಗಳನ್ನು ನಿಗ್ರಹಿಸುವ ಕಾರಣ ಪರಿಸ್ಥಿತಿಯಲ್ಲಿ ಜನರಿಗೆ ವಿಶೇಷವಾಗಿ ಅದು ಪ್ರಸ್ತುತವಾಗಿದೆ ಎಂಬುದು ಗಮನಾರ್ಹವಾಗಿದೆ. ಆದ್ದರಿಂದ, ಐಡಿವೈ -2020ಗಾಗಿ, ವ್ಯಕ್ತಿಗತ ಅಂತರದ ಮಾನದಂಡಗಳಿಗೆ ಅನುಗುಣವಾಗಿ ಜನರು ತಮ್ಮ ಮನೆಗಳಿಂದಲೇ ಯೋಗದಲ್ಲಿ ಭಾಗವಹಿಸುವುದು ಮತ್ತು ಕಲಿಯುವುದು ಅನುಕೂಲಕರವಾಗಿದೆ. ಆಯುಷ್ ಸಚಿವಾಲಯ ಮತ್ತು ಅಸಂಖ್ಯಾತ ಇತರ ಬಾಧ್ಯಸ್ಥ ಸಂಸ್ಥೆಗಳು ಅವರ ಪೋರ್ಟಲ್ ಮತ್ತು ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟರ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ವಿವಿಧ ಡಿಜಿಟಲ್ ಸಂಪನ್ಮೂಲಗಳನ್ನು ನೀಡುತ್ತಿದ್ದು, ಜನರು ಕಾರ್ಯಕ್ರಮಕ್ಕೆ ಸಜ್ಜಾಗಲು ಬಳಸಿಕೊಳ್ಳಬಹುದಾಗಿದೆ. ಪ್ರಪಂಚದಾದ್ಯಂತ ಯೋಗ ಮಾಡುವವರು ಜೂನ್ 21 ರಂದು ಬೆಳಗ್ಗೆ 7 ಗಂಟೆಗೆ ತಮ್ಮ ಮನೆಗಳಿಂದಲೇ ಸಾಮಾನ್ಯ ಯೋಗ ಶಿಷ್ಟಾಚಾರದ ಸಾಮರಸ್ಯ ಪ್ರದರ್ಶನಕ್ಕೆ ಒಗ್ಗೂಡಲಿದ್ದಾರೆ.

***



(Release ID: 1630585) Visitor Counter : 193