ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಲಾಕ್ ಡೌನ್ ಅವಧಿಯಲ್ಲಿ 3965 ರೈಲ್ ರೇಕ್ ಗಳ ಮೂಲಕ ಒಟ್ಟು 111.02 ಎಲ್.ಎಂ.ಟಿ. ಆಹಾರ ಧಾನ್ಯಗಳ ಎತ್ತುವಳಿ

Posted On: 07 JUN 2020 7:02PM by PIB Bengaluru

ಲಾಕ್ ಡೌನ್ ಅವಧಿಯಲ್ಲಿ 3965 ರೈಲ್ ರೇಕ್ ಗಳ ಮೂಲಕ ಒಟ್ಟು 111.02 ಎಲ್.ಎಂ.ಟಿ. ಆಹಾರ ಧಾನ್ಯಗಳ ಎತ್ತುವಳಿ

ಆತ್ಮನಿರ್ಭರ ಪ್ಯಾಕೇಜ್ ಡಿಯಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು 4.42 ಎಲ್.ಎಂ.ಟಿ. ಆಹಾರಧಾನ್ಯಗಳನ್ನು ಮತ್ತು 15,413 ಎಂ.ಟಿ. ದ್ವಿದಳ ಧಾನ್ಯಗಳನ್ನು ವಿತರಣೆಗಾಗಿ ಎತ್ತುವಳಿ ಮಾಡಿವೆ

ಪಿ.ಎಂ.ಜಿ.ಕೆ..ವೈ. ಅಡಿಯಲ್ಲಿ 105.10 ಎಲ್ ಎಂ.ಟಿ. ಆಹಾರಧಾನ್ಯಗಳು ಮತ್ತು 4.71 ಎಲ್.ಎಂ.ಟಿ. ದ್ವಿದಳ ಧಾನ್ಯಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಎತ್ತುವಳಿ ಮಾಡಿವೆ

 

ಆಹಾರ ಧಾನ್ಯಗಳ ವಿತರಣೆ:

2020 ಮಾರ್ಚ್ 14 ರಂದು ಲಾಕ್ ಡೌನ್ ಘೋಷಣೆಯಾದಂದಿನಿಂದ 111.02 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿ, 3965 ರೈಲ್ ರೇಕ್ ಗಳ ಮೂಲಕ ಸಾಗಾಟ ಮಾಡಲಾಗಿದೆ. ರೈಲು ಮಾರ್ಗವಲ್ಲದೆ ರಸ್ತೆ ಮತ್ತು ಜಲ ಮಾರ್ಗಗಳ ಮೂಲಕವೂ ಸಾಗಾಟ ಮಾಡಲಾಗಿದೆ. ಒಟ್ಟು 234.51 ಎಲ್.ಎಂ.ಟಿ. ಯನ್ನು ಸಾಗಾಟ ಮಾಡಲಾಗಿದೆ. 15,500 ಎಂ.ಟಿ. ಧಾನ್ಯಗಳನ್ನು 13 ಹಡಗುಗಳ ಮೂಲಕ ಸಾಗಾಟ ಮಾಡಲಾಗಿದೆ. ಒಟ್ಟು 11.30 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಈಶಾನ್ಯ ರಾಜ್ಯಗಳಿಗೆ ಸಾಗಾಟ ಮಾಡಲಾಗಿದೆ. ಎನ್.ಎಫ್.ಎಸ್.. ಮತ್ತು ಪಿ.ಎಂ.ಜಿ.ಕೆ..ವೈ. ಅಡಿಯಲ್ಲಿ ಮುಂದಿನ ಮೂರು ತಿಂಗಳಿಗೆ ಈಶಾನ್ಯ ರಾಜ್ಯಗಳಿಗೆ ಒಟ್ಟು 11.5 ಎಲ್.ಎಂ.ಟಿ. ಆಹಾರ ಧಾನ್ಯಗಳು ಬೇಕಾಗುತ್ತವೆ.

ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯಗಳ ವಿತರಣೆ:

(ಆತ್ಮನಿರ್ಭರ ಭಾರತ್ ಪ್ಯಾಕೇಜ್ )

ಆತ್ಮನಿರ್ಭರ ಭಾರತ್ ಪ್ಯಾಕೇಜಿನಡಿಯಲ್ಲಿ , ಭಾರತ ಸರಕಾರವು 8 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಎನ್.ಎಫ್.ಎಸ್.. ಅಥವಾ ರಾಜ್ಯಗಳ ಪಿ.ಡಿ.ಎಸ್. ಕಾರ್ಡುಗಳಡಿಯಲ್ಲಿ ಬಾರದೆ ಇರುವ 8 ಕೋಟಿ ವಲಸೆ ಕಾರ್ಮಿಕರಿಗೆ , ವಿವಿಧ ಕಡೆಗಳಲ್ಲಿ ಸಿಲುಕಿಹಾಕಿಕೊಂಡವರಿಗೆ ಮತ್ತು ಆವಶ್ಯಕತೆ ಇರುವವರಿಗೆ ವಿತರಿಸುವುದಕ್ಕಾಗಿ ಒದಗಿಸಲು ನಿರ್ಧರಿಸಿತು. ಓರ್ವ ವ್ಯಕ್ತಿಗೆ ತಲಾ 5 ಕಿಲೋ. ದಂತೆ ಆಹಾರ ಧಾನ್ಯಗಳನ್ನು ಉಚಿತವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಎಲ್ಲಾ ವಲಸೆ ಕಾರ್ಮಿಕರಿಗೆ ವಿತರಿಸಲಾಗುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 4.42 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿ 10,131 ಎಂ.ಟಿ. ಯಷ್ಟು ಆಹಾರ ಧಾನ್ಯಗಳನ್ನು 20.26 ಲಕ್ಷ ಫಲಾನುಭವಿಗಳಿಗೆ ವಿತರಿಸಿವೆ. ಭಾರತ ಸರಕಾರವು 39,000 ಎಂ.ಟಿ. ದ್ವಿದಳ ಧಾನ್ಯಗಳನ್ನು 1.96 ಕೋಟಿ ವಲಸೆ ಕಾರ್ಮಿಕರಿಗೆ ವಿತರಿಸುವುದಕ್ಕಾಗಿ ಮಂಜೂರು ಮಾಡಿದೆ. 8 ಕೋಟಿ ವಲಸೆ ಕಾರ್ಮಿಕರು, ವಿವಿಧೆಡೆಗಳಲ್ಲಿ ಸಿಲುಕಿ ಹಾಕಿಕೊಂಡವರು ಮತ್ತು ಆವಶ್ಯಕತೆ ಇರುವ ಕುಟುಂಬಗಳು , ಅವರು ಎನ್.ಎಫ್.ಎಸ್.. ಅಥವಾ ರಾಜ್ಯ ಪಿ.ಡಿ.ಎಸ್. ಕಾರ್ಡ್ ಯೋಜನೆಗಳ ಫಲಾನುಭವಿಗಳಾಗಿರದಿದ್ದರೂ ಅವರಿಗೆ ಕುಟುಂಬವೊಂದಕ್ಕೆ 1 ಕಿಲೋ ಬೇಳೆ/ಕಾಳುಗಳನ್ನು ಮೇ ಮತ್ತು ಜೂನ್ ತಿಂಗಳಲ್ಲಿ ಉಚಿತವಾಗಿ ಒದಗಿಸಲಾಗುತ್ತದೆ. ಬೇಳೆ/ಕಾಳುಗಳ ಮಂಜೂರಾತಿಯನ್ನು ರಾಜ್ಯಗಳ ಆವಶ್ಯಕತೆಗಳಿಗನುಸಾರ ಮಂಜೂರು ಮಾಡಲಾಗುತ್ತದೆ.

ಸುಮಾರು 28,306 ಎಂ.ಟಿ. ಬೇಳೆ/ಕಾಳುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ. ಒಟ್ಟು 15,413 ಎಂ.ಟಿ. ಬೇಳೆ ಕಾಳುಗಳನ್ನು ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಎತ್ತುವಳಿ ಮಾಡಿವೆ. 631 ಎಂ.ಟಿ. ಬೇಳೆ ಕಾಳುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸಿವೆ. ಭಾರತ ಸರಕಾರವು ಆಹಾರ ಧಾನ್ಯಗಳ 100% ಹಣಕಾಸು ಹೊರೆಯನ್ನು ಅಂದರೆ ಸುಮಾರು 3,109 ಕೋ.ರೂ. ಹಾಗು ಬೇಳೆ ಕಾಳುಗಳಿಗೆ ಸಂಬಂಧಿಸಿ 280 ಕೋ.ರೂ. ಗಳ ಹೊರೆಯನ್ನು ಯೋಜನೆ ಅಡಿಯಲ್ಲಿ ಭರಿಸುತ್ತಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ:

ಆಹಾರ ಧಾನ್ಯಗಳು (ಅಕ್ಕಿ/ ಗೋಧಿ.)

ಪಿ.ಎಂ.ಜಿ.ಕೆ..ವೈ. ಅಡಿಯಲ್ಲಿ ಏಪ್ರಿಲ್ ತಿಂಗಳಿನಿಂದ ಜೂನ್ ವರೆಗೆ 3 ತಿಂಗಳಿಗೆ ಒಟ್ಟು 104.4 ಎಲ್.ಎಂ.ಟಿ. ಅಕ್ಕಿ ಮತ್ತು 15.6 ಎಲ್.ಎಂ.ಟಿ. ಗೋಧಿ ಬೇಕಾಗಿದ್ದು, ಇದರಲ್ಲಿ 91.40 ಎಲ್.ಎಂ.ಟಿ. ಅಕ್ಕಿ ಮತ್ತು 13.70 ಎಲ್.ಎಂ.ಟಿ. ಗೋಧಿಯನ್ನು ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಎತ್ತುವಳಿ ಮಾಡಿವೆ. ಒಟ್ಟು 105.10 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಲಾಗಿದೆ. ಏಪ್ರಿಲ್ ತಿಂಗಳಿಗೆ 36.98 ಎಲ್.ಎಂ.ಟಿ. (92.45 %) , ಮೇ ತಿಂಗಳಿಗೆ 34.93 ಎಲ್.ಎಂ.ಟಿ. (87.33 %) ಮತ್ತು ಜೂನ್ ತಿಂಗಳಿಗೆ 6.99 ಎಲ್.ಎಂ.ಟಿ. (17.49 ) ಯಷ್ಟನ್ನು ವಿತರಣೆ ಮಾಡಲಾಗಿದೆ. ಭಾರತ ಸರಕಾರವು ಶೇಖಡಾ 100 ರಷ್ಟು ಹಣಕಾಸು ಹೊರೆಯನ್ನು ಅಂದರೆ ಸುಮಾರು 46,000 ಕೋ.ರೂ.ಗಳನ್ನು ಯೋಜನೆ ಅಡಿಯಲ್ಲಿ ಭರಿಸುತ್ತದೆ. 6 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಾದ ಪಂಜಾಬ್, ಹರ್ಯಾಣಾ, ರಾಜಸ್ಥಾನ, ಚಂಡೀಗಢ, ದಿಲ್ಲಿ, ಮತ್ತು ಗುಜರಾತ್ ಗಳಿಗೆ ಗೋಧಿಯನ್ನು ಮಂಜೂರು ಮಾಡಲಾಗಿದ್ದರೆ, ಉಳಿದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಅಕ್ಕಿಯನ್ನು ಮಂಜೂರು ಮಾಡಲಾಗಿದೆ.

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳಿಗೆ ಸಂಬಂಧಿಸಿ ಮೂರು ತಿಂಗಳ ಒಟ್ಟು ಬೇಡಿಕೆ 5.87 ಎಲ್.ಎಂ.ಟಿ. ಭಾರತ ಸರಕಾರವು ಯೋಜನೆ ಅಡಿಯಲ್ಲಿ ಶೇಕಡಾ 100 ರಷ್ಟು ಹಣಕಾಸು ಹೊರೆ, ಸುಮಾರು 5000 ಕೋ.ರೂ.ಗಳನ್ನು ಭರಿಸುತ್ತಿದೆ. ಇದುವರೆಗೆ 4.71 ಎಲ್.ಎಂ.ಟಿ. ದ್ವಿದಳ ಧಾನ್ಯಗಳು ರಾಜ್ಯಗಳನ್ನು/ ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಿವೆ, 2.67 ಎಲ್.ಎಂ.ಟಿ. ದ್ವಿದಳ ಧಾನ್ಯಗಳನ್ನು ವಿತರಿಸಲಾಗಿದೆ.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (.ಎಮ್.ಎಸ್.ಎಸ್.)

.ಎಮ್. ಎಸ್.ಎಸ್. ಅಡಿಯಲ್ಲಿ ಅಕ್ಕಿಯ ದರವನ್ನು ಕಿಲೋ ಒಂದಕ್ಕೆ 22 ರೂಪಾಯಿ ಮತ್ತು ಗೋಧಿಯ ದರವನ್ನು ಕಿಲೋ 1 ಕ್ಕೆ 21 ರೂಪಾಯಿ ಎಂದು ನಿಗದಿ ಮಾಡಲಾಗಿದ್ದು, ಎಫ್.ಸಿ..ಯು ಲಾಕ್ ಡೌನ್ ಅವಧಿಯಲ್ಲಿ 5.49 ಎಲ್.ಎಂ.ಟಿ. ಗೋಧಿಯನ್ನು ಮತ್ತು 8.38 ಎಲ್.ಎಂ.ಟಿ. ಅಕ್ಕಿಯನ್ನು .ಎಂ.ಎಸ್.ಎಸ್. ಮೂಲಕ ಮಾರಾಟ ಮಾಡಿದೆ.

ಆಹಾರ ಧಾನ್ಯಗಳ ಖರೀದಿ:

6.06.2020 ವರೆಗೆ ಒಟ್ಟು 371.31 ಎಲ್.ಎಂ.ಟಿ. ಗೋಧಿ (ಆರ್.ಎಂ.ಎಸ್. 2020-21) ಮತ್ತು 720.85 ಎಲ್.ಎಂ.ಟಿ. ಅಕ್ಕಿಯನ್ನು (ಕೆ.ಎಂ.ಎಸ್. 2019-20) ಖರೀದಿಸಲಾಗಿದೆ.

ದಾಸ್ತಾನಿನಲ್ಲಿ ಲಭ್ಯ ಇರುವ ಒಟ್ಟು ಆಹಾರ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು:

ಭಾರತೀಯ ಆಹಾರ ನಿಗಮದ ವರದಿಯ ಪ್ರಕಾರ ದಿನಾಂಕ 06.06.2020 ರವರೆಗೆ ಎಫ್.ಸಿ..ಯು ಪ್ರಸ್ತುತ 269.79 ಎಲ್.ಎಂ.ಟಿ. ಅಕ್ಕಿಯನ್ನು ಮತ್ತು 537.46 ಎಲ್.ಎಂ.ಟಿ. ಗೋಧಿಯನ್ನು ಹೊಂದಿದೆ. ಆದುದರಿಂದ ಒಟ್ಟು 807.25 ಎಲ್.ಎಂ.ಟಿ. ಆಹಾರ ಧಾನ್ಯಗಳ ದಾಸ್ತಾನು ಲಭ್ಯವಿದೆ. (ಇದರಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಖರೀದಿ ಪ್ರಕ್ರಿಯೆಯಲ್ಲಿರುವ ಗೋಧಿ ಮತ್ತು ಭತ್ತದ ಪ್ರಮಾಣ ಸೇರಿಲ್ಲ, ಅದು ಇನ್ನೂ ದಾಸ್ತಾನುಗಾರಗಳಿಗೆ ತಲುಪಿಲ್ಲ.) ಸುಮಾರು 55 ಎಲ್.ಎಂ.ಟಿ. ಆಹಾರ ಧಾನ್ಯಗಳು ತಿಂಗಳೊಂದಕ್ಕೆ ಎನ್.ಎಫ್.ಎಸ್.. ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳಡಿ ಬೇಕಾಗುತ್ತವೆ.

S.No

ಕ್ರಮ ಸಂಖ್ಯೆ

State

ರಾಜ್ಯ

% of ePoS

.ಪಿ..ಎಸ್. ಗಳ %

Aadhar Seeding of Ration Cards (%)

ಆಧಾರ್ ಜೋಡಣೆ ಮಾಡಿದ ಪಡಿತರ ಕಾರ್ಡುಗಳು (%)

1

ಲಡಾಖ್

100%

91%

2

ತಮಿಳು ನಾಡು

100%

100%

3

ಲಕ್ಷದ್ವೀಪ

100%

100%

4

ಜಮು ಮತ್ತು ಕಾಶ್ಮೀರ

99%

100%

5

ಛತ್ತೀಸ್ ಗಢ

97%

98%

6

ಅಂಡಮಾನ್ ಮತ್ತು ನಿಕೋಬಾರ್

96%

98%

7

ಪಶ್ಚಿಮ ಬಂಗಾಳ

96%

80%

8

ಅರುಣಾಚಲ್ ಪ್ರದೇಶ.

1%

57%

9

ದಿಲ್ಲಿ

0%

100%

10

ಮೇಘಾಲಯ.

0%

1%

11

ಅಸ್ಸಾಂ

0%

0%

12

ಪುದುಚೇರಿ

0%

100%(ಡಿ.ಬಿ.ಟಿ.) )

13

ಚಂಡೀಗಢ

0%

99%(ಡಿ.ಬಿ.ಟಿ.)

 

ಇದಲ್ಲದೆ , ಒಟ್ಟು 13.01 ಎಲ್.ಎಂ.ಟಿ. ಬೇಳೆ ಕಾಳುಗಳು (ತೊಗರಿ-6.07 ಎಲ್.ಎಂ.ಟಿ., ಹೆಸರು-1.62 ಎಲ್.ಎಂ.ಟಿ. , ಉದ್ದು-2.42 ಎಲ್.ಎಂ.ಟಿ., ಕಡಲೆ -2.42 ಎಲ್.ಎಂ.ಟಿ. ಮತ್ತು ಮಸೂರ್-0.47 ಎಲ್.ಎಂ.ಟಿ. ) 2020 ಜೂನ್ 4 ರಂದು ಕಾಪು ದಾಸ್ತಾನಿನಲ್ಲಿ ಲಭ್ಯ ಇವೆ.

ಕೊನೆಯಿಂದ ಕೊನೆಯವರೆಗೂ ಕಂಪ್ಯೂಟರೀಕರಣ

.ಪಿ..ಎಸ್. ಗಳ ಮೂಲಕ 90 % ಎಫ್.ಪಿ.ಎಸ್. ಅಟೋಮೇಶನ್ ಮಾಡಲಾಗಿದೆ, 20 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು 100 % ಆಗಿದೆ.

90 % ರೇಶನ್ ಕಾರ್ಡ್ ಗಳಿಗೆ ಆಧಾರ್ ಜೋಡಣೆ ಸಾಧಿಸಲಾಗಿದೆ, 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು 100 % ಆಗಿದೆ.

ಒಂದು ರಾಷ್ಟ್ರ, ಒಂದು ರೇಶನ್ ಕಾರ್ಡ್ :

2020 ಜೂನ್ 1 ವೇಳೆಗೆ 20 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ರಾಷ್ಟ್ರ ಒಂದು ರೇಶನ್ ಕಾರ್ಡ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೆಂದರೆ ಆಂಧ್ರ ಪ್ರದೇಶ, ಬಿಹಾರ, ದಾಮನ್ ಮತ್ತು ದಿಯು, (ದಾದ್ರಾ ಮತ್ತು ನಗರಹವೇಲಿ)ಗೋವಾ, ಗುಜರಾತ್, ಹರ್ಯಾಣಾ, ಹಿಮಾಚಲ ಪ್ರದೇಶ, ಜಾರ್ಖಂಡ, ಕೇರಳ, ಕರ್ನಾಟಕ ,ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ಉತ್ತರ ಪ್ರದೇಶ, ತೆಲಂಗಾಣ, ಮತ್ತು ತ್ರಿಪುರಾ .2020 ಆಗಸ್ಟ್ ನಲ್ಲಿ ಮತ್ತೆ ಮೂರು ರಾಜ್ಯಗಳು ಉತ್ತರಾಖಂಡ, ನಾಗಾಲ್ಯಾಂಡ್, ಮತ್ತು ಮಣಿಪುರಗಳು ಒಂದು ರಾಷ್ಟ್ರ ಒಂದು ರೇಶನ್ ಕಾರ್ಡ್ ಯೋಜನೆಗೆ ಸೇರ್ಪಡೆಯಾಗಲಿವೆ. 2021 ಮಾರ್ಚ್ 31 ರೊಳಗೆ ಉಳಿದ 13 ರಾಜ್ಯಗಳು ಒಂದು ರಾಷ್ಟ್ರ, ಒಂದು ರೇಶನ್ ಕಾರ್ಡ್ ಯೋಜನೆಗೆ ಒಳಪಡಲಿವೆ. ಮತ್ತು ಯೋಜನೆಯು ರಾಷ್ಟ್ರದಾದ್ಯಂತ ಕಾರ್ಯಾಚರಣೆಗೆ ಬರಲಿದೆ. ಉಳಿದ 13 ರಾಜ್ಯಗಳ ವಿವರಗಳು

.ಸಿ. ಕಾಯ್ದೆ:

ಗ್ರಾಹಕ ವ್ಯವಹಾರಗಳ ಇಲಾಖೆಯು ಮುಖಗವಸುಗಳು ಮತ್ತು ಸ್ಯಾನಿಟೈಸರುಗಳನ್ನು ಕೋವಿಡ್ -19 ಕಾರಣದಿಂದಾಗಿ ಹೆಚ್ಚಿದ ಬೇಡಿಕೆಗಳ ಹಿನ್ನೆಲೆಯಲ್ಲಿ ಅವಶ್ಯಕ ಸಾಮಗ್ರಿಗಳ ಕಾಯ್ದೆಯಡಿ ಅಧಿಸೂಚಿಸಿದ್ದು, ಮುಖಗವಸುಗಳ, ಸ್ಯಾನಿಟೈಸರುಗಳ ಮತ್ತು ಅದರ ತಯಾರಿಯಲ್ಲಿ ಬಳಕೆಯಾಗುವ, ಅದಕ್ಕೆ ಸಂಬಂಧಿಸಿದ ವಸ್ತುಗಳ ದರದ ಮೇಲೆ ಮಿತಿಯನ್ನು ಜಾರಿ ಮಾಡಲಾಗಿದೆ.

ಲಾಕ್ ಡೌನ್ ನಿಂದಾಗಿ ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಯಾವುದೇ ಅಡೆ ತಡೆಗಳು ಇರದಂತೆ ಖಾತ್ರಿಪಡಿಸಬೇಕು ಎಂದು ರಾಜ್ಯಗಳಿಗೆ ಮಾರ್ಗದರ್ಶಿಗಳನ್ನು ನೀಡಲಾಗಿದೆ ಮತ್ತು ಅವಶ್ಯಕ ವಸ್ತುಗಳ ದರವನ್ನು ನಿಯಂತ್ರಣ ಮಾಡುವಂತೆಯೂ ಸೂಚಿಸಲಾಗಿದೆ. .ಸಿ. ಕಾಯ್ದೆಯಡಿ ನಿರ್ಧಾರಗಳನ್ನು ಕೈಗೊಳ್ಳುವ ಎಲ್ಲಾ ಅಧಿಕಾರವನ್ನೂ ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ನೀಡಿದೆ.

***



(Release ID: 1630404) Visitor Counter : 205