ಹಣಕಾಸು ಸಚಿವಾಲಯ

ಕೋವಿಡ್ ತುರ್ತು ಸಾಲ ಸೌಲಭ್ಯ ಕೇವಲ ಎಮ್.ಎಸ್.ಎಮ್.ಇ.ಗಳಿಗೆ ಮಾತ್ರವಲ್ಲದೆ, ಇತರ ಕಂಪನಿಗಳಿಗೂ ಲಭ್ಯ: ಕೇಂದ್ರ ಹಣಕಾಸು ಸಚಿವರು

Posted On: 08 JUN 2020 6:29PM by PIB Bengaluru

ಕೋವಿಡ್ ತುರ್ತು ಸಾಲ ಸೌಲಭ್ಯ ಕೇವಲ ಎಮ್.ಎಸ್.ಎಮ್..ಗಳಿಗೆ ಮಾತ್ರವಲ್ಲದೆ,
ಇತರ ಕಂಪನಿಗಳಿಗೂ ಲಭ್ಯ: ಕೇಂದ್ರ ಹಣಕಾಸು ಸಚಿವರು

 

ಕೋವಿಡ್ ತುರ್ತು ಸಾಲ ಸೌಲಭ್ಯವು ಎಂ.ಎಸ್.ಎಂ..ಗಳನ್ನು ಮಾತ್ರವಲ್ಲದೆ ಇತರ ಎಲ್ಲಾ ಕಂಪನಿಗಳನ್ನು ಒಳಗೊಳ್ಳುತ್ತದೆಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎಫ್..ಸಿ.ಸಿ.. ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಶ್ರೀಮತಿ ಸೀತಾರಾಮನ್ ಅವರು, ಭಾರತೀಯ ವ್ಯವಹಾರವನ್ನು ಬೆಂಬಲಿಸುವ ಮತ್ತು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸರ್ಕಾರದ ಎಲ್ಲಾ ಬೆಂಬಲವನ್ನು ಉದ್ಯಮ ಕ್ಷೇತ್ರಕ್ಕೆ ನೀಡುವುದಾಗಿ ಭರವಸೆ ಕೊಟ್ಟರು ಮತ್ತು "ನಿಮ್ಮ ಸದಸ್ಯರಲ್ಲಿ ಯಾರಿಗಾದರೂ, ಏನಾದರೂ ಸಮಸ್ಯೆಯಿದ್ದರೆ ಸಕಾರಾತ್ಮಕ ಬೆಂಬಲ ಹಾಗೂ ಹಸ್ತಕ್ಷೇಪ ಮಾಡಲು ನಾವು ಬದ್ಧರಾಗಿದ್ದೇವೆ" ಎಂದು ಸಚಿವರು ಹೇಳಿದರು.

ಹಣಕಾಸು ದ್ರವ್ಯತೆಯ ಪ್ರಶ್ನೆಗೆ ಉತ್ತರಿಸುತ್ತಾ ಕೇಂದ್ರ ಹಣಕಾಸು ಸಚಿವರು, “ನಾವು ಹಣದ ದ್ರವ್ಯತೆಯ ಸಮಸ್ಯೆಯನ್ನು ಸಾಕಷ್ಟು ಸ್ಪಷ್ಟವಾಗಿ ತಿಳಿಸಿದ್ದೇವೆ. ದ್ರವ್ಯತೆಯ ಲಭ್ಯತೆ ಖಂಡಿತವಾಗಿಯೂ ಇದೆ. ಆದರೂ ಆನಿಟ್ಟಿನಲ್ಲಿ ಇನ್ನೂ ಸಮಸ್ಯೆಗಳಿದ್ದರೆ ನಾವು ಅದನ್ನು ಪರಿಶೀಲಿಸುತ್ತೇವೆ.ಎಂದು ಶ್ರೀಮತಿ ಸೀತಾರಾಮನ್ ಅವರು ಹೇಳಿದರು. ಪ್ರತಿ ಸರ್ಕಾರಿ ಇಲಾಖೆಗೆ ಬಾಕಿ ಹಣವನ್ನು ಬಿಡುಗಡೆ ಮಾಡಿ ಕೂಡಲೇ ಪಾವತಿ ಬಾಕಿಗಳನ್ನು ತೆರವುಗೊಳಿಸುವಂತೆ ತಿಳಿಸಲಾಗಿದೆ ಮತ್ತು ಯಾವುದೇ ಇಲಾಖೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಸರ್ಕಾರವು ಅದನ್ನು ಪರಿಶೀಲಿಸುತ್ತದೆಎಂದು ಸಚಿವರು ಹೇಳಿದರು.

ಹೊಸ ಹೂಡಿಕೆಗಳ ಮೇಲೆ 15% ಕಾರ್ಪೊರೇಟ್ ತೆರಿಗೆ ದರವನ್ನು ಪಡೆಯಲು ಸಧ್ಯ ಇರುವ ಗಡುವನ್ನು ವಿಸ್ತರಿಸಲು ಸರ್ಕಾರ ನಿರ್ಧಸಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.ನಾನು ಏನು ಮಾಡಬಹುದೆಂದು ನೋಡುತ್ತೇನೆ. ಹೊಸ ಹೂಡಿಕೆಗಳ ಮೇಲಿನ 15% ಕಾರ್ಪೊರೇಟ್ ತೆರಿಗೆ ದರದಿಂದ ಉದ್ಯಮವು ಲಾಭ ಪಡೆಯಬೇಕೆಂದು ನಾವು ಬಯಸುತ್ತೇವೆ, ಮತ್ತು ಮಾರ್ಚ್ 31, 2023 ಗಡುವಿನಲ್ಲಿ ವಿಸ್ತರಣೆಯನ್ನು ಪರಿಗಣಿಸಲು ನೀವು ನೀಡುವ ಅಭಿಪ್ರಾಯಗಳನ್ನು ನಾನು ಸ್ವೀಕರಿಸುತ್ತೇನೆಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ಸೀತಾರಾಮನ್ ಅವರು ಹೇಳಿದರು.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಅಥವಾ ಸೆಬಿ ಗಡುವನ್ನು ಸಂಬಂಧಿಸಿದ ತಮ್ಮ ಶಿಫಾರಸುಗಳನ್ನು ಸಲ್ಲಿಸುವಂತೆ ಕೇಂದ್ರ ಹಣಕಾಸು ಸಚಿವರು ಉದ್ಯಮ ಕ್ಷೇತ್ರಕ್ಕೆ ಸೂಚಿಸಿದರು. ಮೂಲಕ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ಸೀತಾರಾಮನ್ ಅವರು ಹೇಳಿದರು.

ಗಂಭೀರವಾಗಿ ನಷ್ಟದಿಂದ ಪೀಡಿತ ಉದ್ಯಮಕ್ಷೇತ್ರಗಳಲ್ಲಿ ಜಿ.ಎಸ್.ಟಿ. ದರವನ್ನು ಕಡಿಮೆ ಮಾಡುವ ಅಗತ್ಯಕ್ಕೆ ಸಂಬಂಧಿಸಿದಂತೆ, “ಜಿ.ಎಸ್.ಟಿ. ದರ ಕಡಿತವು ಪರಿಷತ್(ಕೌನ್ಸಿಲ್) ಗೆ ಹೋಗುತ್ತದೆ. ಆದರೆ ಪರಿಷತ್(ಕೌನ್ಸಿಲ್) ಕೂಡ ಆದಾಯವನ್ನು ಹುಡುಕುತ್ತಿದೆ. ಯಾವುದೇ ವಲಯದ ಜಿ.ಎಸ್.ಟಿ. ದರವನ್ನು ಕಡಿಮೆ ಮಾಡುವ ನಿರ್ಧಾರವನ್ನು ಪರಿಷತ್(ಕೌನ್ಸಿಲ್) ತೆಗೆದುಕೊಳ್ಳಬೇಕಾಗಿದೆ " ಕೇಂದ್ರ ಹಣಕಾಸು ಸಚಿವೆ ಅವರು ಹೇಳಿದರು,

"ಕಾರ್ಪೊರೇಟ್ಗಳಿಗೆ ಆದಾಯ ತೆರಿಗೆ ಮರುಪಾವತಿ ಕೂಡ ಪ್ರಾರಂಭವಾಗಿದೆ, ಮತ್ತು ಕಳೆದ ಕೆಲವು ವಾರಗಳಲ್ಲಿ ರೂ. 35,000 ಕೋಟಿಗಳ ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ " ಎಂದು ಕೇಂದ್ರ ಹಣಕಾಸು ಮತ್ತು ಕಂದಾಯ ಕಾರ್ಯದರ್ಶಿ ಶ್ರೀ ಅಜಯ್ ಭೂಷಣ್ ಪಾಂಡೆ ಅವರು ಸಂದರ್ಭದಲ್ಲಿ ಎಫ್..ಸಿ.ಸಿ. ಸದಸ್ಯರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಖರ್ಚುವೆಚ್ಚಗಳ ಕಾರ್ಯದರ್ಶಿ ಶ್ರೀ ಟಿ ವಿ ಸೋಮನಾಥನ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್, ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಶ್ರೀ ರಾಜೇಶ್ ವರ್ಮಾ, ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಶ್ರೀ ದೇಬಶಿಶ್ ಪಾಂಡ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ಡಾ.ಕೆ.ವಿ.ಸುಬ್ರಮಣಿಯನ್ ಅವರು ಭಾಗವಹಿಸಿದ್ದರು.

ಕೋವಿಡ್ -19 ಪರಿಣಾಮವನ್ನು ಎದುರಿಸಲು ಘೋಷಿಸಿದ ಕ್ರಮಗಳ ಅನುಷ್ಠಾನಕ್ಕೆ ಬೆಂಬಲ ನೀಡಲು ಚೇಂಬರ್ ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆಎಂದು ಎಫ್..ಸಿ.ಸಿ. ಅಧ್ಯಕ್ಷ ಡಾ. ಸಂಗಿತಾ ರೆಡ್ಡಿ ಅವರು ಕೇಂದ್ರ ಹಣಕಾಸು ಸಚಿವರಿಗೆ ಮಾಹಿತಿ ನೀಡಿದರು. " ಆತ್ಮನಿರ್ಭಾರ ಭಾರತ್ ಸಾಮಾನ್ಯ ಗುರಿಗೆ ಎಫ್..ಸಿ.ಸಿ. ಬದ್ಧವಾಗಿದೆ ಮತ್ತು ಯೋಜನೆಯ ಅನುಷ್ಠಾನಗೊಳಿಸುವಲ್ಲಿ ಸರ್ಕಾರದೊಂದಿಗೆ ಸೇರಿಕೊಂಡು ಹೆಚ್ಚಿನ ಕೆಲಸ ಮಾಡಲಿದೆ" ಎಂದು ಡಾ. ಸಂಗಿತಾ ರೆಡ್ಡಿ ಅವರು ಹೇಳಿದರು.

***



(Release ID: 1630401) Visitor Counter : 269