ರಾಷ್ಟ್ರಪತಿಗಳ ಕಾರ್ಯಾಲಯ

ಜಾರ್ಜಿಯಾದ ಅಧ್ಯಕ್ಷರ ದೂರವಾಣಿ ಕರೆ ಸ್ವೀಕರಿಸಿದ ಭಾರತದ ರಾಷ್ಟ್ರಪತಿ

Posted On: 03 JUN 2020 7:38PM by PIB Bengaluru

ಜಾರ್ಜಿಯಾದ ಅಧ್ಯಕ್ಷರ ದೂರವಾಣಿ ಕರೆ ಸ್ವೀಕರಿಸಿದ ಭಾರತದ ರಾಷ್ಟ್ರಪತಿ

 

ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರಿಂದು (2020 ಜೂನ್ 3) ಜಾರ್ಜಿಯಾದ ಅಧ್ಯಕ್ಷ ಘನತೆವೆತ್ತ ಸಲೋಮೆ ಜೌರಾಬಿಚ್ವಿಲಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಇಬ್ಬರೂ ನಾಯಕರು ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ಚರ್ಚಿಸಿದರು. ಜಾರ್ಜಿಯಾದೊಂದಿಗೆ ಭಾರತ ಮೌಲ್ಯಯುತ ಮತ್ತು ಆಪ್ತ ಸ್ನೇಹ ಸಂಬಂಧ ಹೊಂದಿದೆ ಎಂದು ರಾಷ್ಟ್ರಪತಿ ತಿಳಿಸಿದರು. ಎರಡೂ ರಾಷ್ಟ್ರಗಳು ತಮ್ಮ ವಾಣಿಜ್ಯ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಬಾಂಧವ್ಯಕ್ಕೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಭಾರತವು ಜಾರ್ಜಿಯಾದೊಂದಿಗೆ ತರಬೇತಿ ಮತ್ತು ಸಾಮರ್ಥ್ಯವರ್ಧನೆಯ ಕ್ಷೇತ್ರದಲ್ಲಿನ ಸಹಕಾರ ಮುಂದುವರಿಸಲು ಹರ್ಷಿಸುತ್ತದೆ.

ಕೋವಿಡ್ -19 ಸಾಂಕ್ರಾಮಿಕದಿಂದ ಪ್ರಪಂಚವು ಎದುರಿಸುತ್ತಿರುವ ಸವಾಲುಗಳು ಮತ್ತು ಪ್ರಪಂಚದಾದ್ಯಂತದ ಜೀವನಕ್ಕೆ ಅಡ್ಡಿಯುಂಟಾಗಿರುವುದನ್ನು ಉಲ್ಲೇಖಿಸಿದ ರಾಷ್ಟ್ರಪತಿಯವರು, ಕೋವಿಡ್ -19 ಹರಡುವಿಕೆಯನ್ನು ತಡೆಯುವಲ್ಲಿ ಜಾರ್ಜಿಯಾದ ರಾಷ್ಟ್ರೀಯ ಪ್ರಯತ್ನಗಳು ಗಮನಾರ್ಹವಾಗಿವೆ ಎಂಬುದನ್ನು ಗಮನಿಸಿದರು. ಕೋವಿಡ್ 19 ನಿಗ್ರಹಿಸಲು ಭಾರತ ಗಂಭೀರ ಪ್ರಯತ್ನಗಳನ್ನು ಮಾಡಿದೆ ಮತ್ತು ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನೂ ಕಂಡಿದ್ದೇವೆ ಎಂದು ಜಾರ್ಜಿಯಾ ಅಧ್ಯಕ್ಷರಿಗೆ ರಾಷ್ಟ್ರಪತಿ ತಿಳಿಸಿದರು. ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಅಂತಾರಾಷ್ಟ್ರೀಯ ಪ್ರಯತ್ನಗಳನ್ನು ಸಜ್ಜುಗೊಳಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ ಮತ್ತು 150 ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಸರಬರಾಜು ಬೆಂಬಲವನ್ನು ವಿಸ್ತರಿಸಿದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಜಾಗತಿಕ ಸಮುದಾಯ ಒಟ್ಟಾಗಿ ಕೆಲಸ ಮಾಡಬೇಕು ಎಂಬುದನ್ನು ಉಭಯ ನಾಯಕರು ಗಮನಕ್ಕೆ ತೆಗೆದುಕೊಂಡರು.

ಜಾರ್ಜಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಅದರಲ್ಲೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಇರುವುದನ್ನು ಉಲ್ಲೇಖಿಸಿದ ರಾಷ್ಟ್ರಪತಿಯವರು ಅವರ ತೆರವು ಕಾರ್ಯಾಚರಣೆಗೆ ಮತ್ತು ಜಾರ್ಜಿಯಾದಲ್ಲಿನ ಭಾರತೀಯ ಸಮುದಾಯದ ಕಲ್ಯಾಣಕ್ಕೆ ನೀಡಿದ ಸಹಕಾರಕ್ಕೆ ಜಾರ್ಜಿಯಾದ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

***



(Release ID: 1629545) Visitor Counter : 218