ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ನಿರ್ವಹಣೆಯ ವಾಸ್ತವ ಸ್ಥಿತಿ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದ ಡಾ. ಹರ್ಷ್ ವರ್ಧನ್

Posted On: 04 JUN 2020 4:47PM by PIB Bengaluru

ಕೋವಿಡ್-19 ನಿರ್ವಹಣೆಯ ವಾಸ್ತವ ಸ್ಥಿತಿ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದ ಡಾ. ಹರ್ಷ್ ವರ್ಧನ್

"ತೀವ್ರ ಕಣ್ಗಾವಲು, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಕಠಿಣ ನಿಯಂತ್ರಣ ಚಟುವಟಿಕೆಗಳೊಂದಿಗೆ ಪರೀಕ್ಷೆಗಳನ್ನು ದೆಹಲಿಯಲ್ಲಿ ಹೆಚ್ಚಿಸಬೇಕಾಗಿದೆ"

 

"ದೆಹಲಿಯಲ್ಲಿ ಕೋವಿಡ್ 19 ಪ್ರಕರಣಗಳು ಮತ್ತು ಸಾವುನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಇದು ಅತಿ ತೀವ್ರವಾದ ಕಣ್ಗಾವಲು, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಕಟ್ಟುನಿಟ್ಟಾದ ನಿಯಂತ್ರಣ ಮತ್ತು ಪರಿಧಿ ನಿಯಂತ್ರಣ ಚಟುವಟಿಕೆಗಳೊಂದಿಗೆ ಪರೀಕ್ಷೆಯನ್ನು ಹೆಚ್ಚಿಸುವ ಅಗತ್ಯವಿದೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ತಿಳಿಸಿದ್ದಾರೆ. ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಸನ್ನದ್ಧತೆಯನ್ನು ಪರಿಶೀಲಿಸಲು ವಿಡಿಯೋ ಕಾನ್ಫರೆನ್ಸಿಂಗ್ (ವಿ.ಸಿ) ಮೂಲಕ ಉನ್ನತ ಮಟ್ಟದ ಸಭೆಯು ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಎಂ..ಎಸ್ (ಎಚ್‌.ಎಫ್‌.ಡಬ್ಲ್ಯು) ಶ್ರೀ ಅಶ್ವಿನಿ ಕುಮಾರ್ ಚೌಬೆ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಅನಿಲ್ ಬೈಜಾಲ್ ಮತ್ತು ದೆಹಲಿ ಸರ್ಕಾರದ ಆರೋಗ್ಯ ಸಚಿವ ಶ್ರೀ ಸತ್ಯೇಂದ್ರ ಜೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೆಹಲಿ ಕೇಂದ್ರಾಡಳಿತ ಪ್ರದೇಶದ ಎಲ್ಲಾ ಜಿಲ್ಲೆಗಳು ಈಗ ಕೋವಿಡ್-19 ನಿಂದ ಪ್ರಭಾವಿತವಾಗಿರುವುದರಿಂದ, "ಅನೇಕ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳು, ರೋಗದ ಹೆಚ್ಚಿನ ಸಕಾರಾತ್ಮಕ ದರಗಳು ಮತ್ತು ಕಡಿಮೆ ಪರೀಕ್ಷಾ ಮಟ್ಟಗಳು ಆತಂಕಕಾರಿ" ಎಂದು ಡಾ. ಹರ್ಷ್ ವರ್ಧನ್ ಹೇಳಿದರು. ದೆಹಲಿಯಲ್ಲಿ ದಶಲಕ್ಷ ಜನಸಂಖ್ಯೆಗೆ ಸರಾಸರಿ ಪರೀಕ್ಷೆಯ ಅನುಪಾತ 2018 ಆಗಿದ್ದರೆ, ಈಶಾನ್ಯ (517 ಪರೀಕ್ಷೆಗಳು / ದಶಲಕ್ಷ ಜನಸಂಖ್ಯೆ) ಮತ್ತು ಆಗ್ನೇಯ (506 ಪರೀಕ್ಷೆಗಳು / ದಶಲಕ್ಷ ಜನಸಂಖ್ಯೆ) ನಂತಹ ಕೆಲವು ಜಿಲ್ಲೆಗಳು ತೀರಾ ಕೆಳಗಿವೆ. ಕಳೆದ ವಾರ ಕೇಂದ್ರಾಡಳಿತ ಪ್ರದೇಶದ ಸಕಾರಾತ್ಮಕ ದರವು 25.7% ಆಗಿದ್ದರೆ, ಹಲವಾರು ಜಿಲ್ಲೆಗಳು 38% ಕ್ಕಿಂತ ಹೆಚ್ಚಿನ ಅಂಕಿಅಂಶಗಳನ್ನು ವರದಿ ಮಾಡಿವೆ. ಆರೋಗ್ಯ ಕಾರ್ಯಕರ್ತರಲ್ಲಿ ಹೆಚ್ಚಿನ ಪ್ರಮಾಣದ ಸೋಂಕಿನ ಪ್ರಮಾಣವೂ ಗಂಭೀರ ವಿಷಯವಾಗಿದೆ . ಇದು ಆರೋಗ್ಯ ಸಂರಕ್ಷಣಾ ವ್ಯವಸ್ಥೆಗಳಲ್ಲಿ ಕಳಪೆ ಸೋಂಕು ತಡೆಗಟ್ಟುವಿಕೆ ನಿಯಂತ್ರಣ ಅಭ್ಯಾಸಗಳನ್ನು ಸೂಚಿಸುತ್ತದೆ ಮತ್ತು ಆದ್ಯತೆಯ ಮೇರೆಗೆ ಹಾಜರಾಗಬೇಕು ಎಂದು ಸಚಿವರು ಸಂದರ್ಭದಲ್ಲಿ ತಿಳಿಸಿದರು.

ಪರಿಣಾಮಕಾರಿಯಾದ ರೀತಿಯಲ್ಲಿ ಪ್ರಕರಣ ನಿರ್ವಹಣೆ ಮತ್ತು ಮಾರಣಾಂತಿಕ ದರವನ್ನು ಕಡಿಮೆ ಮಾಡಲು ಕೋವಿಡ್ -19 ಪ್ರಕರಣಗಳ ಉತ್ತಮ ಕ್ಲಿನಿಕಲ್ ನಿರ್ವಹಣೆಯೊಂದಿಗೆ, ಆರೋಗ್ಯ ಮೂಲಸೌಕರ್ಯ ವರ್ಧನೆಗಳೊಂದಿಗೆ, ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಅಗತ್ಯತೆ ಮತ್ತು ಮಹತ್ವವನ್ನು ಸಚಿವರು ವಿವರಿಸಿ ಹೇಳಿದ್ದಾರೆ. "ಪ್ರಕರಣಗಳ ಪ್ರವೇಶದಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸುವುದರ ಜೊತೆಗೆ ಪ್ರಸ್ತುತ ಪ್ರಕರಣಗಳ ಶೀಘ್ರ ಏರಿಕೆಯ ದೃಷ್ಟಿಯಿಂದ ಹಾಸಿಗೆಯ ಲಭ್ಯತೆಯನ್ನು ವೇಗವಾಗಿ ಹೆಚ್ಚಿಸಬೇಕು . ಗಮನಾರ್ಹವಾದ ಪ್ರಮಾಣವು ಮನೆಯ ಪ್ರತ್ಯೇಕತೆಯಾಗಿರುವುದರಿಂದ, ಮರಣವನ್ನು ತಪ್ಪಿಸಲು ರೋಗಿಗಳನ್ನು ಪರೀಕ್ಷೆ, ಪ್ರಯೋಗ ಮತ್ತು ಅಗತ್ಯ ಮಟ್ಟದ ಡೆಡಿಕೇಟೆಡ್ ಕೋವಿಡ್-19 ಚಿಕಿತ್ಸಾ ಸೌಲಭ್ಯಕ್ಕೆ ಸ್ಥಳಾಂತರಿಸುವ ವಿಷಯದಲ್ಲಿ ಸಮಯೋಚಿತ ಪ್ರತಿಕ್ರಿಯೆ ನೀಡುವ ಎಲ್ಲಾ ಪ್ರಯತ್ನಗಳು ಮುಖ್ಯವಾಗಿದೆ" ಎಂದು ಸಚಿವರು ಹೇಳಿದರು. ವಯಸ್ಸಾದ ಮತ್ತು ಬಡದುರ್ಬಲ ಕುಟುಂಬಗಳ ಸಹ-ಅಸ್ವಸ್ಥತೆಗಳನ್ನು ಗುರುತಿಸಿ ರಕ್ಷಿಸುವ ಅವಶ್ಯಕತೆಯಿದೆ. ಮನೆ ಪ್ರತ್ಯೇಕತೆಯನ್ನು ಪರಿಣಾಮಕಾರಿ ಎಂದು ಪರಿಗಣಿಸದ ದೊಡ್ಡ ಗುಂಪುಗಳಲ್ಲಿ ಅತಿದುರ್ಬಲ ಜನಸಂಖ್ಯೆಗೆ ಸಾಂಸ್ಥಿಕ ಸಂಪರ್ಕತಡೆಯನ್ನು ಒದಗಿಸುವ ಕಾರ್ಯಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಚಿವರು ಹೇಳಿದರು.

ಕೋವಿಡ್ ಪ್ರಕರಣದ ಮಾರಣಾಂತಿಕ ದರವನ್ನು ಕಡಿಮೆ ಮಾಡಲು ಮತ್ತು ದೆಹಲಿಯಲ್ಲಿ ಸುಧಾರಿತ ನಿಯಂತ್ರಣ ಕ್ರಮಗಳನ್ನು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಶಿಷ್ಠಾಚಾರದ ಸೂಚನೆಗಳು ಮತ್ತು ಮಾರ್ಗಸೂಚಿಗಳಿಗೆ ಅನುಸಾರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಸಂದರ್ಭದಲ್ಲಿ ಸೂಚಿಸಲಾಯಿತು. .ಎಲ್. / ಎಸ್..ಆರ್. ಪ್ರಕರಣಗಳ ವರ್ಧಿತ ಕಣ್ಗಾವಲು ಮೂಲಕ ಪ್ರಕರಣಗಳ ಆರಂಭಿಕ ಪತ್ತೆಹಚ್ಚುವ ಅಗತ್ಯವಿದೆ ಎಂದು ಈಸಂದರ್ಭದಲ್ಲಿ ಸಲಹೆ ನೀಡಲಾಯಿತು. ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಕಣ್ಗಾವಲುಗಳ ಮೇಲೆ ಕೇಂದ್ರೀಕರಿಸುವ ಜೊತೆಗೆ ದೆಹಲಿಯ ಎಲ್ಲಾ ಮೂಲೆಗಳಲ್ಲಿ ಜ್ವರ ಪರೀಕ್ಷೆಯ ಚಿಕಿತ್ಸಾಲಯಗಳು ಮತ್ತು ಎಲ್ಲಾ ಆರೋಗ್ಯ ಸಂರಕ್ಷಣಾ ವ್ಯವಸ್ಥೆಗಳಲ್ಲಿ ಜ್ವರ ಪರೀಕ್ಷೆಯ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ. ಸಂಪರ್ಕ ಪತ್ತೆಹಚ್ಚುವಿಕೆಗಾಗಿ ಆರೋಗ್ಯಾ ಸೇತು ಮೊಬೈಲ್ ಅಪ್ಲಿಕೇಶನ್ ಮಾಹಿತಿ ಬಳಕೆಯನ್ನು ಉತ್ತೇಜಿಸಬೇಕಾಗಿದೆ. ರೋಗಿಗಳ ಮತ್ತು ಅವರ ಕುಟುಂಬ ಸದಸ್ಯರ ಸಮಸ್ಯೆಗಳನ್ನು ತಪ್ಪಿಸಲು ಉದ್ದೇಶಿತ ಮಂದಿಗೆ ಅಪಾಯ ಕುರಿತ ಉತ್ತಮ ಸಂವಹನ ಮಾಡಬೇಕಾಗಿದೆ ಮತ್ತು ..ಸಿ ಚಟುವಟಿಕೆಗಳನ್ನು ಹೆಚ್ಚಿಸಬೇಕಾಗಿದೆ. ಕೋವಿಡ್ ಲ್ಲದ ಮಂದಿಗೆ / ಕುಟುಂಬಗಳಿಗೆ ಅಗತ್ಯ ಇತರ ಆರೋಗ್ಯ ಸೇವೆಗಳನ್ನು ಸಹ ಕೂಡಲೇ ಪುನರಾರಂಭಿಸಬೇಕಾಗಿದೆ.

ಆರೋಗ್ಯ ಮೂಲಸೌಕರ್ಯಗಳ ಬಲವರ್ಧನೆ ಮತ್ತು ಪರೀಕ್ಷಾ ಸೌಲಭ್ಯಗಳ ವರ್ಧನೆಗಾಗಿ ದೆಹಲಿ ಸರ್ಕಾರಕ್ಕೆ ಎಲ್ಲ ಬೆಂಬಲವನ್ನು ಕೇಂದ್ರ ಸರ್ಕಾರ ಕಡೆಯಿಂದ ನೀಡಲಾಗುತ್ತಿದೆಎಂದು ಸಚಿವ ಡಾ.ಹರ್ಷ್ ವರ್ಧನ್ ಅವರು ಸಂದರ್ಭದಲ್ಲಿ ಹೇಳಿದ್ದಾರೆ. ದೆಹಲಿಯ ಜಿಲ್ಲಾಧಿಕಾರಿಗಳು, ಆಯುಕ್ತರು ಮತ್ತು ಮೇಯರ್ಗಳೊಂದಿಗೆ ವಿವರವಾದ ಚರ್ಚೆಯ ನಂತರ, ಅನೇಕ ಕೋವಿಡ್ ಧಾರಕ ವಲಯಗಳಲ್ಲಿನ ಜನಸಂಖ್ಯೆಯ ಸಾಂದ್ರತೆಯಂತಹ ಕೆಲವು ವಿಷಯಗಳು ಆಡಳಿತದ ಸಾಮೂಹಿಕ ಪ್ರಯತ್ನಗಳಿಗೆ ಗಂಭೀರ ಸವಾಲನ್ನು ಒಡ್ಡಿದರೂ ಕೂಡಾ, ಎಲ್ಲರೂ ಒಟ್ಟಾಗಿ ಸಂಪನ್ಮೂಲಗಳನ್ನು ಸಂಗ್ರಹಿಸುವುದು ಮುಖ್ಯವಾಗಿದೆ ಮತ್ತು ಒಮ್ಮುಖ ಕ್ರಿಯೆಯ ಅನುಭವಗಳು ಹಂಚಿಕೊಳ್ಳಬೇಕಾಗಿದೆ. ಇದು ಸಾಮೂಹಿಕ ಹೋರಾಟ ಮಾಡಬೇಕಾದ ಮಹಾಯುದ್ಧ, ಮತ್ತು ದೆಹಲಿ ಸರ್ಕಾರವನ್ನು ಮತ್ತು ಅದರ ಎಲ್ಲಾ ಪ್ರಯತ್ನಗಳನ್ನೂ ನಾವು ಬೆಂಬಲಿಸುತ್ತೇವೆ" ಎಂದು ಸಚಿವರು ಹೇಳಿದರು.

ಕೋವಿಡ್ -19 ಅನ್ನು ನಿಯಂತ್ರಿಸಲು ತಮ್ಮ ಪ್ರದೇಶದಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆಗಳ ಅಧಿಕಾರಿಗಳು ವಿವರಿಸಿದರು. ಕೋವಿಡ್-19 ಗೆ ಸಂಬಂಧಿಸಿದಂತೆ, ವಿವಿಧ ಕಂಟೈನ್ಮೆಂಟ್ ವಲಯಗಳಲ್ಲಿನ ಪರಿಧಿಯ ನಿಯಂತ್ರಣ, ಸಮಯೋಚಿತ ಗುರುತಿಸುವಿಕೆ ಮತ್ತು ಪ್ರಕರಣಗಳ ವರ್ಗೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನುಸಚಿವರು ಚರ್ಚಿಸಿದರು. ಲಾಕ್ ಡೌನ್ ತೆರವು ಹಂತ 1.0 ಅವಧಿಯಲ್ಲಿ ಭೌತಿಕ ಅಂತರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಅನುಸರಿಸುವ ಮೂಲಕ ಜನರು ಸಮಾದಾನ ಹಾಗೂ ಚೇತರಿಕೆಯ ಅನುಭವ ಪಡುತ್ತಿದ್ದಾರೆ. ಪ್ರಕರಣಗಳಲ್ಲಿ ಹೊಸ ಉಲ್ಬಣ ನಿಯಂತ್ರಣಕ್ಕೆ ಇದು ಒಂದು ಪ್ರಮುಖ ಅಂಶವಾಗಿದೆ ಎಂದು ಸಚಿವರು ಹೇಳಿದರು.

ಚಿಕಿತ್ಸಾ ಸಹಾಯ ಕರ್ಮಿಗಳು, ಆಡಳಿತ ಮತ್ತು ಇತರ ಕೋವಿಡ್ ಮುಂಚೂಣಿಯ ಯೋಧರ ಪ್ರಯತ್ನವನ್ನು ಶ್ಲಾಘಿಸುತ್ತಾ, ಡಾ. ಹರ್ಷ್ ವರ್ಧನ್ ಅವರು ಎಂದಿಗಿಂತಲೂ ಹೆಚ್ಚಾಗಿ, ದೈಹಿಕ ಅಂತರ, ಕೈ ಮತ್ತು ಉಸಿರಾಟದ ನೈರ್ಮಲ್ಯಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಮತ್ತು ಶಿಷ್ಠಾಚಾರಗಳನ್ನು ಅನುಸರಿಸುವ ಅವಶ್ಯಕತೆಯಿದೆ, ನಮ್ಮ ಸುತ್ತಮುತ್ತಲಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ವೈದ್ಯರು ಮತ್ತು ಇತರ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಬಗ್ಗೆ ಗೌರವ ನೀಡುವುದು ಮತ್ತು, ವದಂತಿಗಳನ್ನು ಕೇಳದಿರುವುದು ಮತ್ತು ಹರಡಿಸದಿರುವುದು, ಇತರರಿಗೆ ಸಹಾಯ ಮಾಡಲು ಯಾವಾಗಲೂ ಅಧಿಕೃತ ಮತ್ತು ಸರಿಯಾದ ಮಾಹಿತಿಯನ್ನು ಮಾತ್ರ ಹರಡಲು ಸಹಾಯ ಮಾಡುವುದು, ಅಗತ್ಯವಿರುವ ಮಂದಿ, ವೃದ್ಧರು ಮತ್ತು ಬಡದುರ್ಬಲರ ಕುಟುಂಬಗಳಿಗೆ ಕಾಳಜಿ ಮತ್ತು ಬೆಂಬಲ ನೀಡುವಂತೆ ಸಚಿವರು ತಿಳಿಸಿದರು. "ನಮ್ಮ ಸಾಮೂಹಿಕ ಪ್ರಯತ್ನದಿಂದ, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಾವು ಯಶಸ್ವಿಯಾಗಲು ಕಂಡಿತಾ ಸಾಧ್ಯವಾಗುತ್ತದೆ ಎಂಬುದು ನನ್ನ ವಿಶ್ವಾಸ" ಎಂದು ಸಚಿವರು ಹೇಳಿದರು.

ಪರಿಶೀಲನಾ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಸುಡಾನ್, ಒಎಸ್ಡಿ (ಎಂಒಹೆಚ್ಎಫ್ಡಬ್ಲ್ಯೂ) ಶ್ರೀ ರಾಜೇಶ್ ಭೂಷಣ್, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಶ್ರೀಮತಿ ಆರ್ಟಿ ಅಹುಜಾ, ನಿರ್ದೇಶಕ (ಎನ್ಸಿಡಿಸಿ) ಡಾ.ಎಸ್‌.ಕೆ.ಸಿಂಗ್, ದೆಹಲಿಯ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮೂರು ಮಹಾನಗರ ಪಾಲಿಕೆಗಳ ಆಯುಕ್ತರು, ದೆಹಲಿ ಮತ್ತು ಎನ್‌.ಡಿ.ಎಂ.ಸಿ ಪ್ರತಿನಿಧಿಗಳು ಮತ್ತು ದೆಹಲಿ ಸರ್ಕಾರದ ಇತರ ಅಧಿಕಾರಿಗಳು ಭಾಗವಹಿಸಿದ್ದರು.

***


(Release ID: 1629538) Visitor Counter : 220