ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ನೀತಿ ನಿರೂಪಕರು ನಿರ್ಧಾರ ಕೈಗೊಳ್ಳಲು ಹಾಗು ಸೋಂಕು ಹರಡುವಿಕೆಯ ಮೇಲ್ವಿಚಾರಣೆಯ ನೆರವಿಗೆ ಡಿಎಸ್ ಟಿ, ಕೋವಿಡ್-19 ಇಂಡಿಯಾ ನ್ಯಾಷನಲ್ ಸೂಪರ್ ಮಾಡೆಲ್ ಆರಂಭಿಸಿದೆ
Posted On:
30 MAY 2020 3:59PM by PIB Bengaluru
ನೀತಿ ನಿರೂಪಕರು ನಿರ್ಧಾರ ಕೈಗೊಳ್ಳಲು ಹಾಗು ಸೋಂಕು ಹರಡುವಿಕೆಯ ಮೇಲ್ವಿಚಾರಣೆಯ ನೆರವಿಗೆ
ಡಿಎಸ್ ಟಿ, ಕೋವಿಡ್-19 ಇಂಡಿಯಾ ನ್ಯಾಷನಲ್ ಸೂಪರ್ ಮಾಡೆಲ್ ಆರಂಭಿಸಿದೆ
ಭವಿಷ್ಯದ ಸೋಂಕಿನ ಹರಡುವಿಕೆಯನ್ನು ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ)ಯು ಕೋವಿಡ್-19 ಭಾರತೀಯ ರಾಷ್ಟ್ರೀಯ ಸೂಪರ್ ಮಾಡೆಲ್ ಅನ್ನು ಆರಂಭಿಸಿದೆ, ಇದರಿಂದಾಗಿ ಆರೋಗ್ಯ ವ್ಯವಸ್ಥೆಯ ಸಿದ್ಧತೆ ಮತ್ತು ಇತರ ತಗ್ಗಿಸುವಿಕೆಯ ಕ್ರಮಗಳನ್ನು ಒಳಗೊಂಡ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ.
ಸಾಂಕ್ರಾಮಿಕತೆ ಮತ್ತು ಮರಣದ ಬಗ್ಗೆ ಸರ್ಕಾರವು ನಿಗಾ ವಹಿಸುತ್ತಿದ್ದರೆ, ಹರಡುವಿಕೆಯನ್ನು ಗ್ರಹಿಸಲು ಮತ್ತು ರೋಗದ ಕಣ್ಗಾವಲು ಹೆಚ್ಚಿಸಲು ದೃಢವಾದ ಮುನ್ಸೂಚನೆ ಮಾದರಿಯನ್ನು ತರುವುದು ಕಡ್ಡಾಯವಾಗಿದೆ. ಕೋವಿಡ್ -19 ಮುನ್ಸೂಚನೆ ಮತ್ತು ಕಣ್ಗಾವಲುಗಾಗಿ ಹಲವಾರು ಗಣಿತದ ಮಾದರಿಗಳನ್ನು ಡಿಎಸ್ಟಿ-ಎಸ್ಇಆರ್ ಬಿ (ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ) ಮತ್ತು ಇತರ ಏಜೆನ್ಸಿಗಳ ಧನಸಹಾಯದಿಂದ ತನಿಖಾಧಿಕಾರಿಗಳು ರೂಪಿಸುತ್ತಿದ್ದಾರೆ.
ಮೆಟ್ರೊಲಾಜಿಕಲ್ ಘಟನೆಗಳ ವಿಪತ್ತು ನಿರ್ವಹಣಾ ಯೋಜನೆಗೆ ಗಣಿತದ ಮಾದರಿಗಳನ್ನು ಬಳಸುವ ಭಾರತದ ಇತಿಹಾಸದಿಂದ ಪ್ರೇರಿತರಾದ ಡಿಎಸ್ ಟಿ ಈ ಕ್ಷೇತ್ರದಲ್ಲಿ ಪರಿಣತಿಯನ್ನು ಸಂಗ್ರಹಿಸಲು ಮತ್ತು ಇಡೀ ದೇಶಕ್ಕೆ ಒಂದು ಮಾದರಿಯನ್ನು ರಚಿಸಲು ಈ ಕಾರ್ಯವನ್ನು ಪ್ರಾರಂಭಿಸಿದೆ, ಅದು ಸಾಕ್ಷ್ಯ ಆಧಾರಿತ ಮುನ್ಸೂಚನೆಗೆ ಅಗತ್ಯವಾದ ಕಠಿಣ ಪರೀಕ್ಷೆಗಳಿಗೆ ಒಳಪಡುತ್ತದೆ, ಹವಾಮಾನ ಮುನ್ಸೂಚನಾ ಸಮುದಾಯಗಳಲ್ಲಿ ವಾಡಿಕೆಯಂತೆ ಮಾಡಲಾಗುತ್ತದೆ.
ಈ ಮಾದರಿಯು ಸಂಪೂರ್ಣವಾಗಿ ಕೋವಿಡ್-19ಕ್ಕೆ ಸಂಬಂಧಿಸಿದ ದತ್ತಾಂಶವನ್ನು ಮಾತ್ರ ಅವಲಂಬಿಸಿರುತ್ತದೆ ಮತ್ತು ದತ್ತಾಂಶದ ಹೊಸ ಪ್ರವೃತ್ತಿಗಳಿಂದ ಕಲಿಯಲು ಹೊಂದಾಣಿಕೆಯ ಅಂತರ್ನಿರ್ಮಿತ ಘಟಕವನ್ನು ಸಹ ಹೊಂದಿರುತ್ತದೆ. ಇದು ಯಶಸ್ವಿ ಪುರಾವೆ ಆಧಾರಿತ ಗಣಿತ ಮತ್ತು ಸಂಖ್ಯಾಶಾಸ್ತ್ರೀಯ ಮುನ್ಸೂಚನೆ ಮಾದರಿಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಸಾಂಕ್ರಾಮಿಕ ರೋಗ ಹರಡುವಿಕೆಯ ದೃಢವಾದ ಮುನ್ಸೂಚನೆಗಾಗಿ ಅತ್ಯುತ್ತಮ ಮುನ್ಸೂಚಕ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ. ಸೂಪರ್ ಮಾಡೆಲ್ ಅನ್ನು ಭಾರತದ ಮತ್ತು ವಿಶ್ವದಾದ್ಯಂತದ ನೀತಿ ನಿರೂಪಕರು ಸೋಂಕಿನ ಹರಡುವಿಕೆಯ ಪ್ರಮಾಣವನ್ನು ನಿಗ್ರಹಿಸುವಲ್ಲಿನ ತೊಂದರೆಗಳನ್ನು ನಿವಾರಿಸಲು ಮತ್ತು ಇದು ಆರೋಗ್ಯ ಕ್ಷೇತ್ರಕ್ಕೆ ಹೇಗೆ ಹೊರೆಯಾಗುತ್ತದೆ ಹಾಗು ಹೇಗೆ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಬಹುದು ಎನ್ನುವುದಕ್ಕಾಗಿ ಉಪಯೋಗಿಸಬಹುದು.
ಈ ಉಪಕ್ರಮದ ಭಾಗವಾಗಿ, ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್ಸಿಎಎಸ್ಆರ್) ಮತ್ತು ಐಐಎಸ್ಸಿ ಸಂಸ್ಥೆಯು, ದೇಶದ ಎಲ್ಲಾ ಕೋವಿಡ್-19 ಮಾದರಿ ಯೋಜನೆಗಳು ಮತ್ತು ಕಾರ್ಯಕ್ರಮಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಕೆಲಸ ಮಾಡಲು ಸಹಕರಿಸುತ್ತದೆ. ವಿವಿಧ ಮಾದರಿಗಳನ್ನು ನಿರ್ಣಯಿಸಲು ಮತ್ತು ಅಂತಿಮವಾಗಿ ಕೋವಿಡ್-19 ಇಂಡಿಯಾ ನ್ಯಾಷನಲ್ ಸೂಪರ್ ಮಾಡೆಲ್ ಅನ್ನು ತಲುಪಿಸಲು ಇದು ಮಾನದಂಡಗಳ ಗುಂಪನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಸಮನ್ವಯ ತಂಡವು ಸೂಕ್ತವಾದ ಬಳಕೆದಾರ ಇಂಟರ್ಫೇಸ್ ಮತ್ತು ಸಾಫ್ಟ್ವೇರ್ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಮಾಡೆಲಿಂಗ್ನಲ್ಲಿ ಸಕ್ರಿಯವಾಗಿರುವ ಸಂಶೋಧನಾ ಗುಂಪುಗಳು, ವಿವಿಧ ತಂತ್ರಾಂಶ ಅಭಿವೃದ್ಧಿಪಡಿಸುವವರು ಮತ್ತು ಹೆಸರಾಂತ ಕಂಪನಿಗಳೊಂದಿಗೆ ಸಮಾಲೋಚಿಸುತ್ತದೆ ಮತ್ತು ಕೆಲಸ ಮಾಡುತ್ತದೆ.
ಸಮಾಲೋಚನಾ ಸಮಿತಿಯು ಡಿಎಸ್ ಟಿ ಮತ್ತು ಎಸ್ಇಆರ್ಬಿ ಮತ್ತು ಸಂಯೋಜಕರು (ಜೆಎನ್ಸಿಎಎಸ್ಆರ್ ಮತ್ತು ಐಐಎಸ್ಸಿ ಬೆಂಗಳೂರು) ಮತ್ತು ತಾಂತ್ರಿಕ ಒಟ್ಟುಗೂಡಿಸುವಿಕೆ, ಮಾರ್ಗದರ್ಶನ ಮತ್ತು ದೃಢವಾದ ಸೂಪರ್ ಮಾಡೆಲ್ನ ಅಂತಿಮ ವಿತರಣೆಯ ಕುರಿತು ನಿರ್ಣಾಯಕ ಒಳಹರಿವುಗಳನ್ನು ಒದಗಿಸಲು ಈ ಉಪಕ್ರಮದ ಮಾದರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.
"ಕೋವಿಡ್-19 ವೈರಸ್ ಮತ್ತು ಅದರ ಪ್ರಭಾವದ ಗಣಿತದ ಮಾಡೆಲಿಂಗ್ ಮತ್ತು ಸಿಮ್ಯುಲೇಶನ್ಗಳು ಕೇವಲ ಶೈಕ್ಷಣಿಕ ಅಭ್ಯಾಸಗಳಲ್ಲ ಆದರೆ ತರ್ಕಬದ್ಧ ನಿರ್ಧಾರ ತೆಗೆದುಕೊಳ್ಳುವಿಕೆ, ಯೋಜನೆ ಮತ್ತು ಸಂಪನ್ಮೂಲ ನಿರ್ವಹಣೆಗೆ ನಿರ್ಣಾಯಕ ಅಗತ್ಯಗಳಾಗಿವೆ. ಈ ಪ್ರದೇಶದಲ್ಲಿ ಕೆಲಸ ಮಾಡುವ ವೈಜ್ಞಾನಿಕ ಸಮುದಾಯದ ದೊಡ್ಡ ವಿಭಿನ್ನ ಸಮೂಯಗಳಿಂದ ದೃಢವಾದ ರಾಷ್ಟ್ರೀಯ ಮಾದರಿಯನ್ನು ಅಭಿವೃದ್ಧಿಪಡಿಸುವುದು ಬಹಳ ಮಹತ್ವದ್ದಾಗಿದೆ” ಎಂದು ಡಿಎಸ್ಟಿಯ ಕಾರ್ಯದರ್ಶಿ ಪ್ರೊ. ಅಶುತೋಷ್ ಶರ್ಮಾ ಹೇಳಿದರು.
***
(Release ID: 1628055)
Visitor Counter : 267