ರೈಲ್ವೇ ಸಚಿವಾಲಯ

ಸುಮಾರು 85 ಲಕ್ಷಕ್ಕೂ ಹೆಚ್ಚು ಉಚಿತ ಊಟ ಮತ್ತು ಸುಮಾರು 1.25 ಕೋಟಿ ಉಚಿತ ನೀರಿನ ಬಾಟಲಿಗಳನ್ನು ವಿತರಿಸಿದ ಭಾರತೀಯ ರೈಲ್ವೆ

Posted On: 28 MAY 2020 7:50PM by PIB Bengaluru

ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸಿದ ಸುಮಾರು 50 ಲಕ್ಷ ಅನ್ಯ ರಾಜ್ಯಗಳ ವಲಸಿಗರಿಗೆ
ಸುಮಾರು 85 ಲಕ್ಷಕ್ಕೂ ಹೆಚ್ಚು ಉಚಿತ ಊಟ ಮತ್ತು ಸುಮಾರು 1.25 ಕೋಟಿ ಉಚಿತ ನೀರಿನ ಬಾಟಲಿಗಳನ್ನು ಭಾರತೀಯ ರೈಲ್ವೆ ವಿತರಿಸಿದೆ

ಮೇ 28, 2020 ವರೆಗೆ, ದೇಶಾದ್ಯಂತ ವಿವಿಧ ರಾಜ್ಯಗಳಿಂದ 3736 “ಶ್ರಮಿಕ್ ವಿಶೇಷರೈಲುಗಳ ಸಂಚಾರವನ್ನು ಕಾರ್ಯಗತಗೊಳಿಸಲಾಗಿದೆ;
ನಿನ್ನೆ 172 ಶ್ರಮಿಕ್ ಸ್ಪೆಷಲ್ಸ್ ರೈಲುಗಳು ಸಂಚಾರ ಪ್ರಾರಂಭಿಸಿವೆ

 

ಮೇ 1,2020 ರಿಂದ ತನಕ ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ವಲಸಿಗರಿಗೆ 85 ಲಕ್ಷಕ್ಕೂ ಹೆಚ್ಚು ಉಚಿತ ಊಟ ಮತ್ತು ಸುಮಾರು 1.25 ಕೋಟಿ ಉಚಿತ ನೀರಿನ ಬಾಟಲಿಗಳನ್ನು ಭಾರತೀಯ ರೈಲ್ವೆ ವಿತರಿಸಿದೆ. ಭಾರತೀಯ ರೈಲ್ವೆಯ ಸಾರ್ವಜನಿಕ ಕ್ಷೇತ್ರದ ಉದ್ಯಮ .ಆರ್‌.ಸಿ.ಟಿ.ಸಿ. ಆಹಾರಗಳನ್ನು ಸಿದ್ಧಪಡಿಸಿದ್ದು, ವಲಯ ರೈಲ್ವೆ ವಿಭಾಗಗಳು ಇವುಗಳನ್ನು ವಿತರಿಸುತ್ತವೆ.. ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಆಹಾರ ಮತ್ತು ನೀರಿನ ಬಾಟಲಿಗಳನ್ನು ಒದಗಿಸಲಾಗುತ್ತಿದೆ. ಪೂರಿ ಜೊತೆಗೆ ಉಪ್ಪಿನಕಾಯಿ, ರೊಟ್ಟಿ ಜೊತೆಗೆ ಉಪ್ಪಿನಕಾಯಿ, ಬಾಳೆಹಣ್ಣು, ಬಿಸ್ಕೆಟ್ ಕೇಕ್, ಬಿಸ್ಕಟ್ , ಲಘು ಎಣ್ಣೆ ತಿಂಡಿಗಳು, ಕೇಕ್, ಪುಲಾವ್, ಪಾವು ಭಾಜಿ, ಚಿತ್ರಾನ್ನ ಉಪ್ಪಿನಕಾಯಿ, ಉಪ್ಪಿಟ್ಟು, ಅವಲಕ್ಕಿ ಜೊತೆಗೆ ಉಪ್ಪಿನಕಾಯಿ ಇತ್ಯಾದಿಗಳನ್ನುರೈಲು ನೀರ್ಬಾಟಲಿಗಳ ನೀರಿನೊಂದಿಗೆ .ಆರ್‌.ಸಿ.ಟಿ.ಸಿ. ಪ್ರಯಾಣಿಕರಿಗೆ ನೀಡುತ್ತಿದೆ.

ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳ ವಿಶೇಷ ರೈಲುಗಳ ಮೂಲಕ ಸಂಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯದ ಆದೇಶದ ನಂತರ, ಭಾರತೀಯ ರೈಲ್ವೆ ಮೇ 1,2020 ರಂದುಶ್ರಮಿಕ್ ವಿಶೇಷರೈಲುಗಳನ್ನು ನಿರ್ವಹಿಸುತ್ತಿದೆ. ಮೇ 28, 2020 ರಂದು , 3736 “ಶ್ರಮಿಕ್ ಸ್ಪೆಷಲ್ರೈಲುಗಳನ್ನು ದೇಶದ ವಿವಿಧ ರಾಜ್ಯಗಳಿಂದ ಚಾಲನೆ ಮಾಡಲಾಗಿದ್ದು, ಸುಮಾರು 67 ರೈಲುಗಳು ಇನ್ನೂ ಚಾಲನೆಯಲ್ಲಿವೆ. ಮೇ 27, 2020 ರಂದು 172 ಶ್ರಮಿಕ್ ಸ್ಪೆಷಲ್ಸ್ ರೈಲುಗಳ ಪಯಣ ಪ್ರಾರಂಭವಾದವು. ಇಲ್ಲಿಯವರೆಗೆ, ಕಳೆದ 27 ದಿನಗಳಲ್ಲಿ ಸುಮಾರು 50 ಲಕ್ಷ ವಲಸಿಗರನ್ನು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಸಾಗಿಸಲಾಗಿದೆ. ಇಂದು, ಪ್ರಸ್ತುತ ಚಲಿಸುವ ರೈಲುಗಳು ಯಾವುದೇ ದಟ್ಟಣೆಯನ್ನು ಎದುರಿಸುತ್ತಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬಹುದು

3736 “ಶ್ರಮಿಕ್ ವಿಶೇಷರೈಲುಗಳು ವಿವಿಧ ರಾಜ್ಯಗಳಿಂದ ತಮ್ಮ ಸಂಚಾರ ಪ್ರಾರಂಭಿಸಿವೆ. ಗುಜರಾತ್ (979 ರೈಲುಗಳು), ಮಹಾರಾಷ್ಟ್ರ (695 ರೈಲುಗಳು), ಪಂಜಾಬ್ (397 ರೈಲುಗಳು), ಉತ್ತರ ಪ್ರದೇಶ (263 ರೈಲುಗಳು) ಮತ್ತು ಬಿಹಾರ (263 ರೈಲುಗಳು) ಗರಿಷ್ಠ ರೈಲುಗಳು ಪ್ರಾರಂಭವಾದ ಮೊದಲ ಐದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಾಗಿವೆ

ಶ್ರಮಿಕ್ ವಿಶೇಷರೈಲುಗಳನ್ನು ದೇಶದ ವಿವಿಧ ರಾಜ್ಯಗಳನ್ನು ತಲುಪಿದ ಮೇಲೆ ಆಯಾಯ ನಿಲ್ದಾಣಗಳಲ್ಲಿ ನಿಲ್ಲಿಸಲಾಯಿತು. ತಮ್ಮ ಅಂತಿಮ ತಾಣಗಳನ್ನು ಸೇರಿ ಗರಿಷ್ಠ ರೈಲುಗಳನ್ನು ನಿಲ್ಲಿಸಿದ ಮೊದಲ ಐದು ರಾಜ್ಯಗಳೆಂದರೆ, ಅವುಗಳು ಉತ್ತರ ಪ್ರದೇಶ (1520 ರೈಲುಗಳು), ಬಿಹಾರ (1296 ರೈಲುಗಳು), ಜಾರ್ಖಂಡ್ (167 ರೈಲುಗಳು), ಮಧ್ಯಪ್ರದೇಶ (121 ರೈಲುಗಳು), ಒಡಿಶಾ (139 ರೈಲುಗಳು) ಗಳಾಗಿವೆ.

ಶ್ರಮಿಕ್ ವಿಶೇಷ ರೈಲುಗಳ ಜೊತೆಗೆ, ರೈಲ್ವೆ ನವದೆಹಲಿಯನ್ನು ಸಂಪರ್ಕಿಸುವ 15 ಜೋಡಿ ವಿಶೇಷ ರೈಲುಗಳನ್ನು ಕೂಡಾ ಸಕಾಲಿಕವಾಗಿ ಭಾರತೀಯ ರೈಲ್ವೇ ಓಡಿಸುತ್ತಿದೆ ಮತ್ತು ಜೂನ್ 1,2020 ರಂದು ಇನ್ನೂ 200 ರೈಲುಗಳನ್ನು ಪ್ರಾರಂಭಿಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.

***



(Release ID: 1628004) Visitor Counter : 200