ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್-19 ರ ಹಾಲಿ ಸ್ಥಿತಿ-ಗತಿಯ ಬಗ್ಗೆ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಪರಾಮರ್ಶೆ

Posted On: 27 MAY 2020 5:00PM by PIB Bengaluru

ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್-19 ಹಾಲಿ ಸ್ಥಿತಿ-ಗತಿಯ ಬಗ್ಗೆ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಪರಾಮರ್ಶೆ

 

ಈಶಾನ್ಯ ವಲಯ ಅಭಿವೃದ್ದಿ (ಡಿ..ಎನ್..ಆರ್.) ಸ್ವತಂತ್ರ ನಿರ್ವಹಣೆಯ ಕೇಂದ್ರ ಸಹಾಯಕ ಸಚಿವರಾಗಿರುವ , ಎಂ..ಎಸ್. ಪಿ.ಎಂ.., ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ನಿವೃತ್ತಿ ವೇತನಗಳು, ಅಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆಯ ಸಹಾಯಕ ಸಚಿವರೂ ಆಗಿರುವ ಡಾ. ಜಿತೇಂದ್ರ ಸಿಂಗ್ ಅವರಿಂದು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಮರಳಿ ಬರುತ್ತಿರುವುದರಿಂದ ಹಾಗು ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಲಿ ಕೋವಿಡ್ -19 ಸ್ಪೋಟದ ಸ್ಥಿತಿ ಗತಿಯ ಬಗ್ಗೆ ಪರಾಮರ್ಶೆ ನಡೆಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಪರಾಮರ್ಶೆಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ನಿನ ಮಿಷನ್ ನಿರ್ದೇಶಕರು, ಜಮ್ಮು ಮತ್ತು ಕಾಶ್ಮೀರ ವಿಭಾಗದ ಆರೋಗ್ಯ ಸೇವೆಗಳ ನಿರ್ದೇಶಕರು ಮತ್ತು ಎಲ್ಲಾ ಜಿಲ್ಲೆಗಳ ಸಿ.ಎಂ..ಗಳು ಭಾಗವಹಿಸಿದ್ದರು.

ಆರೋಗ್ಯಾಧಿಕಾರಿಗಳು ಸಚಿವರಿಗೆ ತಳಮಟ್ಟದ ವರದಿಗಳ ಬಗೆಗೆ ಮಾಹಿತಿ ಒದಗಿಸಿದರು. ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕೇಂದ್ರಾಡಳಿತ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮರಳಿ ಬರುತ್ತಿರುವುದರಿಂದ ಮತ್ತು ಅವರನ್ನು ಕಡ್ಡಾಯವಾಗಿ ಕೋವಿಡ್- 19 ಪರೀಕ್ಷೆಗೆ ಒಳಪಡಿಸುತ್ತಿರುವುದರಿಂದ ಆಗಿದೆ ಎಂದು ತಿಳಿಸಿದರು. ಕೋವಿಡ್ -19 ಪ್ರಕರಣಗಳ ಪತ್ತೆಯಾಗುತ್ತಿರುವುದು ಧನಾತ್ಮಕ ಸಂಕೇತ, ಹೀಗೆ ಕೋವಿಡ್ ಪಾಸಿಟಿವ್ ಆದವರನ್ನು ಕ್ವಾರಂಟೈನ್ ಮಾಡುವುದರಿಂದ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬರುತ್ತದೆ ಎಂದರು. ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಈಗ ಮಿಲಿಯನ್ ಒಂದಕ್ಕೆ 10,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆರೋಗ್ಯಾಧಿಕಾರಿಗಳು .ಸಿ.ಎಂ.ಆರ್. ಆಪನ್ನು ಬಳಸುತ್ತಿದ್ದು ಇದರಿಂದ ಪರೀಕ್ಷಾ ಪ್ರಕ್ರಿಯೆಯ ಸಮಯ ಮೂರು ದಿನಗಳಿಗೆ ಇಳಿಕೆಯಾಗಿದೆ ಎಂದೂ ಅವರು ತಿಳಿಸಿದರು. ಎಲ್ಲಾ ಪಾಸಿಟಿವ್ ಪ್ರಕರಣಗಳ ವ್ಯಕ್ತಿಗಳ ಸಂಪರ್ಕ ಪತ್ತೆಯನ್ನು ವ್ಯಾಪಕ ಪ್ರಮಾಣದಲ್ಲಿ ಮಾಡಲಾಗುತ್ತಿದ್ದು, ಇದರಿಂದ ಕೋವಿಡ್ ಪಾಸಿಟಿವ್ ಸೋಂಕಿತರ ಸಂಪರ್ಕಕ್ಕೆ ಬಂದಿರಬಹುದಾದ ಕೋವಿಡ್ -19 ರೋಗಿಗಳನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ ಎಂದೂ ಸಚಿವರಿಗೆ ತಿಳಿಸಲಾಯಿತು.

ಕೇಂದ್ರಾಡಳಿತದ ಪ್ರಯತ್ನಗಳಿಗೆ ಡಾ. ಜಿತೇಂದ್ರ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತು ಪ್ರಕರಣಗಳ ಹೆಚ್ಚಳದಿಂದ ಗಾಬರಿಯಾಗಬೇಕಾದ ಅಗತ್ಯ ಇಲ್ಲ ಎಂದು ಆರೋಗ್ಯ ವೃತ್ತಿಪರರಿಗೆ ಸಲಹೆ ನೀಡಿದರಲ್ಲದೆ, ಕೇಂದ್ರಾಡಳಿತ ಪ್ರದೇಶದಲ್ಲಿ ಉತ್ತಮ ಕೆಲಸ ಆಗುತ್ತಿದೆ , ಎಲ್ಲಾ ಪಾಸಿಟಿವ್ ಪ್ರಕರಣಗಳನ್ನು ಪತ್ತೆ ಹಚ್ಚಿರುವುದು ಮಾತ್ರವಲ್ಲದೆ ಕ್ವಾರಂಟೈನ್ ಸೌಲಭ್ಯಗಳಲ್ಲಿ ಸಮರ್ಪಕವಾಗಿ ಚಿಕಿತ್ಸೆಯನ್ನೂ ಒದಗಿಸಲಾಗುತ್ತಿದೆ ಎಂಬ ಬಗ್ಗೆ ಜನತೆಗೆ ಮರು ಭರವಸೆ ನೀಡಬೇಕಿದೆ ಎಂದರು. ಕೆಂಪು ವಲಯಗಳು ಜನರ ಪ್ರಯೋಜನಕ್ಕಾಗಿ ಇರುವಂತಹವು, ಅವು ಅವರ ಸುರಕ್ಷೆ ಮತ್ತು ವೈರಸ್ ಪ್ರಸರಣ ನಿರ್ಬಂಧಕ್ಕಾಗಿ ಇವೆ ಎಂದೂ ಅವರು ಹೇಳಿದರು.ಜನರ ಚಲನ ವಲನ ಹೆಚ್ಚಿದ್ದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ನಿರೀಕ್ಷಿಸಲಾಗಿತ್ತು ಎಂದು ಹೇಳಿದ ಡಾ. ಜಿತೇಂದ್ರ ಸಿಂಗ್ ಎಲ್ಲಾ ಮುನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಜೀವನ ನಡೆಸುವಂತೆ ಜನತೆಗೆ ಸಲಹೆ ನೀಡಬೇಕು ಮತ್ತು ಅದನ್ನು ಜೀವನ ವಿಧಾನದಲ್ಲಿ ಅಳವಡಿಸಿಕೊಂಡು ಕೊರೊನಾ ವೈರಸ್ ವಿರುದ್ದ ಯಶಸ್ವೀ ಹೋರಾಟ ನಡೆಸಬೇಕು ಎಂದೂ ಹೇಳಿದರು.

***


(Release ID: 1627384) Visitor Counter : 221