ಕೃಷಿ ಸಚಿವಾಲಯ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 13.4 ಕೋಟಿ ಫಲಾನುಭವಿಗಳಿಗೆ 1.78 ಲಕ್ಷ ಮೆಟ್ರಿಕ್ ಟನ್ ಬೇಳೆ ವಿತರಣೆ
Posted On:
27 MAY 2020 7:03PM by PIB Bengaluru
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ
13.4 ಕೋಟಿ ಫಲಾನುಭವಿಗಳಿಗೆ 1.78 ಲಕ್ಷ ಮೆಟ್ರಿಕ್ ಟನ್ ಬೇಳೆ ವಿತರಣೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಲಾಕ್ ಡೌನ್ ಅವಧಿಯಲ್ಲಿ
9.67 ಕೋಟಿ ರೈತರಿಗೆ 19,350.84 ಕೋಟಿ ರೂ. ಬಿಡುಗಡೆ
ಪಿಎಂ-ಜಿಕೆವೈ ಅಡಿಯಲ್ಲಿ ಬೇಳೆ ವಿತರಣೆ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂ-ಜಿಕೆವೈ) ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 4.57 ಲಕ್ಷ ಮೆಟ್ರಿಕ್ ಟನ್ ಬೇಳೆ ರವಾನಿಸಲಾಗಿದೆ. ಆ ಪೈಕಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 1340.61 ಲಕ್ಷ ಫಲಾನುಭವಿಗಳಿಗೆ 1.78 ಲಕ್ಷ ಮೆಟ್ರಿಕ್ ಟನ್ ಬೇಳೆಯನ್ನು ವಿತರಿಸಿವೆ.
ಲಾಕ್ ಡೌನ್ ಅವಧಿಯಲ್ಲಿ ನಾಫೆಡ್ ನಿಂದ ಬೇಳೆ ಮತ್ತು ಎಣ್ಣೆ ಬೀಜಗಳ ಖರೀದಿ ಸ್ಥಿತಿಗತಿ:
- 7.33 ಲಕ್ಷ ಮೆಟ್ರಿಕ್ ಟನ್ ಬೇಳೆ(ಚನ್ನ-ಕಡಲೇ)ಅನ್ನು 9 ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಂದ ಖರೀದಿ ಮಾಡಲಾಗಿದೆ.
- 5.91 ಲಕ್ಷ ಮೆಟ್ರಿಕ್ ಟನ್ ಸಾಸಿವೆಯನ್ನು ಐದು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣದಿಂದ ಖರೀದಿಸಲಾಗಿದೆ.
- 2.41 ಲಕ್ಷ ಮೆಟ್ರಿಕ್ ಟನ್ ತೊಗರಿಬೇಳೆಯನ್ನು 8 ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್ ಮತ್ತು ಒಡಿಶಾಗಳಿಂದ ಖರೀದಿಸಲಾಗಿದೆ.
ಹಿಂಗಾರು ಮಾರುಕಟ್ಟೆ ಹಂಗಾಮಿನಲ್ಲಿ ಗೋಧಿ ಖರೀದಿ
ಹಿಂಗಾರು ಮಾರುಕಟ್ಟೆ ಹಂಗಾಮು(ಆರ್ ಎಂಎಸ್) 2020-21ನಲ್ಲಿ ಭಾರತೀಯ ಆಹಾರ ನಿಗಮ (ಎಫ್ ಸಿಐ)ಗೆ 359.10 ಲಕ್ಷ ಮೆಟ್ರಿಕ್ ಟನ್ ಗೋಧಿ ಬಂದಿದ್ದು, ಆ ಪೈಕಿ 347.54 ಲಕ್ಷ ಮೆಟ್ರಿಕ್ ಟನ್ ಖರೀದಿಸಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆ ಅಡಿಯಲ್ಲಿ ಲಾಕ್ ಡೌನ್ ಅವಧಿಯಲ್ಲಿ 24.03.2020ರಿಂದ ಇಲ್ಲಿಯವರೆಗೆ 9.67 ಕೋಟಿ ರೈತರಿಗೆ ಅನುಕೂಲ ಕಲ್ಪಿಸಿದ್ದು, ಅವರಿಗೆ ಈವರೆಗೆ 19,350.84 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
***
(Release ID: 1627308)
Visitor Counter : 261