ಪರಿಸರ ಮತ್ತು ಅರಣ್ಯ ಸಚಿವಾಲಯ

ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಕುರಿತು ಭಾರತ ತನ್ನ ಉತ್ತಮ ಅಭ್ಯಾಸಗಳನ್ನು ಮತ್ತು ಅನುಭವವನ್ನು ವಿಶ್ವಕ್ಕೆ ಹಂಚಿಕೊಳ್ಳಲಿದೆ: ಕೇಂದ್ರ ಪರಿಸರ ಖಾತೆ ಸಚಿವ

Posted On: 22 MAY 2020 3:16PM by PIB Bengaluru

ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಕುರಿತು ಭಾರತ ತನ್ನ ಉತ್ತಮ ಅಭ್ಯಾಸಗಳನ್ನು ಮತ್ತು ಅನುಭವವನ್ನು ವಿಶ್ವಕ್ಕೆ ಹಂಚಿಕೊಳ್ಳಲಿದೆ: ಕೇಂದ್ರ ಪರಿಸರ ಖಾತೆ ಸಚಿವ

ಅಂತಾರಾಷ್ಟ್ರೀಯ ಜೀವ ವೈವಿಧ್ಯತೆಯ ದಿನವಾದ ಇಂದು ಐದು ಉಪಕ್ರಮಗಳನ್ನು ಆರಂಭಿಸಲಾಯಿತು
 

ವಿಡಿಯೋ ಕಾನ್ಫೆರೆನ್ಸ್ ಮೂಲಕ ಇಂದು ಆಚರಿಸಲಾದ ಅಂತಾರಾಷ್ಟ್ರೀಯ ಜೀವ ವೈವಿಧ್ಯತೆಯ ದಿನ 2020 ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಶ್ರೀ ಪ್ರಕಾಶ್ ಜಾವ್ಡೆಕರ್ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಕುರಿತು 5 ಪ್ರಮುಖ ಉಪಕ್ರಮಗಳನ್ನು ಉದ್ಘಾಟಿಸಿದರು.     

https://ci4.googleusercontent.com/proxy/7vDKUqFWKM1Vz-yr6FV12ttNx0LZNfoP4O3Rt5_SHmlxprwkQXItzTZoD998S3xvbJ0Ok4uI-QL39_7FXnE06POWL4pDpwLbSDrwkDHdB-TQJjI652SQ=s0-d-e1-ft#https://static.pib.gov.in/WriteReadData/userfiles/image/image0013666.jpg

2020 “ಜೀವವೈವಿಧ್ಯತೆಗಾಗಿ ಸೂಪರ್ ವರ್ಷ್ವೂ ಆಗಿದೆ, 2010 ರಲ್ಲಿ ಅಳವಡಿಸಿಕೊಳ್ಳಲಾದ 20 ಜಾಗತಿಕ ಐಚಿ ಗುರಿಗಳನ್ನು ಹೊಂದಿರುವ ಜೀವವೈವಿಧ್ಯತೆಯ ಕಾರ್ಯತಂತ್ರದ ಯೋಜನೆ 2020 ರಲ್ಲಿ ಕೊನೆಗೊಳ್ಳುತ್ತದೆ ಮತ್ತು ಎಲ್ಲ ದೇಶಗಳು ಒಗ್ಗೂಡಿ 2020 ರ ನಂತರದ ಜಾಗತಿಕ ಜೀವವೈವಿಧ್ಯತೆಯ ನಿಯಮಗಳ ಚೌಕಟ್ಟಿನ ಸಿದ್ಧತೆಯ ಕಾರ್ಯದಲ್ಲಿ ತೊಡಗಿವೆ. ಭಾರತ ಒಂದು ವೈವಿಧ್ಯತೆ ಹೊಂದಿದ ರಾಷ್ಟ್ರವಾಗಿದೆ. ತಮ್ಮ ಜೀವವೈವಿಧ್ಯತೆಯ ಅಂಶಗಳ ಅಭಿವೃದ್ಧಿಗೆ ಆಸಕ್ತಿ ಹೊಂದಿರುವ ದೇಶಗಳನ್ನು ಸ್ವಾಗತಿಸುತ್ತದೆ ಮತ್ತು ನಮ್ಮ ಅನುಭವಗಳು ಹಾಗೂ ಉತ್ತಮ ಅಭ್ಯಾಸಗಳನ್ನು ಅವರೊಂದಿಗೆ ಹಂಚಿಕೊಳ್ಳಲು ನಾವು ಸಿದ್ಧ ಎಂದು ಕೇಂದ್ರ ಸಚಿವರು ಹೇಳಿದರು. ಮಿತ ಬಳಕೆಯನ್ನು ರೂಢಿಸಿಕೊಂಡು, ಸುಸ್ಥಿರ ಜೀವನಶೈಲಿಗೆ ಪ್ರೋತ್ಸಾಹ ನೀಡುವುದರ ಅಗತ್ಯತೆಯ ಕುರಿತು ಪರಿಸರ ಸಚಿವರು ಒತ್ತು ನೀಡಿದರು.

ಈ ವರ್ಷದ ವಿಷಯವಸ್ತುವಿನ ಬಗ್ಗೆ ಒತ್ತಿ ಹೇಳಿದ ಶ್ರೀ ಜಾವ್ಡೇಕರ್ ಅವರು ನಮಗೆ ಬೇಕಾದ ಪರಿಹಾರಗಳೆಲ್ಲ ಪ್ರಕೃತಿಯಲ್ಲಿವೆ ಆದ್ದರಿಂದ ನಮ್ಮ ಪ್ರಕೃತಿಯನ್ನು ರಕ್ಷಿಸುವುದು, ಅದರಲ್ಲೂ ವಿಶೇಷವಾಗಿ ಕೊವಿಡ್-19 ರ ಪ್ರಸ್ತುತ ಸಂದರ್ಭದಲ್ಲಿ ಬಹಳ ಮುಖ್ಯವಾಗಿದೆ.  ಏಕೆಂದರೆ, ಇದು ಜೂನೋಟಿಕ್ ರೋಗ ಸೇರಿದಂತೆ ಹಲವಾರು ಗಂಭೀರ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಪರಿಸರ ಸಚಿವರು, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ (ಎನ್ ಬಿ ಎ) ಮತ್ತು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಕ್ಕೆ (ಯು ಎನ್ ಡಿ ಪಿ) ಚಾಲನೆ ನೀಡಿದರು. ಮುಕ್ತ, ಪಾರದರ್ಶಕ, ಆನ್ ಲೈನ್ ನಲ್ಲಿ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ, ಒಂದು ವರ್ಷದ ಸ್ನಾತಕೋತ್ತರ ಪದವಿ ಹೊಂದಿದ 20 ವಿದ್ಯಾರ್ಥಿಗಳನ್ನುಜೀವ ವೈವಿಧ್ಯ ಸಂರಕ್ಷಣ್ತರಬೇತಿಗಾಗಿ ಪ್ರಸ್ತಾಪಿಸಲಾಗುತ್ತದೆ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಜೀವ ವೈವಿಧ್ಯತೆಯ ಸಂರಕ್ಷಣೆಯ ಬಗ್ಗೆ ಕಲಿಯಲು ಆಸಕ್ತಿ ಹೊಂದಿರುವ ಕ್ರಿಯಾಶೀಲ ಮತ್ತು ಸೃಜನಶೀಲ ವಿದ್ಯಾರ್ಥಿಗಳನ್ನು ಇದರಲ್ಲಿ ತೊಡಗಿಸುವುದು ಮತ್ತು ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎನ್ ಬಿ ಎ ಯೋಜನೆಗಳಿಗೆ ಪ್ರೋತ್ಸಾಹಿಸುವುದು ಮತ್ತು ರಾಜ್ಯ ಜೀವವೈವಿಧ್ಯ ಮಂಡಳಿಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜೀವವೈವಿಧ್ಯ ಪರಿಷತ್ತುಗಳು ತಮ್ಮ ಆದೇಶಗಳನ್ನು ಪೂರೈಸಲು ತಾಂತ್ರಿಕವಾಗಿ ಸಹಾಯ ಮಾಡುವುದು ಈ ಕಾರ್ಯಕ್ರಮದ ಗುರಿಯಾಗಿದೆ.

ಅಳಿವಿನ ಅಂಚಿನಲ್ಲಿರುವ ಪ್ರಬೇಧಗಳನ್ನು ಕಾನೂನುಬಾಹಿರ ಕಳ್ಳಸಾಗಾಣೆ ಕುರಿತ ನಾಟ್ ಆಲ್ ಎನಿಮಲ್ ಮೈಗ್ರೇಟ್ ಬೈ ಚಾಯ್ಸ್ಯು ಎನ್ ಇ ಪಿ ಪ್ರಚಾರಾಂದೋಲನವನ್ನು ಈ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು. ವನ್ಯಜೀವಿಗಳ ಅಕ್ರಮ ವ್ಯಾಪಾರ, ಗಂಭೀರ ಸಾಂಕ್ರಾಮಿಕ ರೋಗ ಹರಡುವಿಕೆ ಅಪಾಯ ಹೊಂದಿದೆ. ಯು ಎನ್ ಇ ಪಿ ಜೊತೆಗೂಡಿ ನಾಟ್ ಆಲ್ ಎನಿಮಲ್ ಮೈಗ್ರೇಟ್ ಬೈ ಚಾಯ್ಸ್ಆಂದೋಲನ ಆರಂಭಿಸಿದ ವನ್ಯ ಜೀವಿ ಅಕ್ರಮ ನಿಯಂತ್ರಣ ಕಚೇರಿ ಈ ಎಲ್ಲ ಪರಿಸರ ಸವಾಲುಗಳನ್ನು ಪರಿಹರಿಸಲು, ಜಾಗೃತಿ ಮೂಡಿಸಲು ಮತ್ತು ಪರಿಹಾರಗಳನ್ನು ಹುಡುಕಲು ಕೆಲಸ ಮಾಡುತ್ತದೆ.        

ಡಬ್ಲ್ಯೂ ಡಬ್ಲ್ಯೂ ಎಫ್ ಮಾಡೆಲ್ ಕಾನ್ಫೆರೆನ್ಸ್ ಆಫ್ ಪಾರ್ಟೀಸ್ (ಎಂಸಿಒಪಿ) ಜೊತೆಗೆಜೀವವೈವಿಧ್ಯತೆ ಸಂರಕ್ಷಣೆ ಮತ್ತು ಜೈವಿಕ ವೈವಿಧ್ಯತೆ ಕಾಯ್ದೆ 2020’ ಕುರಿತಾದ ವೆಬಿನಾರ್ ಸರಣಿಯನ್ನೂ ಆರಂಭಿಸಲಾಯಿತು. ಇದು ಯುವಜನತೆ ಒಂದು ನವೀನ ಆರಂಭಕ್ಕೆ ಮುಂದಾಗುವಂತೆ ಮತ್ತು ಜೀವವೈವಿಧ್ಯತೆ ಮೇಲೆ ಮಾನವನ ಕೆಲಸ ಕಾರ್ಯಗಳ ಪ್ರಭಾವದಿಂದ ಅವನ್ನು ಕಾಪಾಡುವುದು ಹಾಗೂ ನಮ್ಮ ಉಳಿವಿಗಾಗಿ ಜೀವವೈವಿಧ್ಯತೆಯ ಸುಸ್ಥಿರತೆ ಕುರಿತ ವಿಷಯಗಳಲ್ಲಿ ಯುವಜನತೆ ಪಾಲ್ಗೊಳ್ಳುವಂತೆ ಮಾಡುವ ಒಂದು ಉಪಕ್ರಮವಾಗಿದೆ. ಮಾನವ ಕುಲಕ್ಕೆ ಉಚಿತ ಪರಿಸರ ಸೇವೆಗಳನ್ನು ನೀಡುವ ಮೂಲಕ ನಿಸರ್ಗ ವಹಿಸಿದ ಪ್ರಮುಖ ಪಾತ್ರವನ್ನು ಬಿಂಬಿಸುವ ಡಬ್ಲ್ಯು ಡಬ್ಲ್ಯು ಎಫ್ ಸಹಕರಿಸಿದ ಜಾಗೃತಿ ಅಭಿಯಾನವನ್ನು ಸಹ ಇದೇ ಸಂದರ್ಭದಲ್ಲಿ ಆರಂಭಿಸಲಾಯಿತು.  

***


(Release ID: 1626511) Visitor Counter : 2319