ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೋವಿಡೋತ್ತರ ಭಾರತ ಹೆಚ್ಚು ಭರವಸೆಯುಕ್ತವಾಗಿ ಉದಯಿಸಲಿದೆ ಮತ್ತು ವಿಶ್ವ ನಕಾಶೆಯಲ್ಲಿ ಹೆಚ್ಚು ಗೌರವ ಪಡೆಯಲಿದೆ: ಡಾ. ಜಿತೇಂದ್ರ ಸಿಂಗ್

Posted On: 22 MAY 2020 8:32PM by PIB Bengaluru

ಕೋವಿಡೋತ್ತರ ಭಾರತ ಹೆಚ್ಚು ಭರವಸೆಯುಕ್ತವಾಗಿ ಉದಯಿಸಲಿದೆ ಮತ್ತು ವಿಶ್ವ ನಕಾಶೆಯಲ್ಲಿ ಹೆಚ್ಚು ಗೌರವ ಪಡೆಯಲಿದೆ:

ಡಾ. ಜಿತೇಂದ್ರ ಸಿಂಗ್

 

ಕೋವಿಡೋತ್ತರ ಕಾಲದಲ್ಲಿ ಭಾರತವು ಅತ್ಯಂತ ಭರವಸೆಯ ರಾಷ್ಟ್ರವಾಗಿ ಮೂಡಿ ಬರಲಿದೆ ಮತ್ತು ಅದು ವಿಶ್ವ ಮಟ್ಟದಲ್ಲಿ ಗೌರವ , ಮಾನ್ಯತೆ ಗಳಿಸಲಿದೆ ಎಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಇಂದಿಲ್ಲಿ ಹೇಳಿದರು. ಖಾಸಗಿ ಟಿ.ವಿ. ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡಾ. ಜಿತೇಂದ್ರ ಸಿಂಗ್ ಅವರು ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲಾ ಕಳವಳಗಳು ಮತ್ತು ನಿರೀಕ್ಷೆಯ ನಡುವೆ ಇಂದಿನಿಂದ ಆರು ತಿಂಗಳ ಬಳಿಕ ವಿಶ್ವವು ಭಾರತದತ್ತ ಗೌರವದಿಂದ ನೋಡುವ ಕಾಲ ಬರಲಿದೆ ಮತ್ತು ನಮ್ಮ ಸಹಕಾರವನ್ನು ಕೋರಲಿದೆ ಎಂದರು. ಇದು ಮಾತ್ರವಲ್ಲ , ಭಾರತವು ವ್ಯಾಪಾರೋದ್ಯಮಕ್ಕೆ ಅತ್ಯಂತ ಸುರಕ್ಷಿತ ತಾಣವಾಗಿಯೂ ಮೂಡಿ ಬರಲಿದೆ ಎಂದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಕಷ್ಟು ಮುಂಚಿತವಾಗಿಯೇ ಲಾಕ್ ಡೌನ್ ಘೋಷಿಸಿದ್ದರಿಂದ ಕೋವಿಡೋತ್ತರ ವಿಶ್ವದಲ್ಲಿ ಭಾರತಕ್ಕೆ ತನ್ನನು ತಾನು ತರಬೇತು ಮಾಡಿಕೊಳ್ಳಲು ಸಹಾಯವಾಯಿತು ಎಂದೂ ಜಿತೇಂದ್ರ ಸಿಂಗ್ ನುಡಿದರು.

ಈಶಾನ್ಯ ವಲಯದ ಉಸ್ತುವಾರಿಯಾಗಿರುವ ಕಾರಣಕ್ಕೆ ವಲಯವು ಪ್ರವಾಸೋದ್ಯಮವನ್ನು ನಂಬಿರುವ ಮತ್ತು ಅದನ್ನು ಅವಲಂಬಿಸಿರುವುದರಿಂದ ಕೋವಿಡ್ ಜಾಗತಿಕ ಸಾಂಕ್ರಾಮಿಕದಿಂದಾಗಿ ಅಲ್ಲಿ ಏನು ಪರಿಣಾಮವಾಗಿದೆ ಎಂದು ಕೇಳಿದ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಡಾ. ಜಿತೇಂದ್ರ ಸಿಂಗ್, ಈಶಾನ್ಯವು ಪ್ರವಾಸೋದ್ಯಮದಿಂದ ಲಾಭ ಪಡೆಯಲಿದೆ ಮತ್ತು ಅದು ಯುರೋಪ್ ಹಾಗು ಇತರ ಪಾಶ್ಚಿಮಾತ್ಯ ದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದರು. ರಾಷ್ಟ್ರಗಳಲ್ಲಿಯ ಪ್ರವಾಸೀ ರೆಸಾರ್ಟ್ ಗಳು ಕೊರೋನಾದಿಂದಾಗಿ ಭಾರೀ ತೊಂದರೆಗಳಿಗೆ ಒಳಗಾಗಿವೆ, ಭಾರತದ ಈಶಾನ್ಯ ವಲಯ ತುಲನಾತ್ಮಕವಾಗಿ ಕೊರೊನಾ ಬಾಧೆ ಮುಕ್ತವಾಗಿದೆ, ಬಹಳ ಜನಪ್ರಿಯ ಪ್ರವಾಸೀ ತಾಣಗಳಾದ ಸಿಕ್ಕಿಂನಂತಹವು ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಹೊಂದಿಲ್ಲ ಎಂದವರು ಹೇಳಿದರು.

ವ್ಯಾಪಾರ ಮತ್ತು ಉದ್ಯಮಕ್ಕೆ ಸಂಬಂಧಿಸಿದಂತೆ ಭಾರತಕ್ಕಿದು ಮೇಕ್ ಇನ್ ಇಂಡಿಯಾಆಂದೋಲನಕ್ಕೆ ವೇಗ ನೀಡಲು ಸಕಾಲ ಎಂದು ಡಾ. ಜಿತೇಂದ್ರ ಸಿಂಗ್ ಅಭಿಪ್ರಾಯಪಟ್ಟರು. ನಿಟ್ಟಿನಲ್ಲಿ ಅವರು ಪ್ರತೀ ವರ್ಷ 5000 ದಿಂದ 6000 ಕೋ.ರೂ. ವ್ಯವಹಾರ ನಡೆಸುವ ಸೆಣಬಿನ ಉದಾಹರಣೆಯನ್ನು ನೀಡಿದರು . ಪ್ರತೀವರ್ಷ ಅಗರಬತ್ತಿಯ ಬಹು ದೊಡ್ಡ ಪ್ರಮಾಣವನ್ನು ಮತ್ತು ಇತರ ಬಿದಿರಿನ ವಸ್ತುಗಳನ್ನು ಇದುವರೆಗೆ ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದರು. ಅದೇ ರೀತಿ ನಮ್ಮ ಔಷಧಿ ವಲಯ ಈಗಾಗಲೇ ಶಕ್ತಿ ವರ್ಧಿಸಿಕೊಂಡಿದೆ ಮತ್ತು ಕೋವಿಡ್ -19 ಹಿನ್ನೆಲೆಯಲ್ಲಿ ನಾವು ಔಷಧಿ ನಿರ್ಮಾಣ ಮತ್ತು ಲಸಿಕೆ ತಯಾರಿಕೆಯತ್ತ ಮುನ್ನುಗ್ಗುತ್ತಿದ್ದೇವೆ, ಇದೂ ಕೂಡಾ ರಫ್ತಿಗೆ ಲಭ್ಯವಾಗಲಿದೆ ಎಂದವರು ಹೇಳಿದರು.

ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಇತ್ತೀಚೆಗೆ ನೀಡಲಾದ ನಿವಾಸಿ ಅಧಿಸೂಚನೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಜಿತೇಂದ್ರ ಸಿಂಗ್ ಇದು 2019 ಆಗಸ್ಟ್ 5 ರಂದು ಆರಂಭಿಸಲಾದ ಪ್ರಕ್ರಿಯೆಯ ವಿಸ್ತರಣಾ ಭಾಗ , ಮತ್ತು ಅದೀಗ ಅದರ ತರ್ಕಬದ್ದ ಮುಕ್ತಾಯವನ್ನು ತಲುಪುತ್ತಿದೆ ಎಂದರು. ಭವಿಷ್ಯದ ತಲೆಮಾರುಗಳು ನಿರ್ಧಾರದ ಧನಾತ್ಮಕ ಫಲಿತಾಂಶವನ್ನು ಕಾಣಲಿವೆ ಎಂದೂ ಅವರು ಹೇಳಿದರು.

***



(Release ID: 1626507) Visitor Counter : 172