PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 23 MAY 2020 7:55PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್ -19 ಕುರಿತು ಆರೋಗ್ಯ ಮತ್ತು ಆರೋಗ್ಯದ ಸಚಿವಾಲಯದ ಅಪ್ ಡೇಟ್

ಹೆಚ್ಚಿನ ಕೋವಿಡ್ -19 ಪ್ರಕರಣಗಳು ದಾಖಲಾಗಿರುವ 11 ನಗರಸಭೆ/ಪುರಸಭೆ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಕಾರ್ಯದರ್ಶಿಗಳು, ಪುರಸಭೆ ಆಯುಕ್ತರು, ಅಭಿಯಾನ ನಿರ್ದೇಶಕರು (ಎನ್‌ಎಚ್‌ಎಂ) ಮತ್ತು ಇತರ ಅಧಿಕಾರಿಗಳೊಂದಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಈ ಪ್ರದೇಶಗಳಲ್ಲಿ ದ್ವಿಗುಣವಾಗುವ ಸಮಯವನ್ನು ಕಡಿಮೆಯಾಗಿರುವುದು, ಹೆಚ್ಚಿನ ಮರಣ ಪ್ರಮಾಣ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ದೃಢಪಟ್ಟ ಪ್ರಕರಣಗಳ ದರವನ್ನು ಹೊಂದಿರುವುದು ಪ್ರಮುಖ ಸವಾಲಾಗಿದೆ ಎಂದು ತಿಳಿಸಲಾಯಿತು. ಕೆಲವು ಪುರಸಭೆ ಪ್ರದೇಶಗಳಲ್ಲಿ ಪ್ರಕರಣಗಳ ಆರಂಭಿಕ ಪತ್ತೆಹಚ್ಚುವಿಕೆಯನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಯನ್ನು ಚುರುಕುಗೊಳಿಸುವುದು, ಸಮಯೋಚಿತ ಕ್ಲಿನಿಕಲ್ ನಿರ್ವಹಣೆ ಮತ್ತು ಮರಣ ಪ್ರಮಾಣವನ್ನು ಕಡಿತಗೊಳಿಸುವ ಅಗತ್ಯವಿದೆ ಎಂದು ಸೂಚಿಸಲಾಯಿತು.

ದೇಶದಲ್ಲಿ ಇದುವರೆಗೆ  ಒಟ್ಟು 51,783 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 3,250 ರೋಗಿಗಳು ಗುಣಮುಖರಾಗಿದ್ದಾರೆ. ಇದು ಒಟ್ಟು ಚೇತರಿಕೆ ದರವನ್ನು ಶೇ.41.39 ಕ್ಕೆ ಹೆಚ್ಚಿಸಿದೆ. ಭಾರತದಲ್ಲಿ ಕೋವಿಡ್-19 ದೃಢಪಟ್ಟ ಪ್ರಕರಣಗಳ ಸಂಖ್ಯೆ ಈಗ 1,25,101. ನಿನ್ನೆಯಿಂದ ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ 6654 ಹೆಚ್ಚಳವಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626450

ಭಾರತೀಯ ರೈಲ್ವೆಯು ಮುಂದಿನ 10 ದಿನಗಳಲ್ಲಿ ಇನ್ನೂ 2600 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲಿದೆ

ತಮ್ಮ ತವರು ರಾಜ್ಯವನ್ನು ಸೇರಲು ವಲಸಿಗರಿಗೆ ಅವಕಾಶ ಕಲ್ಪಿಸುವ ನಿರಂತರ ಪ್ರಯತ್ನದಲ್ಲಿ, ರಾಜ್ಯ ಸರ್ಕಾರಗಳ ಅಗತ್ಯಕ್ಕೆ ಅನುಗುಣವಾಗಿ ಮುಂದಿನ ಹತ್ತು ದಿನಗಳಲ್ಲಿ ದೇಶಾದ್ಯಂತ ಇನ್ನೂ 2600 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ದೇಶಾದ್ಯಂತ ಸಿಲುಕಿರುವ 36 ಲಕ್ಷ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಬಹುದೆಂದು ನಿರೀಕ್ಷಿಸಲಾಗಿದೆ. ಲಾಕ್‌ಡೌನ್ ಕಾರಣದಿಂದಾಗಿ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಇತರ ವ್ಯಕ್ತಿಗಳನ್ನು ಸ್ಥಳಾಂತರಿಸಲು ಭಾರತೀಯ ರೈಲ್ವೆ 2020 ಮೇ 01 ರಿಂದ “ಶ್ರಮಿಕ್ ವಿಶೇಷ” ರೈಲುಗಳನ್ನು ಓಡಿಸಲು ಆರಂಭಿಸಿತು. ಸಂಬಂಧಪಟ್ಟ ಎರಡೂ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಈ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಭಾರತೀಯ ರೈಲ್ವೆಯು ಕಳೆದ 23 ದಿನಗಳಲ್ಲಿ 2600 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಿದೆ. ಸುಮಾರು 36 ಲಕ್ಷ ವಲಸಿಗರನ್ನು ಈವರೆಗೆ ಅವರ ರಾಜ್ಯಗಳಿಗೆ ತಲುಪಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626395

ಜೂನ್ 01 ರಿಂದ ಪರಿಚಯಿಸಲಾಗುತ್ತಿರುವ 200 ರೈಲುಗಳಿಗೆ ಹೆಚ್ಚಾದ ಟಿಕೆಟ್ ಕಾಯ್ದಿರಿಸುವಿಕೆ

ಭಾರತೀಯ ರೈಲ್ವೆಯು 2020 ರ ಜೂನ್ 1 ರಿಂದ ದೇಶಾದ್ಯಂತ 200 ದೈನಂದಿನ ಪ್ಯಾಸೆಂಜರ್ ರೈಲುಗಳ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ ಮತ್ತು ಈ ಎಲ್ಲಾ ರೈಲುಗಳ ಟಿಕಟ್ ಕಾಯ್ದಿರಿಸುವಿಕೆಯನ್ನು  21 ಮೇ 2020 ರಿಂದ ಪ್ರಾರಂಭಿಸಲಾಗಿದೆ. ಈ ವಿಶೇಷ ಸೇವೆಗಳು ಮೇ 01 ರಿಂದ ಸಂಚರಿಸುತ್ತಿರುವ ಶ್ರಮಿಕ್ ವಿಶೇಷ ರೈಲುಗಳು ಮತ್ತು 2020 ರ ಮೇ 12 ರಿಂದ ಓಡುತ್ತಿರುವ ವಿಶೇಷ ಎಸಿ ರೈಲುಗಳು (30 ರೈಲುಗಳು) ಜೊತೆಗೆ ಹೆಚ್ಚುವರಿಯಾಗಿವೆ. ಈ ರೈಲುಗಳಿಗೆ ಟಿಕೆಟ್ ಕಾಯ್ದಿರಿಸುವುದು ಮೇ 21 ರಿಂದ ಪ್ರಾರಂಭವಾಯಿತು ಮತ್ತು 2020 ಮೇ 22 ರ 20:14 ಗಂಟೆಯವರೆಗೆ, ಎಲ್ಲಾ 200 ರೈಲುಗಳು ಬುಕಿಂಗ್ ವ್ಯವಸ್ಥೆಯಲ್ಲಿ ಲಭ್ಯವಾದವು. 1413277 ಪ್ರಯಾಣಿಕರ ಸಾಮರ್ಥ್ಯ ಹೊಂದಿರುವ ಈ ರೈಲುಗಳಿಗೆ 652644 ಆನ್‌ಲೈನ್ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626243

ಕಳೆದ ವರ್ಷಕ್ಕಿಂತ ಹೆಚ್ಚಿದ ಬೇಸಿಗೆ ಬೆಳೆಗಳ ಪ್ರದೇಶ ವ್ಯಾಪ್ತಿ, ಲಾಕ್ಡೌನ್ ನಡುವೆಯೂ ಹೆಚ್ಚಿದ ಸಂಗ್ರಹಣೆ

ಅಕ್ಕಿ, ಬೇಳೆಕಾಳುಗಳು, ಒರಟಾದ ಸಿರಿಧಾನ್ಯಗಳು ಮತ್ತು ಎಣ್ಣೆಕಾಳುಗಳ ಬೇಸಿಗೆ ಬೆಳೆಗಳ ಬಿತ್ತನೆ ಪ್ರದೇಶದ ವ್ಯಾಪ್ತಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಹೆಚ್ಚಾಗಿದೆ. ರಾಬಿ ಮಾರುಕಟ್ಟೆ ಋತು (ಆರ್‌ಎಂಎಸ್) 2020-21ರಲ್ಲಿ ಭಾರತ ಆಹಾರ ನಿಗಮಕ್ಕೆ ಒಟ್ಟು 337.48 ಲಕ್ಷ ಮೆಟ್ರಿಕ್ ಟನ್ ಗೋಧಿ ಬಂದಿದ್ದು, ಅದರಲ್ಲಿ 326.96 ಲಕ್ಷ ಮೆಟ್ರಿಕ್ ಟನ್ ಖರೀದಿಸಲಾಗಿದೆ. 24.3.2020 ರಿಂದ ಇಲ್ಲಿಯವರೆಗೆ ಲಾಕ್‌ಡೌನ್ ಅವಧಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಇದುವರೆಗೆ 19100.77 ಕೋಟಿ ರೂ. ಬಿಡುಗಡೆ ಮಾಡಿದ್ದು ಸುಮಾರು 9.55 ಕೋಟಿ ರೈತ ಕುಟುಂಬಗಳಿಗೆ ಅನುಕೂಲವಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626140

ಭಾರತೀಯ ಅಂಚೆಯು ದೇಶಾದ್ಯಂತ 2000 ಟನ್ ಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನು ತಲುಪಿಸಿದೆ

ಪ್ರಧಾನ ಮಂತ್ರಿಯವರ ಆತ್ಮ ನಿರ್ಭರ ಭಾರತ್‌ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಭಾರತೀಯ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕೇಂದ್ರ ಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಅವರು ಸೂಚನೆ ನೀಡಿದ್ದಾರೆ. ಸಿ-ಡಾಟ್ ಅಭಿವೃದ್ಧಿಪಡಿಸಿದ ಮೊದಲ “ಮೇಕ್ ಇನ್ ಇಂಡಿಯಾ” ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮೂಲಕ ಸಭೆ ನಡೆಸಲಾಯಿತು.  ಇದು ವಿಡಿಯೋ ಕಾನ್ಫರೆನ್ಸ್ ನ  ಮೊದಲ ಯಶಸ್ವಿ ಪ್ರಯೋಗವಾಗಿದೆ. ಭಾರತೀಯ ಅಂಚೆ ಇಲಾಖೆಯು ಕೋವಿಡ್ ಹೋರಾಟದಲ್ಲಿ ಹಲವಾರು ಪ್ರಯತ್ನಗಳನ್ನು ಮಾಡಿದೆ ಅವುಗಳಲ್ಲಿ: ದೇಶಾದ್ಯಂತ 2000 ಟನ್‌ಗಿಂತಲೂ ಹೆಚ್ಚು ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಅಗತ್ಯವಿರುವ ವ್ಯಕ್ತಿಗಳು ಮತ್ತು ಆಸ್ಪತ್ರೆಗಳಿಗೆ ತಲುಪಿಸಲಾಗಿದೆ; ಸರಬರಾಜು ಸರಪಳಿಯನ್ನು ಬಲಪಡಿಸಲು ರಸ್ತೆ ಸಾರಿಗೆ ಸಾಗಾಟ ಜಾಲವು ಪ್ರತಿ ದಿನ 75 ಟನ್ ಗಿಂತ ಹೆಚ್ಚು ಅಂಚೆಗಳು ಮತ್ತು ಪಾರ್ಸೆಲ್ ಗಳನ್ನು ಹೊತ್ತು, 25000 ಕಿ.ಮೀ ಗಿಂತಲೂ ಹೆಚ್ಚು ದೂರ ಕ್ರಮಿಸುತ್ತದೆ. ಭಾರತೀಯ ಅಂಚೆಯ ಪೇಮೆಂಟ್ಸ್ ಬ್ಯಾಂಕ್ ಮೂಲಕ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಬಳಸಿ ಸುಮಾರು 85 ಲಕ್ಷ ಫಲಾನುಭವಿಗಳಿಗೆ 1500 ಕೋಟಿ ರೂ. ವಿತರಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626160

ಮಾರಿಷಸ್ ಪ್ರಧಾನಿಯೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾರಿಷಸ್‌ನ ಪ್ರಧಾನಿ ಪ್ರವೀಂದ್ ಜಗ್ನೌಥ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಅಂಫಾನ್ ಚಂಡಮಾರುತದಿಂದ ಭಾರತದಲ್ಲಿ ಆಗಿರುವ ಹಾನಿಗೆ ಪ್ರಧಾನಿ ಜಗ್ನೌಥ್ ಸಂತಾಪ ಸೂಚಿಸಿದರು. 'ಆಪರೇಷನ್ ಸಾಗರ್' ನ ಭಾಗವಾಗಿ ಭಾರತೀಯ ನೌಕಾ ಹಡಗು 'ಕೇಸರಿ' ಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಾರಿಷಸ್ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡಲು ಔಷಧಿಗಳ ರವಾನೆ ಮತ್ತು 14 ಸದಸ್ಯರ ವೈದ್ಯಕೀಯ ತಂಡದೊಂದಿಗೆ  ಮಾರಿಷಸ್‌ಗೆ ಕಳುಹಿಸಿದ್ದಕ್ಕಾಗಿ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ತಿಳಿಸಿದರು, ಭಾರತ ಮತ್ತು ಮಾರಿಷಸ್ ಮಧ್ಯೆ ವಿಶೇಷವಾದ ಜನರು-ಜನರ ನಡುವಿನ ಸಂಬಂಧಗಳನ್ನು ಸ್ಮರಿಸಿದ ಪ್ರಧಾನಿ, ಬಿಕ್ಕಟ್ಟಿನ ಈ ಸಮಯದಲ್ಲಿ ತನ್ನ ಸ್ನೇಹಿತರನ್ನು ಬೆಂಬಲಿಸುವುದು ಭಾರತದ ಕರ್ತವ್ಯ ಎಂದು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626360

ಪ್ರಧಾನಿ ಮತ್ತು ಶ್ರೀಲಂಕಾ ಅಧ್ಯಕ್ಷರ ನಡುವಿನ ದೂರವಾಣಿ ಮಾತುಕತೆ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು  ಇಂದು ಶ್ರೀಲಂಕಾ ಅಧ್ಯಕ್ಷ ಶ್ರೀ ಗೋತಬಯ ರಾಜಪಕ್ಸ ಅವರೊಂದಿಗೆ ಕೋವಿಡ್-19 ಸಾಂಕ್ರಾಮಿಕ ಮತ್ತು ಇದರಿಂದಾಗಿ ಈ ಪ್ರದೇಶದಲ್ಲಿ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಭಾರತವು ಶ್ರೀಲಂಕಾಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದನ್ನು ಮುಂದುವರೆಸಲಿದೆ ಎಂದು ಶ್ರೀಲಂಕಾ ಅಧ್ಯಕ್ಷರಿಗೆ ಪ್ರಧಾನ ಮಂತ್ರಿ ಭರವಸೆ ನೀಡಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626358

72 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ, 2,00,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರೀಯ ಪರೀಕ್ಷಾ ಅಭ್ಯಾಸ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ

ಜೆಇಇ (ಮುಖ್ಯ) ಮತ್ತು ನೀಟ್‌ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಾರಂಭಿಸಿರುವ ರಾಷ್ಟ್ರೀಯ ಪರೀಕ್ಷಾ ಅಭ್ಯಾಸ್ ಆ್ಯಪ್ ವಿದ್ಯಾರ್ಥಿಗಳಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಇದು ಪ್ರಾರಂಭವಾದ 72 ಗಂಟೆಗಳಲ್ಲೇ 2,00,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ್ದಾರೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಲ್ 'ನಿಶಾಂಕ್' ಹೇಳಿದ್ದಾರೆ.  80 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಇಇ (ಮುಖ್ಯ) ಮತ್ತು ನೀಟ್‌ ಪರೀಕ್ಷೆಗಾಗಿ ಅಣಕು ಪರೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರ ನಡುವೆ ಗರಿಷ್ಠ ಅಣಕು ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626172

ಸಮುದಾಯ ರೇಡಿಯೋಗಳಲ್ಲಿ ಜಾಹೀರಾತು ಬಿತ್ತರ ಸಮಯವನ್ನು ಪ್ರತಿ ಗಂಟೆಗೆ 12 ನಿಮಿಷಗಳಿಗೆ ಹೆಚ್ಚಿಸುವ ಕುರಿತು ಸಮಾಲೋಚನೆ ನಡೆಯುತ್ತಿದೆ: ಶ್ರೀ ಪ್ರಕಾಶ್ ಜಾವಡೇಕರ್

ಸಮುದಾಯ ರೇಡಿಯೋಗಳಲ್ಲಿ ಜಾಹೀರಾತು ಸಮಯವನ್ನು ಪ್ರಸ್ತುತ ಇರುವ 7 ನಿಮಿಷದಿಂದ ಟಿವಿ ಚಾನೆಲ್‌ಗಳಿಗೆ ಸಮನಾಗಿ 12 ನಿಮಿಷಗಳಿಗೆ ಹೆಚ್ಚಿಸಲು ಉತ್ಸುಕನಾಗಿದ್ದೇನೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಎಲ್ಲಾ ಸಮುದಾಯ ರೇಡಿಯೋ ಕೇಂದ್ರಗಳ ಕೇಳುಗರನ್ನು ಏಕಕಾಲದಲ್ಲಿ ಉದ್ದೇಶಿಸಿ ಮಾತನಾಡಿದ ಸಚಿವರು ಕೊರೊನಾವೈರಸ್ ವಿರುದ್ಧದ ಹೋರಾಟವನ್ನು ಮುಂದುವರಿಸುವಂತೆ ಜನರನ್ನು ಒತ್ತಾಯಿಸಿದರು. ನಾವು ಇತರ ಕಾಯಿಲೆಗಳನ್ನು ಓಡಿಸಿದ ರೀತಿಯಲ್ಲೇ ಇದನ್ನೂ ಓಡಿಸುತ್ತೇವೆ ಎಂದು ಹೇಳಿದರು. ಹೇಗಿದ್ದರೂ ಈಗ ನಾವು, ನಾಲ್ಕು ಹಂತಗಳ ಹೊಸ ಕ್ರಮವನ್ನು ಹೊಂದಿದ್ದೇವೆ, ಅದೆಂದರೆ, ಸಾಧ್ಯವಾದಷ್ಟು ಮನೆಯಲ್ಲೇ ಇರುವುದು, ಆಗಾಗ್ಗೆ ಕೈ ತೊಳೆಯುವುದು, ಹೊರಗೆ ಬಂದಾಗ ಮುಖಗವಸು ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಎಂದು ಸಚಿವರು ತಿಳಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626170

ಏಪ್ರಿಲ್ 2020 ಮಾಸಿಕ ಉತ್ಪಾದನಾ ವರದಿ

2020 ರ ಏಪ್ರಿಲ್ ನಲ್ಲಿ ಕೋವಿಡ್ -19 ಲಾಕ್‌ಡೌನ್ ಅವಧಿಯಲ್ಲಿ, ದೇಶೀಯ ಕಚ್ಚಾ ತೈಲ ಉತ್ಪಾದನೆ, ನೈಸರ್ಗಿಕ ಅನಿಲ ಉತ್ಪಾದನೆ ಮತ್ತು ಸಂಸ್ಕರಣಾಗಾರಗಳ ಉತ್ಪಾದನೆಯು ಕುಸಿತ ಕಂಡಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626327

ಕೋವಿಡ್ ನಂತರದಲ್ಲಿ ಭಾರತವು ಹೆಚ್ಚು ವಿಶ್ವಾಸದಿಂದ ಹೊರಹೊಮ್ಮುತ್ತದೆ ಮತ್ತು ಜಾಗತಿಕವಾಗಿ ಗೌರವ ಗಳಿಸುತ್ತದೆ: ಡಾ. ಜಿತೇಂದ್ರ ಸಿಂಗ್

ಕೋವಿಡ್ ನಂತರದ ಭಾರತವು ಹೆಚ್ಚು ವಿಶ್ವಾಸದಿಂದ ಹೊರಹೊಮ್ಮುತ್ತದೆ ಮತ್ತು ಜಾಗತಿಕ ರಂಗದಲ್ಲಿ ಗೌರವವನ್ನು ಗಳಿಸುತ್ತದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಡಾ.ಜಿತೇಂದ್ರ ಸಿಂಗ್ ಅವರು, ಈ ಬಿಕ್ಕಟ್ಟಿನ ಸಮಯದ ಎಲ್ಲಾ ಆತಂಕಗಳು ಮತ್ತು ನಿರೀಕ್ಷೆಗಳ ಹೊರತಾಗಿಯೂ, ಇಂದಿನಿಂದ ಆರು ತಿಂಗಳ ನಂತರ, ಜಗತ್ತು ಭಾರತವನ್ನು ಗೌರವದಿಂದ ನೋಡುತ್ತದೆ ಮತ್ತು ನಮ್ಮೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂಬ ವಿಶ್ವಾಸವಿದೆ. ಅಷ್ಟೇ ಅಲ್ಲ, ಭಾರತವು ವ್ಯಾಪಾರ ಮತ್ತು ವ್ಯವಹಾರಕ್ಕೆ ಸುರಕ್ಷಿತ ತಾಣವಾಗಿಯೂ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626205

CeNS ವಿನ್ಯಾಸಗೊಳಿಸಿರುವ ಆರಾಮದಾಯಕ ಮುಖಗವಸು ಸಾರ್ವಜನಿಕರು ದೀರ್ಘಕಾಲ ಬಳಸುವಂತೆ ಪ್ರೋತ್ಸಾಹಿಸುತ್ತದೆ

ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ (ಸಿಇಎನ್ಎಸ್) ನ ಸಂಶೋಧಕರ ತಂಡವು ಕಪ್ ಆಕಾರದ ಮುಖಗವಸನ್ನು (ಪೇಟೆಂಟ್ ಸಲ್ಲಿಸಿದೆ) ಅಭಿವೃದ್ಧಿಪಡಿಸಿದೆ, ಈ ಮುಖಗವಸು ಮಾತನಾಡುವಾಗ ಬಾಯಿಯ ಮುಂದೆ ಸಾಕಷ್ಟು ಜಾಗವಿರುವಂತೆ ನೋಡಿಕೊಳ್ಳುತ್ತದೆ. ಇವುಗಳ ಬೃಹತ್ ಉತ್ಪಾದನೆಗಾಗಿ ಬೆಂಗಳೂರು ಮೂಲದ ಕಂಪನಿಗೆ ವರ್ಗಾಯಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626356

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಜ್ಮೀರ್ ಸ್ಮಾರ್ಟ್ ಸಿಟಿಯ ವಾರ್ ರೂಮ್

ಕೋವಿಡ್ -19 ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕೋವಿಡ್ -19 ಹರಡುವುದನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಲು ಅಜ್ಮೀರ್ ನ ಹಿರಿಯ ಆಡಳಿತ ಅಧಿಕಾರಿಗಳು, ವೈದ್ಯಕೀಯ ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಗರ ನಿಗಮ್‌ನಲ್ಲಿ ಎಎಂಸಿ ಕೋವಿಡ್ -19 ವಾರ್ ರೂಮ್ ಸ್ಥಾಪಿಸಿದೆ. ಡಬ್ಲ್ಯುಎಚ್‌ಒ ಮತ್ತು ಗೃಹ ಸಚಿವಾಲಯ ಹೊರಡಿಸಿದ ಕೋವಿಡ್ -19 ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ತನ್ನ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ನವೀನ ಕಾರ್ಯತಂತ್ರಗಳ ಯೋಜನೆ ಮತ್ತು ಅನುಷ್ಠಾನಕ್ಕೆ ವಾರ್ ರೂಮ್ ಸಹಕಾರಿಯಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626401

ಸ್ಥಳೀಯದಿಂದ ಜಾಗತಿಕದವರೆಗೆಎಂಬ ವಿಷಯದೊಂದಿಗೆ ಸೆಪ್ಟೆಂಬರ್ 2020 ರಿಂದಹುನಾರ್ಹಾತ್ಪುನಾರಂಭ

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸುಮಾರು 5 ತಿಂಗಳ ಅಂತರದ ನಂತರ, ದೇಶಾದ್ಯಂತದ ಕಲಾವಿದರು ಮತ್ತು ಕುಶಲಕರ್ಮಿಗಳ “ಸಬಲೀಕರಣ ವಿನಿಮಯ” ವಾಗಿ ಮಾರ್ಪಟ್ಟಿರುವ “ಹುನಾರ್‌ಹಾತ್” ಸೆಪ್ಟೆಂಬರ್ 2020 ರಿಂದ “ಲೋಕಲ್ ಟು ಗ್ಲೋಬಲ್” ಎಂಬ ವಿಷಯದೊಂದಿಗೆ ಪುನರಾರಂಭಗೊಳ್ಳಲಿದೆ ಮತ್ತು ಈ ಮೊದಲಿಗಿಂತ ಹೆಚ್ಚು ಕುಶಲಕರ್ಮಿಗಳ ಭಾಗವಹಿಸಲಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626322

 

ಪಿ ಐ ಬಿ ವಾಸ್ತವ ಪರೀಶೀಲನೆ

***



(Release ID: 1626498) Visitor Counter : 323