ಹಣಕಾಸು ಸಚಿವಾಲಯ

ಏಪ್ರಿಲ್ 1, 2020 ರಿಂದ ಈ ತನಕ ಒಟ್ಟು ರೂ. 26,242 ಕೋಟಿ ಮರುಪಾವತಿ

Posted On: 22 MAY 2020 3:15PM by PIB Bengaluru

ಏಪ್ರಿಲ್ 1, 2020 ರಿಂದ ತನಕ ಒಟ್ಟು ರೂ. 26,242 ಕೋಟಿ ಮರುಪಾವತಿ

 

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿ.ಬಿ.ಡಿ.ಟಿ) ಏಪ್ರಿಲ್ 1, 2020ರಿಂದ ಮೇ 21,2020 ರವರೆಗೆ ಒಟ್ಟು 16,84,298 ತೆರಿಗೆದಾರರಿಗೆ ಮೌಲ್ಯಮಾಪನ ನಂತರ ರೂ. 26,242 ಕೋಟಿ ಮೊತ್ತದ ತೆರಿಗೆಯನ್ನು ಮರು ಪಾವತಿಸಿದೆ.

ಅವಧಿಯಲ್ಲಿ 1,02,392 ತೆರಿಗೆದಾರರಿಗೆ ಮೌಲ್ಯಮಾಪನ ನಂತರ ರೂ.11,610 ಕೋಟಿ ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ ಹಾಗೂ 15,81,906 ತೆರಿಗೆದಾರರಿಗೆ ಮೌಲ್ಯಮಾಪನ ನಂತರ ರೂ. 14,632 ಕೋಟಿ ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಿದೆ.

ಕಳೆದ ವಾರ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು "ಆತ್ಮಾ ನಿರ್ಭರ್ ಭಾರತ್ ಅಭಿಯಾನ" ಮೂಲಕ ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದ ನಂತರ, ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ, ಹಾಗೂ ಇನ್ನೂ ಹೆಚ್ಚಿನ ವೇಗದಲ್ಲಿ ಮರುಪಾವತಿ ಮಾಡುವ ಪ್ರಕ್ರಿಯೆಗಳಿಗೆ ಒತ್ತು ನೀಡಲಾಗುತ್ತಿದೆ. ಮೇ 16,2020 ರಂದು ಕೊನೆಗೊಂಡ ವಾರದಲ್ಲಿ ಅಂದರೆ, ಮೇ 9 ರಿಂದ 16, 2020 ರವರೆಗೆ ಸಿ.ಬಿ.ಡಿ.ಟಿ.ಯು ಒಟ್ಟು 37,531 ಆದಾಯ ತೆರಿಗೆದಾರರಿಗೆ ಮೌಲ್ಯಮಾಪನ ನಂತರ ರೂ. 2050.61 ಕೋಟಿ ಬಿಡುಗಡೆ ಮಾಡಿದೆ ಹಾಗೂ ಒಟ್ಟು 2878 ಕಾರ್ಪೊರೇಟ್ ತೆರಿಗೆದಾರರಿಗೆ ಮೌಲ್ಯಮಾಪನ ನಂತರ ರೂ. 867.62 ಕೋಟಿ ಮರುಪಾವತಿಗಾಗಿ ಬಿಡುಗಡೆ ಮಾಡಿದೆ. ವಾರದಲ್ಲಿ, ಅಂದರೆ ಮೇ 17 ರಿಂದ 21 , 2020 ರವರೆಗೆ, ಇನ್ನೂ 1,22,764 ಆದಾಯ ತೆರಿಗೆ ತೆರಿಗೆದಾರರಿಗೆ ಮೌಲ್ಯಮಾಪನ ನಂತರ ರೂ. 2672.97 ಕೋಟಿಯನ್ನು ಬಿಡುಗಡೆ ಮಾಡಿದೆ. ಹಾಗೂ ಟ್ರಸ್ಟ್ ಗಳು, ಎಂ.ಎಸ್‌.ಎಂ..ಗಳು, ವಿವಿಧ ಮಾಲೀಕತ್ವಗಳು, ಪಾಲುದಾರಿಕೆಗಳು ಇತ್ಯಾದಿ ಸಂಸ್ಥೆಗಳನ್ನು ಒಳಗೊಂಡಂತೆ ಒಟ್ಟು 33,774 ಕಾರ್ಪೊರೇಟ್ ತೆರಿಗೆದಾರರಿಗೆ ಮೌಲ್ಯಮಾಪನ ನಂತರ ರೂ. 6714.34 ಕೋಟಿಗಳನ್ನು ಮರುಪಾವತಿ ಮಾಡಿದೆ. ಮೂಲಕ ಒಟ್ಟಾರೆ 1,56,538 ತೆರಿಗೆದಾರರಿಗೆ ಮೌಲ್ಯಮಾಪನ ನಂತರ ರೂ. 9387.31 ಕೋಟಿ ಮರುಪಾವತಿ ಮಾಡಿದೆ.

***


(Release ID: 1626242)