ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಸ್ಥಳೀಯದಿಂದ ಜಾಗತಿಕ: ವಿದೇಶಿ ಮಾರುಕಟ್ಟೆಗಳಲ್ಲಿ ಖಾದಿ ಮುಖಗವಸುಗಳು ಲಭ್ಯ

Posted On: 21 MAY 2020 4:06PM by PIB Bengaluru

ಸ್ಥಳೀಯದಿಂದ ಜಾಗತಿಕ: ವಿದೇಶಿ ಮಾರುಕಟ್ಟೆಗಳಲ್ಲಿ ಖಾದಿ ಮುಖಗವಸುಗಳು ಲಭ್ಯ

 

ಇತ್ತೀಚೆಗೆ ಬಹಳ ವ್ಯಾಪಕವಾಗಿ ಜನಪ್ರಿಯವಾದ ಖಾದಿ ಮುಖಗವಸುಗಳುಜಾಗತಿಕಮಾರುಕಟ್ಟೆಯನ್ನು ಗಮನದಲ್ಲಿಟ್ಟು ಸರ್ವ ಮಾರಾಟ ಸನ್ನದ್ಧತೆಗಳೊಂದಿಗೆ ಮುನ್ನುಗ್ಗಲು ಸಿದ್ಧವಾಗಿವೆ. ಎಲ್ಲಾ ರೀತಿಯ ವೈದ್ಯಕೀಯೇತರ / ಶಸ್ತ್ರಚಿಕಿತ್ಸೆಯಲ್ಲದ ಮುಖಗವಸುಗಳ ರಫ್ತು ನಿಷೇಧವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ತೆಗೆದುಹಾಕಿದ ನಂತರ ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗ(ಕೆ.ವಿ..ಸಿ)ವು ಈಗ ಖಾದಿ, ಹತ್ತಿ ಮತ್ತು ರೇಷ್ಮೆ ಮುಖಗವಸುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಕಾರ್ಯಯೋಜನೆ ಮಾಡುತ್ತಿದೆ. ಬಗ್ಗೆ ಮೇ 16,2020ರಂದು ವಿದೇಶ ವ್ಯಾಪಾರ ನಿರ್ದೇಶನಾಲಯ (ಡಿ.ಜಿ.ಎಫ್.ಟಿ) ಅಧಿಸೂಚನೆಯನ್ನು ಹೊರಡಿಸಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಆತ್ಮನಿರ್ಭರ್ ಭಾರತ್ ಅಭಿಯಾನ್ಹಿನ್ನೆಲೆಯಲ್ಲಿ ನೀಡಿದಸ್ಥಳೀಯ ದಿಂದ ಜಾಗತಿಕ (ಲೋಕಲ್ ಟು ಗ್ಲೋಬಲ್)” ಕರೆಗೆ ಸ್ಪಂದಿಸಿ ನೂತನ ಕ್ರಮ ವ್ಯವಸ್ಥೆಗಳನ್ನು ಜಾರಿಗೆ ತರಲಾಯಿತು. ಜಾಗತಿಕ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮುಖಗವಸುಗಳ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಕೆ.ವಿ..ಸಿ. ಕ್ರಮವಾಗಿ ಎರಡು ಪದರಿನ(ಪರೆಯ) ಮತ್ತು ಮೂರು ಪದರಿನ(ಪರೆಯ) ಹತ್ತಿ ಮತ್ತು ರೇಷ್ಮೆ ಮುಖಗವಸುಗಳನ್ನು ಅಭಿವೃದ್ಧಿಪಡಿಸಿದೆ. ಮುಖಗವಸುಗಳು, ಪುರುಷರಿಗೆ ಎರಡು ಬಣ್ಣಗಳಲ್ಲಿ ಮತ್ತು ಮಹಿಳೆಯರಿಗೆ ಅನೇಕ ಬಣ್ಣಗಳಲ್ಲಿ ಲಭ್ಯವಿದೆ.

ಕೆ.ವಿ..ಸಿ. ಇದುವರೆಗೆ 8 ಲಕ್ಷ ಮುಖಗವಸುಗಳನ್ನು ಪೂರೈಸಲು ಖರೀದಿ ಆದೇಶಗಳನ್ನು ಸ್ವೀಕರಿಸಿದೆ ಮತ್ತು ಲಾಕ್ಡೌನ್ ಅವಧಿಯಲ್ಲಿ ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಮುಖಗವಸುಗಳನ್ನು ಪೂರೈಸಿದೆ. ರಾಷ್ಟ್ರಪತಿ ಭವನ, ಪ್ರಧಾನ ಮಂತ್ರಿಗಳ ಕಚೇರಿ, ಕೇಂದ್ರ ಸರ್ಕಾರದ ಸಚಿವಾಲಯಗಳು, ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ಸರ್ಕಾರದ ವಿವಿಧ ಇಲಾಖೆಗಳಿಂದ ಖರೀದಿ ಆದೇಶಗಳನ್ನು ಮತ್ತು ಜನಸಾಮಾನ್ಯರಿಂದ ಮಿಂಚಂಚೆ(ಇಮೈಲ್) ಮೂಲಕ ಖರೀದಿ ಆದೇಶಗಳನ್ನು ಪಡೆದಿದೆ. ರೀತಿಯ ಮಾರಾಟದ ಹೊರತಾಗಿಯೂ, ದೇಶಾದ್ಯಂತ ಖಾದಿ ಸಂಸ್ಥೆಗಳಿಂದ 7.5 ಲಕ್ಷಕ್ಕೂ ಹೆಚ್ಚು ಖಾದಿ ಮುಖಗವಸುಗಳನ್ನು ಸ್ಥಳೀಯ ಜಿಲ್ಲಾ ಪ್ರಾಧಿಕಾರಗಳಿಗೆ ಉಚಿತವಾಗಿ ವಿತರಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಖಾದಿಯ ಜನಪ್ರಿಯತೆ ವಿಶ್ವದಾದ್ಯಂತ ಗಮನಾರ್ಹವಾಗಿ ಬೆಳೆದಿದೆ. ನಿಟ್ಟಿನಲ್ಲಿ ದುಬೈ, ಯು.ಎಸ್., ಮಾರಿಷಸ್ ಮತ್ತು ಹಲವಾರು ಯುರೋಪಿಯನ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಖಾದಿ ಮುಖಗವಸುಗಳನ್ನು ಪೂರೈಸಲು ಕೆ.ವಿ..ಸಿ. ಯೋಜಿಸಿದೆ. ದೇಶಗಳಲ್ಲಿ ಖಾದಿ ಮುಖಗವಸುಗಳನ್ನು ಭಾರತೀಯ ರಾಯಭಾರ ಕಚೇರಿಗಳ ಮೂಲಕ ಮಾರಾಟ ಮಾಡಲು ಕೆ.ವಿ..ಸಿ. ಯೋಜಿಸಿದೆ.

ಖಾದಿ ಮುಖಗವಸುಗಳ ರಫ್ತು ಪ್ರಧಾನಮಂತ್ರಿಯವರಸ್ಥಳೀಯ ದಿಂದ ಜಾಗತಿಕ (ಲೋಕಲ್ ಟು ಗ್ಲೋಬಲ್)ಸಂಕಲ್ಪಕ್ಕೆ ಸೂಕ್ತ ಉದಾಹರಣೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಧಾನಮಂತ್ರಿಯ ಮನವಿಯ ನಂತರ ಜಗತ್ತಿನಾದ್ಯಂತ ಖಾದಿ ಉಡುಪು( ಫ್ಯಾಬ್ರಿಕ್) ಮತ್ತು ಇತರ ಖಾದಿ ಉತ್ಪನ್ನಗಳ ಜನಪ್ರಿಯತೆಯು ಗಮನಾರ್ಹವಾಗಿ ಬೆಳೆದಿದೆ. ಖಾದಿ ಮುಖಗವಸುಗಳ ರಫ್ತು ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಅಂತಿಮವಾಗಿ ಭಾರತದಲ್ಲಿ ಕುಶಲಕರ್ಮಿಗಳಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶವನ್ನು ಖಾದಿ ಉತ್ಪನ್ನಗಳು ಸೃಷ್ಟಿಸುತ್ತವೆ. ” ಎಂದು ಕೆ.ವಿ..ಸಿ. ಅಧ್ಯಕ್ಷ ಶ್ರೀ ವಿನೈ ಕುಮಾರ್ ಸಕ್ಸೇನಾ ಹೇಳಿದರು. "ಕರೋನಾ ಸಾಂಕ್ರಾಮಿಕ ವಿರುದ್ಧ ಹೋರಾಡಲು ಮುಖಗವಸುಗಳು ಅತ್ಯಂತ ನಿರ್ಣಾಯಕ ಹಾಗೂ ಸರಳ ಸಮರ್ಥ ಸಾಧನವಾಗಿದೆ. ಇಮ್ಮಡಿ ತಿರುಚಿದ ಖಾದಿ ಬಟ್ಟೆಯಿಂದ ತಯಾರಿಸಿದ ಮುಖಗವಸುಗಳು ಬಹಳ ಪ್ರಮಾಣದ ಬೇಡಿಕೆಯನ್ನು ಹೊಂದಿವೆ ಮಾತ್ರವಲ್ಲದೆ, ಕಡಿಮೆ ವೆಚ್ಚದ ಪರಿಣಾಮಕಾರಿ, ಸರಾಗವಾಗಿ ಉಸಿರಾಡುವ, ತೊಳೆಯಬಹುದಾದ, ಮರುಬಳಕೆ ಮಾಡಬಹುದಾದ ಮತ್ತು ಜೈವಿಕ ವಿಘಟನೀಯ ಉತ್ತಮ ಗುಣಮಟ್ಟದ್ದಾಗಿವೆಎಂದು ಕೆ.ವಿ..ಸಿ. ಅಧ್ಯಕ್ಷ ಶ್ರೀ ವಿನೈ ಕುಮಾರ್ ಸಕ್ಸೇನಾ ಅವರು ಹೇಳಿದರು.

ಮುಖಗವಸುಗಳ ತಯಾರಿಕೆಗಾಗಿ ಕೆ.ವಿ..ಸಿ. ನಿರ್ದಿಷ್ಟವಾಗಿ ಇಮ್ಮಡಿ ತಿರುಚಿದ ಖಾದಿ ಬಟ್ಟೆಯನ್ನು ಮಾತ್ರ ಬಳಸುತ್ತಿದೆ ಏಕೆಂದರೆ ಇದು ಒಳಗೆ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಹಾಗೂ ಉಸಿರಾಟದ ಗಾಳಿಯು ಸುಲಭವಾಗಿ ಸಾಗಲು ಸಹಾಯ ಮಾಡುತ್ತದೆ. ಮುಖಗವಸುಗಳನ್ನು ಇನ್ನೂ ಹೆಚ್ಚು ವಿಶೇಷವಾಗಿಸುವುದು ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು. ಇದರಲ್ಲಿರುವ ಹತ್ತಿ ಯಾಂತ್ರಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸಿದರೆ, ಇದರ ರೇಷ್ಮೆ ಎಲೆಕ್ಟ್ರೋಸ್ಟಾಟಿಕ್ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತಿದೆ.


***



(Release ID: 1625904) Visitor Counter : 244