ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷವರ್ಧನ್ ರವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಲಿಪ್ತ ಒಕ್ಕೂಟದ (ನ್ಯಾಮ್) ಆರೋಗ್ಯ ಸಚಿವರ ಸಭೆಯಲ್ಲಿ ಭಾಗವಹಿಸಿದರು

Posted On: 20 MAY 2020 5:58PM by PIB Bengaluru

ಡಾ. ಹರ್ಷವರ್ಧನ್ ರವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಲಿಪ್ತ ಒಕ್ಕೂಟದ (ನ್ಯಾಮ್) ಆರೋಗ್ಯ ಸಚಿವರ ಸಭೆಯಲ್ಲಿ ಭಾಗವಹಿಸಿದರು

ಇಡೀ ಜಗತ್ತು ನಮ್ಮ ಕುಟುಂಬ ಎನ್ನುವ ವಸುದೈವ ಕುಟುಂಬಕಂ ಸಿದ್ಧಾಂತವನ್ನು ಎತ್ತಿ ತೋರಿಸಿದರು

 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಹರ್ಷವರ್ಧನ್ ರವರು ಇಂದು ಇಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಅಲಿಪ್ತ ರಾಷ್ಟ್ರಗಳ ಚಳುವಳಿ ಅಥವಾ ನಾನ್ ಅಲೈನಡ್ ಮೂವ್ಮೆಂಟ್‌ (ನ್ಯಾಮ್) ಒಕ್ಕೂಟದ ಆರೋಗ್ಯ ಸಚಿವರ ಸಭೆಯಲ್ಲಿ ಭಾಗವಹಿಸಿದರು.

ಸಭೆಯ ಅಧ್ಯಕ್ಷತೆಯನ್ನು ಅಜರ್ಬೈಜಾನ್ ಗಣರಾಜ್ಯದ ಆರೋಗ್ಯ ಸಚಿವ ಶ್ರೀ ಒಗ್ಟೆ ಶಿರಲಿಯೇವ್ ವಹಿಸಿದ್ದರು.

ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನ ಮತ್ತು ಜೀವನೋಪಾಯವನ್ನು ಅಸ್ತವ್ಯಸ್ತಗೊಳಿಸಿದ ಸಾಂಕ್ರಾಮಿಕ ರೋಗವನ್ನು ಅಂತರರಾಷ್ಟ್ರೀಯ ಸಮುದಾಯ ಎದುರಿಸುತ್ತಿರುವ ಸಮಯದಲ್ಲಿ ನಾಮ್ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ. ಕೋವಿಡ್-19ರಿಂದ ಉಂಟಾಗಿರುವ ಜಾಗತಿಕ ಸಮಸ್ಯೆಗೆ ಅಲಿಪ್ತ ಒಕ್ಕೂಟ (ನಾಮ್) ತನ್ನ ಕಳವಳವನ್ನು ವ್ಯಕ್ತಪಡಿಸಿತು ಮತ್ತು ಸರಿಯಾದ ಸಿದ್ಧತೆ, ತಡೆಗಟ್ಟುವಿಕೆ, ಮರುಸ್ಥಾಪನೆ ಮತ್ತು ಹೆಚ್ಚಿನ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಹಯೋಗದೊಂದಿಗೆ ಹೋರಾಡಲು ನಿರ್ಧರಿಸಿತು.

ಡಾ. ಹರ್ಷ್ ವರ್ಧನ್ ಅವರು ಮಾಡಿದ ಭಾಷಣ ಹೀಗಿದೆ:

ಮಾನ್ಯ ಅಧ್ಯಕ್ಷರೇ, ಗೌರವಾನ್ವಿತರೇ, ಮಹಿಳೆಯರೆ ಮತ್ತು ಮಹನೀಯರೆ !

ಮಹತ್ವದ ಮತ್ತು ಸಮಯೋಚಿತ ಸಮ್ಮೇಳನವನ್ನು ಆಯೋಜಿಸಿದ್ದಕ್ಕಾಗಿ ಅಜೆರ್ಬೈಜಾನ್ ಗಣರಾಜ್ಯದ ಆರೋಗ್ಯ ಸಚಿವರಾದ ಚೇರ್ ಅವರನ್ನು ಅಭಿನಂದಿಸುವ ಮೂಲಕ ನನ್ನ ಮಾತನ್ನು ಪ್ರಾರಂಭಿಸಲು ಬಯಸುತ್ತೇನೆ.

ಇದು ನಿಸ್ಸಂದೇಹವಾಗಿ ನಮ್ಮ ಜಗತ್ತಿನ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಸಮಯ. ಕೋವಿಡ್-19 ಮೂರು ನೂರು ಸಾವಿರಕ್ಕೂ ಹೆಚ್ಚು (3,00,000) ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡಿದೆ, ನಾಲ್ಕು ದಶಲಕ್ಷಕ್ಕೂ ಹೆಚ್ಚು ಜನರನ್ನು ಸೋಂಕಿಗೊಳಗಾಗಿಸಿದೆ ಮತ್ತು ಶತಕೋಟಿಗಳ ಜೀವನೋಪಾಯವನ್ನು ಕಸಿದುಕೊಂಡಿದೆ. ಮಾರಕ ಕಾಯಿಲೆಗೆ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡಿರುವ ವಿಶ್ವದಾದ್ಯಂತದ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ಸಲ್ಲಿಸುತ್ತೇನೆ.

ಶ್ರೀ ಚೇರ್ಮನ್ ರವರೆ, ಕೋವಿಡ್-19 ನಾವು ಹಿಂದೆಂದಿಗಿಂತಲೂ ಹೆಚ್ಚು ಪರಸ್ಪರ ಸಂಬಂಧ ಹೊಂದಿದ್ದೇವೆ ಮತ್ತು ಪರಸ್ಪರ ಅವಲಂಬಿತರಾಗಿದ್ದೇವೆ ಎಂದು ನಮಗೆ ಮನವರಿಕೆ ಮಾಡಿಕೊಟ್ಟಿದೆ. ನಮ್ಮ ಜಗತ್ತು ಇಂದು ಎದುರಿಸುತ್ತಿರುವ ಹವಾಮಾನ ಬದಲಾವಣೆ ಮತ್ತು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳಂತಹ ಮಾನವ ನಿರ್ಮಿತ ಸವಾಲುಗಳನ್ನು ಒಗ್ಗಟ್ಟಾಗಿದ್ದರೆ ಮಾತ್ರ ಎದುರಿಸಬಹುದು ಬೇರೆಬೇರೆಯಾಗಿದ್ದರೆ ಅಲ್ಲ ಎನ್ನುವುದನ್ನು ನಮಗೆ ಮನವರಿಕೆ ಮಾಡಿಕೊಟ್ಟಿದೆ. ಇದಕ್ಕೆ ಸಹಯೋಗದ ಅಗತ್ಯವಿದೆ, ಬಲವಂತವಲ್ಲ.

ಪ್ರಸ್ತುತ ಸಾಂಕ್ರಾಮಿಕ ಬಿಕ್ಕಟ್ಟು ವಿಶ್ವಾಸಾರ್ಹ ಮತ್ತು ಪರಿಣಾಮಕಾರಿಯಾಗಲು ಜಾಗತಿಕ ಆಡಳಿತ ಸಂಸ್ಥೆಗಳು ಹೆಚ್ಚು ಪ್ರಜಾಪ್ರಭುತ್ವ, ಪಾರದರ್ಶಕ ಮತ್ತು ಪ್ರತಿನಿಧಿಸಬೇಕಾಗಿದೆ ಮತ್ತು ಸುಧಾರಿತ ಬಹುಪಕ್ಷೀಯತೆಯು ಸಮಯದ ಅಗತ್ಯವಾಗಿದೆ ಎಂಬುದನ್ನು ಸಹ ನಮಗೆ ನೆನಪಿಸುತ್ತದೆ.

ತನ್ನ ಕಡೆಯಿಂದ, ಭಾರತವು ದೃಢ ವಾದ ರಾಜಕೀಯ ಇಚ್ಛಾಶಕ್ತಿಯೊಂದಿಗೆ ಕೋವಿಡ್ ವಿರುದ್ಧ ಹೋರಾಡುತ್ತಿದೆ. ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವೇಗ, ಪ್ರಮಾಣ ಮತ್ತು ದೃಢನಿಶ್ಚಯವನ್ನು ಖಚಿತಪಡಿಸಿದ್ದಾರೆ. ನಮ್ಮಲ್ಲಿ ವೈರಸ್ ಹರಡುವುದನ್ನು ನಿಯಂತ್ರಿಸಲು ಭಾರತವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ ಮೇಲೆ ಕೇಂದ್ರೀಕರಿಸಿರುವದರಿಂದ ಇತರ ಕಾಯಿಲೆಗಳ ರೋಗಿಗಳನ್ನು ನಿರ್ಲಕ್ಷ್ಯಗೊಳಗಾಗಬಾರದು ಎನ್ನುವುದನ್ನು ನಾವು ಖಾತ್ರಿಗೊಳಿಸಿದ್ದೇವೆ.

ಭೀಕರ ರೋಗವನ್ನು ನಾವು ಹತ್ತಿಕ್ಕುತ್ತೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ರಾಜಕೀಯ ಇಚ್ಛಾಶಕ್ತಿಯಿಂದ ಸಜ್ಜಿತವಾದ 1.35 ಶತಕೋಟಿ ಭಾರತೀಯರು ರಾಷ್ಟ್ರವ್ಯಾಪಿ ಲಾಕ್ಡೌನ್ಗಳ ನಿರ್ಧಾರಗಳನ್ನು ಗೌರವಿಸಲು ಒಗ್ಗೂಡಿದ್ದರಿಂದ ನಮ್ಮ ದೇಶದಲ್ಲಿ ಮರಣದ ಪ್ರಮಾಣವನ್ನು ಕಡಿಮೆಗೊಳಿಸಿದೆ ಮತ್ತು ರೋಗದ ಹರಡುವಿಕೆಯನ್ನು ನಿಯಂತ್ರಣದಲ್ಲಿಟ್ಟಿದೆ. ಸೂಕ್ಷ್ಮವನ್ನು ಗುರುತಿಸುವಿಕೆ, ಸಾಮೂಹಿಕ ಪ್ರತ್ಯೇಕತೆ ಮತ್ತು ತ್ವರಿತ ಚಿಕಿತ್ಸೆಯ ನಮ್ಮ ನೀತಿಯು ಕೋವಿಡ್-19 ಕಾರಣದಿಂದಾಗಿ ದೊಡ್ಡ ಪ್ರಮಾಣದ ಹರಡುವಿಕೆ ಮತ್ತು ಸಾವುಗಳನ್ನು ತಡೆಗಟ್ಟುವಲ್ಲಿ ಉತ್ತಮ ಯಶಸ್ಸನ್ನು ತಂದುಕೊಟ್ಟಿತು.

ಭಾರತವು ಸದೃಢವಾದ ಆರೋಗ್ಯ ವ್ಯವಸ್ಥೆಯನ್ನು ಹೊಂದಿದ್ದರೂ, ನಾವು ತ್ವರಿತ ಕಾರ್ಯಾಚರಣೆಯ ಮೂಲಕ ಮೂಲಸೌಕರ್ಯ ಮತ್ತು ಮಾನವಸಂಪನ್ನೂಲದ ವಿಷಯದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. 10,000 ಮೀಸಲಾದ ಕೋವಿಡ್ ಆಸ್ಪತ್ರೆಗಳು ಮತ್ತು ಆರೈಕೆ ಕೇಂದ್ರಗಳು ಮತ್ತು ಎರಡು ದಶಲಕ್ಷಕ್ಕೂ ಹೆಚ್ಚಿನ ತರಬೇತಿ ಪಡೆದ ಆರೋಗ್ಯ ಕಾರ್ಯಪಡೆಯೊಂದಿಗೆ, ನಾವು ಮುಂದುವರೆದಿದ್ದೇವೆ.

ನಾವು ನಮ್ಮ ನಾಗರಿಕರ ಬಗ್ಗೆ ಕಾಳಜಿ ವಹಿಸುತ್ತಿರುವಂತೆ, ನಾವು ಇತರ ದೇಶಗಳಿಗೂ ಸಹಾಯಹಸ್ತವನ್ನು ಚಾಚಿದ್ದೇವೆ. ನಮ್ಮ ಹತ್ತಿರದ ನೆರೆಹೊರೆಯಲ್ಲಿ, ಭಾರತದ ವೈದ್ಯಕೀಯ ಪರಿಣತಿಯನ್ನು ಹಂಚಿಕೊಳ್ಳುವ ಮೂಲಕ ನಾವು ಕೋವಿಡ್-19 ಮತ್ತು ಸಂಘಟಿತ ಸಾಮರ್ಥ್ಯ ವೃದ್ಧಿಗೆ ಸಮನ್ವಯಕ್ಕೆ ಉತ್ತೇಜನ ನೀಡಿದ್ದೇವೆ.

ಭಾರತವು ವಿಶ್ವದ ಔಷಧಾಲಯ ಎಂಬ ಖ್ಯಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದೆ, ವಿಶೇಷವಾಗಿ ಕೈಗೆಟುಕುವ ಬೆಲೆಯ ಔಷಧಿಗಳಿಗಾಗಿ. ನಮ್ಮ ದೇಶದ ಅಗತ್ಯಗಳನ್ನು ಪೂರೈಸುವುದರ ಜೊತೆಗೆ, ನಾವು ನಾಮ್ 59 ಸದಸ್ಯರು ಸೇರಿದಂತೆ 123ಕ್ಕೂ ಹೆಚ್ಚು ಪಾಲುದಾರ ರಾಷ್ಟ್ರಗಳಿಗೆ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಿದ್ದೇವೆ. ಪರಿಹಾರಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಜಾಗತಿಕ ಪ್ರಯತ್ನಗಳಲ್ಲಿ ನಾವು ಸಕ್ರಿಯವಾಗಿ ಭಾಗವಹಿಸುತ್ತಿದ್ದೇವೆ.

ಕೋವಿಡ್ -19 ಬಿಕ್ಕಟ್ಟಿಗೆ ಸ್ಪಂದಿಸಲು ನಾವು ನಾಮ್ ಸದಸ್ಯ ರಾಷ್ಟ್ರಗಳ ಒಗ್ಗಟ್ಟಿಗೆ ಪ್ರಾಮಾಣಿಕವಾಗಿ ಬದ್ಧರಾಗಿದ್ದೇವೆ. ಮೇ 4 ರಂದು ನಡೆದ ನಾಮ್ ಕಾಂಟ್ಯಾಕ್ಟ್ ಗ್ರೂಪ್ ವಿಡಿಯೋ ಕಾನ್ಫರೆನ್ಸ್ನಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 'ವಸುದೈವ ಕುಟುಂಬಕಂ' ಅಂದರೆ ಇಡೀ ಜಗತ್ತು ನಮ್ಮ ಕುಟುಂಬ ಎನ್ನುವ ಸಿದ್ಧಾಂತವನ್ನು ನಂಬಿರುವಂತೆ ನಾಮ್ ರಾಷ್ಟ್ರಗಳೊಂದಿಗೆ ಮಾತ್ರವಲ್ಲದೆ ಇಡೀ ಜಗತ್ತಿನೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದರು.

ಮಾನ್ಯ ಅಧ್ಯಕ್ಷರೇ, ಅಭಿವೃದ್ಧಿಶೀಲ ರಾಷ್ಟ್ರಗಳಾಗಿ, ಬದಲಾವಣೆಗಳಿಂದ ಹೆಚ್ಚು ಪ್ರಭಾವಿತರಾಗಿರುವುದು ನಮ್ಮ ಜನರು ಎಂದು ಹೇಳುವ ಮೂಲಕ ನಾನು ನನ್ನ ಮಾತುಗಳನ್ನು ಒಟ್ಟುಗೂಡಿಸಲು ಬಯಸುತ್ತೇನೆ. ನಮ್ಮ ಉದ್ದೇಶವು ಹಿಂದೆಂದಿಗಿಂತಲೂ ಹೆಚ್ಚು ಬೆಸೆದುಕೊಂಡಿವೆ ಎನ್ನುವುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಅಲಿಪ್ತ ಕೂಟದ ನೀತಿಯಂತೆ ಒಗ್ಗಟ್ಟಿನ ಮತ್ತು ಭ್ರಾತೃತ್ವದ ಉತ್ಸಾಹದಲ್ಲಿ ಭಾರತವು ರಚನಾತ್ಮಕ ಚರ್ಚೆಗಳು, ಸಹಕಾರ ಮತ್ತು ಸಹಯೋಗದಲ್ಲಿ ಒಂದಾಗಿ ಸಾಗುವುದನ್ನು ಎದುರು ನೋಡುತ್ತಿದೆ.

ನನ್ನ ಭಾಷಣವನ್ನು ಮುಗಿಸುವ ಮೊದಲು, ಮಾನವಕುಲವನ್ನು ಗೌರವಿಸಿದವರನ್ನು ಗೌರವಿಸೋಣ. ಕೋವಿಡ್ ಯೋಧರಾದ ನಮ್ಮ ವೈದ್ಯರು, ನಮ್ಮ ದಾದಿಯರು, ನಮ್ಮ ಅರೆವೈದ್ಯರು, ನಮ್ಮ ನೈರ್ಮಲ್ಯ ಮತ್ತು ಭದ್ರತಾ ಸಿಬ್ಬಂದಿ, ನಮ್ಮ ಸೈನ್ಯ, ಪೊಲೀಸ್ ಮತ್ತು ಅರೆಸೈನಿಕ ಪಡೆಗಳು, ನಮ್ಮ ಪತ್ರಕರ್ತರು ಮತ್ತು ನಮಗಾಗಿ ತಮ್ಮ ಪ್ರಾಣವನ್ನು ಅಪಾಯದಲ್ಲಿರಿಸಿಕೊಂಡು ಸೇವೆ ಮಾಡುತ್ತಿರುವ ಎಲ್ಲ ಮುಂಚೂಣಿಯಲ್ಲಿರುವವರಿಗೆ ಹಾಗು ತಮ್ಮ ಕುಟುಂಬದ ಸದಸ್ಯರನ್ನು ಹೋರಾಡಲು ಕಳುಹಿಸುತ್ತಿರುವ ಅವರ ಕುಟುಂಬಗಳಿಗೆ ಚಪ್ಪಾಳೆ ತಟ್ಟಲು ನಾವೆಲ್ಲರೂ ನಿಲ್ಲೋಣ, ಅವರು ನಮಗೊಂದು ಪಾಠ ಕಲಿಸಿದ್ದಾರೆ. ಅದೇನೆಂದರೆ, ಮಾನವ ಕಲ್ಯಾಣವು ಎಲ್ಲಾ ಆರ್ಥಿಕ ಬೆಳವಣಿಗೆಯ ಆಧಾರವಾಗಿರಬೇಕು ಎನ್ನುವುದನ್ನು ಎಂದಿಗೂ ಮರೆಯಬಾರದು ಎನ್ನುವುದು.

ಧನ್ಯವಾದಗಳು"

***



(Release ID: 1625675) Visitor Counter : 279