ಗೃಹ ವ್ಯವಹಾರಗಳ ಸಚಿವಾಲಯ

ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳ ಹಿತ ಕಾಯಲು 10 ನೇ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಲಾಕ್ ಡೌನ್ ಕ್ರಮಗಳಿಂದ ವಿನಾಯಿತಿ: ಶ್ರೀ ಅಮಿತ್ ಶಾ

Posted On: 20 MAY 2020 5:01PM by PIB Bengaluru

ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳ ಹಿತ ಕಾಯಲು 10 ನೇ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಲಾಕ್ ಡೌನ್ ಕ್ರಮಗಳಿಂದ ವಿನಾಯಿತಿ: ಶ್ರೀ ಅಮಿತ್ ಶಾ

ವಿವಿಧ ಮಂಡಳಿಗಳು ತಮ್ಮ ಪರೀಕ್ಷಾ ವೇಳಾಪಟ್ಟಿಯನ್ನು ಚದುರಿದಂತೆ ನಿಗದಿ ಮಾಡಲಿವೆ; ಆರೋಗ್ಯ/ ನೈರ್ಮಲ್ಯ ಶಿಷ್ಟಾಚಾರ ಪಾಲನೆ ಕಡ್ಡಾಯ

 

ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ತರಗತಿ 10 ಮತ್ತು ತರಗತಿ 12 ಬೋರ್ಡ್ ಪರೀಕ್ಷೆಗಳಿಗೆ ಲಾಕ್ ಡೌನ್ ಕ್ರಮಗಳಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಲಾಕ್ ಡೌನ್ ಕ್ರಮಗಳ ಮಾರ್ಗದರ್ಶಿಗಳ ಅನ್ವಯ ಶಾಲೆಗಳನ್ನು ಆರಂಭಿಸುವುದು ನಿಷಿದ್ದ, ತರಗತಿ 10 ಮತ್ತು ತರಗತಿ 12 ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಮಂಡಳಿಗಳು/ ಸಿ.ಬಿ.ಎಸ್../.ಸಿ.ಎಸ್.. ಇತ್ಯಾದಿಗಳು ವಾರ್ಷಿಕ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದನ್ನು ಅಮಾನತು ಮಾಡಿವೆ. ರಾಜ್ಯ ಸರಕಾರಗಳಿಂದ ಮತ್ತು ಸಿ.ಬಿ.ಎಸ್.. ಯಿಂದ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ ಕೋರಿಕೆಗಳು ಬಂದಿವೆ.

ಇದನ್ನು ಪರಿಗಣಿಸಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್..) ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ ಶರತ್ತುಗಳನ್ನು ಒಳಗೊಂಡ ವಿವರವಾದ ಪತ್ರವನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿದೆ. ಶರತ್ತುಗಳೆಂದರೆ :

· ಕಂಟೈನ್ ಮೆಂಟ್ ವಲಯದಲ್ಲಿ ಯಾವುದೇ ಪರೀಕ್ಷಾ ಕೇಂದ್ರಕ್ಕೆ ಅನುಮತಿ ಇಲ್ಲ.

· ಶಿಕ್ಷಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಮುಖಗವಸುಗಳನ್ನು ಹಾಕುವುದು ಕಡ್ದಾಯ.

· ಕೇಂದ್ರಗಳಲ್ಲಿ ಥರ್ಮಲ್ ತಪಾಸಣೆಗೆ ಮತ್ತು ಸ್ಯಾನಿಟೈಸರ್ ಬಳಕೆ ಹಾಗು ಸಾಮಾಜಿಕ ಅಂತರ ಪಾಲನೆಗೆ ಅವಕಾಶ ಇರಬೇಕು.

· ವಿವಿಧ ಬೋರ್ಡುಗಳು ಪರೀಕ್ಷೆ ನಡೆಸುತ್ತಿರುವ ಕಾರಣದಿಂದ ಅವುಗಳ ಪರೀಕ್ಷಾ ವೇಳಾಪಟ್ಟಿಗಳು ಚದುರಿದಂತೆ ಇರಬೇಕು.

· ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಬಹುದು.

ಅಧಿಕೃತ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ ಮಾಡಿ

 

***(Release ID: 1625673) Visitor Counter : 12