ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆ “ಶ್ರಮಿಕ್ ಸ್ಪೆಷಲ್” ರೈಲುಗಳ ಮೂಲಕ 20 ದಿನಗಳಲ್ಲಿ 23.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ತಮ್ಮ ರಾಜ್ಯಗಳಿಗೆ ತಲುಪಿಸಲಾಗಿದೆ

Posted On: 20 MAY 2020 3:34PM by PIB Bengaluru

ಭಾರತೀಯ ರೈಲ್ವೆಶ್ರಮಿಕ್ ಸ್ಪೆಷಲ್ರೈಲುಗಳ ಮೂಲಕ
20 ದಿನಗಳಲ್ಲಿ 23.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ತಮ್ಮ ರಾಜ್ಯಗಳಿಗೆ ತಲುಪಿಸಲಾಗಿದೆ

ಭಾರತೀಯ ರೈಲ್ವೆಯಿಂದ ಮೇ 20, 2020 10:00 ಗಂಟೆಯವರೆಗೆ ದೇಶಾದ್ಯಂತ
1773 “ಶ್ರಾಮಿಕ್ ಸ್ಪೆಷಲ್ರೈಲುಗಳ ಕಾರ್ಯನಿರ್ವಹಣೆ

ಒಂದೇ ದಿನದಲ್ಲಿ ಅತಿ ಹೆಚ್ಚು, ಒಟ್ಟು 205 “ಶ್ರಮಿಕ್ ಸ್ಪೆಷಲ್ಹಾಗೂ 2.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಯಶಸ್ವೀ ಸಾಗಾಟ

 

ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳ ಸ್ವರಾಜ್ಯಗಳಿಗೆ ವಿಶೇಷ ರೈಲುಗಳಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯದ ಆದೇಶದ ನಂತರ, ಭಾರತೀಯ ರೈಲ್ವೆ ಮೇ 1, 2020 ರಂದು ಭಾರತೀಯ ರೈಲ್ವೆಶ್ರಮಿಕ್ ವಿಶೇಷರೈಲುಗಳನ್ನು ಓಡಿಸಲು ನಿರ್ಧರಿಸಿತು.

ಮೇ 20, 2020 10:00 ಗಂಟೆ ಹೊತ್ತಿಗೆ, ದೇಶಾದ್ಯಂತ ವಿವಿಧ ರಾಜ್ಯಗಳಿಂದ ಒಟ್ಟು 1773 “ಶ್ರಮಿಕ್ ವಿಶೇಷರೈಲುಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ. ಮೂಲಕ 23.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ತವರು ರಾಜ್ಯವನ್ನು ತಲುಪಿದ್ದಾರೆ.

ನಿನ್ನೆ ಅಂದರೆ ಮೇ19, 2020 ರಂದು ಒಟ್ಟು 205 “ಶ್ರಮಿಕ್ ಸ್ಪೆಷಲ್ರೈಲುಗಳು ಸಂಚಾರ ಮಾಡಿದ್ದು, ಮೂಲಕ ದೇಶದ ವಿವಿಧ ರಾಜ್ಯಗಳಿಂದ ದಾಖಲೆಯ 2.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ದೇಶದಾದ್ಯಂತ ವಿವಿಧ ಕಡೆಗೆ ಪ್ರಯಾಣ ಮಾಡಿದ್ದಾರೆ.

1773 ರೈಲುಗಳು, ಆಂಧ್ರಪ್ರದೇಶ, ಬಿಹಾರ, ಚಂಡೀಘಡ ಕೇಂದ್ರಾಡಳಿತ ಪ್ರದೇಶ, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಪುದುಚೇರಿ ಕೇಂದ್ರಾಡಳಿತ ಪ್ರದೇಶ , ಪಂಜಾಬ್, ರಾಜಸ್ಥಾನ, ತೆಲಂಗಾಣ , ಉತ್ತರ ಪ್ರದೇಶ, ಉತ್ತರಾಖಂಡ, ಮತ್ತು ಪಶ್ಚಿಮ ಬಂಗಾಳಗಳಿಂದ ಹೊರಟಿವೆ.

ಅಲ್ಲದೆ, ಶ್ರಮಿಕ್ ವಿಶೇಷರೈಲುಗಳು, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಘಡ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂಡ್, ನಾಗರಾಮ್ , ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಿಗೆ ಸಾಗಿವೆ.

ರೈಲು ಹತ್ತುವ ಮೊದಲು ಪ್ರಯಾಣಿಕರನ್ನು ಸರಿಯಾಗಿ ಪರೀಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ನೀಡಲಾಗುತ್ತದೆ.

***


(Release ID: 1625522)