ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ವಿವಿಧ ವಲಯಗಳಿಗೆ ಕೇಂದ್ರ ಸರಕಾರ ಘೋಷಿಸಿದ ಪರಿಹಾರ ಪ್ಯಾಕೇಜ್ ಮತ್ತು ಹೊಸ ಎಂ.ಎಸ್.ಎಂ.ಇ. ವ್ಯಾಖ್ಯೆ ಉದ್ಯಮಕ್ಕೆ ಭಾರೀ ಉತ್ತೇಜನ ನೀಡಲಿದೆ: ಶ್ರೀ ಗಡ್ಕರಿ
Posted On:
17 MAY 2020 5:46PM by PIB Bengaluru
ವಿವಿಧ ವಲಯಗಳಿಗೆ ಕೇಂದ್ರ ಸರಕಾರ ಘೋಷಿಸಿದ ಪರಿಹಾರ ಪ್ಯಾಕೇಜ್ ಮತ್ತು ಹೊಸ ಎಂ.ಎಸ್.ಎಂ.ಇ. ವ್ಯಾಖ್ಯೆ ಉದ್ಯಮಕ್ಕೆ ಭಾರೀ ಉತ್ತೇಜನ ನೀಡಲಿದೆ: ಶ್ರೀ ಗಡ್ಕರಿ
ಎಂ.ಎಸ್.ಎಂ.ಇ. ಗಳಿಗಾಗಿ ಘೋಷಿಸಿದ ನಿಧಿಗಳ ನಿಧಿಯ ದಕ್ಷತೆಯುಕ್ತ ಅನುಷ್ಟಾನ ಮತ್ತು ರೇಟಿಂಗ್ ಅನ್ವೇಷಣೆಗೆ ಶ್ರೀ ನಿತಿನ್ ಗಡ್ಕರಿ ಕರೆ
ಕೇಂದ್ರ ಎಂ.ಎಸ್.ಎಂ.ಇ. ಮತ್ತು ರಸ್ತೆ ಸಾರಿಗೆ ಹಾಗು ಹೆದ್ದಾರಿಗಳ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಎಂ.ಎಸ್.ಎಂ.ಇ. , ಕಾರ್ಮಿಕ, ಕೃಷಿ ಇತ್ಯಾದಿ ಸಹಿತ ವಿವಿಧ ವಲಯಗಳಿಗೆ/ ಭಾಗೀದಾರರಿಗೆ ಕೇಂದ್ರ ಸರಕಾರ ಒದಗಿಸಿರುವ ಪರಿಹಾರ ಪ್ಯಾಕೇಜ್ ಮತ್ತು ಎಂ.ಎಸ್.ಎಂ.ಇ. ಗಳಿಗೆ ನೀಡಿರುವ ಹೊಸ ವ್ಯಾಖ್ಯೆಯಿಂದ ಕೈಗಾರಿಕೋದ್ಯಮ ವಲಯಕ್ಕೆ ಭಾರೀ ಉತ್ತೇಜನ ದೊರೆಯುವುದೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಎಂ.ಎಸ್.ಎಂ.ಇ. ಗಳಿಗೆ ರೇಟಿಂಗ್ ಅನ್ವೇಷಣೆಗೆ ಕರೆ ನೀಡಿರುವ ಅವರು ಎಂ.ಎಸ್.ಎಂ.ಇ.ಗಳಿಗೆ ಪ್ಯಾಕೇಜಿನಂಗವಾಗಿ ಘೋಷಿಸಲಾಗಿರುವ ನಿಧಿಯ ನಿಧಿಯನ್ನು ಸಮರ್ಪಕವಾಗಿ ಅನುಷ್ಟಾನಿಸುವ ಕುರಿತಂತೆ ಸಲಹೆಗಳನ್ನು ನೀಡುವಂತೆ ಭಾಗೀದಾರರನ್ನು ಕೋರಿದ್ದಾರೆ.
“ಎಂ.ಎಸ್.ಎಂ.ಇ.ಗಳ ಮೇಲೆ ಕೋವಿಡ್ -19 ರ ಪರಿಣಾಮ” ಮತ್ತು “ 20 ಲಕ್ಷ ಕೋ. ರೂ.ಗಳ ಪ್ಯಾಕೇಜ್ ಬಳಿಕ ಭಾರತೀಯ ಕೈಗಾರಿಕೋದ್ಯಮದ ಭವಿಷ್ಯ” ಕುರಿತಂತೆ ಅಂತಾರಾಷ್ಟ್ರೀಯ ವ್ಯಾಪಾರೋದ್ಯಮ ಜಾಲ ಮತ್ತು ಎಂ.ಎಂ. ಆಕ್ಟಿವ್ ಸೈ-ಟೆಕ್ ಕಮ್ಯುನಿಕೇಶನ್ ನ ಪ್ರತಿನಿಧಿಗಳನ್ನುದ್ದೇಶಿಸಿ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಶ್ರೀ ಗಡ್ಕರಿ ಅವರು ಈ ವಿಷಯವನ್ನು ಹೇಳಿದರು.
ಕೃಷಿ ಎಂ.ಎಸ್.ಎಂ.ಇ. ಮತ್ತು ಮೀನುಗಾರಿಕಾ ಎಂ.ಎಸ್.ಎಂ.ಇ. ವಲಯಗಳನ್ನು ಅವಿಷ್ಕರಿಸಬೇಕಾದ ಅಗತ್ಯವಿದೆ ಎಂದು ಶ್ರೀ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟರು.
ಕೋವಿಡ್ -19 ರಿಂದಾಗಿ ಸರಕಾರ ಸಹಿತ ಎಲ್ಲಾ ಭಾಗೀದಾರರು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ ಸಚಿವರು , ಇಂತಹ ಕಠಿಣ ಸಂದರ್ಭಗಳಲ್ಲಿ, ಈಗಿನ ಬಿಕ್ಕಟ್ಟನ್ನು ನಿಭಾಯಿಸಲು ಧನಾತ್ಮಕ ಧೋರಣೆಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ಮಾಡಿದರಲ್ಲದೆ ಋಣಾತ್ಮಕತೆಯಿಂದ ಯಾರ ಹಿತಾಸಕ್ತಿಯೂ ಈಡೇರದು ಎಂದೂ ಹೇಳಿದರು.
ಜಪಾನ್ ಸರಕಾರ ಚೀನಾದಿಂದ ಜಪಾನೀ ಹೂಡಿಕೆಯನ್ನು ಹಿಂತೆಗೆದುಕೊಂಡು , ಬೇರೆಲ್ಲಾದರೂ ನೆಲೆಗೊಳ್ಳಲು ಅದರ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡಿರುವುದನ್ನು ಸ್ಮರಿಸಿಕೊಂಡ ಅವರು ಇದನ್ನು ಕೈವಶ ಮಾಡಿಕೊಳ್ಳಲು ಭಾರತಕ್ಕೆ ಇದು ಸದವಕಾಶ ಎಂದರು.
ಹಸಿರು ಹೆದ್ದಾರಿ ಯೋಜನೆಯನ್ನು ಪ್ರಸ್ತಾಪಿಸಿದ ಅವರು ಗ್ರಾಮೀಣ, ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳನ್ನು ಹಾದು ಹೋಗುವ ದಿಲ್ಲಿ –ಮುಂಬಯಿ ಹಸಿರು ಎಕ್ಸ್ ಪ್ರೆಸ್ ಹೆದ್ದಾರಿಯ ಕಾಮಗಾರಿ ಆರಂಭವಾಗಿದೆ ಎಂದರು. ಇದು, ಹೆದ್ದಾರಿ ಹಾದುಹೋಗುವ ಗ್ರಾಮೀಣ , ಬುಡಕಟ್ಟು ಮತ್ತು ಅಲ್ಪ ಅಭಿವೃದ್ದಿ ಹೊಂದಿದ ಪ್ರದೇಶಗಳಲ್ಲಿ ಉದ್ಯಮಗಳಿಗೆ ಕೈಗಾರಿಕ ಗುಚ್ಚಗಳು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಜ್ಜಿತವಾದ ಸಾರಿಗೆ ಪಾರ್ಕ್ ಗಳಲ್ಲಿ ಭವಿಷ್ಯದ ಹೂಡಿಕೆ ಮಾಡಲು ಒಂದು ಅವಕಾಶ ಎಂದರು. ಮೆಟ್ರೋ/ ದೊಡ್ಡ ನಗರಗಳಲ್ಲಿರುವ ಕೈಗಾರಿಕೆಗಳ ವಿಕೇಂದ್ರೀಕರಣ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಅವರು ದೇಶದ ಗ್ರಾಮೀಣ, ಬುಡಕಟ್ಟು, ಮತ್ತು ಹಿಂದುಳಿದ ಪ್ರದೇಶಗಳತ್ತ ಗಮನ ಕೊಡಬೇಕು ಎಂದೂ ನುಡಿದರು.
ರಫ್ತು ಹೆಚ್ಚಳಕ್ಕೆ ವಿಶೇಷ ಗಮನ ಕೊಡುವುದು ಈ ಸಂದರ್ಭದ ಅತ್ಯಾವಶ್ಯಕತೆಯಾಗಿದೆ ಮತ್ತು ಇಂಧನ ವೆಚ್ಚ, ಸಾಗಾಣಿಕಾ ವೆಚ್ಚ, ಹಾಗು ಉತ್ಪಾದನಾ ವೆಚ್ಚಗಳನ್ನು ಕಡಿತ ಮಾಡುವ ನಿಟ್ಟಿನಲ್ಲಿ ಅವಶ್ಯ ಪದ್ದತಿಗಳನ್ನು ಅಳವಡಿಸಿಕೊಂಡು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಬೇಕು ಎಂದೂ ಕೇಂದ್ರ ಸಚಿವರು ಹೇಳಿದರು. ಉದಾಹರಣೆಗೆ ಅವರು ವಾಹನಗಳ ಗುಜರಿ ನೀತಿ ಅಳವಡಿಕೆ ಉತ್ಪಾದನಾ ವೆಚ್ಚ ತಗ್ಗಿಸಬಹುದು ಎಂದರು. ಆಮದಿಗೆ ಪರ್ಯಾಯವಾದುದನ್ನು ಕಂಡು ಹುಡುಕುವ ಅಗತ್ಯವನ್ನು ಅವರು ಪ್ರತಿಪಾದಿಸಿದರು, ಆ ಮೂಲಕ ವಿದೇಶೀ ಆಮದನ್ನು ದೇಶೀ ಉತ್ಪಾದನೆ ಮೂಲಕ ಕಡಿಮೆ ಮಾಡಬೇಕು ಎಂದರು. ಎಂ.ಎಸ್.ಎಂ.ಇ. ಸಚಿವಾಲಯವು ಕಳೆದ ಮೂರು ವರ್ಷಗಳ ಆಮದು ಮತ್ತು ರಫ್ತಿನ ವಿವರಗಳನ್ನು ಒಳಗೊಂಡ ಎರಡು ಕಿರುಪುಸ್ತಕಗಳನ್ನು ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂಬ ಮಾಹಿತಿಯನ್ನವರು ಹಂಚಿಕೊಂಡರು.
ಕೈಗಾರಿಕೋದ್ಯಮವು ಅನ್ವೇಷಣೆ, ಉದ್ಯಮಶೀಲತ್ವ, ವಿಜ್ಞಾನ ಮತ್ತು ತಂತ್ರಜ್ಞಾನ , ಸಂಶೋಧನಾ ಕೌಶಲ್ಯ ಹಾಗು ಜ್ಞಾನವನ್ನು ಸಂಪತ್ತಾಗಿ ಪರಿವರ್ತಿಸುವ ಪರಿಣತಿಗಳತ್ತ ಹೆಚ್ಚು ಗಮನ ಕೊಡಬೇಕು ಎಂದರು.
ಕೇಳಲಾದ ಕೆಲವು ಪ್ರಶ್ನೆಗಳು ಮತ್ತು ಸಲಹೆಗಳು ಈ ಕೆಳಗಿನಂತಿವೆ: ಸಚಿವರು ಹೇಳಿದ ಪರೋಕ್ಷವಾಗಿ ಲಭ್ಯವಾದ ಆಶೀರ್ವಾದಗಳನ್ನು ಹೇಗೆ ಬಳಸಿಕೊಳ್ಳಬಹುದು, ಬಿ.ಎನ್.ಐ.ಯು ಸಮಾಜದ ಮೇಲೆ ಪರಿಣಾಮ ಬೀರುವಂತಹದೇನನ್ನು ಮಾಡಬಹುದು. ಕೋವಿಡ್ -19 ರ ಅವಧಿಯಲ್ಲಿ ಸಮಸ್ಯೆಗೆ ಸಿಕ್ಕ ಕಂಪೆನಿಗಳಿಗೆ ಏನು ಸಂದೇಶ, ಕಿರು ಉದ್ಯಮಗಳಿಗೆ ಪ್ರಯೋಜನಕ್ಕಾಗಿ ಮುದ್ರಾ ಸಾಲದ ಮಿತಿಯನ್ನು 25 ಲಕ್ಷ ರೂಪಾಯಿಗಳಿಗೆ ಏರಿಸುವುದು, ಇತ್ತೀಚೆಗೆ ಘೋಷಿಸಲಾದ 3 ಲಕ್ಷ ಕೋ. ರೂ.ಗಳ ಜಾಮೀನು ರಹಿತ ಸ್ವಯಂಚಾಲಿತ ಸಾಲಕ್ಕೆ ಸಂಬಂಧಿಸಿ ಸರಳ ಮಾರ್ಗದರ್ಶಿಗಳನ್ನು ನೀಡುವುದು ಇತ್ಯಾದಿಗಳು.
ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ಗಡ್ಕರಿ ಅವರು ಸರಕಾರದಿಂದ ಸಾಧ್ಯ ಇರುವ ಎಲ್ಲಾ ನೆರವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಕೈಗಾರಿಕೋದ್ಯಮವು ಧನಾತ್ಮಕ ಧೋರಣೆಯನ್ನು ಅಳವಡಿಸಿಕೊಂಡು ಕೋವಿಡ್ -19 ರ ಬಳಿಕ ರೂಪುಗೊಳ್ಳುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂಬ ಅಂಶವನ್ನು ಒತ್ತಿ ಹೇಳಿದರು.
***
(Release ID: 1625064)
Visitor Counter : 246