ಗೃಹ ವ್ಯವಹಾರಗಳ ಸಚಿವಾಲಯ

2020 ಮೇ 20ರಂದು “ಆಂಫಾನ್’ ಸೂಪರ್ ಚಂಡಮಾರುತ ಭೂಮಿಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಸನ್ನದ್ಧತೆಯ ಪರಾಮರ್ಶೆ

Posted On: 18 MAY 2020 7:16PM by PIB Bengaluru

2020 ಮೇ 20ರಂದುಆಂಫಾನ್ಸೂಪರ್ ಚಂಡಮಾರುತ ಭೂಮಿಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಸನ್ನದ್ಧತೆಯ ಪರಾಮರ್ಶೆ

 

ಆಂಫಾನ್ ಚಂಡಮಾರುತ, ಬಂಗಾಳಕೊಲ್ಲಿಯಲ್ಲಿ ಇಂದು ಪ್ರಬಲ ಚಂಡಮಾರುತವಾಗಿ ರೂಪುಗೊಂಡಿದೆ. ಆಂಫಾನ್ ಪ್ರಬಲ ಚಂಡಮಾರುತದಿಂದ ಎದುರಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಗಳು ಮತ್ತು ಸಂಬಂಧಿತ ಕೇಂದ್ರ ಸಚಿವಾಲಯ/ಸಂಸ್ಥೆಗಳ ಸನ್ನದ್ಧತೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಪರಾಮರ್ಶಿಸಿದರು. ಐಎಂ.ಡಿ, ಎನ್.ಡಿ.ಎಂ. ಮತ್ತು ಎನ್.ಡಿ.ಆರ್.ಎಫ್. ಮತ್ತು ಭಾರತ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಶಾ ಉಪಸ್ಥಿತರಿದ್ದರು.

18.05.2020 PM NDMA Amphan.JPG

ಪ್ರಬಲ ಚಂಡಮಾರುತ ತೀವ್ರವಾಗಿ, ಗಂಟೆಗೆ 19 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದ್ದು, ಮೇ 20ರಂದು ಮಧ್ಯಾಹ್ನ ಪಶ್ಚಿಮ ಬಂಗಾಳ ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (.ಎಂ.ಡಿ.) ತಿಳಿಸಿದೆ. ಇದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಗೆ ಕಾರಣವಾಗಲಿದೆ. ಪಶ್ಚಿಮ ಬಂಗಾಳದ, ಪೂರ್ವ, ದಕ್ಷಿಣ ಮತ್ತು ಉತ್ತರ ಮಿಡ್ನಾಪುರದ 24 ಪರಗಣಗಳು, ಹೌರಾ, ಹೂಗ್ಲಿ ಮತ್ತು ಕೋಲ್ಕತ್ತಾ ಜಿಲ್ಲೆಗಳು ಹೆಚ್ಚು ಬಾಧಿತವಾಗುವ ಸಾಧ್ಯತೆ ಇದೆ. ಚಂಡಮಾರುತದಿಂದ ಜಗತ್ ಸಿಂಗ್ ಪುರ, ಕೇಂದ್ರಪಾಡ, ಬದ್ರಾಕ್ ಮತ್ತು ಬಾಲ್ಸೂರ್ ಸೇರಿದಂತೆ ಉತ್ತರ ಒಡಿಶಾದಲ್ಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಚಂಡಮಾರುತದ ಉಲ್ಬಣವುಂಟಾಗುತ್ತಿರುವುದರಿಂದ 4-5 ಮೀಟರ್ ಎತ್ತರಕ್ಕೆ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ, ಇದು ದಕ್ಷಿಣ ಮತ್ತು ಉತ್ತರ 24 ಪರಗಣಗಳ ತಗ್ಗು ಪ್ರದೇಶದ ಕರಾವಳಿ ಪ್ರದೇಶಗಳನ್ನು ಆವರಿಸುತ್ತದೆ ಮತ್ತು ಅದು ಅಪ್ಪಳಿಸುವ ಸಮಯದಲ್ಲಿ ಪಶ್ಚಿಮ ಬಂಗಾಳದ ಜಿಲ್ಲೆಗಳಾದ ಪೂರ್ವ ಮಿಡ್ನಾಪುರದಲ್ಲಿ 3-4 ಮೀಟರ್ ಎತ್ತರದ ಅಲೆಗಳು ಏಳಲಿವೆ ಎಂದು ಹೇಳಿದೆ.

ಚಂಡಮಾರುತ ಸಾಗುವ ದಿಕ್ಕಿನಲ್ಲಿರುವ ಜನರನ್ನು ಸಂಪೂರ್ಣ ಸ್ಥಳಾಂತರಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಅಗತ್ಯ ಪ್ರಮಾಣದ ಅವಶ್ಯಕ ವಸ್ತುಗಳ ಪೂರೈಕೆ ನಿರ್ವಹಣೆ ಮಾಡುವಂತೆ ಪ್ರಧಾನಮಂತ್ರಿಯವರು ನಿರ್ದೇಶಿಸಿದ್ದಾರೆ.

ಅಗತ್ಯ ಸೇವೆಗಳಾದ ವಿದ್ಯುತ್, ದೂರಸಂಪರ್ಕಕ್ಕೆ ಹಾನಿಯಾಗಿ ತೊಂದರೆ ಆದ ಸನ್ನಿವೇಶದಲ್ಲಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲು ಮತ್ತು ಸೂಕ್ತ ಸಮಯದೊಳಗೆ ಅವುಗಳ ಸಿದ್ಧತೆಯ ಪರಾಮರ್ಶೆ ನಡೆಸಲು ಮತ್ತು ಯಾವುದೇ ಅಡಚಣೆ ಆದಲ್ಲಿ ತ್ವರಿತವಾಗಿ ಸೇವೆಗಳ ಪುನರ್ ಸ್ಥಾಪನೆಗೆ ಸಿದ್ಧತೆಗೆ ಸಲಹೆ ನೀಡಲಾಗಿದೆ.

ಭಾರತೀಯ ಕರಾವಳಿ ಭದ್ರತಾ ಪಡೆ ಮತ್ತು ನೌಕಾಪಡೆಗಳು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ದೋಣಿ ಮತ್ತು ಹೆಲಿಕಾಪ್ಟರ್ ಗಳನ್ನು ನಿಯುಕ್ತಗೊಳಿಸಿವೆ. ರಾಜ್ಯಗಳಲ್ಲಿರುವ ಸೇನೆ ಮತ್ತು ವಾಯುಪಡೆಯ ಘಟಕಗಳನ್ನೂ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ಎನ್.ಡಿ.ಆರ್.ಎಫ್. 25 ತಂಡಗಳನ್ನು ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಿದೆ. ಹೆಚ್ಚುವರಿಯಾಗಿ 12 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ತಂಡಗಳು ಅಗತ್ಯ ಸಾಮಗ್ರಿಗಳಾದ ದೋಣಿಗಳು, ಮರಕತ್ತರಿಸುವ ಸಾಧನ, ದೂರಸಂಪರ್ಕ ಸಾಧನ ಇತ್ಯಾದಿಯೊಂದಿಗೆ ಸನ್ನದ್ಧವಾಗಿದೆ.

ಐಎಂಡಿ ಇತ್ತೀಚಿನ ಮುನ್ಸೂಚನೆಗಳೊಂದಿಗೆ ನಿಯಮಿತವಾಗಿ ಎಲ್ಲ ರಾಜ್ಯಗಳಿಗೆ ಹವಾಮಾನ ವರದಿ ನೀಡುತ್ತಿದೆ. ಎಂ.ಎಚ್.. ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.

***



(Release ID: 1625061) Visitor Counter : 180