ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಈಶಾನ್ಯ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸೇನೆಯು ಮಾಡಿದ ವೈದ್ಯಕೀಯ ಕೋವಿಡ್ ಸಂಬಂಧಿತ ಸಹಾಯವನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಶ್ಲಾಘಿಸಿದರು

Posted On: 18 MAY 2020 9:05PM by PIB Bengaluru

ಈಶಾನ್ಯ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸೇನೆಯು ಮಾಡಿದ

ವೈದ್ಯಕೀಯ ಕೋವಿಡ್ ಸಂಬಂಧಿತ ಸಹಾಯವನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಶ್ಲಾಘಿಸಿದರು

 

ಈಶಾನ್ಯ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸೇನೆಯ ವೈದ್ಯಕೀಯ ಕೋವಿಡ್ ಸಂಬಂಧಿತ ಸಹಾಯಗಳನ್ನು ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ನಿವಾರಣೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಶ್ಲಾಘಿಸಿದರು. ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿ ರೋಗನಿರ್ಣಯ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಪೂರೈಸುವ ಸಲುವಾಗಿ, ಸನ್ನದ್ಧತೆಯ ಆರಂಭಿಕ ಹಂತದಲ್ಲೇ ಪೂರ್ವತಯಾರಿಯೊಂದಿಗೆ ಸ್ಪಂದಿಸಿದ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳನ್ನು (.ಎಫ್.ಎಂ.ಎಸ್.) ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಶ್ಲಾಘಿಸಿದರು.

ಈಶಾನ್ಯ ರಾಜ್ಯಗಳ ವಿಷಯದಲ್ಲಿ, ಜನರಲ್ ಬ್ಯಾನರ್ಜಿ ಅವರು ಸಚಿವ ಡಾ ಜಿತೇಂದ್ರ ಸಿಂಗ್ ಅವರಿಗೆ ಇತ್ತೀಚಿನ ಬೆಳವಣಿಗೆಗಳು ಮತ್ತು ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು. ಅರುಣಾಚಲ ಪ್ರದೇಶದಲ್ಲಿ ಮಿಲಿಟರಿ ಆಸ್ಪತ್ರೆ ತೆಂಗಾದಲ್ಲಿ ಕೋವಿಡ್ ಮತ್ತು 2 .ಸಿ.ಯು. ಹಾಸಿಗೆಗಳಿಗಾಗಿ 80 ಗೊತ್ತುಪಡಿಸಿ ಮೀಸಲಿಟ್ಟಿರುವ ಹಾಸಿಗೆಗಳಿದ್ದು, ಲಿಕಾಬಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಕೋವಿಡ್ಗಾಗಿ 82 ಗೊತ್ತುಪಡಿಸಿ ಮೀಸಲಿಟ್ಟಿರುವ ಹಾಸಿಗೆಗಳು ಮತ್ತು 2 .ಸಿ.ಯು. ಹಾಸಿಗೆಗಳಿವೆ ಎಂಬ ವಿವರಗಳನ್ನು ಜನರಲ್ ಬ್ಯಾನರ್ಜಿ ತಿಳಿಸಿದರು. ಅಂತೆಯೇ, ಅಸ್ಸಾಂನ ಜೋರ್ಹಾಟ್ ಮತ್ತು ಮೇಘಾಲಯದ ಶಿಲ್ಲಾಂಗ್ ನಲ್ಲಿ, ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು ಕ್ರಮವಾಗಿ 10 ಮತ್ತು 4 .ಸಿ.ಯು. ಹಾಸಿಗೆಗಳ ಜೊತೆಗೆ 110 ಮತ್ತು 247 ಗೊತ್ತುಪಡಿಸಿದ ಕೋವಿಡ್ ಹಾಸಿಗೆಗಳನ್ನು ಎಲ್ಲಾ ಸೌಲಭ್ಯಗಳ ಜೊತೆಗೆ ಮೀಸಲಿಡಲಾಗಿದೆ.

ಕೋವಿಡ್ ಪ್ರಕರಣಗಳಿಗೆ 200 ಗೊತ್ತುಪಡಿಸಿದ ಹಾಸಿಗೆಗಳನ್ನು ಮತ್ತು 6 ನಾಗರಿಕ ರೋಗಿಗಳು ಸೇರಿದಂತೆ ನಿರ್ಣಾಯಕ ಪ್ರಕರಣಗಳಿಗೆ .ಸಿ.ಯು. ಹಾಸಿಗೆಗಳನ್ನು ಆರಂಭದಲ್ಲಿಯೇ ಪೂರೈಸಿದ ಉದಂಪೂರ್ ಆರ್ಮಿ ಕಮಾಂಡ್ ಆಸ್ಪತ್ರೆಯ ವಿಶೇಷ ಕಾರ್ಯಕ್ಕಾಗಿ, ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (ಡಿ.ಜಿ .ಎಫ್.ಎಂ.ಎಸ್.) ಡೈರೆಕ್ಟರ್ ಜನರಲ್, ಲೆಫ್ಟಿನೆಂಟ್ ಜನರಲ್ ಅನುಪ್ ಬ್ಯಾನರ್ಜಿ ಅವರಿಗೆ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ತಮ್ಮ ಪ್ರಶಂಸೆ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಆರೋಗ್ಯ ಅಧಿಕಾರಿಗಳು ತಿಳಿಸಿರುವ ಸೌಲಭ್ಯಗಳಿಗೆ ಪೂರಕವಾಗಿ ಶ್ರೀನಗರದ ಸೇನಾ ಆಸ್ಪತ್ರೆಯು ತನ್ನ 124 ಹಾಸಿಗೆಗಳನ್ನು ಗೊತ್ತುಪಡಿಸಿ ಮೀಸಲಿಟ್ಟಿದೆ ಮತ್ತು ರಾಜೌರಿಯ ಆರ್ಮಿ ಆಸ್ಪತ್ರೆಯು ಕೋವಿಡ್ ಪ್ರಕರಣಗಳಿಗೆ ತನ್ನ 82 ಹಾಸಿಗೆಗಳನ್ನು ಗೊತ್ತುಪಡಿಸಿದೆ. ಇದಲ್ಲದೆ, ಕಮಾಂಡ್ ಆಸ್ಪತ್ರೆ ಉಧಂಪುರ್ ಸಹ ಮೊದಲಿನಿಂದಲೂ ರೋಗನಿರ್ಣಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಸಚಿವರು ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿನ ನೀಡಿದ ಪೂರ್ವಭಾವಿ ಬೆಂಬಲಕ್ಕಾಗಿ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಸೇನೆಯನ್ನು ಶ್ಲಾಘಿಸಿದರು ಮತ್ತು ಇದು ರೋಗದ ಹೊರೆ ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿದೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು ಸ್ಥಾಪಿಸಿರುವ ಮೂಲೆಗುಂಪು (ಕ್ವಾರಂಟೈನ್) ಶಿಬಿರಗಳು ಮತ್ತು ಪ್ರತ್ಯೇಕ ಸೌಲಭ್ಯಗಳ ಬಗ್ಗೆಯೂ ಅವರು ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಸಕಾಲಿಕ ಪರಿಸ್ಥಿತಿ ಮತ್ತು ಪೂರೈಕೆದಾರರಿಂದ ಉಪಕರಣಗಳ ಲಭ್ಯತೆಗೆ ಅನುಗುಣವಾಗಿ ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ, ಹಾಗೂ ಭವಿಷ್ಯದಲ್ಲಿಯೂ ಪರಿಸ್ಥಿತಿಗೆ ಅನುಗುಣವಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮಹಾನಿರ್ದೇಶಕ, .ಎಫ್.ಎಂ.ಎಸ್. ಅವರು ಸಚಿವರಿಗೆ ಭರವಸೆ ನೀಡಿದರು..

***



(Release ID: 1625004) Visitor Counter : 235