ಉಪರಾಷ್ಟ್ರಪತಿಗಳ ಕಾರ್ಯಾಲಯ

ಕೊರೊನಾದಿಂದ ಕಲಿತ ಪಾಠಗಳಿಂದ ಹೊಸ ಜೀವನ ವಿಧಾನಗಳನ್ನು ರೂಢಿಸಿಕೊಳ್ಳಿ: ಉಪ ರಾಷ್ಟ್ರಪತಿ ಕರೆ

Posted On: 18 MAY 2020 2:26PM by PIB Bengaluru

ಕೊರೊನಾದಿಂದ ಕಲಿತ ಪಾಠಗಳಿಂದ ಹೊಸ ಜೀವನ ವಿಧಾನಗಳನ್ನು ರೂಢಿಸಿಕೊಳ್ಳಿ: ಉಪ ರಾಷ್ಟ್ರಪತಿ ಕರೆ

ಜೀವನ ಮತ್ತು ಮಾನವೀಯತೆಯ ಬಗೆಗಿನ ಹೊಸ ವರ್ತನೆಗಳಿಗೆ ಕರೆ

ರೋಗ ಅಥವಾ ಆರ್ಥಿಕತೆ ಎಲ್ಲರಿಗೂ ನೋವುಂಟು ಮಾಡುತ್ತದೆ; ಅಂತರ್-ಸಂಪರ್ಕಿತ ಜೀವನವು ಪ್ರಮುಖ ಪಾಠವಾಗಿದೆ: ಉಪ ರಾಷ್ಟ್ರಪತಿ

ಕೋವಿಡ್ ತಾತ್ವಿಕ ಮತ್ತು ನೈತಿಕ ವಿಷಯಗಳನ್ನು ಮುನ್ನೆಲೆಗೆ ತಂದಿದೆ; ಆರ್ಥಿಕತೆಯ ದೋಷಗಳ ಪರಿಣಾಮಗಳನ್ನು ಬಹಿರಂಗಪಡಿಸಿದೆ

ಕೋವಿಡ್ ಒಂದು ನಾಗರಿಕ ಕಾಳಜಿ

ಕೊರೊನಾ ಕಾಲದಲ್ಲಿ ಹೊಸ ಸಾಮಾನ್ಯ ಜೀವನಕ್ಕಾಗಿ 12 ಸೂತ್ರಗಳನ್ನು ಸಲಹೆ ಮಾಡಿದ ಶ್ರೀ ನಾಯ್ಡು

 

ಕೊರೊನಾ ಕಾಲದಲ್ಲಿ ಹೊಸ ಜೀವನ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾದ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಒತ್ತಿಹೇಳಿದ್ದಾರೆ. ವೈರಾಣುವನ್ನು ಎದುರಿಸಿ ಹೊಸ ಸಾಮಾನ್ಯ ಜೀವನ ನಡೆಸಲು 12 ಅಂಶಗಳನ್ನೂ ಸೂಚಿಸಿರುವ ಅವರು, ಕೊರೊನಾ ಸಾಂಕ್ರಾಮಿಕವು ಇಲ್ಲಿಯವರೆಗೆ ಕಲಿಸಿರುವ ಕಲಿಕೆಯು ಪಾಠಗಳನ್ನು ರೂಪಿಸುತ್ತದೆ ಎಂದು ಹೇಳಿದ್ದಾರೆ. ವೈರಾಣು ನಿರೀಕ್ಷೆಗಿಂತ ಹೆಚ್ಚು ಕಾಲ ಉಳಿಯುವ ಸಾಧ್ಯತೆಯ ಸೂಚನೆಗಳ ನಡುವೆ ಜೀವನ ಮತ್ತು ಮಾನವೀಯತೆಯ ಬಗ್ಗೆ ಹೊಸ ವರ್ತನೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ನಿರ್ಬಂಧಗಳನ್ನು ಗಣನೀಯವಾಗಿ ಸಡಿಲಗೊಳಿಸಿ ಕಳೆದ ರಾತ್ರಿ ಲಾಕ್ ಡೌನ್ 4.0 ಘೋಷಣೆಯಾದ ಕೂಡಲೇ, ಶ್ರೀ ನಾಯ್ಡು ಅವರು ಕೋವಿಡ್-19 ಸಾಂಕ್ರಾಮಿಕ ರೋಗವು ಒಡ್ಡಿರುವ ತಾತ್ವಿಕ ಮತ್ತು ನೈತಿಕ ಸಮಸ್ಯೆಗಳು ಮತ್ತು ಇನ್ನು ಮುಂದೆ ಜೀವನ ನಡೆಸಬೇಕಾದ ಮಾರ್ಗವನ್ನು ವಿವರಿಸುವ 1,539 ಪದಗಳ ವಿವರವಾದ ಲೇಖನವನ್ನು ಫೇಸ್ಬುಕ್ನಲ್ಲಿ ಬರೆದಿದ್ದಾರೆ. ಜೀವನವನ್ನು ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲ ಮತ್ತು ವೈರಾಣು ಸಾಂಗ್ರಾಮಿಕವು ಜೀವನದ ಪರಸ್ಪರ ಸಂಪರ್ಕವನ್ನು ಎತ್ತಿ ತೋರಿಸಿದೆ ಎಂದು ಶ್ರೀ ನಾಯ್ಡು ಹೇಳಿದ್ದಾರೆ. “ಒಬ್ಬ ವ್ಯಕ್ತಿಯ ಮೇಲೆ ಆಗುವ ಪರಿಣಾಮ, ಎಲ್ಲಿಯಾದರೂ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ, ಅದು ರೋಗವಾಗಿರಬಹುದು ಅಥವಾ ಆರ್ಥಿಕತೆಯಾಗಿರಬಹುದುಎಂದು ಅವರು ಹೇಳಿದ್ದಾರೆ.

ಕೊರೊನಾಗೂ ಮೊದಲಿನಜೀವನದ ಸ್ವರೂಪವನ್ನು ವಿವರಿಸಿರುವ ಶ್ರೀ ನಾಯ್ಡು ಅವರು, ಸಂತೋಷ ಮತ್ತು ಭೌತಿಕ ಪ್ರಗತಿಯ ಅನ್ವೇಷಣೆಯಲ್ಲಿ ಮನುಷ್ಯ ಮತ್ತು ಕುಟುಂಬ ಮತ್ತು ಸಮಾಜವನ್ನು ಗೌಣವಾಗಿಸಿದ್ದನು ಮತ್ತು ಆತನ ದುರಹಂಕಾರದ ಗಡಿಯಲ್ಲಿರುವ ವಿಶ್ವಾಸವು ತಾನು ಒಬ್ಬಂಟಿಯಾಗಿಯೇ ಮತ್ತು ಇತರರ ಜೀವನಕ್ಕೂ ತನಗೂ ಸಂಬಂಧವಿಲ್ಲದೇ.ತಾನಾಗಿಯೇ ಬದುಕಬಲ್ಲೆನು ಎಂಬ ನಂಬಿಕೆ ಹುಟ್ಟಿಸಿತ್ತು ಎಂದು ಹೇಳಿದ್ದಾರೆ. " ಮೊದಲು ಸಾಂಕ್ರಾಮಿಕ ರೋಗವು ಮಾನವ ಕುಲವನ್ನು ಅಪ್ಪಳಿಸಿದಾಗ ಅದರ ವಿರುದ್ಧ ಹೋರಾಡಲು ಇದ್ದ ಸಾಧನಗಳಿಗಿಂತ ಉತ್ತಮವಾದವನ್ನು ಈಗ ಹೊಂದಿದ್ದೇವೆ, ಜೀನ್ ಎಡಿಟಿಂಗ್, ಕೃತಕ ಬುದ್ಧಿಮತ್ತೆ, ಬೃಹತ್ ದತ್ತಾಂಶ ಇತ್ಯಾದಿಗಳ ಬಲ ಪಡೆದಿದ್ದೇವೆ. ಮೊದಲು ಮನುಷ್ಯನು ದೇವರ ಮೊರೆ ಹೋಗುತ್ತಿದ್ದನು" ಎಂದು ಅವರು ಬರೆದಿದ್ದಾರೆ.

ಕೊರೊನಾ ನಂತರದಬದುಕಿನ ಬಗ್ಗೆ ಶ್ರೀ ನಾಯ್ಡು ಅವರು ಬರೆದು, ಸಾಂಕ್ರಾಮಿಕವು ತನಗಾಗಿ ಬದುಕುವ ಮೂಲಭೂತ ಅಂಶವನ್ನೇ ಅಲುಗಾಡಿಸಿದೆ ಹಾಗೂ ಪ್ರಕೃತಿ ಮತ್ತು ಸಹ ಮಾನವರೊಂದಿಗೆ ಸಾಮರಸ್ಯದಿಂದ ಬದುಕುವ ಅಗತ್ಯವನ್ನು ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ. “ಅದೃಶ್ಯ ಸೂಕ್ಷ್ಮಾಣುಜೀವಿಯೊಂದು ಜೀವನವು ಶೀಘ್ರವಾಗಿ ಬದಲಾಗಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅನಿಶ್ಚಿತತೆಯೆಂಬುದು ಸದಾ ಜೀವನದೊಂದಿಗೇ ಪಯಣಿಸುತ್ತಿರುತ್ತದೆ ಎಂಬುದನ್ನು ತೋರಿಸಿದೆಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗವು ಸಹಜೀವಿಗಳೊಂದಿಗಿನ ಸಂಬಂಧಗಳ ಸ್ವರೂಪ ಮತ್ತು ಅಭಿವೃದ್ಧಿಯ ಪ್ರಸ್ತುತ ಹಾದಿಗಳೊಂದಿಗೆ ಸಂಪರ್ಕ ಹೊಂದಿದ ನೈತಿಕ ಸಮಸ್ಯೆಗಳು ಸೇರಿದಂತೆ ಪ್ರಕೃತಿ ಮತ್ತು ಈಕ್ವಿಟಿಯ ಮೇಲೆ ಅವುಗಳ ಪರಿಣಾಮಗಳನ್ನು ಒಳಗೊಂಡಂತೆ ಜೀವನದ ಅರ್ಥ ಮತ್ತು ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಉಪ ರಾಷ್ಟ್ರಪತಿಯವರು ಅಭಿಪ್ರಾಯಪಟ್ಟಿದ್ದಾರೆ. "ಸಮಾಜದಲ್ಲಿ ಅಭಿವೃದ್ಧಿಗಾಗಿ ರೂಪಿಸಿದ ಆರ್ಥಿಕ ಮಾರ್ಗಗಳ ದೋಷದ ಪರಿಣಾಮಗಳನ್ನು ವೈರಾಣು ಎತ್ತಿ ತೋರಿಸಿದೆ. ಅನಿಶ್ಚಿತತೆಯು ಜನರನ್ನು ಕಾಡುತ್ತಿದೆ. ಅನಿಶ್ಚಿತತೆಯು ಆತಂಕದ ಮೂಲವಾಗಿದ್ದು, ಇದು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಶಾಂತವಾಗಿರಲು ಮತ್ತು ಆತ್ಮವಿಶ್ವಾಸದಿಂದಿರಲು ಹಾಗೂ ಹೊಸ ಸಾಮಾನ್ಯ ಜೀವನವನ್ನು ಅಳವಡಿಸಿಕೊಳ್ಳಲು ಸಮಸ್ಯೆಯನ್ನು ಎದುರಿಸುವುದು ಹೇಗೆ ?”

ಯಾವುದೇ ನಾಗರಿಕತೆಯ ಗುರಿ ಮಾನವನ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುವುದು ಎಂದು ಹೇಳಿರುವ ಶ್ರೀ ನಾಯ್ಡು, ಕೊರೊನಾ ಸವಾಲು ವೈಯಕ್ತಿಕ ಜೀವನಕ್ಕಿಂತ ನಾಗರಿಕತೆಯ ವಿಷಯವಾಗಿದೆ ಮತ್ತು ಪ್ರಸ್ತುತ ನಾಗರಿಕತೆಯನ್ನು ಉಳಿಸಲು ಹೊಸ ರೂಢಿಗಳು ಮತ್ತು ಜೀವನ ನೀತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ.

ದೀರ್ಘಕಾಲ ಬಂಧನಕ್ಕೊಳಗಾಗಿ ಬದುಕಲು ಸಾಧ್ಯವಿಲ್ಲ ಎಂದು ಹೇಳಿರುವ ಶ್ರೀ ನಾಯ್ಡು ಅವರು, ಕಳೆದ ರಾತ್ರಿ ಘೋಷಿಸಿದ ಲಾಕ್ ಡೌನ್ 4.0 ಹೊಸ ಸಡಿಲಿಕೆಗಳನ್ನು ಸ್ವಾಗತಿಸಿದರು. ಅಭ್ಯಾಸವನ್ನು ಬದಲಿಸುವ ಮೂಲಕ ದೀರ್ಘಕಾಲದವರೆಗೆ ಲಸಿಕೆ ಇಲ್ಲದ ಎಚ್ಐವಿ ವೈರಸ್ನೊಂದಿಗೆ ಬದುಕುತ್ತಿರುವವರನ್ನು ಉಲ್ಲೇಖಿಸಿದ ಶ್ರೀ ನಾಯ್ಡು, ವೈರಸ್ ನಿರೀಕ್ಷೆಗಿಂತ ಹೆಚ್ಚು ಕಾಲ ಜನರೊಂದಿಗೆ ಇದ್ದರೆ ಜೀವನ ಮತ್ತು ಸಹ ಮಾನವರ ಬಗೆಗಿನ ಅಭ್ಯಾಸ ಮತ್ತು ವರ್ತನೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಕೊರೊನಾ ವೈರಸ್ ಅನ್ನು ನಿಭಾಯಿಸಲು ಕಲಿಯಬೇಕೆಂದು ಅವರು ಜನರನ್ನು ಕೋರಿದರು.

ಕೊರೊನಾ ಕಾಲದ ಹೊಸ ಸಾಮಾನ್ಯ ಜೀವನಕ್ಕಾಗಿ 12 ಸೂತ್ರಗಳನ್ನು ಶ್ರೀ ನಾಯ್ಡು ಸೂಚಿಸಿದ್ದಾರೆ. ಪ್ರಕೃತಿ ಮತ್ತು ಸಹ ಜೀವಿಗಳೊಂದಿಗೆ ಸಾಮರಸ್ಯದಿಂದ ಬದುಕುವುದು, ಜೀವನದ ಸುರಕ್ಷತೆ ಮತ್ತು ಭದ್ರತೆ ಪರಸ್ಪರ ಸಂಬಂಧ ಹೊಂದಿವೆ ಎಂದು ತಿಳಿದುಕೊಳ್ಳುವುದು, ವೈರಸ್ ಹರಡುವಿಕೆಯ ಮೇಲೆ ಪ್ರತಿ ಚಲನೆ ಅಥವಾ ಕ್ರಿಯೆಯ ಪ್ರಭಾವವನ್ನು ವಿಶ್ಲೇಷಿಸುವುದು, ಪರಿಸ್ಥಿತಿಗೆ ಹಠಾತ್ತಾಗಿ ಪ್ರತಿಕ್ರಿಯಿಸದೆ, ವಿಜ್ಞಾನದಲ್ಲಿ ನಂಬಿಕೆಯಿಟ್ಟು ವಿಶ್ವಾಸದಿಂದ ಬದುಕುವುದು ಸಮಸ್ಯೆಗೆ ಪರಿಹಾರವನ್ನು ತರಬಹುದು, ಮುಖಗವಸು ಧರಿಸುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ನೈರ್ಮಲ್ಯವನ್ನು ಖಾತರಿಪಡಿಸುವುದು, ಕಳಂಕವನ್ನು ತಡೆಗಟ್ಟುವುದು, ಮೂಲಕ ಸೋಂಕಿತರು ಸ್ವಯಂ ಚಿಕಿತ್ಸೆಗೊಳಾಗುವುದು, ವೈರಸ್ ವಾಹಕರು ಎಂಬ ತಪ್ಪು ಮಾಹಿತಿ ಮತ್ತು ಸಹ ನಾಗರಿಕರ ವಿರುದ್ಧದ ಪೂರ್ವಾಗ್ರಹಗಳನ್ನು ಬಿಡುವುದು ಮತ್ತು ಸಾಮೂಹಿಕ ಅಸಹಾಯಕತೆಯನ್ನು ಬಿಟ್ಟು ಪರಸ್ಪರ ಅಂತರ್ ಸಂಪರ್ಕಿತ ಉತ್ಸಾಹದ ಬದುಕು ನಡೆಸುವುದು. 12 ಸೂತ್ರಗಳನ್ನು ಅವರು ಸೂಚಿಸಿದ್ದಾರೆ.

ವೈರಸ್ ಮತ್ತು ರೋಗವನ್ನು ಮಹಾಮಾರಿ ಎಂದು ನಿರೂಪಿಸುವ ಬದಲು ಅದರ ಬಗ್ಗೆ ಸೂಕ್ತವಾದ ಮತ್ತು ವೈಜ್ಞಾನಿಕ ಮಾಹಿತಿಯನ್ನು ಪ್ರಸಾರ ಮಾಡಬೇಕೆಂದು ಉಪರಾಷ್ಟ್ರಪತಿಯವರು ಎಲ್ಲಾ ಮಾಧ್ಯಮಗಳಿಗೆ ಒತ್ತಾಯಿಸಿದ್ದಾರೆ.

"ವಿಭಿನ್ನವಾಗಿ ಬದುಕಿ ಮತ್ತು ಸುರಕ್ಷಿತವಾಗಿ ಬದುಕಿ" ಎಂದು ಶ್ರೀ ವೆಂಕಯ್ಯ ನಾಯ್ಡು ಜನತೆಗೆ ಕರೆ ನೀಡಿದ್ದಾರೆ.

***


(Release ID: 1624953) Visitor Counter : 11483