ಇಂಧನ ಸಚಿವಾಲಯ

ಆತ್ಮನಿರ್ಭರ ಭಾರತ ಅಭಿಯಾನದಡಿ 90,000 ಕೋ.ರೂ. ಪ್ಯಾಕೇಜ್ ವಿಸ್ತರಣೆಗಾಗಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಇಂಧನ ಸಚಿವಾಲಯ ಪತ್ರ

Posted On: 16 MAY 2020 6:53PM by PIB Bengaluru

ಆತ್ಮನಿರ್ಭ ಭಾರತ ಅಭಿಯಾನದಡಿ 90,000 ಕೋ.ರೂ. ಪ್ಯಾಕೇಜ್ ವಿಸ್ತರಣೆಗಾಗಿ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಇಂಧನ ಸಚಿವಾಲಯ ಪತ್ರ

ಎರಡು ಹಂತಗಳಲ್ಲಿ ತಲಾ 45,000 ಕೋ.ರೂ.ಗಳಂತೆ ನಿಧಿ

ಲಾಕ್ ಡೌನ್ ಅವಧಿಯಲ್ಲಿ ಡಿಸ್ಕಾಂಗಳಿಗೆ ನಿಗದಿ ಮಾಡಲಾದ ವಿದ್ಯುತ್ ಪೂರೈಸದಿರುವುದಕ್ಕೆ ಕೇಂದ್ರೀಯ ವಿದ್ಯುತ್ ಜೆನ್ಕೋಗಳಿಗೆ ನಿಗದಿತ ಶುಲ್ಕಗಳನ್ನು ತತ್ಕಾಲಕ್ಕೆ ಮುಂದೂಡಲು ಕೇಂದ್ರ ಇಂಧನ ಸಚಿವಾಲಯ ನಿರ್ಧಾರ; ಲಾಕ್ ಡೌನ್ ಬಳಿಕ ಮೂರು ಸಮಾನ ಕಂತುಗಳಲ್ಲಿ ಬಡ್ಡಿ ರಹಿತವಾಗಿ ಮರುಪಾವತಿ

ಲಾಕ್ ಡೌನ್ ಅವಧಿಯಲ್ಲಿ ಕೇಂದ್ರೀಯ ವಿದ್ಯುತ್ ಜೆನ್ಕೋಗಳು/ಕೇಂದ್ರೀಯ ಪ್ರಸರಣ ಕಂಪೆನಿಗಳಿಗೆ ವಿದ್ಯುತ್ ಪೂರೈಕೆ (ನಿಗದಿತ ಶುಲ್ಕ) ದಲ್ಲಿ 20-25% % ರಿಯಾಯತಿಯನ್ನು ಡಿಸ್ಕಾಂಗಳಿಗೆ ಒದಗಿಸುವುದನ್ನು ಪರಿಗಣಿಸಲು ಸಲಹೆ

ವೆಚ್ಚ ಉಳಿಕೆಯನ್ನು ಬಳಕೆದಾರರಿಗೆ ವರ್ಗಾಯಿಸಲು ಡಿಸ್ಕಾಂಗಳಿಗೆ ಸೂಚನೆ

 

ಕೇಂದ್ರ ಇಂಧನ ಸಚಿವಾಲಯವು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ಒತ್ತಡದಲ್ಲಿರುವ ಡಿಸ್ಕಾಂಗಳಿಗೆ 90,000 ಕೋ.ರೂ.ಗಳ ಹಣಕಾಸು ನೆರವಿನ ಪ್ಯಾಕೇಜನ್ನು ವಿಸ್ತರಿಸಿರುವುದಾಗಿ ತಿಳಿಸಿದೆ. ನಿಟ್ಟಿನಲ್ಲಿ ಅಧಿಕೃತ ಪ್ರಕಟಣೆಯನ್ನು 14.05.2020 ರಂದು ನೀಡಲಾಗಿದೆ.

ಇಂಧನ ವಲಯಕ್ಕೆ ಪ್ಯಾಕೇಜ್ ಕಠಿಣ ಸಂದರ್ಭದಲ್ಲಿ ಜೆನ್ಕೋಗಳು/ ಟ್ರಾನ್ಸ್ಕೋಗಳು ಪೂರೈಸಿದ ವಿದ್ಯುತ್ತನ್ನು ನಿರ್ವಹಿಸಿ, ವಿತರಿಸುವ ಡಿಸ್ಕಾಂಗಳ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ ಎಂದಿದ್ದಾರೆ ಇಂಧನ, ಹೊಸ ಮತ್ತು ಮರುನವೀಕೃತ ವಿದ್ಯುತ್ ಖಾತೆಯ ಸಹಾಯಕ (ಸ್ವತಂತ್ರ ನಿರ್ವಹಣೆ) ಸಚಿವರಾದ ಶ್ರೀ ಆರ್.ಕೆ.ಸಿಂಗ್. ಭಾರತ ಸರಕಾರವು 13.5.2020 ರಂದು ಇಂಧನ ಹಣಕಾಸು ನಿಗಮ (ಪಿ..ಸಿ.) ಮತ್ತು ಗ್ರಾಮೀಣ ವಿದ್ಯುದ್ದೀಕರಣ ನಿಗಮ (ಆರ್..ಸಿ.) ಗಳ ಮೂಲಕ ಆತ್ಮನಿರ್ಭರ ಭಾರತ್ ಅಭಿಯಾನದ ಅಂಗವಾಗಿ 90,000 ಕೋ.ರೂ. ನಗದು ಸೇರ್ಪಡೆಗೆ ನಿರ್ಧಾರ ಕೈಗೊಂಡಿದೆ.

ಮಧ್ಯಪ್ರವೇಶದಡಿಯಲ್ಲಿ ,ಆರ್..ಸಿ. ಮತ್ತು ಪಿ..ಸಿ. ಗಳು ವಿಶೇಷ ಧೀರ್ಘಾವಧಿ ಪರಿವರ್ತನಾ ಸಾಲಗಳನ್ನು ಡಿಸ್ಕಾಂಗಳಿಗೆ 10 ವರ್ಷಗಳ ಅವಧಿಯವರೆಗೆ ನೀಡುತ್ತವೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಆರ್..ಸಿ. ಮತ್ತು ಪಿ.ಎಫ್.ಸಿ. ಗಳು ತಕ್ಷಣವೇ ಡಿಸ್ಕಾಂಗಳಿಗೆ ಸಾಲವನ್ನು ವಿಸ್ತರಿಸಲು ಪ್ರಸ್ತಾಪಿಸಿರುವುದನ್ನು ತಿಳಿಸಲಾಗಿದೆ. ಉದಯ್ ಅಡಿಯಲ್ಲಿ ನಿಗದಿ ಮಾಡಲಾದ ಕಾರ್ಯಾಚರಣಾ ಬಂಡವಾಳ ಮಿತಿಯಲ್ಲಿ ಇನ್ನಷ್ಟು ಸಾಲ ಪಡೆಯಲು ಅವಕಾಶ ಇದ್ದಲ್ಲಿ ಡಿಸ್ಕಾಂಗಳಿಗೆ ಅವಕಾಶ. ಮುಂದುವರೆದು ಉದಯ್ ಅಡಿಯಲ್ಲಿ ಕಾರ್ಯಾಚರಣಾ ಬಂಡವಾಳ ಮಿತಿಯಲ್ಲಿ ಅವಕಾಶ ಹೊಂದಿಲ್ಲದ ಡಿಸ್ಕಾಂಗಳು, ಆದರೆ ರಾಜ್ಯ ಸರಕಾರದಿಂದ ವಿದ್ಯುತ್ ಬಿಲ್ ಬಾಕಿ, ಸಬ್ಸಿಡಿ ಬಾಕಿ ಸಹಿತ ಪಾವತಿ ಬಾಕಿ ಇರುವವುಗಳು ಸಾಲಗಳಿಗೆ ಅರ್ಹತೆ ಪಡೆಯುತ್ತವೆ. ಆದರೆ ಅದರ ಮಿತಿ ರಾಜ್ಯ ಸರಕಾರಗಳಿಂದ ಪಾವತಿ ಬಾಕಿ ಇರುವಷ್ಟು ಮೊತ್ತಕ್ಕೆ ಅನ್ವಯಿಸುತ್ತದೆ. ಸಾಲಗಳು ಧೀರ್ಘಾವಧಿಯವಾಗಿದ್ದು ಮತ್ತು ಅವುಗಳು ಡಿಸ್ಕಾಂಗಳ ಕಾರ್ಯಾಚರಣಾ ಬಂಡವಾಳ ಆವಶ್ಯಕತೆಯನ್ನು ಅನುಸರಿಸಿರುವುದಿಲ್ಲ. ರಾಜ್ಯ ಸರಕಾರಗಳಿಂದ ಮರುಪಾವತಿ ಭದ್ರತೆ ಇದ್ದಲ್ಲಿ ಉದಯ್ ಕಾರ್ಯಾಚರಣಾ ಬಂಡವಾಳ ಮಿತಿಗಳೂ ಅನ್ವಯಿಸುವುದಿಲ್ಲ.

ಇದಲ್ಲದೆ, ಡಿಸ್ಕಾಂಗಳಿಗೆ ರಾಜ್ಯಗಳಿಂದ ಬಾಕಿ ಬರಲು ಇಲ್ಲದಿರುವ ಅಥವಾ ಉದಯ್ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಕಾರ್ಯಾಚರಣಾ ಬಂಡವಾಳ ಮಿತಿಯಲ್ಲಿ ಹಣಕಾಸು ಅವಕಾಶಗಳು ಇಲ್ಲದೇ ಇದ್ದಲ್ಲಿ ಆಯಾಯ ರಾಜ್ಯಗಳು ಮಿತಿಗೆ ಸಂಬಂಧಿಸಿ ಸಡಿಲಿಕೆಗಾಗಿ ಭಾರತ ಸರಕಾರಕ್ಕೆ ಮನವಿಗಳನ್ನು ಸಲ್ಲಿಸಬಹುದು.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಮತ್ತು ಅದರ ಫಲವಾಗಿ ಜಾರಿ ಮಾಡಲಾದ ಲಾಕ್ ಡೌನ್ ಇಂಧನ ಕ್ಷೇತ್ರದ ಹಣಕಾಸು ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ, ಮತ್ತು ಅದರ ಪರಿಣಾಮವಾಗಿ ಇಂಧನ ವಲಯದ ಮೌಲ್ಯ ಸರಪಳಿಯಲ್ಲಿ ತೀವ್ರವಾದ ನಗದು ಬಿಕ್ಕಟ್ಟು ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಂಧನ ವಲಯದ ಮೌಲ್ಯ ಸರಪಳಿಯಲ್ಲಿ ನಗದು ಹರಿವು ನಗದು ಸಮಸ್ಯೆಯನ್ನು ಪರಿಹಾರ ಮಾಡಲು ನೆರವಾಗುತ್ತದೆ. ಹಣವು ಡಿಸ್ಕಾಂಗಳಿಗೆ ಅವರು ವಿದ್ಯುತ್ ಉತ್ಪಾದಕರಿಗೆ (ಜೆನ್ಕೋಸ್ ) ಮತ್ತು ಪ್ರಸರಣ ಕಂಪೆನಿಗಳಿಗೆ (ಟ್ರಾನ್ಸ್ಕೋಸ್) ಬಾಕಿ ಇರಿಸಿರುವ ಬಹುಪಾಲು ಹಣವನ್ನು ಮರು ಪಾವತಿ ಮಾಡಲು ಸಹಾಯ ಮಾಡುತ್ತದೆ. ಇದು ಇಂಧನ ವಲಯದಲ್ಲಿ ನಗದು ಹರಿವಿನ ಚಕ್ರವನ್ನು ಪುನರಾರಂಭಿಸಲು ಸಹಾಯ ಮಾಡುತ್ತದೆ.

ಡಿಸ್ಕಾಂಗಳಿಗೆ ಸಾಲವನ್ನು ರಾಜ್ಯ ಸರಕಾರಗಳ ಗ್ಯಾರಂಟಿಯ ಮೇಲೆ ನೀಡಲಾಗುತ್ತದೆ. ಇದನ್ನು ಸಿ.ಪಿ.ಎಸ್.. ಜೆನ್ಕೋಸ್/ ಟ್ರಾನ್ಸ್ಕೋ , .ಪಿ.ಪಿ. ಮತ್ತು ಆರ್.. ಉತ್ಪಾದಕರಿಗೆ ಬಾಕಿ ಪಾವತಿಸಲು ಬಳಸಬೇಕಾಗುತ್ತದೆ. ಒಟ್ಟು ಹಣಕಾಸು ನಿಧಿಯ ಗಾತ್ರ 90,000 ಕೋ.ರೂ. ಹಣಕಾಸನ್ನು ತಲಾ 45,000 ಕೋ.ರೂ.ಗಳ ಎರಡು ಹಂತಗಳಲ್ಲಿ ಒದಗಿಸಲಾಗುತ್ತದೆ.

ಇದರ ಜೊತೆಗೆ ಡಿಸ್ಕಾಂಗಳನ್ನು ಹಣಕಾಸು ಒತ್ತಡದಿಂದ ಮೇಲೆತ್ತಲು ,ಇಂಧನ ಸಚಿವಾಲಯವು 15.5.2020ರಂದು ಹೊರಡಿಸಿರುವ ಇನ್ನೊಂದು ಪ್ರಕಟಣೆಯ ಪ್ರಕಾರ ಕೇಂದ್ರೀಯ ಜೆನ್ಕೋಗಳಿಗೆ ಲಾಕ್ ಡೌನ್ ಅವಧಿಯಲ್ಲಿ ವಿದ್ಯುತ್ತಿನ ಮೇಲೆ ನಿಗದಿತ ಶುಲ್ಕ ಪಾವತಿಯನ್ನು ಮುಂದೂಡಲು ನಿರ್ಧರಿಸಲಾಗಿದ್ದು, ಇದನ್ನು ನಂತರದ ತಿಂಗಳುಗಳಲ್ಲಿ ಮೂರು ಸಮಾನ ಕಂತುಗಳಲ್ಲಿ ಬಡ್ಡಿ ರಹಿತವಾಗಿ ಪಾವತಿ ಮಾಡಲಾಗುವುದು. ಲಾಕ್ ಡೌನ್ ಅವಧಿಯಲ್ಲಿ ಬೇಡಿಕೆಯಲ್ಲಿ ಗಮನಾರ್ಹ ಕಡಿತವಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯ ಘಟಕಗಳು ಮುಚ್ಚಲ್ಪಟ್ಟಿರುವುದು ಇದಕ್ಕೆ ಕಾರಣ. ವಿದ್ಯುತ್ ಖರೀದಿ ಒಪ್ಪಂದದ ಪ್ರಕಾರ , ಡಿಸ್ಕಾಂಗಳು ಎಲ್ಲಾ ಗುತ್ತಿಗೆ ಮಾಡಲಾದ ಪ್ರಮಾಣಕ್ಕೆ , ವಿದ್ಯುತ್ತನ್ನು ಪಡೆದುಕೊಳ್ಳದೇ ಇದ್ದರೂ ನಿಗದಿತ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. ಲಾಕ್ ಡೌನ್ ಅವಧಿಯಲ್ಲಿ ಬಳಕೆ ಮಾಡಿರದ ವಿದ್ಯುತ್ತಿಗೂ ಹಣ ಪಾವತಿಸಬೇಕಾದ ಕ್ರಮವು ಡಿಸ್ಕಾಂಗಳ ಮೇಲೆ ಭಾರೀ ಹೊರೆಯನ್ನು ಹೊರಿಸುತ್ತದೆ.

ಲಾಕ್ ಡೌನ್ ಅವಧಿಗೆ ಪಿ.ಜಿ.ಸಿ..ಎಲ್. ಗೆ ಪಾವತಿ ಮಾಡಬೇಕಿರುವ ಅಂತರ ರಾಜ್ಯ ಸಾಗಾಟ ಶುಲ್ಕಗಳು (.ಎಸ್.ಟಿ.ಎಸ್.) ಸಹಿತ ವಿದ್ಯುತ್ ಪೂರೈಕೆ (ನಿಗದಿತ ವೆಚ್ಚ) ಮೇಲೆ 20-25 ಶೇಕಡಾ ರಿಯಾಯತಿಯನ್ನು ಸಲಹೆ ಮಾಡಲಾಗಿದೆ. ವೆಚ್ಚ ಉಳಿತಾಯವನ್ನು ಅಂತಿಮ/ ಕೊನೆಯ ಬಳಕೆದಾರರಿಗೆ ವರ್ಗಾಯಿಸುವಂತೆ ಡಿಸ್ಕಾಂಗಳಿಗೆ ಸೂಚನೆ ನೀಡಲಾಗಿದ್ದು, ಇದರಿಂದ ಬಳಕೆದಾರರ ವಿದ್ಯುತ್ ವೆಚ್ಚದಲ್ಲಿ ಕಡಿತವಾಗಲಿದೆ.

***



(Release ID: 1624631) Visitor Counter : 181