ಗೃಹ ವ್ಯವಹಾರಗಳ ಸಚಿವಾಲಯ

ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಎಚ್.ಎ.ಸೂಚನೆ: ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಮನೆಗಳಿಗೆ ಮರಳುವುದನ್ನು ತಡೆಯಿರಿ, ಸರಕಾರ ಈ ಉದ್ದೇಶಕ್ಕಾಗಿಯೇ ಯೋಜಿಸುವ ಬಸ್ಸುಗಳ ಮತ್ತು “ಶ್ರಮಿಕ ವಿಶೇಷ” ರೈಲುಗಳ ಮೂಲಕವೇ ಪ್ರಯಾಣ ಆಗುವಂತೆ ಖಾತ್ರಿಪಡಿಸಿ

Posted On: 15 MAY 2020 10:41PM by PIB Bengaluru

ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಎಚ್..ಸೂಚನೆ: ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಮನೆಗಳಿಗೆ ಮರಳುವುದನ್ನು ತಡೆಯಿರಿ, ಸರಕಾರ ಉದ್ದೇಶಕ್ಕಾಗಿಯೇ ಯೋಜಿಸುವ ಬಸ್ಸುಗಳ ಮತ್ತುಶ್ರಮಿಕ ವಿಶೇಷ ರೈಲುಗಳ ಮೂಲಕವೇ ಪ್ರಯಾಣ ಆಗುವಂತೆ ಖಾತ್ರಿಪಡಿಸಿ

 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು (ಎಂ.ಎಚ್..) ದಿನಾಂಕ 11.05.2020 ರಂದು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು, ಸಿಲುಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು ಅವರ ತವರು ರಾಜ್ಯಗಳಿಗೆ ಬಸ್ಸುಗಳ ಮೂಲಕ ಮತ್ತು ಸರಕಾರ ಉದ್ದೇಶಕ್ಕಾಗಿಯೇ ಓಡಿಸುವ ಶ್ರಮಿಕವಿಶೇಷ ರೈಲುಗಳ ಮೂಲಕವೇ ತ್ವರಿತವಾಗಿ ಸಾಗಲು ಅನುಕೂಲ ಮಾಡಿಕೊಡುವಂತೆ ಸೂಚಿಸಿದೆ.

ಸಂದೇಶವು ವಲಸೆ ಕಾರ್ಮಿಕರು ರಸ್ತೆಯಲ್ಲಿ ನಡೆದುಕೊಂಡು ಹೋಗುವ , ರೈಲ್ವೇ ಟ್ರಾಕುಗಳಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದು, ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಇಂತಹ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರು ಕಂಡು ಬಂದಲ್ಲಿ ಅವರಿಗೆ ಸೂಕ್ತ ರೀತಿಯಲ್ಲಿ ಆಪ್ತ ಸಮಾಲೋಚನೆ ನಡೆಸಿ, ಹತ್ತಿರದ ಆಶ್ರಯ ತಾಣಗಳಿಗೆ ಕರೆದೊಯ್ದು , ಆಹಾರ , ನೀರು ಇತ್ಯಾದಿಗಳನ್ನು ಅವರು ತಮ್ಮ ಊರಿಗೆ ಹೋಗಲುಶ್ರಮಿಕವಿಶೇಷ ರೈಲು ಅಥವಾ ಬಸ್ಸುಗಳನ್ನು ಹತ್ತುವವರೆಗೂ ಒದಗಿಸಬೇಕು ಎಂದು ಸೂಚಿಸಿದೆ.

ಆದಾಗ್ಯೂ, ವಲಸೆ ಕಾರ್ಮಿಕರು ರಸ್ತೆಯಲ್ಲಿ ನಡೆದುಕೊಂಡು ಹೋಗುವ, ರೈಲ್ವೇ ಟ್ರಾಕುಗಳಲ್ಲಿ ನಡೆದುಕೊಂಡು ಹೋಗುವ ಮತ್ತು ಟ್ರಕ್ಕುಗಳಲ್ಲಿ ಪ್ರಯಾಣಿಸುವ ಘಟನೆಗಳು ದೇಶದ ವಿವಿಧೆಡೆಗಳಿಂದ ವರದಿಯಾಗುತ್ತಿವೆ. ಇದರ ಹಿನ್ನೆಲೆಯಲ್ಲಿ , ಎಂ.ಎಚ್..ಯು ಮತ್ತೆ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ವಲಸೆ ಕಾರ್ಮಿಕರು ನಡೆದುಕೊಂಡು ತಮ್ಮ ರಾಜ್ಯಗಳಿಗೆ ಪ್ರಯಾಣಿಸದಂತೆ ಖಾತ್ರಿಪಡಿಸಿ ಎಂದು ಹೇಳಿದೆ.

ಸಂದೇಶದಲ್ಲಿ ರೈಲ್ವೇ ಸಚಿವಾಲಯವು ದಿನವೊಂದಕ್ಕೆ 100 ಕ್ಕೂ ಅಧಿಕ ಶ್ರಮಿಕ ವಿಶೇಷ ರೈಲುಗಳನ್ನು ಓಡಿಸುತ್ತಿದೆ ಮತ್ತು ಅದು ಹೆಚ್ಚುವರಿ ರೈಲುಗಳನ್ನು ಆವಶ್ಯಕತೆಗೆ ಅನುಗುಣವಾಗಿ ಓಡಿಸಲು ತಯಾರಿದೆ. ಜನರಿಗೆ ವ್ಯವಸ್ಥೆಗಳ ಬಗ್ಗೆ ಮಾಹಿತಿ ದೊರಕುವಂತೆ ಮಾಡಬೇಕು. ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕಾಲ್ನಡೆಯಲ್ಲಿ ಪ್ರಯಾಣಿಸದಂತೆ ಮನವೊಲಿಸಬೇಕು, ಅವರಿಗೆ ಸರಕಾರವು ಬಸ್ಸುಗಳನ್ನು , ರೈಲುಗಳನ್ನು ವಿಶೇಷವಾಗಿ ಓಡಿಸುತ್ತಿರುವಾಗ ಅದರಲ್ಲಿ ಅವರು ಪ್ರಯಾಣಿಸಬಹುದು ಎಂಬುದನ್ನು ಮನದಟ್ಟು ಮಾಡಬೇಕು ಎಂದೂ ಹೇಳಲಾಗಿದೆ.

ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕೃತ ಸಂದೇಶವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ

***

 



(Release ID: 1624304) Visitor Counter : 222