ರಕ್ಷಣಾ ಸಚಿವಾಲಯ

ರಕ್ಷಣಾ ಸಚಿವ ಶ್ರೀ ರಾಜ್ ನಾಥ್ ಸಿಂಗ್ ಭಾರತೀಯ ಸಮುದ್ರ ತೀರ ರಕ್ಷಣಾ ಪಡೆಯ ಹಡಗು ‘ಸಚೇತ್’ ಮತ್ತು 2 ಪ್ರತಿಬಂಧಕ ನಾವೆಗಳಿಗೆ ಚಾಲನೆ ನೀಡಿದರು   

Posted On: 15 MAY 2020 12:51PM by PIB Bengaluru

ರಕ್ಷಣಾ ಸಚಿವ ಶ್ರೀ ರಾಜ್ ನಾಥ್ ಸಿಂಗ್ ಭಾರತೀಯ ಸಮುದ್ರ ತೀರ ರಕ್ಷಣಾ ಪಡೆಯ ಹಡಗು ಸಚೇತ್ಮತ್ತು 2 ಪ್ರತಿಬಂಧಕ ನಾವೆಗಳಿಗೆ ಚಾಲನೆ ನೀಡಿದರು   

ಸ್ಥಳೀಯವಾಗಿ ನಿರ್ಮಿಸಲಾದ ಹಡಗುಗಳು ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಕಡಲ ಸುರಕ್ಷತೆಯನ್ನು ವೃದ್ಧಿಸುತ್ತವೆ:

ರಾಜ್ ನಾಥ್ ಸಿಂಗ್

 

ರಕ್ಷಣಾ ಸಚಿವ ಶ್ರೀ ರಾಜ್ ನಾಥ್ ಸಿಂಗ್ ಭಾರತೀಯ ಸಮುದ್ರ ತೀರ ರಕ್ಷಣಾ ಪಡೆಯ ಹಡಗು (ಐಸಿಜಿಎಸ್) ‘ಸಾಚೇತ್ಮತ್ತು 2 ಪ್ರತಿಬಂಧಕ ನಾವೆ (ಐಬಿಎಸ್) ಸಿ – 450 ಮತ್ತು ಸಿ – 451 ಗಳಿಗೆ ಗೋವಾದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಇಂದು ಚಾಲನೆ ನೀಡಿದರು. ಐದು ಕಡಲಾಚೆಯ ಗಸ್ತು ಹಡಗುಗಳ (ಒಪಿವಿಗಳು) ಸರಣಿಯಲ್ಲಿ ಐಸಿಜಿಎಸ್ ಸಚೇತ್ ಮೊದಲನೇಯಾಗಿದ್ದು ಗೋವಾ ಶಿಪ್ ಯಾರ್ಡ್ ಲಿಮಿಟೆಡ್ (ಜಿ ಎಸ್ ಎಲ್) ಸ್ಥಳೀಯವಾಗಿ ಅದರ ವಿನ್ಯಾಸ ಮತ್ತು ನಿರ್ಮಾಣ ಕೆಲಸವನ್ನು ಮಾಡಿದೆ ಮತ್ತು ಇದರಲ್ಲಿ ಅತ್ಯಾಧುನಿಕ ನ್ಯಾವಿಗೇಶನ್ ಮತ್ತು ಸಂವಹನ ಪರಿಕರಗನ್ನು ಅಳವಡಿಸಲಾಗಿದೆ.  

ಡಿಜಿಟಲ್ ಮಾಧ್ಯಮದ ಮೂಲಕ ಕಾರ್ಯಾರಂಭ ಮಾಡಿದ ಈ ಉಪಕ್ರಮಕ್ಕಾಗಿ ಐಸಿಜಿ ಮತ್ತು ಜಿ ಎಸ್ ಎಲ್ ನ್ನು ಶ್ಲಾಘಿಸಿದ ಶ್ರೀ ರಾಜ್ ನಾಥ್ ಸಿಂಗ್ ಈ ಹಡಗುಗಳ ನಿಯೋಜನೆ ಭಾರತದ ಕರಾವಳಿ ತೀರದ ಸಾಮರ್ಥ್ಯ ಹೆಚ್ಚಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಅಲ್ಲದೆ ಕೋವಿಡ್ – 19 ರಂತಹ ಸವಾಲುಗಳಿದ್ದರೂ ನಮ್ಮ ದೇಶದ ಭದ್ರತೆ ಮತ್ತು ಸುರಕ್ಷತೆಗಾಗಿ ಬದ್ಧತೆ ಮತ್ತು ಧೃಡ ನಿರ್ಧಾರಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ, ‘ನಮ್ಮ ಸಮುದ್ರ ತೀರದ ರಕ್ಷಕರು,’ ಐಸಿಜಿ ಮತ್ತು ಭಾರತೀಯ ಹಡಗು ನಿರ್ಮಾಣ ುದ್ಯಮದಲ್ಲಿ ಹೆಚ್ಚುತ್ತಿರುವ ಶಕ್ತಿ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.”    

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸು ಸಾಗರ್’ (ಸೆಕ್ಯುರಿಟಿ ಆಂಡ್ ಗ್ರೋತ್ ಫಾರ್ ಆಲ್ ಇನ್ ದಿ ರೀಜನ್) ಬಗ್ಗೆ ಉಲ್ಲೇಖಿಸಿದ ರಕ್ಷಣಾ ಸಚಿವರು, “ಸಾಗರಗಳು ಕೇವಲ ನಮ್ಮ ದೇಶಕ್ಕಷ್ಟೇ ಅಲ್ಲ ಜಾಗತಿಕ ಸಮೃದ್ಧಿಯ  ಜೀವಾಳವಾಗಿವೆಎಂದು ಹೇಳದರುಸುರಕ್ಷಿತ ಮತ್ತು ಸಂರಕ್ಷಿತ ಮತ್ತು ಸ್ವಚ್ಛ ಸಮುದ್ರಗಳು ರಾಷ್ಟ್ರ ನಿರ್ಮಾಣಕ್ಕೆ ಆರ್ಥಿಕ ಅವಕಾಶಗಳನ್ನು ಒದಗಿಸುತ್ತವೆ. ಭಾರತ ಉದಯೋನ್ಮುಖ ಸಮುದ್ರ ತೀರದ ಶಕ್ತಿಯಾಗಿದ್ದು ನಮ್ಮ ಸಮೃದ್ಧಿಯೂ ಸಹ ಸಮುದ್ರದ ಮೇಲೆ ಅವಲಂಬಿತವಾಗಿದೆ. ಜವಾಬ್ದಾರಿಯುತ ಸಮುದ್ರ ತೀರದ ಶಕ್ತಿಯಾಗಿರುವುದರಿಂದ ಸಾಗರಗಳು ಸರ್ಕಾರದ ಆದ್ಯತೆಯಾಗಿವೆ ಎಂದು ಅವರು ಹೇಳಿದರು  

ಸಮುದ್ರ ತೀರಗಳನ್ನು ಕಾಯುತ್ತಿರುವ ಐಸಿಜಿಯ ಪಾತ್ರವನ್ನು ಶ್ಲಾಘಿಸಿದ ಶ್ರೀ ರಾಜ್ ನಾಥ್ ಸಿಂಗ್ ವಿಶ್ವದ ನಾಲ್ಕನೇ ಅತಿ ದೊಡ್ಡ ಕಡಲ ತೀರ ರಕ್ಷಣಾ ಪಡೆಯಾಗಿ, ಒಂದು ವಿಶ್ವಾಸಾರ್ಹ ಶಕ್ತಿಯಾಗಿ ತನ್ನನ್ನು ತಾನು ನಿರೂಪಿಸಿದೆ. ಇದು ನಮ್ಮ ಕಡಲ ತೀರ ಮತ್ತು ಕಡಲ ತೀರದ ಸಮುದಾಯಗಳನ್ನು ಮಾತ್ರ ರಕ್ಷಿಸುತ್ತಿಲ್ಲ ಬದಲಿಗೆ ಆರ್ಥಿಕ ಚಟುವಟಿಕೆಗಳು ಮತ್ತು ಎಕ್ಸ್ಲೂಸಿವ್ ಎಕಾನಾಮಿಕ್ ಝೋನ್ (ಪ್ರತ್ಯೇಕ ಆರ್ಥಿಕ ವಲಯ) (ಇಇಝೆಡ್) ಪರಿಸರವನ್ನೂ ಸರ ರಕ್ಷಿಸುತ್ತದೆಎಂದು ಹೇಳಿದರು.

ದೇಶದ್ರೋಹಿ ಶಕ್ತಿಗಳಿಂದ ಪ್ರಚೋದಿಸಲ್ಪಟ್ಟ ಯಾವುದೇ ಬಗೆಯ ಅಪಾಯಗಳಿಗೆ ಸಮುದ್ರ ಒಂದು ಮಾಧ್ಯಮವಾಗಬಹುದು ಎಂದು ರಕ್ಷಣಾ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಎಲ್ಲ ಪಾಲುದಾರರೊಂದಿಗೆ ಸಹಕಾರಯುತ ಮತ್ತು ಜಂಟಿಯಾಗಿ ಕಾರ್ಯನಿರ್ವಹಿಸುವಂತಹ ವಿಧಾನವನ್ನು ಅಭಿವೃದ್ಧಿಪಡಿಸುವುದು ಬಹಳ ಮುಖ್ಯ. ಕಡಲ ತೀರದ ಭಯೋತ್ಪಾದನೆ, ಮಾದಕ ವಸ್ತುಗಳ ಕಳ್ಳ ಸಾಗಾಣೆ, ಕಳ್ಳ ಸಾಗಾಣೆ, ಸಮುದ್ರ ತೀರದಲ್ಲಿ ಕಾನೂನು ಜಾರಿಗೊಳಿಸುವುದು ಮತ್ತು ಬೆದರಿಕೆಗೆ ಒಳಗಾದಂತಹ ನಾವಿಕರನ್ನು ಹುಡುಕಿ, ಕಾಪಾಡುವಂಥ ಸವಾಲುಗಳನ್ನು ಎದುರಿಸಲು ಇಂದು ಕಡಲ ತೀರದ ರಕ್ಷಣಾ ನೌಕೆಗಳು ಸೇರ್ಪಡೆಗೊಂಡಿರುವುದು ಈ ನಿಟ್ಟಿನಲ್ಲಿ ಮತ್ತಷ್ಟು ಬಲ ನೀಡಿದ್ದು ಈ ಸವಾಲುಗಳನ್ನು ಎದುರಿಸುವಲ್ಲಿ ಸಹಕಾರಿಯಾಆಗಲಿದೆ ಎಂದು ಅವರು ಹೇಳಿದರು.         

ಈ ಬಿಕ್ಕಟ್ಟಿನ ಸಂದರ್ಭದಲ್ಲೂ ಹಡಗುಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಮುಂದಾಗಿರುವ ಗೋವಾ ಶಿಪ್ ಯಾರ್ಡ್ ಮತ್ತು ಎಲ್ ಆಂಡ್ ಟಿ  ಶಿಪ್ ಯಾರ್ಡ್  ಹಾಗೂ ಹಜೀರಾ ಅವರ ಪ್ರಯತ್ನಗಳನ್ನು ಶ್ರೀ ರಾಜ್ ನಾಥ್ ಸಿಂಗ್ ಶ್ಲಾಘಿಸಿದರು. “ ಇದು ಅವರ ವೃತ್ತಿಪರತೆಯನ್ನು ತೋರಿಸುತ್ತದೆ. ಇತ್ತೀಚೆಗೆ ನಮ್ಮ ಪ್ರಧಾನ ಮಂತ್ರಿಗಳಿಂದ ಸ್ಫೂರ್ತಿ ಪಡೆದ ಮೇಕ್ ಇನ್ ಇಂಡಿಯಾಮತ್ತು ಸ್ವಾವಲಂಬಿ ಭಾತ ಅಭಿಯಾನದನಿರ್ಮಾಣಕ್ಕೆ ಭಾರತೀಯ ಶಿಪ್ ಯಾರ್ಡ್ ಗಳು ಮಹತ್ವದ ಕೊಡುಗೆ ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.” ಎಂದು ಅವರು ಹೇಳಿದರು.    

ಭಾರತೀಯ ಕಡಲ ತೀರ ಸಂರಕ್ಷಣಾ ಪಡೆಯ ಮಹಾನಿರ್ದೇಶಕರಾದ ಕೃಷ್ಣಸ್ವಾಮಿ ನಟರಾಜನ್ ಅವರು ಕೋವಿಡ್ – 19 ಸೃಷ್ಟಿಸಿದ ಅಡೆತಡೆಗಳ ನಡುವೆಯೂ ಐಸಿಜಿ, ಮುಂದೆ ಸಾಗುತ್ತಿದೆ ಎಂಬುದನ್ನು ಈ ನಿಯೋಜನೆ ಸಾಬೀತುಪಡಿಸಿದೆ ಎಂದು ಹೇಳಿದರು. ಐಸಿಜಿ ಹಡಗುಗಳ ಹೊಸ ಸೇರ್ಪಡೆ ಐಸಿಜಿಗೆ ಸಮುದ್ರದಲ್ಲಿ ನಿರಂತರ ನಿಗಾವಹಿಸಲು ಸಹಾಯ ಮಾಡುತ್ತದೆ ಮತ್ತು ಕೋವಿಡ್ – 19 ರ ವಿರುದ್ಧ ಹೋರಾಡಲು ರಾಷ್ಟ್ರಕ್ಕೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

105 ಮೀಟರ್ ಉದ್ದದ ಹಡಗು ಸಚೇತ್ಸುಮಾರು 2,350ಟನ್ ಗಳನ್ನು ಸ್ಥಳಾಂತರಿಸುವ ಸಾಮರ್ಥ್ಯ ಹೊಂದಿದೆ, ಮತ್ತು 26  ನಾಟ್ ಗರಿಷ್ಟ ವೇಗ ಪಡೆಯಲು 9,100 ಕಿಲೊ ವ್ಯಾಟ್ನ ಸಾಮರ್ಥ್ಯದ 2 ಡಿಸೇಲ್ ಇಂಜಿನ್ ಗಳನ್ನು ಇದಕ್ಕೆಂದೇ ವಿನ್ಯಾಸಗೊಳಿಸಲಾಗಿದ್ದು 6000 ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದೆ. ಇತ್ತೀಚಿನ ಉಪಕರಣಗಳು ಮತ್ತು ವ್ಯವಸ್ಥೆಗಳೊಂದಿಗೆ ಇದರ ಸುಸ್ಥಿರತೆ ಮತ್ತು ವ್ಯಾಪ್ತಿಯು ಮುನ್ನಡೆಸಬಹುದಾದ ವೇದಿಕೆಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಐಸಿಜಿ ಚಾರ್ಟರ್ ಕೈಗೊಳ್ಳುವ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಮರ್ಥ್ಯವನ್ನು ಒದಗಿಸುತ್ತದೆ. 2 ಇಂಜಿನ್ ವುಳ್ಳ ಹೆಲಿಕಾಪ್ಟರ್ ಮತ್ತು 4 ಅತಿ ವೇಗದ ಬೋಟ್ ಗಳನ್ನು ಮತ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತ್ವರಿತಗತಿಯಲ್ಲಿ ಇಳಿಯಲು ಅನುಕೂಲವಾಗುವಂತಹ ಗಾಳಿ ತುಂಬಬಹುದಾದ ಒಂದು ಬೋಟ್ ಹೊಂದಿದ ಈ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ. ಕನಿಷ್ಟ ಪ್ರದೂಷಣೆ ಜವಾಬ್ದಾರಿಯನ್ನೂ ಮತ್ತು ಸಮುದ್ರದಲ್ಲಿ ತೈಲ ಸೋರಿಕೆಯಾಗುವುದನ್ನು ತಡೆಗಟ್ಟುವ ಸಾಮರ್ಥ್ಯವನ್ನೂ ಈ ಹಡಗು ಹೊಂದಿದೆ.    

ಸಚೇತ್ ಎಂದರೆ ಎಚ್ಚರಿಕೆ ಎಂದರ್ಥ. ಇದು ರಾಷ್ಟ್ರದ ಸಮುದ್ರ ತೀರದ ಹಿತಾಸಕ್ತಿಗೆ ಸೇವೆ ಸಲ್ಲಿಸಲು ಮತ್ತು ರಕ್ಷಿಸಲುಐಸಿಜಿ ಸದಾ ಸಿದ್ಧವಾಗಿರುತ್ತದೆ ಮತ್ತು ಆಸಕ್ತಿ ಹಾಗೂ ಬದ್ಧತೆಯನ್ನು ಹೊಂದಿದೆ. 11 ಅಧಿಕಾರಿಗಳು ಮತ್ತು 110 ಸಿಬ್ಬಂದಿ ನಿರ್ವಹಣೆಯ ಐಸಿಜಿ ಎಸ್ ಸಚೇತ್  ಅನ್ನು ಡೆಪ್ಯುಟಿ ಇನಸ್ಪೆಕ್ಟರ್ ಜನರಲ್ ರಾಜೇಶ್ ಮಿತ್ತಲ್ ಅವರು ಮುನ್ನಡೆಸುತ್ತಿದ್ದಾರೆ. ಕೋವಿಡ್ – 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ಸಾಮಾಜಿಕ ಅಂತರ ಕಾಪಾಡಿಕೊಂಡು ಡಿಜಿಟಲ್ ಮಾಧ್ಯಮದ ಮೂಲಕ ನೌಕೆಯನ್ನು ನಿಯೋಜಿಸುತ್ತಿರುವುದು ಭಾರತದ ಕಡಲ ತೀರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಗಿದೆ.

ಸಿ – 450 ಮತ್ತು ಸಿ – 451 ಐಬಿ ಗಳನ್ನು ಸ್ಥಳೀಯವಾಗಿ ಲಾರ್ಸನ್ ಆಂಡ್ ಟರ್ಬೊ ಅವರಿಂದ ಹಜೀರಾ ಶಿಪ್ ಯಾರ್ಡ್ ನಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದರಲ್ಲಿ ಇತ್ತೀಚಿನ ನ್ಯಾವಿಗೇಶನ್ ಮತ್ತು ಸಂವಹನ ಸಾಧನಗಳನ್ನು ಅಳವಡಿಸಲಾಗಿದೆ. 30 ಮೀಟರ್ ಉದ್ದದ ದೋಣಿಗಳು 45 ಕ್ಕೂ ಹೆಚ್ಚು ನಾಟ್ ಗಳ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ ಮತ್ತು ಸಮುದ್ರ ತೀರದ ಗಸ್ತು ಹಾಗೂ ಕಡಿಮೆ ತೀವ್ರತೆಯ ಸಮುದ್ರ ತೀರದ ಕಾರ್ಯಾಚರಣೆಗಳು ಮತ್ತು ಹೆಚ್ಚಿನ ವೇಗದ ಪ್ರತಿಬಂಧಕ್ಕಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ತ್ವರಿತಗತಿಯ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೊಂದಿದ ಈ ಐಬಿಗಳು ಕಡಲ ತೀರದ ಯಾವುದೇ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಮತ್ತು ತಡೆಯಲು ಸೂಕ್ತ ವೇದಿಕೆಯಾಗಿವೆ. ಸಹಾಯಕ ಕಮಾಡಂಟ್ ಗೌರವ್ ಕುಮಾರ್ ಗೋಲಾ ಮತ್ತು ಸಹಾಯಕ ಕಮಾಡಂಟ್ ಅಕಿನ್ ಜುಟ್ಸಿ ಈ ನೌಕೆಗಳ ಮುಂದಾಳತ್ವ ವಹಿಸಿದ್ದಾರೆ.  

ಕಡಲ ತೀರ ರಕ್ಷಣಾ ಪಡೆ ಸ್ಥಳೀಯ ಸ್ವತ್ತುಗಳನ್ನು ಸೀರಿಸಿಕೊಳ್ಳುವುದಕ್ಕೆ ಪ್ರವರ್ತಮಾನವಾಗಿದೆ. ಇದು ವರ್ಷಪೂರ್ತಿ ಕಾರ್ಯಾಚರಣೆಗೆ ಲಭ್ಯವಾಗುವಂತೆ ಮಾಡಿದೆ. ಐಬಿಗಳು ಸ್ಥಳೀಯ ವಸ್ತುಗಳನ್ನು ಹೆಚ್ಚಿಸುವತ್ತು ಮುಂದುವರಿದಿದ್ದು 70% ಸ್ಥಳೀಯ ವಸ್ತುಗಳನ್ನು ಹೊಂದಿದೆ. ಹೀಗೆ ಭಾರತೀಯ ಹಡಗು ನಿರ್ಮಾಣ ಉದ್ಯಮಕ್ಕೆ ಅಗತ್ಯ ಸಾಮಗ್ರಿಗಳನ್ನು ಒದಗಿಸುತ್ತದೆ.   

ಈ ನೌಕೆಗಳು ಕಡಲ ತೀರ ರಕ್ಷಣಾ ಪಡೆ ಸೇರಿದ ನಂತರ ಪ್ರತ್ಯೇಕ ಆರ್ಥಿಕ ವಲಯ (ಇಇಝೆಡ್)ದ ನಿಗಾವಹಿಸಲು, ಕಡಲ ತೀರದ ಭದ್ರತೆ ಮತ್ತು ಕಡಲ ತೀರ ರಕ್ಷಣಾ ಪಡೆಯ ಕರ್ತವ್ಯಗಳಲ್ಲಿ ಸೂಚಿಸಲಾದ ಇತರ ಜವಾಬ್ದಾರಿಗಳು ಮತ್ತು ರಾಷ್ಟ್ರದ  ಕಡಲ ತೀರದ ಹಿತಾಸಕ್ತಿಗಳನ್ನು ಕಾಪಾಡಲು ವ್ಯಾಪಕವಾಗಿ ಬಳಸಲಾಗುತ್ತದೆ. ಈ ನೌಕೆಗಳ ನಿಯೋಜನೆಯೊಂದಿಗೆ 150 ಹಡಗುಗಳು ಮತ್ತು ದೋಣಿಗಳು ಹಾಗೂ 62 ವಿಮಾನಗಳ ಪ್ರಮುಖ ಘಟ್ಟವನ್ನು  ತಲುಪಿದೆ. ಭಾರತದ ವಿವಿಧ ಶಿಪ್ ಯಾರ್ಡ್ ಗಳಲ್ಲಿ 40 ನೌಕೆಗಳು ನಿರ್ಮಾಣದ ವಿವಿಧ ಹಂತದಲ್ಲಿವೆ ಮತ್ತು 16 ಆಧುನಿಕ ಹಗುರ ಹೆಲಿಕಾಪ್ಟರ್ ಗಳು ಬೆಂಗಳೂರಿನ ಎರೊನಾಟಿಕ್ಸ್ ಲಿಮಿಟೆಡ್ ನಲ್ಲಿ ನಿರ್ಮಾಣಗೊಳ್ಳುತ್ತಿವೆಇವು ಸದಾ ಕಡಲ ತೀರದ ಕ್ರಿಯಾತ್ಮಕ  ಸವಾಲುಗಳನ್ನು ಎದುರಿಸಲು ಐಸಿಜಿಯ ನಿಗಾವಹಿಸುವ ಸಾಮರ್ಥ್ಯಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ.   

ಸಮುದ್ರದಲ್ಲಿ ಸುಮಾರು 400 ಜೀವಗಳನ್ನು ಉಳಿಸಿದ, ನಾಗರಿಕ ಅಧಿಕಾರಿಗಳಿಗೆ 4,500 ಜೀವಗಳನ್ನು ಕಾಪಾಡಲು ಸಹಾಯ ಮಾಡುವ ಮತ್ತು ಕೇವಲ 2019 ರಲ್ಲೇ 32  ವೈದ್ಯಕೀಯ ತೆರವುಗೊಳಿಸುವಿಕೆ ಕೈಗೊಂಡಂತಹ ಶ್ರೇಯಸ್ಸನ್ನು ಐಸಿಜಿ ಹೊಂದಿದೆಐಸಿಜಿ ಸೃಷ್ಟಿಸಿದ ಈ ಪ್ರತಿರೋಧ ಕೇವಲ ಭಾರತದ ಸಮುದ್ರಗಳಿಗೆ ಮಾತ್ರ ಸೀಮಿತವಾಗಿರದೇ ಸರ್ಕಾರಗಳ ದ್ವಿಪಕ್ಷೀಯ ಒಪ್ಪಂದಗಳ ನಿಬಂಧನೆಗಳ ಪ್ರಕಾರ ಸ್ನೇಹಪರ ರಾಜ್ಯಗಳ ಸಹಕಾರದ ಪ್ರತಿಫಲದ ರೂಪದಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಒಆರ್) ಯಶಸ್ವಿಯಾಗಿ ಆತಂಕ ತಡೆಗಟ್ಟಲಾಯಿತು ಮತ್ತು ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಯಿತು. ಐಸಿಜಿ ಮತ್ತು ಇತರ ಅಂತಾರಾಷ್ಟ್ರೀಯ ಎಜನ್ಸಿಗಳ ನಡುವಿನ ನೈಜ ಸಮಯದ ಮಾಹಿತಿ ಹಂಚಿಕೆ, ನಿಕಟ ಸಮನ್ವಯತೆ ಮತ್ತು ಪರಸ್ಪರ ಅರ್ಥೈಸಿಕೊಳ್ಳುವುದು ಈ ಕಾರ್ಯಾಚರಣೆಗಳ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಭಾರತೀಯ ಇಇಝೆಡ್ ಹದ್ದಿನ ಕಣ್ಣಿನ ನಿಗಾದಿಂದಾಗಿ 2,000 ಬೆಲೆಬಾಳುವ ಕಳ್ಳಸಾಗಾಣಿಕೆ ಜಪ್ತಿ ಮತ್ತು ಇದೇ ಅವಧಿಯಲ್ಲಿ ಭಾರತೀಯ ಕಡಲ ತೀರದಲ್ಲಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ  119 ದುಷ್ಕರ್ಮಿಗಳೊಂದಿಗೆ 30  ವಿದೇಶಿ ಮೀನುಗಾರಿಕಾ ಹಡಗುಗಳನ್ನು ವಶಪಡಿಸಿಕೊಳ್ಳಲಾಗಿದೆ.     

ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಶ್ರೀ ರಾಜ್ ಕುಮಾರ್, ಕಾರ್ಯದರ್ಶಿ (ರಕ್ಷಣಾ ಹಣಕಾಸು ಶ್ರೀಮತಿ ಗಾರ್ಗಿ ಕೌಲ್ ಮತ್ತು ರಕ್ಷಣಾ ಸಚಿವಾಲಯದ ಿತರ ಹಿರಿಯ ಅಧಿಕಾರಿಗಳು ದೆಹಲಿಯಲ್ಲಿ ಹಾಜರಿದ್ದರೆ, ಸಹಾಯಕ ರಕ್ಷಣಾ ಸಚಿವ ಶ್ರೀ ಶ್ರೀಪಾದ್ ನಾಯಕ್, ಗೋವಾ ಶಿಪ್ ಯಾರ್ಡ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕಾಮ್ರೇಡ್ ಭರತ್ ಭೂಷಣ್ ನಾಗ್ಪಾಲ್ (ನಿವೃತ್ತ) ೀ ಸಂದರ್ಭದಲ್ಲಿ ಗೋವಾದಲ್ಲಿ ಹಾಜರಿದ್ದರು.

***



(Release ID: 1624238) Visitor Counter : 243