ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ದೆಹಲಿಯಲ್ಲಿರುವ 8 ಈಶಾನ್ಯ ರಾಜ್ಯಗಳ ಹಾಗು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರೆಸಿಡೆಂಟ್ ಕಮಿಷನರ್ ಗಳಿಂದ ಕೋವಿಡ್ ಸಂಬಂಧಿತ ಮಾಹಿತಿಗಳನ್ನು ಸ್ವೀಕರಿಸಿದರು

Posted On: 15 MAY 2020 7:38PM by PIB Bengaluru

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ದೆಹಲಿಯಲ್ಲಿರುವ 8 ಈಶಾನ್ಯ ರಾಜ್ಯಗಳ ಹಾಗು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರೆಸಿಡೆಂಟ್ ಕಮಿಷನರ್ ಗಳಿಂದ ಕೋವಿಡ್ ಸಂಬಂಧಿತ ಮಾಹಿತಿಗಳನ್ನು ಸ್ವೀಕರಿಸಿದರು

 

ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ದೆಹಲಿಯಲ್ಲಿರುವ ಈಶಾನ್ಯದ ಎಂಟು ರಾಜ್ಯಗಳ ಹಾಗು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ರೆಸಿಡೆಂಟ್ ಕಮಿಷನರ್ಗಳಿಂದ ಕೋವಿಡ್ ಸಂಬಂಧಿತ ಮಾಹಿತಿಯನ್ನು ಸ್ವೀಕರಿಸಿದರು.

ಸುದೀರ್ಘ ಒಂದು ಗಂಟೆಯ ವಿಡಿಯೋ ಕಾನ್ಫರೆನ್ಸ್ ಮಾತುಕತೆಯಲ್ಲಿ ರೆಸಿಡೆಂಟ್ ಕಮಿಷನರ್ಗಳಾದ ಅರುಣಾಚಲ ಪ್ರದೇಶದ ಜಿತೇಂದ್ರ ನಾರೈನ್, ಅಸ್ಸಾಂನ ಕೆ.ಸಿ.ಸಮರಿಯಾ, ಮಣಿಪುರದ ಪಿ.ಕೆ.ಸಿಂಗ್, ಮಿಜೋರಾಂನ ಅಜಯ್ ಚೌಧರಿ, ನಾಗಾಲ್ಯಾಂಡ್ ಜ್ಯೋತಿ ಕಲಶ್, ಸಿಕ್ಕಿಮಿಂನ ಅಶ್ವನಿ ಕುಮಾರ್ ಚಂದ್ ತ್ರಿಪುರದ ಚೈತನ್ಯ ಮೂರ್ತಿ ಹಾಗು ಜಮ್ಮು ಮತ್ತು ಕಾಶ್ಮೀರದ ನೀರಜ್ ಕುಮಾರ್ ರವರು ತಮ್ಮ ತಮ್ಮ ಮಾಹಿತಿಗಳನ್ನು ನೀಡಿದರು.

ಡಾ.ಜಿತೇಂದ್ರ ಸಿಂಗ್ ಅವರು ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳಿಗೆ ದೇಶದ ವಿವಿಧ ಭಾಗಗಳಲ್ಲಿ ವಾಸಿಸುವ ಜನರು ತಮ್ಮ ಆಯಾ ಸ್ವಂತ ಸ್ಥಳಗಳಿಗೆ ತಲುಪಲು ಕಳೆದ ಎರಡು ಮೂರು ದಿನಗಳಲ್ಲಿ ಮಾಡಿದ ವಿವಿಧ ವ್ಯವಸ್ಥೆಗಳ ಬಗ್ಗೆ ವಿವರಿಸಿದರು. ಶ್ರಮಿಕ್ ವಿಶೇಷ ರೈಲುಗಳ ಓಡಾಟವು ಮುಂದುವರೆದಿದೆ ಮತ್ತು ನೋಡಲ್ ಅಧಿಕಾರಿಗಳನ್ನಾಗಿ ಸೇವೆ ಸಲ್ಲಿಸುತ್ತಿರುವರ ಹಲವು ರೆಸಿಡೆಂಟ್ ಕಮಿಷನರ್ಗಳ ಪಾತ್ರವನ್ನು ಶ್ಲಾಘಿಸಿದರು,

ಡಾ. ಜಿತೇಂದ್ರ ಸಿಂಗ್ ರವರು, ಅವರ ಕಚೇರಿಯು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಮತ್ತು ರೆಸಿಡೆಂಟ್ ಕಮಿಷನರ್ಗಳಿಗೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ತಮ್ಮ ಕಚೇರಿ ಮತ್ತು ಕೇಂದ್ರವನ್ನು ಅನುಸರಿಸಲು ಕೇಳಿಕೊಂಡರು, ಕೊರೊನಾ ಹರಡುವಿಕೆಯ ವಿರುದ್ಧ ಪರಿಣಾಮಕಾರಿಯಾದ ನಿರ್ವಹಣೆಗಾಗಿ ಈಶಾನ್ಯವು ಸರ್ವಾಂಗೀಣ ಮೆಚ್ಚುಗೆಯನ್ನು ಪಡೆದಿದ್ದರೂ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ದೇಶದ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಒಂದರ ನಂತರ ಒಂದರಂತೆ ಪ್ರತಿ ರೆಸಿಡೆಂಟ್ ಕಮಿಷನರ್ಗಳು ಆಯಾ ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಗತ್ಯ ಸಾಮಗ್ರಿಗಳು ಅಥವಾ ವೈದ್ಯಕೀಯ ಸಲಕರಣೆಗಳ ಕೊರತೆಯಿಲ್ಲ ಎಂದು ಸಚಿವರಿಗೆ ತಿಳಿಸಿದರು ಮತ್ತು ಅವರ ಪ್ರತಿಯೊಂದು ಸಮಸ್ಯೆಗಳಿಗೆ ನಿರಂತರವಾಗಿ ಗಮನ ಕೊಡುತ್ತಿರುವುದಕ್ಕಾಗಿ ಸಚಿವರ ಕಚೇರಿಗೆ ಧನ್ಯವಾದ ಅರ್ಪಿಸಿದರು. ಜನಸಂದಣಿಯನ್ನು ತಪ್ಪಿಸಲು ಮತ್ತು ಅದೇ ಸಮಯದಲ್ಲಿ, ಸ್ವೀಕರಿಸಿದ ವಿನಂತಿಗಳಿಗೆ ಸಹ ಸರಿಯಾಗಿ ಸ್ಪಂದಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅವರು ವಲಸೆ ಕಾರ್ಮಿಕರ ಮತ್ತು ವಿದ್ಯಾರ್ಥಿಗಳ ಚಲನೆಯನ್ನು ಸುವ್ಯವಸ್ಥಿತಗೊಳಿಸಲು ಹೇಗೆ ಪರಿಣಾಮಕಾರಿಯಾಗಿ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಸಹ ಅವರು ವಿವರಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ರೆಸಿಡೆಂಟ್ಕಮಿಷನರ್ಗಳು ಎಲ್ಲ ವರ್ಗದ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಪ್ರತಿಯೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದನ್ನು ಸಾರ್ವತ್ರಿಕವಾಗಿ ಸ್ವಾಗತಿಸಲಾಗಿದೆ ಎಂದು ಅವರು ಹೇಳಿದರು.

***



(Release ID: 1624233) Visitor Counter : 151