ಪ್ರವಾಸೋದ್ಯಮ ಸಚಿವಾಲಯ
"ಮೈಸೂರು: ಕರ್ನಾಟಕದ ಕ್ರಾಫ್ಟ್ ಕಾರವಾನ್ " ಶೀರ್ಷಿಕೆಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ “ದೆಖೋ ಅಪ್ನಾ ದೇಶ್" ಸರಣಿಯ ವೆಬ್ನಾರ್ ಮೂಲಕ ಮೈಸೂರಿನ ಶತಮಾನಗಳಷ್ಟು ಹಳೆಯ ಕರಕುಶಲ ವಸ್ತುಗಳ ಮಹತ್ವವನ್ನು ತೆರೆದಿಟ್ಟಿದೆ
Posted On:
15 MAY 2020 1:02PM by PIB Bengaluru
"ಮೈಸೂರು: ಕರ್ನಾಟಕದ ಕ್ರಾಫ್ಟ್ ಕಾರವಾನ್ " ಶೀರ್ಷಿಕೆಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ “ದೆಖೋ ಅಪ್ನಾ ದೇಶ್" ಸರಣಿಯ ವೆಬ್ನಾರ್ ಮೂಲಕ ಮೈಸೂರಿನ ಶತಮಾನಗಳಷ್ಟು ಹಳೆಯ ಕರಕುಶಲ ವಸ್ತುಗಳ ಮಹತ್ವವನ್ನು ತೆರೆದಿಟ್ಟಿದೆ
ಭಾರತದ ಶ್ರೀಮಂತ ಕರಕುಶಲ ಪರಂಪರೆಯನ್ನು ಪ್ರದರ್ಶಿಸಲು ಮತ್ತು ಪ್ರವಾಸಿಗರಿಗೆ ಮತ್ತು ಪ್ರೇಕ್ಷಕರಿಗೆ ಅದನ್ನು ವೀಕ್ಷಿಸಲು ಮತ್ತು ಪ್ರವೇಶಿಸಲು ಅನುಕೂಲವಾಗುವಂತೆ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು “ದೇಖೋ ಅಪ್ನಾ ದೇಶ್" ಎಂಬ ವೆಬ್ನಾರ್ ಸರಣಿಯನ್ನು ಹಮ್ಮಿಕೊಂಡಿದೆ. 'ಕರ್ನಾಟಕದ ಕರಕುಶಲ ಕೆತ್ತನೆಗಳ ಮಹಾಪೂರ (ಕ್ರಾಫ್ಟ್ ಕಾರವಾನ್): ಮೈಸೂರು' ಎಂಬ ಶೀರ್ಷಿಕೆಯ ಸರಣಿಯಲ್ಲಿ ಚನ್ನಪಟ್ಟಣ ಬೊಂಬೆಗಳು, ಮೈಸೂರು ನಗರದ ಸುತ್ತ ಶತಮಾನಗಳಿಂದ ಬೀಟಿಮರಗಳ (ರೋಸ್ವುಡ್) ಕರಕುಶಲ ಕೆತ್ತನೆ ಕಲೆಗಳ ಅದ್ಭುತ ಪ್ರವಾಸವನ್ನು ಜನತೆಗೆ ನೀಡಿತು.
“ದೇಖೋ ಅಪ್ನಾ ದೇಶ್" ವೆಬ್ನಾರ್ ಸರಣಿಯ 19 ನೇ ಕಾರ್ಯಕ್ರಮವನ್ನು ಮೇ 14, 2020 ರಂದು ಬೆಂಗಳೂರಿನ ಎನ್.ಐ.ಎಫ್ಟಿ ನಿರ್ದೇಶಕಿ ಶ್ರೀಮತಿ ಸುಸಾನ್ ಥಾಮಸ್ ಮತ್ತು ಎನ್.ಐ.ಎಫ್ಟಿ. ಅಧ್ಯಾಪಕ ಡಾ.ಯತಿಂದ್ರ ಲಕ್ಕಣ್ಣ ಮತ್ತು ಎನ್.ಐ.ಎಫ್ಟಿಯ ಬೋಧಕವರ್ಗ ಶ್ರೀಮತಿ ಶಿಲ್ಪ್ರರಾವ್ ಅವರು ಪ್ರಸ್ತುತಪಡಿಸಿದರು. ಭಾರತದ ಮಗ್ಗಗಳು ಮತ್ತು ಕರಕುಶಲತೆಯ ಶ್ರೀಮಂತಿಕೆ ಮತ್ತು ಕರಕುಶಲ ಪ್ರವಾಸೋದ್ಯಮದ ಸುತ್ತ ಪರ್ಯಾಯ ನಿರ್ಮಿಸುವ ಅಗತ್ಯತೆ ಮತ್ತು ಪ್ರವಾಸಿ ನಕ್ಷೆಯಲ್ಲಿ ಸ್ಥಳೀಯ ಕರಕುಶಲ ಸ್ಥಳವನ್ನು ಹುಡುಕಲು ಸಹಾಯ ಮಾಡುವ ಬಗ್ಗೆ ಅವರು ಉತ್ತಮ ಮಾಹಿತಿ ನೀಡಿದರು. ಮೈಸೂರಿಗೆ ಭೇಟಿ ನೀಡುವವರಿಗೆ ಪ್ರಯಾಣಿಸಲು ಸೂಕ್ತ ತಾಣಗಳು, ಮೈಸೂರಿಗಾಗಿ ವೈವಿಧ್ಯಮಯ ಕರಕುಶಲ ರೂಪಗಳನ್ನು ಸಂರಕ್ಷಿಸಲು ಮತ್ತು ಪೋಷಿಸಲು ಸಹಾಯ ಮಾಡಿದ ಕುಶಲಕರ್ಮಿಗಳ ಪಟ್ಟಣಗಳು, ಊರು ಕೇರಿಗಳು ಮತ್ತು ಹಳ್ಳಿಗಳಿಗೆ ಭೇಟಿ ನೀಡುವ ಅವಕಾಶಗಳನ್ನು ಈ ಪ್ರಸ್ತುತಿ ಸರಳವಾಗಿ ಅನಾವರಣಗೊಳಿಸಿತು.
ಕರಕುಶಲ ವಸ್ತುಗಳು ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಗೆ ಕೇವಲ ಅವಿಭಾಜ್ಯಮಾತ್ರವಲ್ಲ, ಅವು ಭಾರತದ ಆರ್ಥಿಕತೆಯ ಕೇಂದ್ರ ಬಿಂಧುವಾಗಬಹುದು. ‘ಆತ್ಮನಿರ್ಬಾರ್ ಭಾರತ್’ ಗಾಗಿ ಪ್ರಧಾನಮಂತ್ರಿಯವರ ಕರೆಗೆ ಅನುಗುಣವಾಗಿ, ಕರಕುಶಲ ಪ್ರವಾಸೋದ್ಯಮದ ಪ್ರಚಾರವು ಸಮುದಾಯಗಳನ್ನು ಬೆಂಬಲಿಸುವುದು, ಉದ್ಯೋಗವನ್ನು ಒದಗಿಸುವುದು ಮತ್ತು ಪರಿಸರ ಕಾಳಜಿಗೆ ಧಕ್ಕೆಯಾಗದಂತೆ ಸಾಮಾಜಿಕ ಏಕೀಕರಣವನ್ನು ಬೆಳೆಸುವುದು ಮತ್ತು ಪ್ರವಾಸಿಗರಿಗೆ ಅನನ್ಯ ಅನುಭವಗಳನ್ನು ಒದಗಿಸುವುದು ಕೂಡಾ ಮುಂದಿನ ದಿನಗಳಲ್ಲಿ ಉತ್ತಮ ಪ್ರಗತಿ ವ್ಯವಸ್ಥೆ ನೀಡಲಿದೆ. ಭಾರತದ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಹಳ್ಳಿಗಳನ್ನು ಮತ್ತು ಪಟ್ಟಣಗಳನ್ನು ಆರ್ಥಿಕ ಶಕ್ತಿಯನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ.
ಏಪ್ರಿಲ್ 14, 2020 ರಂದು ಪ್ರಾರಂಭವಾದ “ದೇಖೋ ಅಪ್ನಾ ದೇಶ್" ವೆಬ್ನಾರ್ ಸರಣಿಯು ಇಲ್ಲಿಯವರೆಗೆ 19 ಕಾರ್ಯಕ್ರಮಗಳನ್ನು ನಡೆಸಿದೆ. ದೇಶಾದ್ಯಂತ ವೈವಿಧ್ಯಮಯ ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಅನುಭವಗಳನ್ನು ಪ್ರೇಕ್ಷಕರಿಗೆ, ಪ್ರವಾಸಿಗರಿಗೆ ತೆರೆದಿಟ್ಟು ಸರಳರೀತಿಯಲ್ಲಿ ಪ್ರದರ್ಶಿಸುತ್ತದೆ. ಈ ಸರಣಿಯು ಇಲ್ಲಿಯವರೆಗೆ 86456 ವೀಕ್ಷಕರನ್ನು ಆಕರ್ಷಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೀಟಿವೈ) ರಚಿಸಿದ ರಾಷ್ಟ್ರೀಯ ಇ-ಆಡಳಿತ ವಿಭಾಗ (ಎನ್.ಇ.ಜಿ.ಡಿ) ವೃತ್ತಿಪರ ತಂಡದ ತಾಂತ್ರಿಕ ನೆರವಿನೊಂದಿಗೆ ನೇರವಾಗಿ ಪ್ರಸಾರವಾಗುವ “ದೇಖೋ ಅಪ್ನಾ ದೇಶ್" ವೆಬ್ನಾರ್ ಸರಣಿಯನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ನಡೆಸಿಕೊಡುತ್ತದೆ.
ನೂತನ ಲೋಗೋ ವಿನ್ಯಾಸ ಸ್ಪರ್ಧೆಯ ಮೂಲಕ ದೇಶದಾದ್ಯಂತ ನಾಗರಿಕರಿಂದ ಸೃಜನಶೀಲ ಒಳಹರಿವಿನ ಆಧಾರದ ಮೇಲೆ ಲೋಗೋವನ್ನು ಅಭಿವೃದ್ಧಿಪಡಿಸುವ ಮೂಲಕ “ದೇಖೋ ಅಪ್ನಾ ದೇಶ್" ಅಭಿಯಾನಕ್ಕೆ ವಿಶಿಷ್ಟ ಬ್ರಾಂಡ್ ಗುರುತನ್ನು ಹೊಂದಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ mygov.in ಮೂಲಕ ಅಪೇಕ್ಷೆಗಳನ್ನು ಆಹ್ವಾನಿಸಿದೆ. ಈ ಲೋಗೊ ವಿನ್ಯಾಸ ಸ್ಪರ್ಧೆಯು ಮೇ 16, 2020 ರಂದು ಮುಕ್ತಾಯಗೊಳ್ಳುತ್ತದೆ.
ಈ ಹಿಂದಿನ ವೆಬ್ನಾರ್ಗಳು ಈಗ https://www.youtube.com/channel/UCbzIbBmMvtvH7d6Zo_ZEHDA/ ಇದರಲ್ಲಿ ಲಭ್ಯ ಮತ್ತು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಎಲ್ಲಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಕೂಡಾ ಲಭ್ಯವಿದೆ.
ಮುಂದಿನ ಸಂಚಿಕೆಯು “ಉತ್ತರಾಖಂಡ್: ಸರಳವಾಗಿ ಸ್ವರ್ಗ!” ಎಂಬ ಶೀರ್ಷಿಕೆಯನ್ನು ಹೊಂದಿದ್ದು, ಮೇ 16 , 2020 ರಂದು ಬೆಳಿಗ್ಗೆ 11.00 ಕ್ಕೆ ಪ್ರಸಾರವಾಗಲಿದೆ. ಇದರ ನೋಂದಣಿ ಲಿಂಕ್: https://bit.ly/UttarakhandDAD
***
(Release ID: 1624230)
Visitor Counter : 192